ಯುವ ಪ್ರತಿಭೆಗಳಿಂದ ಕಳೆಗಟ್ಟಿದ ಯುವ ಸಂಗೀತೋತ್ಸವ

Team Udayavani, Aug 17, 2018, 6:00 AM IST

c-6.jpg

ಸಂಗೀತ ಪರಿಷತ್‌ (ರಿ.)ಮಂಗಳೂರು ಇದರ ರಜತ ಸಂಭ್ರಮದ ಸಂದರ್ಭದಲ್ಲಿ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಯುವ ಸಂಗೀತೋತ್ಸವವನ್ನು ನಡೆಸಲಾಯಿತು. ಆರಂಭದ ಕಛೇರಿ ವಿಭು ಮಂಗಳೂರು ಇವರದು. ಚುಟುಕಾದ ಶಹನ ಆಲಾಪನೆಯೊಂದಿಗೆ ಕರುಣಿಂಪ ವರ್ಣ ಆರಂಭಿಸಿ ಮುಂದೆ ಪಂಚಮಾತಂಗವನ್ನು ಮಲಹರಿ ರಾಗದಲ್ಲಿ ಪ್ರಸ್ತುತ ಪಡಿಸಿದರು. ಸುಮನಸರಂಜನಿಯಲ್ಲಿ ಆರೇನು ಮಾಡುವರು ದೇವರನಾಮವು ಉತ್ತಮವಾಗಿ ಮೂಡಿ ಬಂತು. ನಳಿನಕಾಂತಿಯಲ್ಲಿ ಪಾಲಯಸದಾಮಾಮಯಿ ಕೃತಿಯನ್ನು ನಿರೂಪಿಸಿದರು. ಷಣ್ಮುಖಪ್ರಿಯ ರಾಗದಲ್ಲಿ ಪ್ರಸ್ತುತ ಪಡಿಸಲಾದ ರಾಗ-ತಾನ-ಪಲ್ಲವಿ (ಸದಾ ನೀಪಾದ ಮೇನಮ್ಮಿತಿ ಸಾಮಗಾನ ಲೋಲನೆ) ಒಟ್ಟು ಕಛೇರಿಗೆ ಶೋಭೆ ನೀಡುವಂತಿತ್ತು. ಮುಂದೆ ದೇವರನಾಮ, ತಿಲ್ಲಾನದೊಂದಿಗೆ ಕಛೇರಿ ಮುಕ್ತಾಯಗೊಂಡಿತು. 

 ಎರಡನೇ ಕಛೇರಿಗಾಗಿ ವೇದಿಕೆ ಏರಿದವರು ಕು| ಆತ್ರೇಯಿ ಕೃಷ್ಣ. ನಾಟ ರಾಗದಲ್ಲಿ ಜಯ-ಜಯ ಸ್ವಾಮಿನ್‌ ಕೃತಿಯನ್ನು ನೇರವಾಗಿ ಚುರುಕು ಗತಿಯಲ್ಲಿ ಆರಂಭಿಸಿ ಖಮಾಚ್‌ ರಾಗದಲ್ಲಿ ಸೀತಾಪತೇ ನಾ ಮನಸು ಕೃತಿಯನ್ನು ನಿರೂಪಿಸಿದರು. ಪೂರ್ವಿ ಕಲ್ಯಾಣಿ ರಾಗದಲ್ಲಿ ನಿನ್ನುವಿನಾ ಕೃತಿಗೆ ಅಲಂಕಾರವಾಗಿ ರಾಗಾಲಾಪನೆ ಪ್ರಕಟಗೊಂಡಿತು. ಮುಂದೆ ಆಭೇರಿ ರಾಗದಲ್ಲಿ ವೀಣಾವಾದ್ಯ ವಿನೋದಿನಿ ಚುರುಕಿನ ಗತಿಯಲ್ಲಿ ಮೂಡಿ ಬಂತು. ಪ್ರಧಾನ ಅಂಗವಾಗಿ ಮೂಡಿಬಂದ ಖರಹರಪ್ರಿಯ ರಾಗದ ಚಕ್ಕನಿ ರಾಜ ಕೃತಿಗೆ ತಕ್ಕುದಾದ ವರ್ಧಿನಿ ರೂಪದ ರಾಗಾಲಾಪನೆ ಸೂಕ್ತವೆನಿಸಿತು. ದೇವರ ನಾಮಕ್ಕೆ ಮುನ್ನುಡಿಯಾಗಿ ಆಕರ್ಷಕ ಉಗಾಭೋಗವನ್ನು ತೊಡಿಸಿ ಒಂದು ಸಂತೃಪ್ತಿದಾಯಕ ಕಛೇರಿಯನ್ನು ಮುಕ್ತಾಯಗೊಳಿಸಿದರು. 

ಆ ಬಳಿಕ ಪ್ರಿಯಾಂಕ ಯು.ಕೆ. ಮತ್ತು ಕು| ನಿರೀಕ್ಷಾ ಯು.ಕೆ. ಇವರ ಯುಗಳ ಗಾಯನ ನಡೆಯಿತು.ಸೋದರಿಯರ ಆತ್ಮವಿಶ್ವಾಸ ಮತ್ತು ಹೊಂದಾಣಿಕೆ ಉತ್ತಮವಾಗಿತ್ತು. ಆರಂಭದ ಚಾರುಕೇಶಿ ವರ್ಣ ತಾಜಾ ಬಿಗುತನದಿಂದ ಗಮನ ಸೆಳೆಯಿತು. ಷಣ್ಮುಖ ಪ್ರಿಯದ ಸಿದ್ಧಿ ವಿನಾಯಕ , ಉದಯರವಿ ಚಂದ್ರಿಕೆ ರಾಗದ ಮಾಕೇಲರಾ ರಾಗಾಲಾಪನೆಯೊಂದಿಗೆ ಬಂದ ಪಂತೂವರಾಳಿಯ ಶಿವ-ಶಿವ ಎನರಾದ ಕೃತಿ ಪ್ರಧಾನ ರಾಗಕ್ಕಿಂತ ಮೊದಲು ಪ್ರಸ್ತುತಗೊಂಡ ರಚನೆಗಳಾಗಿದ್ದವು. ಮುಖ್ಯ ರಾಗವಾಗಿ ವರಾಳಿಯಲ್ಲಿ ಏಟಿ ಜನ್ಮಮಿದೀ ಕೃತಿ ಆಲಾಪನೆ ನೆರವಲ್‌ ಸ್ವರಪ್ರಸಾರಗಳೊಂದಿಗೆ ಸೊಗಸಾಗಿ ಪ್ರಸ್ತುತಗೊಂಡಿತು. ಸಿಂಧುಭೈರವಿಯಲ್ಲಿ ವೆಂಕಟಾಚಲನಿಲಯಂ ಮತ್ತು ಹಂಸಾನಂದಿಯಲ್ಲಿ ತಿಲ್ಲಾನ ಉತ್ತಮವಾಗಿ ಮೂಡಿಬಂತು. 

ಯುವ ಕಲಾವಿದ ಕೃಷ್ಣ ಪವನ್‌ ಕುಮಾರ್‌ ಕಛೇರಿಯ ಮಟ್ಟವನ್ನು ತಟ್ಟನೆ ಮೇಲಕ್ಕೆತ್ತಿ ಬಿಟ್ಟರು. ಮೃದುವಾಗಿ, ಹೃದ್ಯವಾಗಿ, ವಿಳಂಬಕಾಲದಲ್ಲಿ ಅವರು ನಡೆಸುವ ವ್ಯವಹಾರಗಳು ಅತ್ಯಂತ ಆಕರ್ಷಕವಾಗಿತ್ತು. ಎವ್ವಾರಿ ಬೋದ ಆಭೋಗಿ ರಾಗದ ವರ್ಣದೊಂದಿಗೆ ಕಛೇರಿ ಆರಂಭಿಸಿ ಮುಂದೆ ವಿನಾಯಕಾ ನಿನ್ನು ಹಂಸಧ್ವನಿ ರಾಗದಲ್ಲಿ ಉತ್ತಮ ಮನೋಧರ್ಮ ಸ್ವರಪ್ರಸಾರದೊಂದಿಗೆ ಮೂಡಿಬಂತು. ಮುಂದೆ ಪರಂಧಾಮಯವತಿ ಕೃತಿಯನ್ನು ಧರ್ಮವತಿ ರಾಗದಲ್ಲಿ ಪ್ರಸ್ತುತ ಪಡಿಸಿದರು. ಮುಕುಟ ಮಣಿಯಾಗಿ ಶೋಭಿಸಿದ ದ್ವಿಜಾವಂತಿ ರಾಗದ ಅಖೀಲಾಂಡೇಶ್ವರಿ ಕೃತಿ ಭಾವತರಂಗದಲ್ಲಿ ತೇಲುವಂತೆ ಮಾಡಿತು. ಬಂಟುರೀತಿ ಹಂಸನಾದದಲ್ಲಿ ಮೂಡಿಬಂತು. ಏನು ಧನ್ಯಳ್ಳೋ ಲಕುಮಿಯಲ್ಲಿ ತೋಡಿ ರಾಗದ ಎಲ್ಲ ಮನೋಧರ್ಮದ ಅಂಶಗಳನ್ನು ಬಳಸಿಕೊಂಡು ಪ್ರಸ್ತುತ ಪಡಿಸಿದರು. 

 ಕೊನೆಯ ಕಛೇರಿ ನೀಡಿದವರು ಕು| ಅರ್ಚನಾ ಮತ್ತು ಕು| ಸಮನ್ವಿ. ಚುರುಕುಗತಿಯಲ್ಲಿ ಗಂಗಣಪತೇ ಹಂಸಧ್ವನಿ ರಾಗದಲ್ಲಿ ತಿಶ್ರನಡೈ ಆದಿತಾಳದಲ್ಲಿ ಪ್ರಸ್ತುತ ಪಡಿಸಿದರು. ಮುಂದೆ ಪೂರ್ವಿ ಕಲ್ಯಾಣಿ ರಾಗಾಲಾಪನೆಯನ್ನು ಪರಸ್ಪರ ಹಂಚಿಕೊಳ್ಳುತ್ತಾ ಬಿತ್ತರಿಸಿದ ಬಗೆ ಆಪ್ಯಾಯಮಾನವಾಗಿತ್ತು. ಇದರಲ್ಲಿ “ಅಪಮಾನವಾದರೆ ಒಳಿತು’ ಉತ್ತಮವಾಗಿ ಮೂಡಿ ಬಂತು. ಪ್ರಧಾನ ರಾಗವಾಗಿ ಬಂದ ಆಭೇರಿಯ ಬೆಳವಣಿಗೆಯಲ್ಲಿ ಕಲಾವಿದೆಯರ ಪ್ರತಿಭೆ, ಶಿಸ್ತು ಮತ್ತು ವಿದ್ವತ್‌ ಸಮನಾಗಿ ಮಿಳಿತಗೊಂಡಿರುವುದು ಗಮನಾರ್ಹ ಅಂಶ. ಈ ರಾಗದಲ್ಲಿ ಜನಪ್ರಿಯವಾಗಿರುವ “ಭಜರೇ ರೇ ಮಾನಸ ಕೃತಿ ಕಲಾವಿದೆಯರ ಪರಸ್ಪರ ತಿಳುವಳಿಕೆಯ ಅನುಸಂಧಾನದಲ್ಲಿ ಶೋಭಾಯಮಾನವಾಗಿ ಪ್ರಕಟಗೊಂಡಿತು.

ಮುಂದೆ ಉಗಾಭೋಗದೊಂದಿಗೆ ರಾಗೀ ತಂದೀರಾ ಮಾಂಡ್‌ ರಾಗದಲ್ಲಿ ಮೂಡಿಬಂತು. ಶ್ರೀಗಂಧ ನಾನಾಗಿ ಶ್ರೀ ರಂಜನಿ ರಾಗದಲ್ಲಿ, ಜೀನಿ – ಜೀನಿ ಚಾರುಕೇಶಿ ರಾಗದಲ್ಲಿ ಮೋಹನ ಕಲ್ಯಾಣಿ ರಾಗದಲ್ಲಿ ತಿಲ್ಲಾನವು ಚೆನ್ನಾಗಿಯೇ ಮೂಡಿ ಬಂತು. ಅನಿರುದ್ಧ್ ಭಾರದ್ವಾಜ್‌ ವಯಲಿನ್‌ನಲ್ಲಿ ಮತ್ತು ನಿಕ್ಷಿತ್‌ ಟಿ. ಪುತ್ತೂರು ಮೃದಂಗದಲ್ಲಿ ಸಹಕರಿಸಿದರು.

 ಉಮಾಶಂಕರಿ 

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.