ಗೀತಾ ಸಾಹಿತ್ಯ ಸಂಭ್ರಮ ವಿಶಿಷ್ಟ ಪರಿಕಲ್ಪನೆ


Team Udayavani, Dec 14, 2018, 6:00 AM IST

9.jpg

ಗೀತವಿದೆ, ಸಾಹಿತ್ಯ ವಿಶ್ಲೇಷಣೆ ಇದೆ, ಗೀತ ಸುಶ್ರಾವ್ಯವಾಗಿ ಹೊರಹೊಮ್ಮುತ್ತದೆ, ಮಾತು ಮುತ್ತಿನಂತೆ ಉರುಳುತ್ತದೆ. ಪ್ರತಿಯೊಬ್ಬನ ಮನದಲ್ಲಿ ಕಚಗುಳಿಯಿಡುತ್ತದೆ. ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಮನದಾಳಕ್ಕೆ ಇಳಿದು ವಿಚಾರ ವಿಮರ್ಶೆ ಮಾಡಿಸುತ್ತದೆ. ನಮ್ಮ ನಿಮ್ಮೊಳಗೆ ಪರಿವರ್ತನೆ ಸಾಕಾರವಾದರೆ ಅದು ಗೀತಾ ಸಾಹಿತ್ಯ ಸಂಭ್ರಮದ ಯಶಸ್ಸು.

ಇದೇನು ಸಂಭ್ರಮ? 
ಓರ್ವ ಶಿಕ್ಷಕನ ಪರಿಕಲ್ಪನೆಯಿದು. ವಿಟ್ಲ ಸಮೀಪದ ಬೊಳಂತಿಮೊಗರು ಸರಕಾರಿ ಶಾಲೆಯ ಶಿಕ್ಷಕ ವಿಠ್ಠಲ ನಾಯಕ್‌ ಕೊಕ್ಕಪುಣಿ ಅವರು ಈ ಸಂಭ್ರಮವನ್ನು ಮನೆ ಮನೆಗೆ ಹಂಚುತ್ತಿದ್ದಾರೆ. ಇದು ಒಂದು, ಎರಡು ಅಥವಾ ಮೂರು ಗಂಟೆಗಳ ಕಾಲಾ ವಕಾಶವನ್ನು ಹೊಂದಿ ರುವ ಕಾರ್ಯಕ್ರಮ. ಇಬ್ಬರು ಅಥವಾ ಮೂವರು ಕಲಾ ವಿದರು, ಒಂದು ಹಾರ್ಮೋನಿಯಂ, ತಬಲಾ ಮತ್ತು ತಮ್ಕಿಯಿದೆ. ಮಾತಿನಲ್ಲಿ ವಿಠ್ಠಲ ನಾಯಕ್‌ ಮಂಟಪ ಕಟ್ಟುತ್ತಾರೆ.

ಆಡಂಬರವಿಲ್ಲ 
ತಾಳ, ಮೇಳವಿದೆ. ಹಾಡು ಮೈ ನವಿರೇಳಿಸುತ್ತದೆ. ಹುಚ್ಚೆಬ್ಬಿಸುತ್ತದೆ. ಪಾಠ, ಪ್ರವಚನವಿದೆ ಆದರೆ ಮಕ್ಕಳಿಗೆ ಮಾತ್ರವಲ್ಲ, ಮಕ್ಕಳಿಗಿಂತ ಹೆಚ್ಚು ಹೆತ್ತವರಿಗೂ ಇದೆ. ಸಂಸ್ಕೃತಿ, ಸಂಸ್ಕಾರ, ಶಿಷ್ಟಾಚಾರ, ಸಂಪ್ರದಾಯ, ಆಚಾರ, ವಿಚಾರಗಳ ಗುತ್ಛವನ್ನು ಸಂಗ್ರಹಿಸುವುದಕ್ಕೆ ಅವಕಾಶವಿದೆ. ನಗುವಿದೆ, ವ್ಯಂಗ್ಯವಿದೆ. ನವಿರಾದ ಟಾಂಗ್‌ ಇದೆ. ಟೀಕೆಯಿದೆ. ತಿದ್ದುವುದಕ್ಕೆ ಸೂಕ್ತ ಮಾರ್ಗದರ್ಶನವಿದೆ. ಸಮಾಜದ ಅಂಕುಡೊಂಕುಗಳನ್ನು ವಿಮರ್ಶಿಸಿ, ಪ್ರತಿಯೊಬ್ಬರ ಆತ್ಮ ವಿಮರ್ಶೆ ಮಾಡಿಸುತ್ತದೆ.

ಮೈಮರೆಯುವ ಪ್ರೇಕ್ಷಕರು 
ಎತ್ತರದ ಸ್ವರ, ಏರಿಳಿತ, ಪದ ಲಾಲಿತ್ಯ, ಸೂಕ್ತ ಹಾಡುಗಳ ಆಯ್ಕೆ, ಅಗತ್ಯ ಸಂಭಾಷಣೆಯನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುವ ವಿಠ್ಠಲ ನಾಯಕ್‌ ಅವರ ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಸೂಜಿಗಲ್ಲಿನಂತೆ ಆಕರ್ಷಿತರಾಗುತ್ತಾರೆ. ಹತ್ತು ನಿಮಿಷದಲ್ಲೇ ತಾಳ್ಮೆ ಕಳೆದುಕೊಳ್ಳುವ ಪ್ರೇಕ್ಷಕರನ್ನು, ಇವರು ಒಂದೆರಡು ಗಂಟೆಗಳ ಕಾಲ ಅಲುಗಾಡದೇ ಇರುವಂತೆ ನೋಡಿಕೊಳ್ಳುತ್ತಾರೆ. ಪ್ರೇಕ್ಷಕರನ್ನು ಅಷ್ಟು ಹೊತ್ತು ಹಿಡಿದಿಟ್ಟುಕೊಳ್ಳುವುದೇ ಒಂದು ರೀತಿಯ ಸಂಭ್ರಮ. ಮಾತಿನ ಚಾಟಿ ಯೇಟು ನೀಡುವುದು, ತನ್ನನ್ನೇ ಗುರಿಯಿಟ್ಟು ಚುಚ್ಚಿದರೋ ಎನ್ನು ವಂತೆ ಮಾಡುವ ವಿಷಯ ವೈವಿಧ್ಯ ಆಕರ್ಷಣೀಯವಾಗಿದೆ.

1000ಕ್ಕೂ ಹೆಚ್ಚು 
ಗೀತಾ ಸಾಹಿತ್ಯ ಸಂಭ್ರಮ ಕಾರ್ಯ ಕ್ರಮವನ್ನು ವಿಠ್ಠಲ ನಾಯಕ್‌ ಸುಮಾರು 1000 ಕಡೆಗಳಲ್ಲಿ ಆಯೋಜಿಸಿದ್ದಾರೆ. ಏಕವ್ಯಕ್ತಿ ಪ್ರದರ್ಶನವೂ ಇದೆ. ಕಲಾವಿದರಾದ ಸುಹಾಸ್‌ ಹೆಬ್ಟಾರ್‌, ರವಿರಾಜ್‌ ಒಡಿಯೂರು ಮತ್ತು ತೇಜಸ್‌ ಕಲ್ಲುಗುಂಡಿ ಅವರ ಸಾಥ್‌ನೊಂದಿಗೆ ನೀಡುವ ಪ್ರದರ್ಶನವೂ ಇದೆ. ಇವರ ಗೀತಾ ಸಾಹಿತ್ಯ ಸಂಭ್ರಮ ಕೇಳುಗರಿಗೆ ಹಬ್ಬ. ಆದುದರಿಂದ ಈ ಸಂಭ್ರಮವು ಇವರನ್ನು ಊರೂರಿಗೆ ತಿರುಗಾಟ ಮಾಡಿಸಿದೆ. 

ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.