ವಿದ್ಯಾನಿಕೇತನದೊಳಗೆ ಕಲಾನಿಕೇತನ 


Team Udayavani, Feb 22, 2019, 12:30 AM IST

8.jpg

ಮಕ್ಕಳಲ್ಲಿರುವ ಸೃಜನಾತ್ಮಕ ಕಲೆ-ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ, ತಕ್ಕ ಗುರುವಿನ ಬಳಿ ಶಿಕ್ಷಣ ಕೊಡಿಸಿದಾಗ ಅವರ ಪ್ರತಿಭೋಜ್ವಲನವಾಗುತ್ತದೆ. ಅಂತಹ ಪ್ರತಿಭೋಜ್ವಲನ ಚಿತ್ರ ಕೃತಿಗಳ ಕಲಾಪ್ರದರ್ಶನವೊಂದು ಬ್ರಹ್ಮಾವರದ ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್‌ಸ್ಕೂಲ್‌ನಲ್ಲಿ ನಡೆಯಿತು. ಕಲಾವಿದ ಮನೋಜ್‌ ಪಾಂಗಾಳ ಹಾಗೂ ಕಲಾ ಶಿಕ್ಷಕಿಯರಾದ ಆಶಾ, ಉಷಾ ಅರಳು ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿ ಅವರಿಂದ ಸೃಜನಾತ್ಮಕ ಚಿತ್ರಕೃತಿಗಳನ್ನು ರಚಿಸಿಕೊಂಡು ಸ್ಟ್ರೋಕ್ಸ್‌ 2018 ಶೀರ್ಷಿಕೆಯಡಿ ಕಲಾಪ್ರದರ್ಶನ ನಡೆಸಿ ವಿದ್ಯಾನಿಕೇತನದೊಳಗೆ ಕಲಾನಿಕೇತನವನ್ನು ಪ್ರತಿಷ್ಠಾಪಿಸಿದರು.

ವಿಶಿಷ್ಟ ಉಮೇದ್ವಾರಿಕೆಯೊಂದಿಗೆ ಚಿತ್ರ ಕಲಾಪ್ರದರ್ಶನ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಆಯೋಜನೆಗೊಂಡಿತ್ತು. ಸ್ವತಃ ಮಕ್ಕಳೇ ತಮ್ಮ ಸೃಷ್ಟಿಯೆದುರು ತಾವು ಬೆರಗುಗೊಂಡರು. ಇನ್ನಷ್ಟು ಕಲಾಕೃತಿ ರಚಿಸಬೇಕೆಂದು ಪ್ರೇರಣೆಗೊಂಡರು. ಸ್ಟ್ರೋಕ್ಸ್‌ – 2018 ಹೆಸರೇ ಸೂಚಿಸುವಂತೆ ಮಕ್ಕಳ ಹೃನ್ಮನಗಳ ಭಾವಾಭಿವ್ಯಕ್ತಿ ಚಿತ್ರಗಳಲ್ಲಿ ಮೂಡಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ರಚಿಸಿರುವ ಈ ಚಿತ್ರಗಳಲ್ಲಿ ಸೀದಾ ಸಾದಾ ರೇಖೆಗಳು, ವಿಷಯದ ನೇರ ಪ್ರಸ್ತಾಪನೆ, ನೇರ ಬಣ್ಣಗಳ ಪ್ರಸರಣ, ಮುಗ್ಧತೆ, ಪ್ರೀತಿ-ಪ್ರೇಮಗಳ ಅನಾವರಣ, ಪಶು ಪಕ್ಷಿ ಪ್ರೇಮ, ಪರಿಸರ ಕಾಳಜಿ ಎದ್ದುಕಾಣುತ್ತದೆ. ಆ ಪ್ರಾಯದಲ್ಲಿ ಗ್ರಹಿಸಬಹುದಾದಷ್ಟು ವಿಷಯಗಳ ಅಭಿವ್ಯಕ್ತಿ ಚಿತ್ರದಲ್ಲಿ ಮೂಡಿದೆ. ಮೂರ್ತ-ಅಮೂರ್ತ ಎರಡು ದೃಷ್ಟಿಯಿಂದಲೂ ವೀಕ್ಷಕರು ಚಿತ್ರಗಳನ್ನು ಗ್ರಹಿಸಬಹುದಾಗಿತ್ತು. 

ಮಕ್ಕಳ ಮೆಚ್ಚಿನ ವಿಷಯಗಳಾದ ಗುಡ್ಡ-ಬೆಟ್ಟಗಳಿರುವ ನಿಸರ್ಗ, ಮಳೆಗಾಲದ ದೃಶ್ಯ, ಕಡಲತೀರ, ಕಂಬಳ, ಕೋಳಿಅಂಕ, ತನ್ನ ಮನೆ ಹಾಗೂ ಸುತ್ತಲಿನ ವಾತಾವರಣ, ನನ್ನ ತಮ್ಮ ತಂಗಿ, ನನ್ನ ಶಾಲೆ, ನನ್ನ ಅಜ್ಜಿಮನೆ, ನನ್ನ ಮೆಚ್ಚಿನ ನಾಯಿ, ದೀಪಾವಳಿ-ಕ್ರಿಸ್ಮಸ್‌ ಹಬ್ಬ, ಬರ್ತ್‌ಡೇ ಆಚರಣೆ, ಉತ್ಸವ-ಜಾತ್ರೆಗಳು, ತಾನು ಆಡುವ ಆಟ, ಬೆಲೂನ್‌ ಆಟ, ಆಟದ ಮೈದಾನ, ರಾಕೆಟ್‌ ಉಡಾವಣೆ, ದೇವದೇವತೆಗಳ ಚಿತ್ರಗಳು ಮೂಡಿದ್ದವು. ಅವುಗಳಿಗೆ ಮೌಂಟ್‌ ಹಾಕಿ ಹಿನ್ನೆಲೆ ಪರದೆಯೊಂದಿಗೆ ಅಂದವಾಗಿ ಜೋಡಿಸಲಾಗಿತ್ತು. ಕರಕುಶಲ ವಸ್ತುವಿಭಾಗದಲ್ಲಿ ತರಕಾರಿ ಕತ್ತರಿಸಿ ಮೂಡಿಸಿದ ಮಾದರಿಗಳು, ನಿರುಪಯೋಗಿ ರಟ್ಟು, ಕಾಗದ, ಗೆರಟೆ, ಸ್ಟ್ರಾ, ಪ್ಲಾಸ್ಟಿಕ್‌ ಬಾಟ್ಲಿಗಳಿಂದ ಸೃಷ್ಟಿಸಿದ ಹೂದಾನಿಗಳು, ಮನೆಗುಡಿಸಲುಗಳ ಮಾದರಿಗಳು, ಟೊಪೊಗ್ರಫಿ ಭೂದೃಶ್ಯಗಳು, ಬಲೂನಿನ ಮುಖವಾಡಗಳು ಹೀಗೆ ಒಂದಕ್ಕಿಂತ ಒಂದು ಆಕರ್ಷಕವಾಗಿದ್ದವು. 

ವಿದ್ಯಾರ್ಥಿ ಕಲಾವಿದರಾದ ಆದರ್ಶ ನಾರಾಯಣ, ಚಿಂತನ್‌ ಎಸ್‌., ಕಿಶನ್‌ ಜೆ., ಶ್ರೀರಾಂ, ಶರಧಿ ಅಡಿಗ, ಶ್ರಾವ್ಯ ಕುಲಾಲ್‌, ಧೃತಿ ಎಸ್‌., ಶರಣ್ಯ ಭಟ್‌., ಸೃಜನಾ ಎ. ಶೆಟ್ಟಿ, ಮೊದಲಾದವರ ಸೃಜನಶೀಲ ಚಿತ್ರಗಳು ಹಾಗೂ ಕರಕುಶಲ ವಿಭಾಗದಲ್ಲಿ ಶ್ರೀಕೃಪಾ, ರಚನಾ ಕೋಟ್ಯಾನ್‌, ಸುಪ್ರಿತಾ, ವಿವನ್‌ ರಾಯ್‌ ಅವರ ಕಲಾಕೃತಿಗಳು ಗಮನಾರ್ಹವಾಗಿದ್ದವು. 

ಉಪಾಧ್ಯಾಯ ಮೂಡುಬೆಳ್ಳೆ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.