ತ್ರಿಮೂರ್ತಿಗಳು-ದಾಸ ಶ್ರೇಷ್ಟರ ಆರಾಧನೆ 

Team Udayavani, Feb 22, 2019, 12:30 AM IST

4.jpg

ಸಂಗೀತ ಪರಿಷತ್‌ ಮಂಗಳೂರು(ರಿ.), ಇವರು ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠದ ಸಹಯೋಗದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳು ಮತ್ತು ದಾಸವರೇಣ್ಯರ “ಆರಾಧನೋತ್ಸವ’ವನ್ನು ಏರ್ಪಡಿಸಿದ್ದರು. ಚೆನ್ನೈ ಯ ಕಲಾವಿದ ಸುನೀಲ್‌ ಗಾರ್ಗನ್‌ ಅವರ ಕಛೇರಿಯೊಂದಿಗೆ ಆರಾಧನೆ ಆರಂಭವಾಯಿತು. ಮೋಹನ ವರ್ಣದೊಂದಿಗೆ ಕಛೇರಿ ಆರಂಭಿಸಿದ ಕಲಾವಿದ ವೆಂಕಟವಿಠಲದಾಸರ ಗಂಭೀರ ನಾಟ ರಾಗದ ಗಣಪತಿ ಎನ್ನ ಪಾಲಿಸೊ ಗಂಭೀರವನ್ನು ಸ್ವರ ಕಲ್ಪನೆಗಳೊಂದಿಗೆ ಪ್ರಸ್ತುತಪಡಿಸುವ ಮೂಲಕ ತಾನೋರ್ವ ಪ್ರಬುದ್ಧ ಗಾಯಕನಾಗಿ ಹೊರಹೊಮ್ಮುತ್ತಿರುವುದನ್ನು ಶ್ರುತ ಪಡಿಸಿದರು. ತ್ಯಾಗರಾಜರ ರವಿಚಂದ್ರಿಕ ರಾಗದ ಮಾಕೇಲರ ವಿಚಾರಮುವನ್ನು ಮತ್ತು ಪುರಂದರದಾಸರ ಕಾನಡದ ನಾನಿನ್ನ ಧ್ಯಾನದೊಳಿರಲು ಆಲಾಪನೆಯೊಂದಿಗೆ ಹೃದಯಂಗಮವಾಗಿ ನಿರೂಪಿಸಿದರು. ಭಾವ ಪ್ರಧಾನವಾದಆಲಾಪನೆಯೊಂದಿಗೆ ವಿಜಯದಾಸರ ಬಾರಯ್ಯ ಶ್ರೀನಿವಾಸ ಭಕ್ತರ ಮನೆಗೆಯನ್ನು ಅಂದವಾದ ಸಂಗತಿಗಳಿಂದ ನಿರೂಪಿಸಿ ರಸಿಕರ ಮನಮುಟ್ಟಿದರು. ತ್ವರಿತಗತಿಯ ತ್ಯಾಗರಾಜರ ದರ್ಬಾರ್‌ ರಾಗದ ಯೋಚನ ಕಮಲ ಲೊಚನವನ್ನು ಪ್ರಸ್ತುತಪಡಿಸಿ ಲಘು ಆಲಾಪನೆಯೊಂದಿಗೆ ಗೋಪಾಲಕೃಷ್ಣ ಭಾರತಿಯವರ ನಾಟಕುರುಂಜಿ ರಾಗದ ವಳಿ ಮಾರೈ ತಿರಕ್ಕುಡೆ ಮಲೈಪೋಲೆಯಲ್ಲಿ ಮನ ಸೆಳೆದ ಸ್ವರ ಮಾಲಿಕೆಗಳು ಪ್ರೇಕ್ಷಕರಿಗೆ ಕಲಾವಿದನ ಸಾಧನೆಯ ಪರಿಚಯ ಮಾಡಿಸಿದವು. ಪುರಂದರದಾಸರ ಜಗದೋದ್ಧಾರನ ಹಾಡಿ, ಶಾಮಾ ಶಾಸಿŒಗಳ ನೀಲಾಂಬರಿಯ ಬ್ರೋವವಮ್ಮ ಬಂಗಾರು ವಿನೊಂದಿಗೆ ಕಛೇರಿ ಮುಕ್ತಾಯವಾಯಿತು. ವಯಲಿನ್‌ನಲ್ಲಿ ಗೋಕುಲ್‌ ಅಲಂಗೊಡೆ , ಮೃದಂಗದಲ್ಲಿ ಸನೋಜ್‌ ಕುಮಾರ್‌ ಸಹಕರಿಸಿದರು. 

ಅಪರಾಹ್ನದ ಕಛೇರಿಯನ್ನು ನಡೆಸಿಕೊಟ್ಟವರು ಉಜಿರೆಯ ಕೃಷ್ಣಗಾನಸುಧಾ ಸಂಗೀತ ವಿದ್ಯಾಲಯದ ನಿರ್ದೇಶಕಿ ಅನಸೂಯ ಪಾಟಕ್‌. ಬಹುದಾರಿ ವರ್ಣದೊಂದಿಗೆ ಆರಂಭಿಸಿ ಬೇಗಡೆಯ ವಲ್ಲಭನಾಯಕಸ್ಯವನ್ನು ಸಮರ್ಥವಾಗಿ ನಿರೂಪಿಸಿದರು. ಅಠಾಣದ ಅನುಪಮ ಗುಣಾಂಬುಧಿ ಹಾಡಿ ಆಲಾಪನೆಯೊಂದಿಗೆ ಕಾಮವರ್ಧಿನಿಯ ಅಪ್ಪ ರಾಮಭಕ್ತಿಯನ್ನು ಮನೋಜ್ಞವಾಗಿ ನಿರೂಪಿಸಿ ಮನಗೆದ್ದರು. ರಾಗಮಾಲಿಕೆಯಲ್ಲಿ ಭಜನೆ ಮಾಡಬಾರದೆ ನಿರೂಪಿಸಿ, ಆಲಾಪನೆಯೊಂದಿಗೆ ಶಹಾನದ ಈ ವಸುಧಾ ನೀವಂಟಿ ದೈವವನ್ನು ಕಲ್ಪನಾ ಸ್ವರಗಳೊಂದಿಗೆ ಪ್ರಸ್ತುತಪಡಿಸಿದರು. ಪ್ರಧಾನ ರಾಗವಾದ ತೋಡಿಯ ಜೇಸೀ ನಾದೆಲ್ಲದಲ್ಲಿ ಆಲಾಪನೆ, ನೆರವಲ್‌ ಮತ್ತು ಸುಂದರ ಸ್ವರಪ್ರಸ್ತಾರಗಳಿಂದ ತಾನೋರ್ವ ಉತ್ತಮ ಗಾಯಕಿ ಎಂದು ನಿರೂಪಿಸಿದರು. ಹಿಂದೋಳದಲ್ಲಿ ವಿಜಯದಾಸರ ಪರದೇಸಿ ನೀನು ಮತ್ತು ತಿಲ್ಲಾನದೊಂದಿಗೆ ಕಛೇರಿ ಮುಕ್ತಾಯಗೊಳಿಸಿದರು. ಪಿಟೀಲಿನಲ್ಲಿ ಗಣರಾಜ ಕಾರ್ಲೆ ,ಮೃದಂಗದಲ್ಲಿ ಪನ್ನಗ ಶರ್ಮನ್‌ ಸಹಕರಿಸಿದರು. 

ವಿ| ಮಧೂರು ಬಾಲಸುಬ್ರಹ್ಮಣ್ಯಮ್‌ ಶಿಷ್ಯರೊಂದಿಗೆ ಪಂಚರತ್ನ ಗೋಷ್ಠಿ ಗಾಯನ ನಡೆಸಿಕೊಟ್ಟ ನಂತರ ಹರಿದಾಸರೆಂದೇ ಖ್ಯಾತಿ ಪಡೆದ ಡಾ|ವಿದ್ಯಾಭೂಷಣ ಅವರು ವ್ಯಾಸರಾಜ ತೀರ್ಥರ ಬಲ್ಲವಗಿಲ್ಲಿದೆ ವೈಕುಂಠ ದೊಂದಿಗೆ ದಾಸ ಶ್ರೇಷ್ಠರ ಆರಾಧನೆ ಆರಂಭಿಸಿದರು. ಕನಕದಾಸರ ತೊರೆದು ಜೀವಿಸಬಹುದೆಯನ್ನು ಅಪ್ಯಾಯಮಾನವಾಗಿ ಹಾಡಿ ಲಘು ಆಲಾಪನೆಯೊಂದಿಗೆ ತ್ಯಾಗರಾಜರ ಬಹುದಾರಿಯ ಬೊವಬಾರಮಾ ನಿರೂಪಿಸಿದರು. ಕನಕದಾಸರ ಇಷ್ಟು ದಿನ ಈ ವೈಕುಂಠ ಭಾವ ಪೂರ್ಣವಾಗಿ ಹಾಡಿ ಪಟ್ಣಂ ಸುಬ್ರಹ್ಮಣ್ಯ ಅಯ್ಯರ್‌ ಅವರ ಕಲ್ಯಾಣಿಯ ನಿಜ ದಾಸ ವರಧಾವನ್ನು ಆಲಾಪನೆ, ಸ್ವರಕಲ್ಪನೆಗಳೊಂದಿಗೆ ಪ್ರಸ್ತುತ ಪಡಿಸಿದಾಗ ದೀರ್ಘ‌ ಕರತಾಡನ ಕೇಳಿಬಂತು. ಮಣಿದವರ ಮನದಾಸೆ, ಆನಂದಭೈರವಿಯ ಪುರಂದರದಾಸರ ಸುಮ್ಮನೆ ಬರುವುದೆ ಮುಕ್ತಿಗಳನ್ನು ಹಾಡಿ ಪುರಂದರದಾಸರ ಕಲಿಯುಗದಲಿ ಹರಿನಾಮವ ನೆನೆದರೆಯನ್ನು ಭಕ್ತಿಪೂರ್ವಕವಾಗಿ ನಿರೂಪಿಸಿ ಇವ ನಮ್ಮ ಕಣ್ಣ ದ್ವಾಪರದ ಅಣ್ಣವನ್ನು ಹಾಡಿದರು. ಮಧ್ವ ಮೋಹನದಾಸರ ಸಂಜೀವನ ಗಿರಿಧರವನ್ನು ಭಾವಪೂರ್ಣವಾಗಿ ಪ್ರಸ್ತುತಪಡಿಸಿ ಕಮಲೇಷವಿಠಲದಾಸರ ವರ ಮಂತ್ರಾಲಯ. ಪುರಂದರದಾಸರ ವೆಂಕಟಾಚಲ ನಿಲಯಂ ಹಾಡಿ ಭಾಗ್ಯಾದ ಲಕ್ಷ್ಮೀಬಾರಮ್ಮದೊಂದಿಗೆ ಆರಾಧನೆ ಮುಕ್ತಾಯಗೊಳಿಸಿದರು. ಪಿಟೀಲಿನಲ್ಲಿ ಪ್ರಾದೇಶ್‌ ಆಚಾರ್‌, ಮೃದಂಗದಲ್ಲಿ ಅನಿರುದ್ಧ ಭಟ್‌ ಮತ್ತು ಗಣೇಶ್‌ ಮೂರ್ತಿ ಘಟದಲ್ಲಿ ಸಹಕಾರ ನೀಡಿದರು.

ಕೃತಿ ಮಂಗಳೂರು 

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.