ಆಳ್ವಾಸ್‌ ವಿದ್ಯಾರ್ಥಿ ಸಿರಿಯಲ್ಲಿ ಮಕ್ಕಳ ಯಕ್ಷಗಾನ

Team Udayavani, Dec 7, 2018, 6:00 AM IST

d-52.jpg

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡಬಿದಿರೆ ಇದರ ಆಶ್ರಯದಲ್ಲಿ ನಡೆದ ಆಳ್ವಾಸ್‌ ವಿದ್ಯಾರ್ಥಿ ಸಿರಿ  -2018ರಲ್ಲಿ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ.) ಪೆರ್ಲ ಇಲ್ಲಿನ ಮಕ್ಕಳ ಮೇಳದ ಯಕ್ಷಗಾನ ಪ್ರದರ್ಶನಗೊಂಡಿತು. ಕೆ.ವಿ. ಸುಬ್ಬಣ ಬಯಲು ರಂಗಮಂದಿರದಲ್ಲಿ ಪ್ರದರ್ಶಿತವಾದ “ಅಭಿಮನ್ಯು ಕಾಳಗ’ ಪ್ರಸಂಗ ಕಲಾಪ್ರೇಮಿಗಳನ್ನು ರಂಜಿಸಿತು. 

ಸುಬ್ಬಣಕೋಡಿ ರಾಮಭಟ್ಟರ ನಿರ್ದೇಶನದಲ್ಲಿ ನಡೆದ ಈ ಯಕ್ಷಗಾನ ಬಯಲಾಟಕ್ಕೆ ಪ್ರಸಾದ ಬಲಿಪರು ಭಾಗವತರಾಗಿ ಮಕ್ಕಳು ನಿರ್ವಹಿಸಿದ ಪಾತ್ರಗಳಿಗೆ ಜೀವ ತುಂಬಿದರು.ಚಂದ್ರಶೇಖರ ಭಟ್‌ ಕೊಂಕಣಾಜೆ ಹಾಗೂ ರಾಘವ ಬಲ್ಲಾಳ್‌ ಕಾರಡ್ಕ ಚೆಂಡೆ -ಮದ್ದಳೆಯಲ್ಲಿ ಉತ್ತಮ ಸಾಥ್‌ ನೀಡಿದರು. ಚಕ್ರತಾಳದಲ್ಲಿ ಕೇಂದ್ರದ ಹಳೆ ವಿದ್ಯಾರ್ಥಿಯೂ ಕಟೀಲು ಮೇಳದ ಯುವ ಪುಂಡು ವೇಷಧಾರಿಯೂ ಆದ ಶ್ರೀ ಶಿವಾನಂದ ಬಜಕೂಡ್ಲು ಸಹಕರಿಸಿದರು. 

ಪರಂಪರೆಯ ಪಾಂಡವರ ಒಡ್ಡೋಲಗದ ಮೂಲಕ ಆರಂಭವಾದ ಯಕ್ಷಗಾನದಲ್ಲಿ ಧರ್ಮರಾಯನಾಗಿ ಕು| ಶ್ರಾವಣಿ ಕಾಟುಕುಕ್ಕೆ , ಭೀಮನಾಗಿ ಮಾ| ಸನತ್‌ರಾಜ್‌ ಇಡಿಯಡ್ಕ ಅರ್ಜುನನಾಗಿ ಕು| ಕೀರ್ತನಾ ಕೀರಿಕಾಡು, ನಕುಲ – ಸಹದೇವರಾಗಿ ಮಾ| ನಿರಂಜನ ಕಾರಡ್ಕ ಹಾಗೂ ಮಾ| ಹರ್ಷಲ್‌ ಮಾಯಿಲೆಂಗಿ ತಮ್ಮ ತಾಳ ಜ್ಞಾನವನ್ನು ಪರಂಪರೆಯ ಕ್ರಮವನ್ನು ತೋರಿಸಿಕೊಟ್ಟರು. ಪಾಂಡವರ ಸರ್ವನಾಶವನ್ನೇ ಪಣತೊಟ್ಟ ಕೌರವನಾಗಿ ಮಾ| ಚಿನ್ಮಯ ಕೃಷ್ಣ ಕಡಂದೇಲು ಹಾಗೂ ಗುರು ದ್ರೋಣಾಚಾರ್ಯನಾಗಿ ಮಾ| ಹರ್ಷ ಸಜಂಗದ್ದೆ ಉತ್ತಮ ಆರಂಭವನ್ನು ಕೊಟ್ಟರು. ತೆರೆ ಪರಪಟ್ಟು ಸಹಿತ ರಂಗಸ್ಥಳವೇರಿದ ಸಮಸಪ್ತಕರಾದ ಮಾ| ಅಜೇಯ ಸುಬ್ರಹ್ಮಣ್ಯ ಮೂಡಬಿದಿರೆ ಹಾಗೂ ಮಾ| ವೆಂಕಟ ಯಶಸ್ವಿ ಕಬೆಕ್ಕೋಡು ಬಣ್ಣದ ವೇಷದ ನಡೆಯನ್ನು ಉತ್ತಮವಾಗಿ ಕಲಾಪ್ರೇಕ್ಷಕರಿಗಿತ್ತರು. ಶ್ರೀ ಕೃಷ್ಣನಾಗಿ ಕು| ಭಾಗ್ಯ ಶ್ರೀ ಕುಂಚಿನಡ್ಕ ಉತ್ತಮ ಪ್ರದರ್ಶನ ನೀಡಿದರು. 

ಅಭಿಮನ್ಯುವಾಗಿ ಮೊದಲಿಗೆ ರಂಗವೇರಿದ ಮಾ| ಚಿತ್ತರಂಜನ್‌ ಕಡಂದೇಲು ಬಹುಮುಖ ಪ್ರತಿಭಾವಂತ. ಉತ್ತಮ ನಾಟ್ಯ ಹಾಗೂ ಮಾತುಗಳಿಂದ ದೊಡ್ಡಪ್ಪನಿಂದ ಅಪ್ಪಣೆ ಪಡೆದು ಹೊರಟನಾದರೂ ತಾಯಿ ಸುಭದ್ರೆಯ ಮಾತೃ ವಾತ್ಸಲ್ಯದ ಕಟ್ಟುಪಾಡಿಗೆ ಒಳಗಾಗುವ ಸನ್ನಿವೇಶವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದರು. ಸುಭದ್ರೆಯಾಗಿ ಕು| ಸ್ಮತಿ ಮಾಯಿಲೆಂಗಿ ಮಾತೃತ್ವದ ಅಕ್ಕರೆಯನ್ನು, ಕಳೆದುಹೋಗುವ ಏಕಮಾತ್ರ ಪುತ್ರನ ಪುತ್ರ ಶೋಕವನ್ನು ಮನಮುಟ್ಟುವಂತೆ ಅಭಿನಯಿಸಿದರು.

ಮುಂದಿನ ಅರ್ಧ ವೀರಾವೇಶದ ಅಭಿಮನ್ಯುವಾಗಿ ಚುರುಕು ನಡೆಯ ಮಾ| ಸ್ವಸ್ತಿಕ್‌ ಶರ್ಮ ಉತ್ತಮ ದಿಗಿಣಗಳನ್ನು ಪ್ರದರ್ಶಿಸಿ ರಂಜಿಸಿದರು. ಸಾರಥಿಯಾಗಿ ಮಾ| ದತ್ತೇಶ್‌ ಮಾವಿನಕಟ್ಟೆ ದಿಗಿಣಗಳನ್ನು ಉಣಬಡಿಸಿದರು. ಕರ್ಣನಾಗಿ ಮಾ| ರೂಪೇಶ್‌, ಸೈಂಧವನಾಗಿ ಮಾ| ಸನತ್‌ ಇಡಿಯಡ್ಕ, ಕೋಟೆ ಬಲಗಳಾಗಿ ಮಾ| ನಿರಂಜನ ಕಾರಡ್ಕ, ಮಾ| ಹರ್ಷಲ್‌ ಮಾಯಿಲೆಂಗಿ ಹಾಗೂ ದುಶ್ಯಾಸನ, ಸುಃಸಳರಾಗಿ ಅವನಿಕಾ ಕಾಟುಕುಕ್ಕೆ ಮತ್ತು ಕು| ವೀಕ್ಷಿತಾ ಪೆರುವಾಯಿ ಪಾತ್ರ ನಿರ್ವಹಿಸಿದರು. ಲಕ್ಷಣ ಕುಮಾರನಾಗಿ ಕು| ಅಭಿ ಮೂಡಬಿದಿರೆ ಚುರುಕಾಗಿ ಪಾತ್ರ ವಹಿಸಿದರು. 

ಬಾಲಕೃಷ್ಣ ಪೆರ್ಲ 

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.