ತಲಪಾಡಿ ಯಕ್ಷೋತ್ಸವದಲ್ಲಿ ಗೋವಿಂದ ಭಟ್ಟರಿಗೆ ಸಮ್ಮಾನ 


Team Udayavani, Nov 9, 2018, 6:00 AM IST

3.jpg

ಗಡಿಭಾಗದಲ್ಲಿ ಯಕ್ಷಗಾನೀಯ ಚಟುವಟಿಕೆ ಗಳಲ್ಲಿ ತೊಡಗಿಸಿ ಯಕ್ಷಗಾನ ಕಂಪನ್ನು ಹರತ್ತಿರುವ ಯಕ್ಷಮಿತ್ರ ಸೇವಾ ಬಳಗ ತಲಪಾಡಿ ಇದರ 5 ನೇ ವರ್ಷದ ವಾರ್ಷಿಕೋತ್ಸವ ನ. 10ರಂದು ಸಂಜೆ 6.30 ರಿಂದ ಮುಂಜಾವು ತನಕ ತಲಪಾಡಿ ಟೋಲ್‌ ಗೇಟ್‌ ಬಳಿಯ ವೇದಿಕೆಯಲ್ಲಿ ಜರಗಲಿದೆ . ಹಿರಿಯ ಕಲಾವಿದ,ಯಕ್ಷಗುರು ಕೆ.ಗೋವಿಂದ ಭಟ್‌ ಸೂರಿಕುಮೇರು ಈ ಬಾರಿಯ ಸಮ್ಮಾನಕ್ಕೆ ಆಯ್ಕೆ ಆಗಿದ್ದಾರೆ . ತೆಂಕು ಬಡಗಿನ ಕಲಾವಿದರಿಂದ “ಕೀಚಕ ವಧೆ – ಕರ್ಣಪರ್ವ – ಕುಮಾರ ವಿಜಯ’ ಎಂಬ ಆಖ್ಯಾನಗಳ ಪ್ರದರ್ಶನವೂ ಜರಗಲಿದೆ . 

ಗೋವಿಂದ ಭಟ್‌ 
ಸೂರಿಕುಮೇರು ಗೋವಿಂದ ಭಟ್ಟರು ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷರಂಗದಲ್ಲಿ ಇರುವ ಸುಪ್ರಸಿದ್ಧ ಕಲಾವಿದರೆಲ್ಲರೂ ಭಟ್ಟರ ಶಿಷ್ಯರು. ಭಟ್ಟರು ಕುರಿಯ ವಿಠಲ ಶಾಸ್ತ್ರಿಗಳಲ್ಲಿ ಯಕ್ಷಗಾನ ಹೆಜ್ಜೆಗಳನ್ನು ಕಲಿತರು . ನಂತರ ಭರತನಾಟ್ಯ ಕಲಿತು 11ನೇ ವಯಸ್ಸಿನಲ್ಲೇ ಯಕ್ಷರಂಗ ಪ್ರವೇಶಿಸಿದರು .ಮೂಲ್ಕಿ , ಕೂಡ್ಲು , ಸುರತ್ಕಲ್‌ ,ಇರಾ ಮೇಳಗಳಲ್ಲಿ ತಿರುಗಾಟ ನಡೆಸಿ ಐದು ದಶಕಗಳಿಂದ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಕಲಾವಿದರಾಗಿ ಸೇವೆಗೈಯುತ್ತಿದ್ದಾರೆ . ಅರ್ಥಗಾರಿಕೆಯನ್ನು ಮಲ್ಪೆ ರಾಮದಾಸ ಸಾಮಗರಿಂದ ಅಭ್ಯಸಿಸಿರುವ ಭಟ್ಟರು ಸ್ತ್ರೀವೇಷ , ಪುಂಡುವೇಷ , ರಾಜವೇಷ , ಬಣ್ಣದವೇಷ , ಹಾಸ್ಯಪಾತ್ರ ಎಲ್ಲವನ್ನೂ ನಿರ್ವಹಿಸಬಲ್ಲ ಸವ್ಯಸಾಚಿ ಎನಿಸಿಕೊಂಡಿದ್ದಾರೆ . ಅವರ ಸುಭದ್ರೆ , ದ್ರೌಪದಿ , ಅಭಿಮನ್ಯು , ಬಬ್ರುವಾಹನ , ಶ್ರೀಕೃಷ್ಣ , ಶ್ರೀರಾಮ , ವಾಲಿ , ಕೌಂಡ್ಲಿಕ , ಕೌರವ , ಕಾರ್ತ್ಯ , ಜರಾಸಂಧ , ತಾಮ್ರಧ್ವಜ , ಅರ್ಜುನ , ಕರ್ಣ , ಭೀಷ್ಮ , ಭೌಮಾಸುರ , ಹನುಮಂತ , ಋತುಪರ್ಣ , ಗಣಮಣಿ , ಅಣ್ಣಪ್ಪ , ದಕ್ಷ ಮುಂತಾದ ಪಾತ್ರಗಳು ಅಪಾರ ಪ್ರಸಿದ್ಧಿ ಗಳಿಸಿವೆ .ತೆಂಕುತಿಟ್ಟಿನಲ್ಲಿ ಗದಾಯುದ್ಧ ಪ್ರಸಂಗದ ಕೌರವನ ಪಾತ್ರವನ್ನು ನಿರ್ವಹಿಸುವಲ್ಲಿ ಭಟ್ಟರನ್ನು ಮೀರಿಸುವವರಿಲ್ಲ ಎನ್ನಬಹುದು . 

  ಎಂ.ಶಾಂತರಾಮ ಕುಡ್ವ

ಟಾಪ್ ನ್ಯೂಸ್

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.