CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಿಮ್ಮ ಪಾಲಿಗೆ ಹೇಗಿದೆ ಈ ವರ್ಷ?

1.1.2016ರಿಂದ 7.4.2016ರ ವರೆಗೂ ಮನ್ಮಥನಾಮ ಸಂವತ್ಸರವೇ ನಡೆಯುತ್ತಿರುತ್ತದೆ. ಏಪ್ರಿಲ್‌ 8, 2016ರಂದು ಚಾಂದ್ರಮಾನ ಯುಗಾದಿ. ಅಂದರೆ ದುರ್ಮುಖಿ ನಾಮ ಸಂವತ್ಸರದ ಪ್ರಾರಂಭ. ಏಪ್ರಿಲ್‌ 8 ರಿಂದ 2016ರ ಅಂತ್ಯದವರೆಗೂ ದುರ್ಮುಖಿ ಸಂವತ್ಸರ ಮುಂದುವರೆಯುತ್ತದೆ.

ಜನವರಿ 2016ರಿಂದ ಆಗಸ್ಟ್‌ 2016ರವರೆಗೂ ಗುರು ಸಿಂಹ ರಾಶಿಯಲ್ಲಿ ಸಂಚರಿಸುತ್ತಾನೆ. ಅನಂತರ ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಶನಿ ಈ ವರ್ಷಾದಿಯಿಂದ ವರ್ಷಾಂತ್ಯದವರೆಗೂ ಅಂದರೆ 01.01.2016ರಿಂದ 31.12.2016ರ ವರೆಗೂ ವೃಶ್ಚಿಕ ರಾಶಿಯಲ್ಲಿಯೇ ಸಂಚರಿಸುತ್ತಾನೆ. ರಾಹು, ಕೇತು ಫ್ರೆಬ್ರವರಿ 2016ರಿಂದ ವರ್ಷಾಂತ್ಯದವರೆಗೂ ಕ್ರಮವಾಗಿ ಸಿಂಹ ಹಾಗೂ
ಕುಂಭ ರಾಶಿಯಲ್ಲಿ ಸಂಚರಿಸುತ್ತಾರೆ. ಹೀಗಾಗಿ ಮೇಷ, ಕಟಕ, ತುಲಾ, ಧನುಸ್ಸು, ಕುಂಭರಾಶಿಯವರಿಗೆ ಈ ವರ್ಷದ ಆಗಸ್ಟ್‌ ತಿಂಗಳವರೆಗೂ ಸಿಂಹದಲ್ಲಿರುವ ಗುರು ಅನುಕೂಲ ಸ್ಥಿತಿಯಲ್ಲಿದ್ದು, ಶುಭ ಫ‌ಲಗಳನ್ನು ನೀಡುತ್ತಾನೆ. ಆಗಸ್ಟ್‌ ನಂತರ ಈ ರಾಶಿಯವರಿಗೆ ಗುರುಬಲ ಕಡಿಮೆಯಾಗಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅನವಶ್ಯಕ ಖರ್ಚು, ಮಾನಸಿಕ ಕಿರಿಕಿರಿ ಉಂಟಾಗುತ್ತದೆ.

ವೃಷಭ, ಸಿಂಹ, ವೃಶ್ಚಿಕ, ಮಕರ ಹಾಗೂ ಮೀನ ರಾಶಿಗಳವರಿಗೆ ಆಗಸ್ಟ್‌ 2016ರ ನಂತರ ಗುರು ಕನ್ಯಾರಾಶಿಗೆ ಪ್ರವೇಶನಾಗಿ ಅನುಕೂಲಕಾರಕನಾಗುವುದರಿಂದ ಇದುವರೆಗೂ ಅನುಭವಿಸುತ್ತಿರುವ ತೊಂದರೆಗಳಿಂದ ಮುಕ್ತಿ ದೊರೆತು ಸುಖ ಶಾಂತಿ ನೆಮ್ಮದಿ ಸಿಗುತ್ತದೆ. ಮಿಥುನ, ಕನ್ಯಾ, ರಾಶಿಗಳವರಿಗೆ 2016ರ ಸಂಪೂರ್ಣ ವರ್ಷದಲ್ಲಿ ಗುರು ಅನುಕೂಲನಾಗಿರುವುದಿಲ್ಲ. ಹೀಗಾಗಿ ಅವರಿಗೆ ಮಾನಸಿಕ ಕಿರಿಕಿರಿ, ಧನನಷ್ಟ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವೃತ್ತಿಯಲ್ಲಿ ಒತ್ತಡ ಉಂಟಾಗುತ್ತದೆ. 2016ನೇ ಹೊಸ ವರ್ಷದಲ್ಲಿ
ಸರ್ವೇ ಜನಾಃ ಸುಜನೋ ಭವಂತು
ಸಮಸ್ತ ಸನ್ಮಂಗಳಾನಿ ಭವಂತು.

ಮೇಷ: ಪರಿಸ್ಥಿತಿ ನಿಯಂತ್ರಣದಲ್ಲಿ
ಅಶ್ವಿ‌ನಿ, ಭರಣಿ ಕೃತ್ತಿಕಾ 1 ನೇಪಾದ, ಚು. ಚೆ,ಚೊ,ಲ,ಲಿ,ಲು,ಲೆ,ಲೊ,ಅ.
ಜುಲೈವರೆಗೂ ಗುರು ಐದನೇ ಮನೆಯಲ್ಲಿ  ಸಂಚರಿಸುವುದರಿಂದ ವಿದ್ಯಾಭ್ಯಾಸದಲ್ಲಿ ಪ್ರಗತಿ, ಕುಲದೇವತಾ ದರ್ಶನ, ವೃತ್ತಿರಂಗದಲ್ಲಿ ಯಶಸ್ಸು, ಸಮಾಜದಲ್ಲಿ ಮನ್ನಣೆ, ಗುರುಹಿರಿಯರ ಆಶೀರ್ವಾದ ಎಲ್ಲವೂ ಲಭ್ಯವಿದೆ. ಹಣದ ಹರಿವು ಉತ್ತಮವಾಗಿರುತ್ತದೆ. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸುತ್ತೀರಿ. ಅನಾರೋಗ್ಯ, ವಿನಾಕಾರಣ ಮಾನಸಿಕ ಕಿರಿಕಿರಿ ತಲೆದೋರಬಹುದು. ಆಗಸ್ಟ್‌ ನಂತರ ಕೆಲಸ ಕಾರ್ಯಗಳಲ್ಲಿ ನಿಧಾನ, ಹಣಕಾಸಿನ ಏರುಪೇರು. ಯಾವುದೇ ಕೆಲಸವನ್ನು ಯೋಚಿಸಿ ಮಾಡಿ. ಕುಲದೇವತೆಯನ್ನು ಆರಾಧಿಸಿ.

ವೃಷಭ: ಆಗಸ್ಟ್‌ ನಂತರ ನೆಮ್ಮದಿ
ಕೃತ್ತಿಕಾ 2,3,4, ರೋಹಿಣಿ, ಮೃಗಶಿರಾ 1ನೇ ಪಾದ. ಇ,ಉ,ಎ,ಒ,ವ,ವಿ,ವು,ವೆ,ವೊ
ಆಗಸ್ಟ್‌ವರೆಗೂ ಮನಸ್ಸಿಗೆ ಕಿರಿಕಿರಿ, ಕಾರ್ಯನಷ್ಟ, ಸ್ನೇಹಿತರೊಡನೆ ಮನಸ್ತಾಪ, ವೃಥಾ ಅಪವಾದ, ಆರೋಗ್ಯದಲ್ಲಿ ಏರುಪೇರು, ಬಳಲಿಕೆ, ಅನಗತ್ಯ ಖರ್ಚುಗಳು, ಅಲೆದಾಟ ಮುಂತಾದ ಅಶುಭ ಫ‌ಲಗಳು. ಆದರೆ ಬಹಳ ದಿನ ಈ ವಿಷಮಸ್ಥಿತಿ ಇರುವುದಿಲ್ಲ. ಆಗಸ್ಟ್‌ ನಂತರ ಪರಿಸ್ಥಿತಿ ಸುಧಾರಿಸಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನೆನೆಗುದಿಗೆ ಬಿದ್ದ ಕೆಲಸಕಾರ್ಯಗಳೆಲ್ಲ ಸುಗಮವಾಗಿ ಸಾಗುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ವೃತ್ತಿಯಲ್ಲಿ ಗೌರವಸ್ಥಾನ ಸಿಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಅವಿವಾಹಿತರಿಗೆ ವಿವಾಹ ಕೂಡಿಬರಬಹುದು.

ಮಿಥುನ: ಈ ವರ್ಷ ಮಿಶ್ರಫ‌ಲ
ಮೃಗಶಿರಾ 2,3,4, ಆರಿದ್ರಾ, ಪುನರ್ವಸು 1,2,3. ಕ,ಕಿ,ಕು,ಘ,š, ಕೆ,ಕೊ,ಹ.
ಅಂತಹ ಪ್ರಗತಿಯೇನೂ ಇಲ್ಲದಿದ್ದರೂ ಸಮಾಧಾನಕರ ವಾತಾವರಣವಿರುತ್ತದೆ. ಆಗಸ್ಟ್‌ ನಂತರ ಮನಸ್ಸಿಗೆ ಅನಗತ್ಯವಾದ ಕಿರಿಕಿರಿ, ಕಾರ್ಯನಷ್ಟ, ಸ್ನೇಹಿತರೊಡನೆ ಮನಸ್ತಾಪ, ವೃಥಾ ಅಪವಾದ, ಆರೋಗ್ಯದಲ್ಲಿ ಏರುಪೇರು, ಅನಗತ್ಯ ಖರ್ಚುಗಳು, ಅಲೆದಾಟ ಮುಂತಾದ ಅಶುಭ ಫ‌ಲಗಳು ಎದುರಾಗುತ್ತವೆ. ಈ ರಾಶಿಯವರಿಗೆ ಈ ವರ್ಷ ಮಿಶ್ರಫ‌ಲಗಳೇ ಹೆಚ್ಚು. ನಿಮಗೇ ತಿಳಿಯದ ಮೂಲದಿಂದ ಹಣ ಹರಿದು ಬರಬಹುದು. ಶತ್ರುಧ್ವಂಸವಾಗುತ್ತದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಇರುತ್ತದೆ. ರಾಹು ಹಾಗೂ ಶನಿಗಳೇ ನಿಮಗೆ ಶ್ರೀರಕ್ಷೆ.

ಕಟಕ: ನೆಮ್ಮದಿ, ಕಷ್ಟ ಎರಡೂ
ಪುನರ್ವಸು, 4, ಪುಷ್ಯಾ, ಆಶ್ಲೇಷಾ. ಹಿ,ಹು,ಹೆ,ಹೊ, ಡ,ಡಿ,ಡು,ಡೆ,ಡೊ
ಆಗಸ್ಟ್‌ವರೆಗೂ ಗುರುಬಲವಿರುವುದರಿಂದ ಹಿಡಿದ ಕೆಲಸ ಕಾರ್ಯಗಳಲ್ಲಿ ಜಯ. ನೌಕರಿಯಲ್ಲಿ ಯಶಸ್ಸು, ಕೀರ್ತಿ ಲಾಭ. ಕುಟುಂಬದಲ್ಲಿ ಶುಭ ಕಾರ್ಯ ನೆರವೇರುವುದು. ಹಣದ ಹರಿವು ಉತ್ತಮವಾಗಿರುತ್ತದೆ. ವಿವಾಹ ಯೋಗ್ಯರಿಗೆ ವಿವಾಹವಾಗುತ್ತದೆ. ಆಗಸ್ಟ್‌ ನಂತರ ಕೊಂಚ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಅಶಾಂತಿ, ಹಿಡಿತ ಕಳೆದುಕೊಳ್ಳುವ ಖರ್ಚುವೆಚ್ಚಗಳು ಭಯ ಹುಟ್ಟಿಸಬಹುದು. ಬೇಡದ ವಿಷಯಕ್ಕೆ ಜಗಳ ಮುಂತಾದ ಕಿರಿಕಿರಿ ಇರುತ್ತದೆ. ಇಷ್ಟದೇವರ ಜಪ ಮಾಡಿ, ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

ಸಿಂಹ: ಮೌನವಾಗಿದ್ದರೆ ಒಳ್ಳೇದು
ಮಖೆ, ಪುಬ್ಬೆ, ಉ.ಫಾ. 1ನೇ ಪಾದ. ಮ,ಮಿ,ಮು,ಮೊ, ಮೆ,ಟ,ಟಿ,ಟು,ಟೆ. ಆಗಸ್ಟ್‌ವರೆಗೂ ಅನಗತ್ಯ ಖರ್ಚುಗಳು, ವೃತ್ತಿಯಲ್ಲಿ ಹಿನ್ನಡೆ, ವಿಪರೀತ ತಿರುಗಾಟ ಮಾನಸಿಕ ಕಿರಿಕಿರಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಸಂಗಾತಿಯೊಡನೆ ಕಿರಿಕಿರಿ, ವೃಥಾ ಅಪಾರ್ಥಗಳಿಂದ ಮನೆಯ ಶಾಂತಿ ಕದಡಬಹುದು. ಅನಗತ್ಯ ವಾದವಿವಾದಗಳಿಗೆ ಆಸ್ಪದ ಕೊಡಬೇಡಿ. ಮೌನಿನಃ ಕಲಹೋ ನಾಸ್ತಿ. ಆಗಸ್ಟ್‌ ನಂತರ ಪರಿಸ್ಥಿತಿ ಸುಧಾರಿಸುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಕೀರ್ತಿಯನ್ನು ಗಳಿಸುತ್ತಾರೆ. ಸ್ಥಿರಾಸ್ತಿ ಮಾಡುವ ಯೋಗವಿದೆ. ಸಾಲಗಳು ನಿಯಂತ್ರಣಕ್ಕೆ ಬರುತ್ತವೆ.

ಕನ್ಯಾ: ಬಾಸ್‌ ಬಗ್ಗೆ ಎಚ್ಚರವಿರಲಿ
ಉಫಾ 2,3,4, ಹಸ್ತ, ಚಿತ್ತಾ 1,2. ,ಪ,ಪಿ,ಪು,ಷ,ಣ,ಠ,ಪೆ,ಪೊ
ವರ್ಷಪೂರ್ತಿ ಗುರುಬಲವಿರುವುದಿಲ್ಲವಾದ್ದರಿಂದ ಈ ರಾಶಿಯವರು ಯಾವುದೇ ಹೆಜ್ಜೆಯನ್ನಿಡಬೇಕಾದರೂ ಮುನ್ನೆಚ್ಚರಿಕೆ ಅಗತ್ಯ. ವೃತ್ತಿಕ್ಷೇತ್ರದಲ್ಲಿ ಕಿರುಕುಳ, ಒತ್ತಡ. ಮೇಲಧಿಕಾರಿಗಳ ಅವಕೃಪೆ. ಆರೋಗ್ಯದಲ್ಲಿ ಏರುಪೇರಾಗಬಹುದು. ಖರ್ಚುಗಳು ದೊಡ್ಡ ಪ್ರಮಾಣದಲ್ಲಿ ತಲೆದೋರಬಹುದು. ಕಾರ್ಯ ಕ್ಷೇತ್ರದಲ್ಲಿ ಕೊಂಚ ಮಟ್ಟಿನ ಪ್ರಗತಿಯನ್ನು ಕಾಣುತ್ತೀರಿ. ಧನಮೂಲ ಉತ್ತಮವಾಗುತ್ತದೆ. ವೃಥಾ ಖರ್ಚು, ಅಂದುಕೊಂಡ ಕೆಲಸಗಳಲ್ಲಿ ನಿಧಾನ ಪ್ರಗತಿ, ಅನಗತ್ಯ ಅಲೆದಾಟ ತಲೆಬಿಸಿ ಮಾಡಬಹುದು. ಧೈರ್ಯ ಪರಾಕ್ರಮದಿಂದ ಕೆಲಸ ಸಾಧಿಸಿಕೊಳ್ಳಬೇಕಾಗಿದೆ.

ತುಲಾ: ಹಣ ಬರುತ್ತೆ, ಹೋಗುತ್ತೆ
ಚಿತ್ತಾ 3,4, ಸ್ವಾತಿ, ವಿಶಾಖ 1,2,3. ರ, ರಿ, ರು, ರೆ, ರೊ, ತ, ತಿ,ತು,ತೆ.
ಸಾಡೆಸಾತಿ ಶನಿ ಇನ್ನೇನು ಮುಗಿಯುತ್ತಾ ಬಂದಿದೆ. ಇನ್ನೆಲ್ಲಾ ಒಳ್ಳೆಯ ದಿನಗಳೇ ನಿಮಗೆ. ಆಗಸ್ಟ್‌ ನಂತರ ಶುಭ ಕಾರ್ಯಗಳಿಗೆ ಖರ್ಚು ಮಾಡುವ ಸಂದರ್ಭ ಒದಗಿಬರುತ್ತದೆ. ಜಾಗ ಬದಲಾವಣೆಯಾಗಬಹುದು. ವೃತ್ತಿಯಲ್ಲಿ ಬಡ್ತಿ ಅಥವಾ ವರ್ಗಾವ ಣೆಯ ಸಾಧ್ಯತೆಗಳಿವೆ. ಬಾಡಿಗೆ ಮನೆಯಲ್ಲಿರುವವರು ಸ್ವಂತ ಮನೆಗೆ ಹೋಗುವ ಸಾಧ್ಯತೆಗಳೂ ಉಂಟು. ಒತ್ತಡಗಳು ಹೆಚ್ಚು. ಹಣಕಾಸು ನೀವು ನಿರೀಕ್ಷಿಸದ ರೀತಿಯಲ್ಲಿ ಒದಗಿಬರುತ್ತದೆ. ಹಣ ಮಾಡುವ ಅವ ಕಾಶಗಳು ಹೇರಳವಾಗಿ ಸಿಗುತ್ತವೆ. ಒದಗಿಬಂದ ಹಣವನ್ನು ವಿವೇಚನೆಯಿಂದ ಖರ್ಚು ಮಾಡಿ.

ವೃಶ್ಚಿಕ: ಇನ್ನೂ 3 ವರ್ಷ ಶನಿ ಕಾಟ
ವಿಶಾಖ 4, ಅನೂರಾಧ, ಜ್ಯೇಷ್ಠ. ತೊ,ನ,ನಿ,ನು,ನೆ, ನೊ,ಯ,ಯಿ,ಯು.
ವೃತ್ತಿಯಲ್ಲಿ ಕಿರಿಕಿರಿ ಸರ್ವೇಸಾಮಾನ್ಯ. ಕೆಲವರು ಕೆಲಸ ಕಳೆದುಕೊಳ್ಳುವ ಆತಂಕಗಳನ್ನು ಎದುರಿಸುತ್ತಾರೆ. ಹಣ ಕಾಸಿನ ಏರುಪೇರು ಮನಸ್ಸಿನ ಸಮತೋಲನವನ್ನೇ ಕಳೆದು ಬಿಡುತ್ತದೆ. ನೀವು ನಿರೀಕ್ಷಿಸದ ಖರ್ಚುಗಳು ಬಾಯ್ದೆರೆದು ಹೆದರಿಸುತ್ತದೆ. ಆಗಸ್ಟ್‌ ನಂತರ ಪರಿಸ್ಥಿತಿ ಸುಧಾರಿಸುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ಆದರೆ ಸಾಡೆಸಾತಿ ಶನಿ ಇನ್ನೂ ಮೂರೂವರೆ ವರ್ಷಗಳ ಕಾಲ ಇರು ವುದರಿಂದ ಶುಭ ಫ‌ಲಗಳು ಕಡಿಮೆ. ಒತ್ತಡ ಇದ್ದೇ ಇರುತ್ತದೆ. ಆದರೂ ಸಾಲಗಳಿಂದ ಹಂತ ಹಂತವಾಗಿ ಮುಕ್ತಿ, ವೃತ್ತಿಯಲ್ಲಿ ಭದ್ರತೆ ಇತ್ಯಾದಿ ಶುಭಫ‌ಲವಿದೆ.

ಧನುರ್: ಸುಮ್ಮನಿದ್ದರೂ ಆರೋಪ
ಮೂಲಾ, ಪೂರ್ವಾಷಾಢ, ಉತ್ತರಾಷಾಢ 1ನೇ ಪಾದ. ಯೆ,ಯೊ,ಬ,ಬಿ,ಬು,ಧ,ಭ,ಢ,ಭೆ.
ಸಾಡೆಸಾತಿ ಶನಿಯ ಪ್ರಾರಂಭವಾಗಿದೆ. ಆದರೂ ಆಗಸ್ಟ್‌ವರೆಗೆ ಪರಿಸ್ಥಿತಿ ಚೆನ್ನಾಗಿರುತ್ತದೆ. ಮುಖ್ಯ ಕೆಲಸ ಕಾರ್ಯಗಳಿದ್ದರೆ ಜುಲೈ ಒಳಗೆ ಮುಗಿಸಿಕೊಳ್ಳಿ. ಏಕೆಂದರೆ ಜುಲೈ ನಂತರ ಕೆಲಸಗಳಲ್ಲಿ ನಿಧಾನ, ಮಾನಸಿಕ ಕಿರಿಕಿರಿ, ಅಲೆದಾಟ, ಹಣಕಾಸಿನ ಮುಗ್ಗಟ್ಟು ಇತ್ಯಾದಿ ಅಡಚಣೆಗಳಿರುತ್ತವೆ. ವೃತ್ತಿಯಲ್ಲಿ ಅನವಶ್ಯಕ ತೊಂದರೆಗಳು ಎದುರಾಗುತ್ತವೆ. ಒತ್ತಡಗಳು ಹೆಚ್ಚಾಗಬಹುದು. ಅನಗತ್ಯ ಖರ್ಚುಗಳಾಗದಂತೆ ಎಚ್ಚರಿಕೆ ವಹಿಸಿ. ವಿವಾದಗಳಿಂದ ದೂರವಿರಿ. ನೀವು ಸುಮ್ಮನಿದ್ದರೂ ಆಪಾದನೆಗಳು ಬರುವ ಸಾಧ್ಯತೆಗಳು ಹೆಚ್ಚು.

ಮಕರ: ಗುರಿ ಈಡೇರಬಹುದು
ಉ.ಷಾ. 2,3,4, ಶ್ರವಣ, ಧನಿಷ್ಟ 1,2.ಬೊ,ಜ,ಜೆ,ಶಿ,ಶು,ಗ,ಗಿ
ಅಪೂರ್ವವಾದ ಯಶಸ್ಸು, ಧನಲಾಭ, ಕೀರ್ತಿ ಎಲ್ಲವೂ ನಿಮ್ಮದಾಗುತ್ತದೆ. ಆಗಸ್ಟ್‌ವರೆಗೆ ಸಂಚಾರದಿಂದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳುಂಟಾದರೂ ಆಗಸ್ಟ್‌ ನಂತರ ಉತ್ತಮ ಫ‌ಲಗಳೇ ದೊರೆಯುತ್ತವೆ. ವೃತ್ತಿಯಲ್ಲಿ ಯಶಸ್ಸು, ಅವಿವಾಹಿತರಿಗೆ ವಿವಾಹಯೋಗ. ಮನಸ್ಸಿಗೆ ಹರ್ಷ-ಉಲ್ಲಾಸ ದೊರೆಯುವ ಸಂಗತಿಗಳು ಹೆಚ್ಚಾಗುತ್ತವೆ. ವಿದೇಶ ಪ್ರಯಾಣ ಯೋಗ. ಕೆಲಸ ಕಾರ್ಯಗಳಲ್ಲಿ ಇದುವರೆಗೂ ಕಾಡಿದ್ದ ಅಡೆತಡೆಗಳು ದೂರಾಗಿ ದಾರಿ ಸುಗಮವಾಗುತ್ತದೆ. ನೀವು ಯೋಚಿಸಿಕೊಂಡಿರುವ ಬಹುದೊಡ್ಡ ಗುರಿ ವರ್ಷದಲ್ಲಿ ಪೂರ್ಣವಾಗುವ ಸಾಧ್ಯತೆಗಳಿವೆ.

ಕುಂಭ: ಗೃಹಲಾಭ, ವಾಹನ ಲಾಭ
ಧನಿಷ್ಠಾ 3, 4 ಶತಭಿಷ, ಪೂರ್ವಾಭಾದ್ರ 1,2,3. ಗು,ಗೆ,ಗೊ,ಸ,ಸಿ,ಸು,ಸೆ,ಸೊ,ದ
ಆಗಸ್ಟ್‌ವರೆಗೂ ಗುರುಬಲ ಉತ್ತಮವಾಗಿರುವುದರಿಂದ ವಿದ್ಯಾಭ್ಯಾಸದಲ್ಲಿ ಪ್ರಗತಿ, ವೃತ್ತಿರಂಗದಲ್ಲಿ ಯಶಸ್ಸು, ಸಮಾಜದಲ್ಲಿ ಮನ್ನಣೆ, ಗುರುಹಿರಿಯರ ಆಶೀರ್ವಾದ ಎಲ್ಲವೂ ಲಭ್ಯವಿದೆ. ಹಣದ ಹರಿವು ಉತ್ತಮವಾಗಿರುತ್ತದೆ. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸುತ್ತೀರಿ. ಗೃಹಲಾಭ, ವಾಹನ ಲಾಭ. ಬಂಧುಜನರ ಆದರ ಎಲ್ಲವೂ ದೊರೆಯುತ್ತದೆ. ಕೋರ್ಟ್‌ ಕೇಸುಗ ಳಲ್ಲಿ ಜಯ ಗಳಿಸುತ್ತೀರಿ. ಆಗಸ್ಟ್‌ ನಂತರ ಕೆಲಸ ಕಾರ್ಯಗಳಲ್ಲಿ ನಿಧಾನ ಪ್ರಗತಿ, ಹಣದ ಅಡಚಣೆ ಮುಂತಾದ ಅನನುಕೂಲಗಳು ತೆಲೆದೋರುತ್ತವೆ.

ಮೀನ: ಶುಭ ಫ‌ಲಗಳೇ ಹೆಚ್ಚು
ಪೂಭಾ 4, ಉತ್ತರಾಭಾದ್ರ, ರೇವತಿ. ದಿ,ದು,ಖ,ಝ,ಥ,ದೆ,ದೊ,ಚ,ಚಿ.
ಜುಲೈವರೆಗೆ ಧನನಷ್ಟ, ಮಾನಸಿಕ ಕಿರಿಕಿರಿ, ಅಂದುಕೊಳ್ಳದೆ ಬರುವ ಖರ್ಚುಗಳಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತೀರಿ. ಫೆಬ್ರವರಿ ನಂತರ ಸಾಕಷ್ಟು ಲಾಭವಿದೆ. ಯಾವುದೋ ಮೂಲದಿಂದ ಧನಸಹಾಯ ಒದಗಿ ಬರುತ್ತದೆ. ಧೈರ್ಯ ಸಾಹಸದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸುತ್ತೀರಿ. ಆಗಸ್ಟ್‌ ನಂತರ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ಹಣದ ಹರಿವು ಉತ್ತಮವಾಗುತ್ತೆ. ನಿಂತುಹೋದ ಕೆಲಸ ಕಾರ್ಯಗಳು ಚಾಲನೆ ಪಡೆದುಕೊಳ್ಳುತ್ತವೆ. ಒಟ್ಟಾರೆ ವೃತ್ತಿಯಲ್ಲಿ ಹಾಗೂ ಕೌಟುಂಬಿಕವಾಗಿ ಈ ವರ್ಷ ಹೆಚ್ಚಿನ ಶುಭಫ‌ಲಗಳು ನಿಮ್ಮದಾಗಲಿವೆ.

*ವೀಣಾ ಚಿಂತಾಮಣಿ
veenarao27@gmail.com

Back to Top