ಮಳೆಗಾಲದಲ್ಲಿ ಸುರಿದ ಸಂಗೀತ ವರ್ಷಧಾರೆ


Team Udayavani, Aug 24, 2018, 5:26 PM IST

1.jpg

 ಸುರ್‌ ಸಂಗೀತ್‌ ಪ್ರತಿಷ್ಠಾನ ಜುಲೈ 22ರಂದು ಉಡುಪಿ ಪುರಭವನದಲ್ಲಿ ಆಯೋಜಿಸಿದ ” ಕರ್ನಾಟಕ ಕಲಾಶ್ರೀ ಪಂಡಿತ್‌ ಜಿ. ಮಾಧವ ಭಟ್‌ ಸ್ಮತಿ ಸಂಗೀತ ಸಮಾರೋಹ’ ಸಂಗೀತೋತ್ಸವದಲ್ಲಿ ದೇಶದ ಖ್ಯಾತ ಕಲಾವಿದರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟರು. ಮೊದಲು ಉಡುಪಿಯವರೇ ಆದ ಸತ್ಯಚರಣ್‌ ಶೆಣೈ ಗಾಯನ ನೀಡಿದರು. ಮಿಯಾಕಿ ತೋಡಿ ರಾಗದಲ್ಲಿ ಮಧ್ಯ ಲಿತ್ರಿ ತಾಲದ ಬಂಧಿಶ್‌ “ಅಬ್‌ ಮೋರಿ ನಯ್ಯ ಪಾರ್‌ ಕರೋ’ ಮತ್ತು ಧ್ರುತ್‌ ತ್ರಿತಾಲದ “ಲಂಗರ್‌ ಕಾಂಕರಿಯ ಜೀ ನಾಮಾರೋ’ ಬಂಧಿಶ್‌ಗಳನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಿದರು. ಇವರಿಗೆ ತಬಲದಲ್ಲಿ ಟಿ. ರಂಗ ಪೈ ಹಾಗೂ ಹಾರ್ಮೋನಿಯಂನಲ್ಲಿ ಸಿದ್ಧಾರ್ಥ ಮಲ್ಯ ಸಹಕಾರ ನೀಡಿದರು. 

ಎರಡನೆಯದಾಗಿ ಕೋಲ್ಕತ್ತದ ಸಂದೀಪ್‌ ಘೋಷ್‌ ತಬಲಾ ಸೋಲೋ ನೀಡಿದರು. ಒಂದು ಗಂಟೆ ಕಾಲ ವಿಲಂಬಿತ್‌, ಮಧ್ಯಲಯ, ಧ್ರುತ್‌ ತ್ರಿತಾಲ್‌ ಮತ್ತು ಲಗ್ಗಿಗಳಲ್ಲಿ ತಮ್ಮ ಸಾಧನೆಯ ಆಳ, ವಿಸ್ತಾರವನ್ನು ಪರಿಚಯಿಸಿದರು. ಫ‌ರೂಕಾಬಾದ್‌ ಮಾತ್ರವಲ್ಲದೆ ಇತರ ಅನೇಕ ಘರಾಣಿಗಳ ಸಂಕೀರ್ಣ ವಿನ್ಯಾಸದ ಮಟ್ಟುಗಳನ್ನು ನುಡಿಸಿ ರಂಜಿಸಿದರು. ಮಾಧುರ್ಯ, ಮಿಂಚಿನ ಬೆರಳುಗಾರಿಕೆ, ವೈಶಿಷ್ಟéಪೂರ್ಣ ಲಯಚಿತ್ರಗಳಿಂದ ಮೋಡಿ ಮಾಡಿದರು. ಮಿಲಿಂದ್‌ ಕುಲಕರ್ಣಿ ಹಾರ್ಮೋನಿಯಂನಲ್ಲಿ ಲೆಹರಾ ಸಾಥ್‌ ನೀಡಿದರು. ಕಚೇರಿಯ ನಡುವೆ ಹಲವಾರು ಕಡೆ ಸಿಕ್ಕ ಕಿರು ಅವಕಾಶದಲ್ಲಿ ಕೈಚಳಕ ತೋರಿದ ಮಿಲಿಂದ್‌ ತಿಹಾಯಿಗಳನ್ನು , ಲಯ ಕಾರಿಗಳನ್ನು ನುಡಿಸಿ ಮಿಂಚಿದರು. 

ಬೆಳಗ್ಗಿನ ಅವಧಿಯ ಅಂತ್ಯದಲ್ಲಿ ಧಾರವಾಡದ ಪಂ| ಕೈವಲ್ಯ ಕುಮಾರ್‌ ಗಾಯನ ಕಛೇರಿ ನೀಡಿದರು. ಕೈವಲ್ಯ ಕುಮಾರ್‌ ಪ್ರಸ್ತುತ ಕಿರಾನಾ ಘರಾಣಿಯ ಅಗ್ರಮಾನ್ಯ ಕಲಾವಿದರಲ್ಲಿ ಓರ್ವರಾಗಿ ಗುರುತಿಸಿಕೊಂಡವರು. ಮಳೆಗಾಲದ ರಾಗ ಮಿಯಾ ಮಲ್ಹಾರ್‌ನ ವಿಲಂಬಿತ ಬಂಧಿಶ್‌ “ಸಹೇಲರಿಯ ಸಾಂಚ್‌ ಭಯಿ|’ ಮಧ್ಯ ಲಯ ತ್ರೀತಾಳದ “ಏ ಬಾದಲ್‌ ಆಯೆ| ಉಮ್ಮಂಡ್‌ ಗುಮ್ಮಂಡ್‌’, ಧ್ರುತ್‌ ಏಕತಾಲದ “ಮಮ್ಮದಷಾ ರಂಗೀಲಾರೆ’ಗಳನ್ನು ಹೃದ್ಯವಾಗಿ ಪ್ರಸ್ತುತ ಪಡಿಸಿದರು. ಏರುಶೃತಿಯ ಸುಮಧುರ ಕಂಠ ಮೂರೂ ಸಪ್ತಕಗಳಲ್ಲಿನ ಸುಲಲಿತ ಸಂಚಾರ, ಕಿರಾನಾ ಘರಾಣೆಯ ವಿಶಿಷ್ಟ ಆಲಾಪನೆಗಳೂ ಮಳೆಗಾಲದ ಸುಂದರ ಚಿತ್ರಣ ನೀಡಿ ನಡು ನಡುವೆ ಪ್ರಚಂಡವಾಗಿ ಭೋರ್ಗರೆವ ತಾನ್‌ಗಳ ಮಳೆ ಸುರಿಸಿ ಬೆರಗು ಹುಟ್ಟಿಸಿದರು. ಅನಂತರ ಪಹಾಡಿ ರಾಗದಲ್ಲಿ ಪಾಕಿಸ್ಥಾನದ ಒಂದು ವಿಶಿಷ್ಟ ದಾದರ “ಮಾರ್‌ ಡಾಲ ನಜರಿಯಾ ಮಿಲಾಕೆ ‘ ಮತ್ತು ಪಾರಂಪರಿಕ ಬಂಧಿಶ್‌ “ಸಾವರೇ ಅಯ್ಯಯ್ಯೋ’ಗಳನ್ನು ಪ್ರಸ್ತುತ ಪಡಿಸಿ ರಂಜಿಸಿದರು. ಶಾಂ ಕಲ್ಯಾಣ್‌ ರಾಗದ “ಶೂರಾಮಿ ವಂದಿತೆ’ ಅಭಂಗ್‌ ಮೂಲಕ ಕಛೇರಿಯನ್ನು ಮುಕ್ತಾಯಗೊಳಿಸಿದರು. ತಬಲಾದಲ್ಲಿ ಪಂ. ಓಂಕಾರ್‌ನಾಥ್‌ ಗುಲ್ವಾಡಿ ಹಾಗೂ ಹಾರ್ಮೋನಿಯಂನಲ್ಲಿ ಮಿಲಿಂದ್‌ ಕುಲಕರ್ಣಿ ಸಾಥ್‌ ನೀಡಿದರು.

ಮಧ್ಯಾಹ್ನದ ಪ್ರಥಮ ಕಛೇರಿ ನೀಡಿದವರು ಗೋವಾದ ಯುವ ಗಾಯಕ ವಿಕ್ರಾಂತ್‌ ನಾಯಕ್‌. ಶಾಂತ ಭಕ್ತಿ ರಸ ಪ್ರಧಾನವಾದ ರಾಗ ಭೀಮ್‌ ಪಲಾಸ್‌ನಲ್ಲಿ ವಿಲಂಬಿತ ಬಂಧಿಶ್‌ “ಪಲಕನ ಲಾಗಿ’ ಹಾಗೂ ಧ್ರುತ್‌ ತ್ರಿತಾಳದ “ಬಿರಜಮೆ| ಧೂಮ ಮಚಾವೋ’ಗಳನ್ನು ತಾನ್‌ ಹಾಗೂ ಆಲಾಪಗಳಿಂದ ಪ್ರಸ್ತುತ ಪಡಿಸಿದರು. ಬಳಿಕ ಶ್ರೀರಾಗದಲ್ಲಿ “ಚಲೋರಿ ಮಾಯಿ ರಾಮಸಿಯಾ ಧರ್‌ಸನ್‌ ಕೋ’ ಅನ್ನು ಮಧ್ಯಲಯ ಹಾಗೂ ದ್ರುತ್‌ ತ್ರಿತಾಳದಲ್ಲಿ ನಿರೂಪಿಸಿದರು. 

ಇಡೀ ದಿನದ ಕಛೇರಿಯ ಪ್ರಮುಖ ಆಕರ್ಷಣೆ ಪಾಣಿಪತ್‌ ಘರಾಣೆಯ ಯುವ ಕಲಾವಿದ ಉಸ್ತಾದ್‌ ಶಹನವಾಜ್‌ ಅಹಮದ್‌ ಖಾನ್‌ ಅವರ ಶಾಸ್ತ್ರೀಯ ಗಿಟಾರ್‌ ವಾದನ. ಸುಮಾರು ಒಂದು ಗಂಟೆ ಕಾಲ ಭಾಗೇಶ್ರೀ ರಾಗದ ಆಲಾಪ, ಜೋಡ್‌, ಝಾಲಾ ಮತ್ತು ವಿಲಂಬಿತ ತ್ರಿತಾಳ, ಮಧ್ಯಲಯ ಏಕತಾಲ ಮತ್ತು ಧ್ರುತ್‌ ತ್ರಿತಾಳದ ಗತ್‌ಗಳ ಮೂಲಕ ಮಂತ್ರಮುಗ್ಧಗೊಳಿಸಿದರು. ಸಂದೀಪ್‌ ಘೋಷ್‌ ತಬಲಾದಲ್ಲಿ ಸಾಥ್‌ ನೀಡಿದರು.ಭಾಗೆಶ್ರೀ ರಾಗದ ನಂತರ ನುಡಿಸಿದ ಕಮಾಚ್‌ ರಾಗದ ಧುನ್‌ನಲ್ಲಿ ಶಾನವಾಜ್‌ ಅನೇಕ ರಾಗಗಳ ಸುಂದರ ಪಲುಕುಗಳನ್ನು ತಂದು ರಂಜಿಸಿದರು. 

ಕೊನೆಯದಾಗಿ ಕಛೇರಿ ನೀಡಿದವರು ಮುಂಬಯಿಯ ಖ್ಯಾತ ಗಾಯಕಿ, ಡಾ| ವರದಾ ಗೋಡ್‌ಬೋಲೆ. ಮೊದಲಿಗೆ ವಿಲಂಬಿತ್‌ ಬಂಧಿಶ್‌ “ತುಮಪರ್‌ ಮೈ ಕುರ್‌ಬಾನ್‌’, ದ್ರುತ್‌ ತ್ರಿತಾಲ್‌ನ “ಮೈ ವಾರಿ ವಾರಿ ಜಾವೂ’ಗಳ ಮೂಲಕ ಯಮನ್‌ ರಾಗವನ್ನು ಪ್ರಸ್ತುತ ಪಡಿಸಿದರು. ಅನಂತರ ಅಪ್ರಚಲಿತ ಮಳೆಗಾಲದ ರಾಗ ಜಯಂತ್‌ ಮಲ್ಹಾರ್‌ನಲ್ಲಿ ವಿಲಂಬಿತ್‌ ಬಂಧಿಶ್‌ “ಋತ್‌ ಬರಖಾಯಿ’ ಧ್ರುತ್‌ ತ್ರಿತಾಳ್‌ನಲ್ಲಿ ಋತು ಆಯಿ ಸಾವನ್‌ಕಿ’, ಧ್ರುತ್‌ ಏಕತಾಲದ “ಆ ಭರಸೀಲಾ ಪ್ಯಾರ್‌ಗಳನ್ನು ಪ್ರಸ್ತುತಪಡಿಸಿದರು. ಅವರು ನೀಡುತ್ತಿದ್ದ ಅನಿರೀಕ್ಷಿತ ತಿರುವುಗಳು, ಜಿಗಿತಗಳು ಆಶ್ಚರ್ಯ ಚಕಿತರನ್ನಾಗಿಸಿದವು. ಕೊನೆಯದಾಗಿ ಇನ್ನೊಂದು ಅಪ್ರಚಲಿತ ರಾಗ ಕೌಂಸಿ ಕಾನಡದಲ್ಲಿ ಮಧ್ಯಲಯ ತ್ರಿತಾಳದಲ್ಲಿ “ನಯನಾ ಭರೇ ಖಜರಾ’ ಬಂಧಿಶ್‌ನ್ನು ಪ್ರಸ್ತುತಪಡಿಸಿ ಮುಕ್ತಾಯಗೊಳಿಸಿದರು. ತಬಲಾದಲ್ಲಿ ಪಂ| ಓಂಕಾರ್‌ನಾಥ್‌ ಗುಲ್ವಾಡಿ ಹಾರ್ಮೋನಿಯಂನಲ್ಲಿ ಮಿಲಿಂದ್‌ ಕುಲಕರ್ಣಿ ಸಹಕರಿಸಿದರು.

 “ನಾದಪ್ರಿಯ’

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.