ಮೆಚ್ಚುಗೆಗೆ ಪಾತ್ರವಾದ ಯಕ್ಷ ದೇಗುಲದ ಯಕ್ಷಗಾನ ಪ್ರಾತ್ಯಕ್ಷಿಕೆ 


Team Udayavani, Aug 31, 2018, 6:00 AM IST

2.jpg

ತಾಳ, ಮುದ್ರೆಗಳು, ಹೆಜ್ಜೆಗಾರಿಕೆ, ರಸಾಭಿನಯ, ಮಾತುಗಾರಿಕೆ, ಪುಂಡು ವೇಷದ ಒಡ್ಡೋಲಗ, ಯುದ್ಧ ನೃತ್ಯ, ಬಣ್ಣದ ವೇಷದ ಒಡ್ಡೋಲಗ, ಕೃಷ್ಣನ ಒಡ್ಡೋಲಗ ಹೀಗೆ ಯಕ್ಷಗಾನದ ಅನೇಕ ನಿಕಷಗಳ ಬಗ್ಗೆ ಸ್ಪಷ್ಟವಾದ ವಿವರಣೆ ಮತ್ತು ಅಭಿನಯವನ್ನು ಪ್ರಾತ್ಯಕ್ಷಿಕೆ ಒಳಗೊಂಡಿತ್ತು.

ಮೈಸೂರಿನ ಸರಸ್ವತಿಪುರಂನ ವಿಜಯ ವಿಠ್ಠಲ ಶಾಲೆಯ ವಿಶ್ವೇಶತೀರ್ಥ ಮಂಟಪದಲ್ಲಿ ಮೈಸೂರಿನ ಕರಾವಳಿಯ ಯಕ್ಷಗಾನ ಕೇಂದ್ರ ಇದರ ದಶಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರು ನೀಡಿದ ಯಕ್ಷಗಾನ ಪ್ರಾತ್ಯಕ್ಷಿಕೆ ಮೆಚ್ಚುಗೆಗೆ ಪಾತ್ರವಾಯಿತು. 

    ಯಕ್ಷಗಾನದ ಎಲ್ಲ ಅಂಗಗಳ ಬಗ್ಗೆ ಸೂಕ್ಷ್ಮ ಒಳನೋಟವನ್ನು ನೀಡುವ ಯಕ್ಷದೇಗುಲ ಪರಿಕಲ್ಪನೆಯ ಈ ಪ್ರಾತ್ಯಕ್ಷಿಕೆಯ ವಿಶೇಷತೆಯೆಂದರೆ ಬಣ್ಣದ ವೇಷ ಮತ್ತು ಪುಂಡುವೇಷಗಳೆರಡು ವೀಕ್ಷಕರೆದುರೇ ಸಿದ್ಧಗೊಳ್ಳುವ ಬಗೆ. ತಾಳ, ಮುದ್ರೆಗಳು, ಹೆಜ್ಜೆಗಾರಿಕೆ, ರಸಾಭಿನಯ, ಮಾತುಗಾರಿಕೆ, ಪುಂಡು ವೇಷದ ಒಡ್ಡೋಲಗ, ಯುದ್ಧ ನೃತ್ಯ, ಬಣ್ಣದ ವೇಷದ ಒಡ್ಡೋಲಗ, ಕೃಷ್ಣನ ಒಡ್ಡೋಲಗ ಹೀಗೆ ಯಕ್ಷಗಾನದ ಅನೇಕ ನಿಕಷಗಳ ಬಗ್ಗೆ ಸ್ಪಷ್ಟವಾದ ವಿವರಣೆ ಮತ್ತು ಅಭಿನಯವನ್ನು ಪ್ರಾತ್ಯಕ್ಷಿಕೆ ಒಳಗೊಂಡಿತ್ತು. ಹಾಗೆಯೇ ರಂಗದ ಇಕ್ಕೆಲಗಳಲ್ಲಿ ಇಬ್ಬರು ಕಲಾವಿದರು ಬಣ್ಣದ ವೇಷ ಮತ್ತು ಪುಂಡುವೇಷಗಳನ್ನು ಧರಿಸುವ ಪ್ರಕ್ರಿಯೆ ನಡೆಯುತ್ತದೆ. ಅಕ್ಕಿಹಿಟ್ಟಿನಿಂದ ತಯಾರಿಸಲ್ಪಟ್ಟ ಬಣ್ಣದ ವೇಷಧಾರಿ ಚುಟ್ಟಿ ಗೆರೆಗಳ ಮೂಲಕ ರಕ್ಕಸ ವೇಷವೊಂದು ರೂಪುಗೊಳ್ಳುತ್ತದೆ. ಹಾಗೆ ಪ್ರಾತ್ಯಕ್ಷಿಕೆ ವೀಕ್ಷಕರೆದುರು ಅಟ್ಟೆ ಕ್ಯಾದಿಗೆ ಮುಂದಲೆ ಕಟ್ಟುವ ಮೂಲಕ ಪುಂಡು ವೇಷ ರೂಪುಗೊಳ್ಳುತ್ತದೆ. ವೇಷಧಾರಿಗಳು ವೇಷ ಕಟ್ಟುತ್ತಿರುವಂತೆಯೇ ಅವರು ಬಳಸುವ ಪರಿಕರಗಳ ಬಗ್ಗೆ ಮಾಹಿತಿ ಮತ್ತು ಅವೆಲ್ಲವೂ ಸೇರಿ ಒಟ್ಟಂದದಲ್ಲಿ ಜೋಡಣೆಯಾದಾಗ ಉಂಟಾಗುವ ಆಕಾರದ ಬಗ್ಗೆ ತಿಳಿಸುತ್ತಾರೆ. ಹಾಗೆ ಹಾಸ್ಯ, ಶೃಂಗಾರ, ವೀರ, ಕರುಣರಸಗಳನ್ನು ಒಳಗೊಂಡ ದೃಶ್ಯದ ತುಣುಕುಗಳನ್ನು ಈ ಪ್ರಾತ್ಯಕ್ಷಿಕೆ ಒಳಗೊಂಡಿತ್ತು. 

ಕಲಾವಿದ ಸುಜಯೀಂದ್ರ ಹಂದೆ ನಿರೂಪಿಸಿ, ಪ್ರಾತ್ಯಕ್ಷಿಕೆಯಲ್ಲಿ ಕಲಾವಿದರಾಗಿ ಭಾಗವತರು ದೇವರಾಜ ದಾಸ್‌, ಲಂಬೋದರ ಹೆಗಡೆ ಮದ್ದಲೆಯಲ್ಲಿ ಗಣಪತಿ ಭಟ್‌, ಚಂಡೆಯಲ್ಲಿ ಮಾಧವ, ವೇಷಧಾರಿಯಾಗಿ ಕೃಷ್ಣಮೂರ್ತಿ ಉರಾಳ, ತಮ್ಮಣ್ಣ ಗಾಂವ್ಕರ್‌, ನವೀನ್‌ ಕೋಟ, ನರಸಿಂಹ ತುಂಗ, ಮನೋಜ್‌ ಭಟ್‌, ಕಡ್ಲೆ ಗಣಪತಿ ಹೆಗಡೆ, ಉಪ್ಪುಂದ ಗಣೇಶ, ಉದಯ ಭೋವಿ ಮತ್ತು ರಾಜು ಪೂಜಾರಿ ಅವರು ಭಾಗವಹಿಸಿದರು. ಕೆ. ಮೋಹನ್‌ ನಿರ್ದೇಶನದಲ್ಲಿ, ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ನಡೆಯಿತು. 

ಕೋಟ ಸುದರ್ಶನ ಉರಾಳ 

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.