ಸುಜನಾ ಸುಳ್ಯಗೆ ಯಕ್ಷ ಪ್ರಶಸ್ತಿ


Team Udayavani, Mar 15, 2019, 12:30 AM IST

x-38.jpg

ಯಕ್ಷರಂಗದ ಸವ್ಯಸಾಚಿ ಸುಜನಾ ಸುಳ್ಯ ಮೊಗಸಾಲೆ ಶಾರದಮ್ಮ ಯಕ್ಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾ.17ರಂದು ಮಂಗಳೂರಿನ ರಮಣಶ್ರೀ ಕನ್ವೆನ್‌ಷನಲ್‌ ಹಾಲ್‌ನಲ್ಲಿ ನಡೆಯುವ ಆರಾಧನಾ ಚಾರಿಟೇಬಲ್‌ ಟ್ರಸ್ಟ್‌ ಆರಾಧನಾ ಸಂಭ್ರಮದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನಿಸಲಾಗುವುದು. ಯಕ್ಷಗಾನ ಕಲಾವಿದ ಕೋಳ್ಯೂರು ಗೋಪಾಲಕೃಷ್ಣ ಭಟ್ಟರ ಮಾತೃಶ್ರೀ ಮೊಗಸಾಲೆ ಶಾರದಮ್ಮ ಸ್ಮರಣಾರ್ಥ ನೀಡುವ ಯಕ್ಷ ಪ್ರಶಸ್ತಿ ಇದಾಗಿದೆ. 

ಹೈದ್ರಾಬಾದ್‌ನ ನಾಟಕ ಮಂಡಳಿಯಲ್ಲಿ 2 ವರ್ಷ ನಟನಾಗಿ ದುಡಿದ ಇವರು ಆನಂತರ ಮಾವ ಕಾವು ಶ್ರೀನಿವಾಸ ರಾಯರ ಪ್ರೇರಣೆಯಂತೆ ಯಕ್ಷಗಾನ ಕಲಾವಿದರಾಗಿ ಮೇಳದಲ್ಲಿ ಸೇರ್ಪಡೆಗೊಂಡರು. ಬೆಳ್ಳಂಬೆಟ್ಟು ಶಾಸ್ತಾವೇಶ್ವರ ಮೇಳದಲ್ಲಿ ಪ್ರಥಮ ಗೆಜ್ಜೆಕಟ್ಟಿದ ಸುಜನಾ ಅವರು ಬಳಿಕ ವೇಣೂರು,ಇರಾ, ಧರ್ಮಸ್ಥಳ, ಕುದ್ರೋಳಿ, ಕೂಡ್ಲು, ಆದಿ ಸುಬ್ರಹ್ಮಣ್ಯ, ಸುಂಕದಕಟ್ಟೆ, ಮಾಡಾವು, ಪುತ್ತೂರು, ಕಟೀಲು ಯಕ್ಷಗಾನ ಮೇಳಗಳಲ್ಲಿ ಒಟ್ಟು 38 ವರ್ಷ ಕಲಾಸೇವೆಗೈದರು. ಅತಿಕಾಯ, ಗಜೇಂದ್ರ, ಭಸ್ಮಾಸುರ, ರಕ್ತಬೀಜ, ಅರ್ಜುನ, ದಕ್ಷ, ಜಮದಗ್ನಿ ಮೊದಲಾದ ಗಂಭೀರ ಪಾತ್ರಗಳಿಗೆ ಜೀವತುಂಬಿದಲ್ಲದೆ ಜತೆಯಲ್ಲಿ ಹಾಸ್ಯ , ಸ್ತ್ರೀ ಪಾತ್ರಗಳಲ್ಲೂ ಮಿಂಚಿದ್ದರು. ತಾಳಮದ್ದಳೆ ಕೂಟದಲ್ಲಿ ಅರ್ಥಧಾರಿಯಾಗಿ ವಾಕ್ಚಾತುರ್ಯ ಮೆರೆದಿದ್ದರು. ಭಾಗವತರಾಗಿ ,ಮೃದಂಗ, ಚಂಡೆವಾದಕರಾಗಿ, ರಂಗ ವಿನ್ಯಾಸಗಾರರಾಗಿ ನಾಟ್ಯ ಗುರುವಾಗಿ ವೇಷಧಾರಿಯಾಗಿ ಹೀಗೆ ತಮ್ಮನ್ನು ತೊಡಗಿಸಿಕೊಂಡು ಅಗ್ರಮಾನ್ಯ ಕಲಾವಿದರೆನಿಸಿಕೊಂಡರು. ಪುತ್ರ ಜೀವನ್‌ ರಾಂ ಸುಳ್ಯ ಪ್ರಾರಂಭಿಸಿದ ರಂಗಮನೆಯಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಯಕ್ಷಗಾನದ ನಾಟ್ಯ ಮತ್ತು ಹಿಮ್ಮೇಳನ ಕಲಿಯುತ್ತಿದ್ದಾರೆ. ಆ ಮಕ್ಕಳಿಗೆಲ್ಲಾ ಈ ಅಜ್ಜ ಅಚ್ಚುಮೆಚ್ಚು. ಮನೆಗೆ ಬಂದ ಯಾರೇ ಆಗಲಿ ಅವರಿಗೆ ಆತಿಥ್ಯ ನೀಡದೆ ಇವರು ಕಳುಹಿಸುವುದಿಲ್ಲ.ಮಧ್ಯೆ ಸ್ವಲ್ಪಕಾಲ ಅನಾರೋಗ್ಯ ಪೀಡಿತರಾಗಿದ್ದ ಸುಜನಾ ಅವರಿಗೆ ಈ ರಂಗಮನೆಯೇ ಪುನಶ್ಚೇತನ ನೀಡಿತ್ತು. 

ಗಂಗಾಧರ ಮಟ್ಟಿ ಸುಳ್ಯ

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.