CONNECT WITH US  

ಹೃದಯ ತಟ್ಟಿದ ವೀಣಾವಾದನ 

ಪವನ ಆಚಾರ್‌ ಅವರ ಶಿಷ್ಯ ಡಾ| ರಾಮಕೃಷ್ಣ  "ರಾಗಧನ'ದ ವತಿಯಿಂದ ವಸಂತಿ ರಾಮ ಭಟ್‌ ಅವರು ಪ್ರಾಯೋಜಿಸುತ್ತಿರುವ ಗೃಹ ಸಂಗೀತ
ಮಾಲಿಕೆಯಲ್ಲಿ ಏಳನೆಯ ಪ್ರಸ್ತುತಿಯಾಗಿ ರಾಮಕೃಷ್ಣ ವೀಣಾವಾದನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ಪಿಸಿರಿಲ್ಲದ ನುಡಿತ, ದೀರ್ಘ‌ವಾದ ಮೀಟುಗಳು, ಸುಶ್ಯಾವ್ಯವಾದ ಸೌಖ್ಯ ಸಂಗೀತ, ಎಲ್ಲಕ್ಕಿಂತ ಮಿಗಿಲಾಗಿ ಕಲಾವಿದರ ಸಂಗೀತ ಪ್ರೀತಿ ಮತ್ತು ಆತ್ಮವಿಶ್ವಾಸ. ನಾಟಕುರುಂಜಿ ವರ್ಣದ ಚುರುಕಾದ ಆರಂಭ. ನಾಟ (ಶ್ರೀ ಮಹಾಗಣಪತಿಂ) ಸರಸ್ವತಿ (ಸರಸ್ವತಿ ನಮೋಸ್ತುತೆ) ಅಭೋಗಿ (ನೆಕ್ಕುರಂಗಿ) ಸಾರಮತಿ (ಮೋಕ್ಷಮಗಲದಾ) ರಸಾಳಿ (ಅಪರಾಧಮುಲನು) ರಾಗಗಳ ದೋಷರಹಿತವಾದ ನಿರೂಪಣೆ ಮನಸ್ಸಿಗೆ ಹಿತ ನೀಡಿತು. ಸುರಟಿ (ಶ್ರೀ ವೆಂಕಟಗಿರೀಶಂ) ರಾಗದ ಆಲಾಪನೆ ಚಿಕ್ಕದಾದರೂ ಚೊಕ್ಕವೆನಿಸಿತು. "ಭೈರವಿ'ಯ ರಾಗವಿಸ್ತಾರ, "ತಾನಂ' ನಂತರ ಸ್ವರಜತಿಯನ್ನು (ಕಾಮಾಕ್ಷಿ) ನುಡಿಸಿದ ವೈಣಿಕರು ಅದರಲ್ಲಿ ಉತ್ತಮವಾದ ಸ್ವರ ವಿನಿಕೆಗಳನ್ನು ಪೋಣಿಸಿ ರಾಗಕ್ಕೆ ನ್ಯಾಯ ಒದಗಿಸಿದರು.

ಹನ್ನೆರಡು ರಾಗಗಳ ರಾಗಮಾಲಿಕೆ (ಆರಭಿಮಾನಂ) ಕಾಪಿ ರಾಗದ ತಿಲ್ಲಾನಾ ಮತ್ತು ದೇವರ ನಾಮ (ಬಾರೋ ಕೃಷ್ಣಯ್ಯ) ದೊಂದಿಗೆ ಕಛೇರಿ ಸಮಾಪನಗೊಂಡಿತು. ಮೃದಂಗದಲ್ಲಿ ಬಾಲಚಂದ್ರ ಆಚಾರ್‌ ಮತ್ತು ತಾಳದಲ್ಲಿ ವೈಭವ ಪೈ ಅವರು ಸಹಕರಿಸಿದ್ದಾರೆ.

 ಸರೋಜಾ ಆರ್‌. ಆಚಾರ್ಯ

Trending videos

Back to Top