ಗೊಂಬೆ ಮನೆಯಲ್ಲಿ ಪುಟ್ಟ ಪೂರ್ವಿಯ ಸಂಗೀತ


Team Udayavani, Dec 28, 2018, 6:00 AM IST

41.jpg

ಅವರ ಘೋಷಣೆಯೇ ಹಾಗೆ. ಪ್ರತಿಭೆ ನಿಮ್ಮದು; ವೇದಿಕೆ ನಮ್ಮದು ಎಂದು. ಅನೇಕ ಪ್ರತಿಭಾವಂತರಿಗೆ ವೇದಿಕೆಯೊದಗಿಸಿಕೊಟ್ಟ ಉಪ್ಪಿನಕುದ್ರು ದೇವಣ್ಣ ಕಾಮತ್‌ ಪದ್ಮನಾಭ ಕಾಮತ್‌ ಮೆಮೋರಿಯಲ್‌ ಯಕ್ಷಗಾನ ಗೊಂಬೆಯಾಟ ಟ್ರಸ್ಟ್‌ನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಡಿಸೆಂಬರ್‌ ತಿಂಗಳ ಕಾರ್ಯಕ್ರಮದ ಪ್ರಯುಕ್ತ ಬಾಲ ಪ್ರತಿಭೆ ಪೂರ್ವಿ ಚಾತ್ರ ಅವರಿಂದ ಸಂಗೀತ ಕಛೇರಿ ನಡೆಯಿತು. 

ಸಾಮಾನ್ಯವಾಗಿ ಈಚಿನ ದಿನಗಳಲ್ಲಿ ಸಣ್ಣ ಮಕ್ಕಳು ಟಿವಿಗಳ ರಿಯಾಲಿಟಿ ಶೋ ಪ್ರಭಾವದಿಂದ ಸಿನಿಮಾ ಗೀತೆಗಳಿಗೆ ಧ್ವನಿಯಾಗುತ್ತಾರೆ, ಸುಗಮ ಸಂಗೀತ ಹಾಡುಗಳಿಗೆ ಸ್ವರವಾಗುತ್ತಾರೆ, ಭಾವಗೀತೆಗಳಿಗೆ ಇಂಬು ಕೊಡುತ್ತಾರೆ, ಇನ್ನಾವುದೋ ಹಾಡಿಗೆ ಭಾವವಾಗುತ್ತಾರೆ. ಆದರೆ ಇಲ್ಲಿ ಹಾಡುತ್ತಿದ್ದ 11ರ ಹರೆಯದ ಪುಟ್ಟ ಪೂರ್ವಿ ಶುದ್ಧ ಸಂಗೀತ ಸುಧೆ ಹರಿಸಿದಳು. ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸಿ ತಾನೆಂದು ತೋರಿಸಿಕೊಟ್ಟಳು. ಅದನ್ನು ಆಕೆ ಗೌರವಿಸುವ ಪರಿ ಆಕೆಯ ಹಾಡುಗಳ ಮೂಲಕ ಅಭಿವ್ಯಕ್ತಿಯಾಗಿತ್ತು. 

ಭಜನ್‌ ಕುರಿತು ಹೆಚ್ಚು ಆಸಕ್ತಳಾದ ಪೂರ್ವಿ ಆ ದಿನದ ಕಾರ್ಯಕ್ರಮಕ್ಕೆ ದಾಸರ ಪದ, ಭಜನೆಗಳನ್ನೆ ಆಯ್ಕೆ ಮಾಡಿದ್ದಳು. ಒಟ್ಟು 14 ಕೀರ್ತನೆಗಳನ್ನು ಪ್ರಸ್ತುತಪಡಿಸಿದ್ದರ ಪೈಕಿ ಪುರಂದರದಾಸರ ಕೀರ್ತನೆಗಳಿಗೆ ಅಧಿಕ ಸ್ಥಾನ. ಗಜಮುಖ ವಂದಿಸುವೆ ಕರುಣದಿ ಕಾಯೊ… ಎಂದು ಕಲ್ಯಾಣ ವಸಂತರಾಗದಲ್ಲಿ ಕೀರ್ತನೆಗಳ ಗಾಯನ ಆರಂಭಕ್ಕೆ ಶುಭಮುನ್ನುಡಿ ಬರೆದು ನಂತರ ಪುರಂದರದಾಸರ ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ… ಹಾಡನ್ನು ಹಾಡಿದಳು. ಬೇಗಬಾರೋ…, ಪುರಂದರದಾಸರ ಹರಿನಾಮ ಜಿಹೆÌಯೊಳಿರಬೇಕು…, ಶಿವದರುಶನ ನಮಗಾಯಿತು…, ಬನ್ನೀ ಮುರಳಿಯ ನಾದವ ಕೇಳಿ…, ವನಮಾಲಿ ರಾಧಾರಮಣ…, ಆತ್ಮಾರಾಮ ಆನಂದ ರಮಣ…, ಬಂದನೇನೆ ರಂಗ ಬಂದನೇನೆ… ಹಾಡುಗಳನ್ನು ನಂತರ ಪ್ರಸ್ತುತಪಡಿಸಿದಳು. 

ಹಾಡುಗಳನ್ನು ಆಸ್ವಾದಿಸುತ್ತಿದ್ದ ಜನರನ್ನು ತಲೆದೂಗುವಂತೆ, ಕೈ ತಾಳ ಹಾಕುವಂತೆ ಮಾಡಿದ್ದು ಶೃಂಗೇರಿ ಜಗದ್ಗುರುಗಳ ಗರುಡಗಮನ ತವ ಚರಣ ಕಮಲ ಹಾಡು… ಗುರುಭಕ್ತಿಯ ಸಾರಸಂಗ್ರಹದ ಈ ಹಾಡು ಅಷ್ಟೊಂದು ಸರಳವಲ್ಲ. ಪದಗಳ ಲಾಲಿತ್ಯ, ಸಂಸ್ಕೃತ ಭೂಯಿಷ್ಠವಾದ ಈ ಹಾಡಿನಲ್ಲಿ ಒಂದೇ ಅಕ್ಷರ ಪ್ರತ್ಯೇಕವಾಗಿ ದಾಖಲಿಸಿ ಇಡೀ ವಾಕ್ಯದ ಅರ್ಥ ಬದಲಿಸಿದ ಹೆಗ್ಗಳಿಕೆ ಇರುವ ಚಮತ್ಕಾರದ ಹಾಡು ಇದು. ಸುರಳೀತವಾಗಿ ಹಾಡಿ, ಸಭಿಕರು ನಿಬ್ಬೆರಗಾಗಿ ಶ್ಲಾ ಸಿದ ಬಳಿಕ ಬೇಹಾಗ್‌ ರಾಗ ಆದಿ ತಾಳದಲ್ಲಿ ಹರಿ ಕುಣಿದಾ ನಮ್ಮ ಹರಿ ಕುಣಿದಾ…, ನಂತರ ಆನಂದ ಮಯಗೆ ಚಿನ್ಮಯ…ಗೆ ಹಾಡು. ಕೊನೆಗೆ ಭೈರವಿ ರಾಗದಲ್ಲಿ ತಂಬೂರಿ ಮೀಟಿದವ ಭವಾಬ್ಧಿ ದಾಟಿದವ… ಮೂಲಕ ಕೀರ್ತನ ಸಂಜೆಗೆ ಶುಭಮಂಗಳವಾಯಿತು. ಈಕೆಗೆ ಹಾರ್ಮೋನಿಯಂನಲ್ಲಿ ಹಾಲಾಡಿ ರಮೇಶ್‌ ಕಾಮತ್‌, ತಬಲಾದಲ್ಲಿ ಶ್ರೀನಿವಾಸ ಶೇಟ್‌ ಸಾಥ್‌ ನೀಡಿದ್ದರು.

ಒಂದೂವರೆ ತಾಸಿನಲ್ಲಿ 14 ಗೀತೆಗಳನ್ನು ಹಾಡಿದ ಈಕೆ ಕುಂದಾಪುರದ ಶ್ರೀದುರ್ಗಾಂಬಾ ಬಸ್‌ಗಳ ಮಾಲಕ ಅನಿಲ್‌ ಚಾತ್ರ -ಸುಧಾ ಚಾತ್ರ ಅವರ ಪುತ್ರಿ. ಬ್ರಹ್ಮಾವರ ಲಿಟ್ಲ ರಾಕ್‌ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ. 

ಲಕ್ಷ್ಮೀ ಮಚ್ಚಿನ 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.