CONNECT WITH US  

​ಸಂಖ್ಯೆಯಲ್ಲಿ ನಿಮ್ಮ ಭವಿಷ್ಯ; ಹೊಸ ನ್ಯೂಮರಾಲಜಿ

ಪ್ರತಿ ಬಾರಿ ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಭವಿಷ್ಯ ಹೇಗಿದೆಯೆಂದು ತಿಳಿದುಕೊಳ್ಳುತ್ತಿದ್ದಿರಿ. ಈ ಬಾರಿ ಅದಕ್ಕೆ ನಿಮ್ಮ ರಾಶಿಯನ್ನೂ ಸೇರಿಸಿಕೊಂಡು ಭವಿಷ್ಯ ತಿಳಿದುಕೊಳ್ಳುವ ಹೊಸ ವಿಧಾನ ಬಂದಿದೆ. ಇದು ಸಂಖ್ಯಾಶಾಸ್ತ್ರದಲ್ಲೇ ಅತ್ಯಂತ ನಿಖರ ಪದಟಛಿತಿ. ಸಂಖ್ಯೆಗಳು 2016ರಲ್ಲಿ ನಿಮ್ಮ ಬದುಕಿನಲ್ಲಿ ನಿರ್ವಹಿಸುವ ಪಾತ್ರವೇನು? ಬನ್ನಿ ನೋಡೋಣ.

ಈ ವರ್ಷ 2016. ಅದರ ಪ್ರಕಾರ ಈ ವರ್ಷದ ಜಾಗತಿಕ ಸಂಖ್ಯೆ 2+0+1+6=9 ಇದಕ್ಕೆ ನಿಮ್ಮ ಜನ್ಮದಿನಾಂಕ ಸೇರಿಸಿ. ಉದಾ: ನೀವು 24ರಂದು ಜನಿಸಿದ್ದರೆ ಆಗ 2+4= 6 ಈಗ ಬರುವುದೇ ವಿಶೇಷ ಭಾಗ. ಇದು ಇತರ ನ್ಯೂಮರಾಲಜಿಗಿಂತ ಭಿನ್ನ. ಇಲ್ಲಿ ನಿಮ್ಮ ರಾಶಿ ಸಂಖ್ಯೆಯನ್ನು ಸೇರಿಸಬೇಕು.

ಯಾವ ರಾಶಿಯವರಿಗೆ ಯಾವ ಸಂಖ್ಯೆ?
ಮೇಷ: 9
ವೃಷಭ: 6
ಮಿಥುನ: 5
ಕಟಕ: 2
ಸಿಂಹ: 1
ಕನ್ಯಾ: 5
ತುಲಾ: 6
ವೃಶ್ಚಿಕ: 0
ಧನುರ್‌: 3
ಮಕರ: 8
ಕುಂಭ: 4
ಮೀನ: 7

ನಿಮ್ಮದು ಕನ್ಯಾರಾಶಿ ಎಂದಿಟ್ಟುಕೊಳ್ಳಿ. ಈಗ 2016ರ ಜಾಗತಿಕ ಸಂಖ್ಯೆ 9ಕ್ಕೆ ನಿಮ್ಮ ಜನ್ಮದಿನದ ಸಂಖ್ಯೆ 6ನ್ನು ಸೇರಿಸಿ, ಅದಕ್ಕೆ ಕನ್ಯಾರಾಶಿಯ ಸಂಖ್ಯೆ 5ನ್ನು ಕೂಡಿಸಿ. 9+6+5=20. ಈಗ ಸಿಗುವುದೇ ನಿಮ್ಮ ಸಂಖ್ಯೆ: 2+0=2. ನಿಮ್ಮ ಸಂಖ್ಯೆ 2. ಇನ್ನೊಂದು ಉದಾ: ನೀವು 1ನೇ ತಾರೀಖು ಹುಟ್ಟಿದ್ದರೆ ಮತ್ತು ನಿಮ್ಮದು ಕುಂಭ ರಾಶಿಯಾಗಿದ್ದರೆ, 9+1+4=14, ಅಂದರೆ 1+4=5, ಅಂದರೆ 5 ನಿಮ್ಮ ಸಂಖ್ಯೆಯಾಗುತ್ತದೆ. ಇದೇ ರೀತಿ ಬೇರೆ ಬೇರೆ ರಾಶಿಯವರು ಆಯಾ ರಾಶಿಯ ಸಂಖ್ಯೆ ಸೇರಿಸಿ ಅವರ ಸಂಖ್ಯೆ ಕಂಡುಕೊಳ್ಳಬೇಕು.

1.ಪ್ರೀತಿಗೆ ಬೀಳುವ ಸಾಧ್ಯತೆ
ಈ ವರ್ಷ ನಿಮ್ಮ ಮುಂದೆ ಬಹಳ ಅವಕಾಶಗಳಿವೆ. ಹಳೆಯದನ್ನು ಮರೆತುಬಿಡಿ. ಭವಿಷ್ಯದತ್ತ ಗಮನ ಕೊಡಿ. ಅಗತ್ಯಬಿದ್ದರೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಕನಸುಗಳ ಬೆನ್ನತ್ತಲು ಈ ವರ್ಷ ಹೇಳಿ ಮಾಡಿಸಿದ್ದು. ಪ್ರೀತಿಸಿದವರು ಸಿಗಬಹುದು. ಸೃಜನಶೀಲತೆಗೆ ಬಾಗಿಲುಗಳು ತೆರೆದಿವೆ. ಅವಿವಾಹಿತರಾಗಿದ್ದರೆ ಈ ವರ್ಷ ಪ್ರೀತಿಗೆ ಬೀಳುವ ಸಾಧ್ಯತೆಯಿದೆ! ಕೆಲಸದಲ್ಲಿ ಬದಲಾವಣೆ. ಮನೆ ಬದಲಿಸಬೇಕಾಗಿ ಬಂದೀತು. ಹಣಕಾಸಿನ ಸ್ಥಿತಿ ಉತ್ತಮವಾಗಲಿದೆ. ಏನಾದರೂ ಸಾಧಿಸುತ್ತೀರಿ. ಪ್ರಸಿದಿಟಛಿಯೂ ಬರುತ್ತದೆ. ಬದುಕನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಇಷ್ಟು ದಿನ ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಇನ್ಮುಂದೆ ಆ ಚಿಂತೆಯಿಲ್ಲ. ಮನೋಬಲ ಹೆಚ್ಚಲಿದೆ. ಹೊಸ ಅವಕಾಶಗಳಿಗೆ ಕೈಚಾಚಿ.

2.ಈ ವರ್ಷ ಫ‌ುಲ್‌ ರೆಸ್ಟ್‌
ಕಳೆದ ವರ್ಷವಿಡೀ ಬಹಳ ಬ್ಯುಸಿಯಾಗಿದ್ದಿರಿ. ಬದುಕಿನಲ್ಲಿ ಹಲವು ಬದಲಾವಣೆ ಕಂಡಿದ್ದೀರಿ. ಈ ವರ್ಷ ನಿಮಗೆ ವಿಶ್ರಾಂತಿಯ ಸಮಯ. ಕಳೆದ ವರ್ಷ ಆರಂಭಿಸಿದ್ದ ಯೋಜನೆಗಳು ಈ ವರ್ಷ ಫ‌ಲ ಕೊಡಲಿವೆ. ಬದುಕಿನಲ್ಲಿ ಇಲ್ಲಿಯವರೆಗೂ ನಿಮಗೆ ಯಾರಾದರೊಬ್ಬರು "ಸ್ಪೆಷಲ್‌' ವ್ಯಕ್ತಿ ಇಲ್ಲದೆ ಇದ್ದಿದ್ದರೆ ಈ ವರ್ಷ ಅಂತಹವರೊಬ್ಬರು ಸಿಗುತ್ತಾರೆ. ಈಗಿರುವ ಸಂಗಾತಿ ಬದಲಾಗಬಹುದು. ಗೆಳೆಯರ ಜೊತೆ ಹಾಗೂ ಆಫೀಸ್‌ನಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಈ ವರ್ಷ ಬಗೆಹರಿಯುತ್ತವೆ. ಅದಕ್ಕೆ ನಿಮ್ಮ ಪ್ರಯತ್ನವೂ ಬೇಕು. ಇಲ್ಲದಿದ್ದರೆ ಕಷ್ಟಕ್ಕೆ ಸಿಲುಕುತ್ತೀರಿ. ಲೈಫ್ಸ್ಟೈಲ್‌ ಬಗ್ಗೆ ತೃಪ್ತಿ ಇಲ್ಲದಿದ್ದರೆ ಅದನ್ನು ಬದಲಿಸಿಕೊಳ್ಳಿ. ಭವಿಷ್ಯಕ್ಕೆ ಹೊಸ ಯೋಜನೆ ರೂಪಿಸಿಕೊಳ್ಳಲು ಕಾಲ ಕೂಡಿಬಂದಿದೆ.

3.ಸಾಹಸ ಮುಗಿಯಿತು!
ಕುಳಿತಲ್ಲೇ ಕುಳಿತಿರಬೇಡಿ. ಏನಾದರೂ ವಿಶೇಷ ಯೋಜನೆ ಹಾಕಿಕೊಳ್ಳಿ.ಚಿಂತನೆ ವಿಸ್ತಾರವಾಗಲಿ. ಅವುಗಳ ಮೇಲೆ ಕೆಲಸ ಶುರುಮಾಡಿ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಇಷ್ಟು ಮಾಡಿದಿರಾದರೆ ನಿಮ್ಮ ಜಗತ್ತು ದೊಡ್ಡದಾಗಲಿದೆ. ಹೊಸ ವ್ಯಕ್ತಿಗಳನ್ನು ಭೇಟಿಯಾಗುತ್ತೀರಿ. ನಿಮ್ಮ ಬಗ್ಗೆ ಆತ್ಮವಿಶ್ವಾಸವಿರಲಿ. ಭ್ರಮೆಗಳ ಕಾಲ ಮುಗಿಯಿತು. ಈ ವರ್ಷ ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಉಂಟಾಗಲಿದೆ. ವರ್ಷಾಂತ್ಯದಲ್ಲಿ ಕನಸುಗಳು ನನಸಾಗುತ್ತವೆ. ದೂರ ಹೋದ ಮಾಜಿ ಪ್ರೇಮಿ ಮತ್ತೆ ಹತ್ತಿರ ಬರಬಹುದು. ಅವರನ್ನು ಸೇರಿಸಿಕೊಳ್ಳಬೇಕೋ ಬಿಡಬೇಕೋ ಎಂಬುದು ನಿಮಗೆ ಬಿಟ್ಟಿದ್ದು. ದೀರ್ಘ‌ ಪ್ರಯಾಣ ಮಾಡಲಿದ್ದೀರಿ. ಖರ್ಚುಗಳ ಬಗ್ಗೆ ಗಮನವಿರಲಿ. ನಿಮ್ಮ ಸಾಧನೆ ಹಾಗೂ ಸಾಹಸಗಳು ಮುಗಿಯುತ್ತ ಬಂದಿವೆ.

4.ಹತೋಟಿ ತಪ್ಪೀತು, ಎಚ್ಚರ
ಕಳೆದ ಮೂರು ವರ್ಷ ಹಾಯಾಗಿ ಕಾಲ ಕಳೆದಿರಿ. ಈ ವರ್ಷ ಸ್ವಲ್ಪ ಕಷ್ಟವಿದೆ. ಬದುಕಿನ ಮೇಲೆ ಹತೋಟಿ ತಪ್ಪಬಹುದು. ಅನಿರೀಕ್ಷಿತ
ಘಟನೆಗಳು ನಡೆಯಬಹುದು. ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾದೀತು. ಬೇರೆ ಬೇರೆ ವೃತ್ತಿ ಹಾಗೂ ಸಾಮಾಜಿಕ ಹಿನ್ನೆಲೆಯ ವ್ಯಕ್ತಿಗಳು ಭೇಟಿಯಾಗಲಿದ್ದಾರೆ. ಅವರಿಂದ ಸಹಾಯ ಪಡೆದುಕೊಳ್ಳುತ್ತೀರಿ. ಇಡೀ ವರ್ಷಕ್ಕೆ ಯೋಜನೆ ರೂಪಿಸಿಕೊಳ್ಳಲು ಹೋಗಬೇಡಿ. ಬ್ಯಾಂಕ್‌ ಖಾತೆಯಲ್ಲಿ ಚಂಡಮಾರುತ ಎಳುವ ಸಾಧ್ಯತೆಯಿದೆ! ತೊಂದರೆಗಳು ಎದುರಾದರೂ ಅದೃಷ್ಟ ಮರಳಿ ಬರುವವರೆಗೆ ಸಹನೆ ಕಳೆದುಕೊಳ್ಳಬೇಡಿ. ತೀರಾ ಭಾವನಾತ್ಮಕವಾಗಬೇಡಿ. ಶಿಸ್ತು ಅಳವಡಿಸಿಕೊಳ್ಳಿ. ಹೀಗೆ ಮಾಡಿದಿರಾದರೆ ಯಶಸ್ಸು ನಿಶ್ಚಿತ.

5.ಪ್ರತಿ ವಾರವೂ ಹೊಸ ವರ್ಷ!
ಕಳೆದ ವರ್ಷ ಬಹಳ ಕಷ್ಟ ಅನುಭವಿಸಿದ್ದಿರಿ. ಈ ವರ್ಷ ನಿಮಗೆ ಹೂವಿನ ಹಾಸಿಗೆ. ಬದುಕಿನಲ್ಲಿ ಮಹತ್ವದ ತಿರುವುಗಳು ಕಾದಿವೆ. ವೃತ್ತಿ ಬದುಕಿನಲ್ಲಿ ಉನ್ನತಿ. ನೀವು ಇಚ್ಛಿಸಿದ ಬದುಕು ನಿಮ್ಮದಾಗಲಿದೆ. ವರ್ಷಾರಂಭದಲ್ಲಿ ಕೆಲ ಸವಾಲುಗಳು ಎದುರಾಗುತ್ತವೆಯಾದರೂ ಅವುಗಳಿಂದ ವಿಚಲಿತಗೊಳ್ಳಬೇಡಿ. ಅರ್ಧಕ್ಕೆ ನಿಂತ ಯೋಜನೆ ಈ ವರ್ಷ ಪೂರ್ಣವಾಗಲಿದೆ. ಬರವಣಿಗೆ, ಪ್ರಕಾಶನ
ಮುಂತಾದ ಸಾಹಿತ್ಯಕ ವೃತ್ತಿಯವರಿಗೆ ಶುಭ. 1 ವರ್ಷಕ್ಕೆ ಯೋಜನೆ ರೂಪಿಸಿಕೊಳ್ಳಿ. ಹಣಕಾಸಿನ ತೊಂದರೆಗಳು ಮುಗಿಯುತ್ತ ಬಂದವು. ಪ್ರೀತಿಯ ವಿಷಯದಲ್ಲೂ ಮಹತ್ವದ ಬದಲಾವಣೆ ಕಾದಿದೆ. ಎದುರಾಗುವ ಸಂದರ್ಭಗಳನ್ನು ಸರಿಯಾಗಿ ನಿಭಾಯಿಸಿದರೆ ಈ ವರ್ಷ ಪ್ರತಿ ವಾರವೂ ನಿಮಗೆ ಹೊಸ ವರ್ಷದ ಸಂಭ್ರಮ!

6.ರಿಯಲ್‌ ಎಸ್ಟೇಟ್‌ನಿಂದ ಲಾಭ
ಪ್ರೀತಿಯಲ್ಲಿ ಬಿದ್ದಿದ್ದೀರಾ? ಹೌದಾದರೆ ತಳಪಾಯ ಗಟ್ಟಿಪಡಿಸಿಕೊಳ್ಳಿ. ಕಳೆದ ಎರಡು ವರ್ಷಗಳಿಂದ ಬಹಳ ಕಷ್ಟಪಟ್ಟಿದ್ದಿರಿ. ಈ ವರ್ಷ ನಿಮ್ಮ ಕನಸುಗಳು ನಿರಾಯಾಸವಾಗಿ ನನಸಾಗಲಿವೆ. ಭವಿಷ್ಯದ ಬಗ್ಗೆ ಯಾವುದೇ ಅಂಜಿಕೆಯಿಲ್ಲದೆ ಹೊಸ ಯೋಜನೆ ರೂಪಿಸಿಕೊಳ್ಳಿ. ಈ ಯೋಜನೆಯಲ್ಲಿ ಪ್ರೀತಿಯನ್ನೂ ಸೇರಿಸಿಕೊಳ್ಳಿ. ಎಲ್ಲಾ ದಿಕ್ಕಿನಿಂದಲೂ ಮದನ ನಿಮಗೆ ಬಾಣ ಬಿಡುತ್ತಿದ್ದಾನೆ! ನಿಮಗಷ್ಟೇ ಅಲ್ಲ, ನಿಮ್ಮ ಸಂಗಾತಿಗೂ ಅವನ ಬಾಣ ತಟ್ಟುತ್ತಿದೆ. ಹಾಗಾಗಿ ವರ್ಷಪೂರ್ತಿ ಪ್ರಣಯೋತ್ಸವ. ಈ ವರ್ಷ ನಿಮ್ಮ ಕೌಶಲ್ಯಗಳು, ಹೊಸ ಸಾಮರ್ಥ್ಯಗಳು ಬೆಳಕಿಗೆ ಬರಲಿವೆ. ರಿಯಲ್‌ ಎಸ್ಟೇಟ್‌ ಸಂಬಂಧಿ ವ್ಯವಹಾರ ಉತ್ತಮ. ಖರೀದಿ ಅಥವಾ ಮಾರಾಟ ಎರಡರಲ್ಲೂ ಲಾಭವಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಲಿದೆ.

7.ವರ್ಷವಿಡೀ ಅಧ್ಯಾತ್ಮದ ಯಾನ
ಕಳೆದ ವರ್ಷ ಕಂಡ ಕನಸು ನನಸಾಗಿಲ್ಲ. ಈ ವರ್ಷವೂ ಅದೇ ಕತೆ. ನಿಮ್ಮ ವ್ಯಕ್ತಿತ್ವ ಮತ್ತು ಆತ್ಮಬಲದ ಪರೀಕ್ಷೆಯಾಗಲಿದೆ. ಬದುಕಿನಲ್ಲಿ ಅಧ್ಯಾತ್ಮದ ಗೆರೆ ಕಾಣಿಸುತ್ತಿದೆ. ಮನಸ್ಸಿನ ಆಳವಾದ ಗಾಯ ವಾಸಿಯಾಗಲಿದೆ. ಈ ವರ್ಷ ನೀವು ಪಡೆದುಕೊಳ್ಳುವುದು ಏನೂ ಇಲ್ಲ. ಹೊಸ ಹೊಸ ಯೋಚನೆಗಳು, ಕ್ರಿಯಾಶೀಲ ವಿಚಾರಗಳು ಹೊಳೆಯಲಿವೆ. ನಿಗೂಢ ರಹಸ್ಯ, ಅತಿಮಾನುಷ ಶಕ್ತಿ, ಅತೀಂದ್ರಿಯ ಚಿಕಿತ್ಸೆಗಳ ಬಗ್ಗೆ ಅಧ್ಯಯನ ಮಾಡುವ ಆಸೆಯಿದ್ದರೆ ಈ ವರ್ಷ ಆರಂಭಿಸಿ. ವೈದ್ಯರು, ತಾಂತ್ರಿಕರು, ಧರ್ಮಶಾಲೆಗಳು ಮತ್ತು ಜೈಲಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಸಹಾಯದ ಅಗತ್ಯವಿದ್ದಲ್ಲಿ ಕೇಳಿ ಪಡೆಯಿರಿ. ಈ ವರ್ಷ ವಿವಿಧ ರೀತಿಯ ಆಧ್ಯಾತ್ಮಿಕ ಪರೀಕ್ಷೆಗೆ ಒಳಪಡಲಿದ್ದೀರಿ. ಕೊನೆಯಲ್ಲಿ ಒಳ್ಳೆಯದೇ ಆಗುತ್ತದೆ.

8.ಏಳಿ, ಎದ್ದೇಳಿ, ಬದಲಾಗಿ
ಕಳೆದ ವರ್ಷಗಳಲ್ಲಿ ಏನು ಮಾಡಿದ್ದಿರಿ ಎಂಬುದರ ಮೇಲೆ ಈ ವರ್ಷದ ಫ‌ಲ ಸಿಗಲಿದೆ. ಕರ್ಮ ಮತ್ತು ಪ್ರಾರಬಟಛಿಗಳು ಬೆನ್ನು ಹತ್ತುತ್ತವೆ. 6 ವರ್ಷದ ಹಿಂದೆ ಏನು ಮಾಡಿದ್ದಿರಿ ಅಥವಾ ಏನು ಮಾಡಿಲ್ಲ ಎಂಬುದನ್ನೊಮ್ಮೆ ಯೋಚಿಸಿ. ಆ ವರ್ಷ ಈಗ ನಿಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇಷ್ಟು ವರ್ಷ ಅನುಭವಿಸಿದ ಎಲ್ಲ ತೊಂದರೆಗಳಿಂದ ಮುಕ್ತಿಹೊಂದುವ ಅವಕಾಶ
ಎದುರಾಗುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಬದುಕು ಒಳ್ಳೆಯ ದಿಕ್ಕಿನಲ್ಲಿ ಸಾಗಲಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲ. ಈ ವರ್ಷ ಭೇಟಿಯಾಗುವವರು ನಿಮ್ಮ ಬದುಕಿನಲ್ಲಿ ಬಹಳ ಕಾಲ ಜೊತೆಗಿರುತ್ತಾರೆ. ಹಿಂದೊಮ್ಮೆ
ಆತ್ಮೀಯರಾಗಿದ್ದು ದೂರವಾದವರು ಮತ್ತೆ ಹತ್ತಿರ ಬರುವ ಸಾಧ್ಯತೆಯಿದೆ.

9.ಸಂಬಂಧಗಳಿಗೆ ಪರೀಕ್ಷೆ ಸಮಯ
ಕಳೆದ ವರ್ಷ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಳ್ಳುತ್ತೀರಿ. ಭವಿಷ್ಯದ ಯೋಜನೆಗಳು ಈ ವರ್ಷ ರೂಪುಗೊಳ್ಳಲಿವೆ. ಸೆಪ್ಟೆಂಬರ್‌ವರೆಗೆ ಯಾವುದನ್ನೂ ಕಾರ್ಯರೂಪಕ್ಕೆ ತರಲು ಹೋಗಬೇಡಿ. ನೀವು ಹೊಂದಿರುವ ಎಲ್ಲ ಸಂಬಂಧಗಳಿಗೂ ಈಗ ಪರೀಕ್ಷೆಯ ಸಮಯ. ಕೆಲವು ಅಳಿಯುತ್ತವೆ ಮತ್ತು ಇನ್ನು ಕೆಲವು ಗಟ್ಟಿಯಾಗುತ್ತವೆ. ನಡೆದಿದ್ದನ್ನು ನೆನೆಸಿಕೊಂಡು, ಬೇಸರಿಸಿಕೊಂಡು, ಕೋಪಿಸಿಕೊಳ್ಳುವುದಕ್ಕೆ ಇದು ಸಮಯವಲ್ಲ. ಹೊಸ ಪ್ರೀತಿಯ ಹುಡುಕಾಟದಲ್ಲಿ ಸಮಯ ವ್ಯರ್ಥ ಮಾಡಬೇಡಿ. ಕಾರಣಾಂತರಗಳಿಂದ ಮುರಿದುಬಿದ್ದ ಪ್ರೇಮ ಮತ್ತೆ ಚಿಗುರೊಡೆಯಬಹುದು. ಆದರೆ ಅದೂ ಶಾಶ್ವತವಲ್ಲ. ಮತ್ತೆ ಬ್ರೇಕಪ್‌ ಆದೀತು. ಹಲವು ಬದಲಾವಣೆಗಳು ಕಾದಿವೆ. ಬಾಕಿ ಇರುವ ಸಾಲಗಳನ್ನೆಲ್ಲ ತೀರಿಸಿಬಿಡಿ.

Trending videos

Back to Top