CONNECT WITH US  

ಕಣ್ಮರೆಯಾದ ಯಕ್ಷ ಪ್ರತಿಭೆ ಶ್ರೀನಿಧಿ

ಕಟೀಲಿನ ಅರ್ಚಕ ಹರಿನಾರಾಯಣ ಅಸ್ರಣ್ಣ  ಅವರ ಪುತ್ರ ಶ್ರೀನಿಧಿ ಯಕ್ಷಗಾನ ಕ್ಷೇತ್ರಕ್ಕೆ ನವನಿಧಿಯಂತಿದ್ದರು. ಉದಯೋನ್ಮುಖ ಯಕ್ಷಗಾನ ಕಲಾವಿದನಾಗಿ ತನ್ನ ಛಾಪನ್ನು ಎಳೆ ಹರೆಯದಲ್ಲಿಯೇ ಮೂಡಿಸಿದ ಯುವ ಪ್ರತಿಭೆ ಶ್ರೀನಿಧಿ ಅಸ್ರಣ್ಣ. ಕಟೀಲು ದೇವಳದ ನವರಾತ್ರಿ, ಜಾತ್ರೆ ಮೊದಲಾದ ಉತ್ಸವಗಳಲ್ಲಿ ಇವರ ಸೇವಾ ಪರಿ ಅನನ್ಯ. ಇತ್ತೀಚೆಗೆ ಇವರ ಚೆಂಡೆಯ ನುಡಿತವಿಲ್ಲದ ಬಲಿ ಇರಲಿಲ್ಲ. ಕಟೀಲಿನ ರಥಬೀದಿಯ ಆಟಗಳಲ್ಲಿ ತನ್ನ ಚಂಡೆ ವಾದನದ ಸೇವೆಯನ್ನು ಮಾಡುತ್ತಿದ್ದರು.ಅನುಭವಿಗಳು ಹೇಳುವಂತೆ ಇವರ ಚಂಡೆಯ ಉರುಳಿಕೆ ವಿಶಿಷ್ಟವಾಗಿತ್ತು. ಹಿಮ್ಮೇಳ ಗುರುಗಳಾಗಿದ್ದ ಹರಿನಾರಾಣ ಬೈಪಡಿತ್ತಾಯರು ನುಡಿದಂತೆ ಅರ್ಧ ಘಂಟೆಯೋಳಗೆ ತನಗೆ ನೀಡಿದ ಪಾಠಗಳನ್ನು ಮರು ಒಪ್ಪಿಸುತ್ತಿದ್ದರು.

ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಓರ್ವ ಉತ್ತಮ ಹಿಮ್ಮೇಳ, ಮುಮ್ಮೇಳದ ಕಲಾವಿದರಾಗಿದ್ದರು. ಪಕಡಿ, ಕಿರೀಟ, ಕೇಶವಾರಿ ಕಿರೀಟ ವೇಷಗಳನ್ನು ಲೀಲಾಜಾಲವಾಗಿ ನಿರ್ವಹಿಸುತಿದ್ದರು. ಬೆಳೆಯಬೇಕಿದ್ದ ಪ್ರತಿಭೆ ಎಳವೆಯಲ್ಲೆ ಕಳೆದು ಹೋದದ್ದು ಕಲಾಕ್ಷೇತ್ರಕ್ಕಾದ ದೊಡ್ಡ ನಷ್ಟ.

 ಡಾ| ಎಂ. ಪದ್ಮನಾಭ ಮರಾಠೆ  

Trending videos

Back to Top