ತೀವ್ರತರವಾದ ದೈಹಿಕ ತೊಂದರೆಗಳ ನಿವಾರಣೆ ಜಾತಕದಿಂದ ಸಾಧ್ಯವೇ?


Team Udayavani, May 27, 2017, 11:40 AM IST

6.jpg

ವ್ಯಕ್ತಿಯ ಜಾತಕದಲ್ಲಿ ಆರನೆಯ ಮನೆ ಮತ್ತು ಎಂಟನೆಯ ಮನೆ ಇವೆರಡೂ ಅನೇಕ ರೀತಿಯ ದುರಿತಗಳನ್ನು, ಕಾಯಿಲೆ ಅಸ್ವಸ್ಥತೆ ಹಾಗೂ ಸರ್ರನೆ ಮಿಂಚಿನ ಪ್ರವಾಹದಂತೆ ಕಣ್ಣುಮುಚ್ಚಿ ತೆರೆಯುವುದರೊಳಗಾಗಿ ದಾಳಿ ನಡೆಸಿ ಬಸವಳಿಸಿ ಕಾಡಬಹುದು. ಹೀಗಾಗಿ ಜನ್ಮ ಕುಂಡಲಿಯ ಆರನೆ ಅಥವಾ ಎಂಟನೆ ಮನೆಯನ್ನು ವಿಸ್ತಾರವಾಗಿ ವಿಶ್ಲೇಷಿಸಿಯೇ ತಿಳಿದುಕೊಳ್ಳಬೇಕು. ಯಾವ ರೀತಿಯ ತೊಂದರೆಗಳನ್ನು ಈ ಭಾವಗಳು ಉತ್ಪಾದಿಸಬಲ್ಲವು ಎಂಬುದನ್ನು ಸ್ಪಷ್ಟಗೊಳಿಸುತ್ತದೆ. ವರ್ತಮಾನದಲ್ಲಿನ ತೊಂದರೆಗಳು ಮೂಲ ಜಾತಕದ ಗ್ರಹಗಳು ಮತ್ತು ವರ್ತಮಾನದಲ್ಲಿನ ಗ್ರಹಗಳ ಓಡಾಟದ ಸಂಘರ್ಷದ ಪ್ರಕಾರ ಆಕಾರ ಪಡೆಯುತ್ತವೆ. ಕೊಲ್ಲುವ ಶಕ್ತಿಗಿಂತಲೂ ಕಾಯುವ ಶಕ್ತಿ ಅನನ್ಯತೆ ಪಡೆದಿರುತ್ತದೆ. ಪ್ರಧಾನವಾಗಿ ಶಿವನ ಮೂಲಕವಾಗಿ ಎಲ್ಲಾ ರೀತಿಯ ತೊಂದರೆಗಳನ್ನು ಪರಿಹರಿಸಿಕೊಳ್ಳಬೇಕು. ಪ್ರಪಂಚದ ಒಳಿತಿಗಾಗಿ ಸಮುದ್ರ ಮಂಥನದ ಸಂದರ್ಭದಲ್ಲಿ, ಉಕ್ಕಿದ್ದ ಘನಘೋರ ವಿಷವನ್ನು ಶಿವನು ಸ್ವೀಕರಿಸುತ್ತಾನೆ. ಇಂದು ಅಂತಿಂಥ ವಿಷವಲ್ಲ ಘನಘೋರ ಹಾಲಾಹಲ. ಈ ವಿಷವನ್ನು ಶಿವ ಕುಡಿದರೂ ಪಾರ್ವತಿಯ ಸಹಾಯದಿಂದ ದಕ್ಕಿಸಿಕೊಳ್ಳುತ್ತಾನೆ. ಹೋಗಾಗಿಯೇ ನಮ್ಮೆಲ್ಲರ ಸಂದರ್ಭದಲ್ಲಿ ರೋಗ ಋಣಬಾಧೆ ದರಿದ್ರ ಅವಘಡ ಸಂಧಿಕಾಲದ ಮರಣಬಾಧೆಗಳನ್ನು ಪರಿಹರಿಸುತ್ತಾನೆ.

ಆನಂದಮಯನಾಗಿದ್ದಾನೆ ಶಿವ
ರೋಗ ಮೈಯಲ್ಲಿ ಸೇರಿಕೊಂಡಾಗ ಆನಂದ ಒದಗಲು ಹೇಗೆ ಸಾಧ್ಯ? ಮನುಷ್ಯನ ಪಾಲಿಗೆ ಬಂದ ರೋಗವನ್ನು ವಿಷ್ಣುರೂಪಿಯಾದ ಧನ್ವಂತರಿಯು ವನಸ್ಪತಿಯ ಮೂಲಕವಾಗಿ ನಿವಾರಣೆಯ ಉಪಾಯಗಳನ್ನು ಒದಗಿಸಬಹುದು. ಆದರೆ ರೋಗವೇ ಬಾರದಂತೆ ನಂಜು ನಮ್ಮ ಒಳಸೇರದಂತೆ ಅನುಗ್ರಹಿಸುತ್ತಾನೆ. ಯಾವುದು ಮಹತ್ತರವಾದುದು ಅದರ ನಾಯಕನೇ ಸಾರ್ವಭೌಮನಾಗುತ್ತಾನೆ. ಶಿವನು ಸಾರ್ವಭೌಮನಾಗಿದ್ದಾನೆ. ಬ್ರಹ್ಮನು ನಿರ್ಮಿಸಿದ ಜೀವಜಂತುಗಳನ್ನು ನಿರ್ದಿಷ್ಟ ಆಹಾರದೊಂದಿಗೆ ಬಲಿಷ್ಠಗೊಳ್ಳಲು ಅವುಗಳ ಆಹಾರವನ್ನು ನಿಶ್ಚಯಿಸಿದ್ದಾನೆ.  ಜೀವಿಗಳಿಗೆ ಜೀವವೇ ಆಹಾರಗಳಾಗಿದೆ. ಜೀವೋ ಜೀವಸ್ಯ ಜೀವನಂ ಎಂಬ ನಮ್ಮ ಸಂಸ್ಕೃತಿಯ ಆಷೇìಯ ನುಡಿ ನೆನಪಿಸಿಕೊಳ್ಳಬೇಕು. ನಮ್ಮ ಭಾರತೀಯ ಮೀಮಾಂಸೆಗಳು ಒಂದು ಹೆಜ್ಜೆ ಮುಂದುವರೆದು ಪ್ರತಿ ಜೀವಿಯನ್ನೂ ಬ್ರಹ್ಮ ತನ್ನನ್ನೇ ತಾನು ಪ್ರವೇಶಗೊಳಿಸುವುದರ ಮೂಲಕ ಜೀವಿಗಳನ್ನು  ಚಲನಶೀಲತೆಯಿಂದ ಆನಂದಮಯವಾಗಿರಲು ಕಾರಣ ಮಾಡಿಕೊಡುತ್ತಾನೆ. ವಾಸ್ತವವಾಗಿ ಪರಬ್ರಹ್ಮನೂ ಬ್ರಹ್ಮ, ವಿಷ್ಣು ಮಹೇಶ್ವರನೂ ಎಲ್ಲರೂ ಒಂದೇ ಆಗಿದ್ದಾರೆ. ಸೃಷ್ಟಿ, ಸ್ಥಿತಿ, ಲಯಗಳನ್ನು ವರ್ಗೀಕರಿಸಿ ಕ್ರಮವಾಗಿ ಬ್ರಹ್ಮನು ಸೃಷ್ಟಿ  ಕೆಲಸವನ್ನೂ, ವಿಷ್ಣುವು ಸ್ಥಿತಿಯನ್ನೂ ಶಿವನು ಜಾತಸ್ಯ ಮರಣಂ ದೃವಂ ಎಂಬ ಮಾತನ್ನು ಪೂರೈಸುವ ಲಯಕರ್ತನಾಗುತ್ತಾನೆ ಎಂದು ವ್ಯಾಖ್ಯಾನಿಸುತ್ತದೆ.  ಒಟ್ಟಿನಲ್ಲಿ ಜೀವಧರಿಸಿ ಬಂದ ಪ್ರಾಣಿಯ ಒಂದು ಸುಸಂಬದ್ಧವಾದ ಆನಂದವನ್ನು, ಶಿವನ ಶಕ್ತಿಯಿಂದಲೇ ಪಡೆಯುತ್ತದೆ ಎಂಬುದನ್ನು ನಮ್ಮ  ಭಾರತೀಯ ತತ್ವ ಶಾಸ್ತ್ರ ಪ್ರತಿಪಾದಿಸುತ್ತದೆ. ಹೀಗಾಗಿಯೇ ಶಿವನು ಸದಾಶಿವನಾಗಿದ್ದಾನೆ. ಶಿವ ಎನ್ನುವ ಅರ್ಥವೇ ಆನಂದ ಎಂಬ ಅರ್ಥವನ್ನು ಹೊಮ್ಮಿಸುತ್ತದೆ. ನಿರಂತರವಾಗಿ ಅವನು ಆನಂದಮಯನಾಗಿರುವುದರಿಂದ ಅವನೇ ಸದಾಶಿವನಾಗಿದ್ದಾನೆ. 

ಶಿವನು ಅಕ್ಷಯ ಸ್ವರೂಪಿಯಾಗಿ, ಮೂಲದಲ್ಲಿ ಅನಲ (ಬೆಂಕಿಯಾದರೂ) ಸದಿಚ್ಛೆಯೊಂದಿಗೆ ಜೀವ ಜಂತುಗಳಿಗೆ ಸ್ನೇಹವನ್ನು ಪಿತೃಶಕ್ತಿ ನಿಕ್ಷೇಪ ದೊಂದಿಗೆ ಎಲ್ಲರನ್ನೂ ಎಲ್ಲವನ್ನೂ ತಂದೆಯಂತೆ ಪ್ರೀತಿಸುವ ವಾತ್ಸಲ್ಯ ಮಯಿಯಾಗಿದ್ದಾನೆ. ಮಾನಸ ಸರೋವರ ಹಿಮಾಲಯ ಇವನ ವಾಸಸ್ಥಳ.  ಸೃಷ್ಟಿಯ ಮಹಾಚಕ್ರವನ್ನು ತಿರುಗಿಸುತ್ತಲೇ ಇರಬೇಕಾಗಿರುವುದರಿಂದ ಹರನಾಗಿದ್ದಾನೆ. ಶಕ್ತಿ ಕಳೆದುಕೊಂಡದ್ದನ್ನು ಅಪಹರಿಸುತ್ತಾನೆ.

“ರತ್ನೆ ಕಲ್ಪಿತ ಮಾಸನಂ ಹಿಮ ಜಲೈ
ಸ್ನಾನಾಂಚ ದಿವ್ಯಾಂಬರಂ ನಾನಾರತ್ನ ಭೂಷಿತಂ
ಮೃಗಮದಾಮೋದಾಂಕಿತಂ ಚಂದನಂ,  
ಜಾತೀ  ಚಂಪಕ ಬಿಲ್ವ ಪತ್ರ ರಚಿತಂ
ಪುಷ್ಪಂಚ ಧೂಪಂ ತಥಾ,  ದೀಪಂ ದೇವ 
ದಯಾನಿಧೇ ಪಶುಪತೇ ಹೃತ್ಕಲಿತಂ ಗೃಹ್ಯತಾಂ!
ಈ ಸ್ತೋತ್ರವನ್ನು ಪಠಿಸುತ್ತ ಶಿವನನ್ನು ಮನಸ್ಸಿನಲ್ಲೇ ಗ್ರಹಿಸಿ ಪೂಜಿಸುವುದರಿಂದ ಅನಿಷ್ಟಗಳು ನಾಶವಾಗಿ ಆನಂದಕ್ಕೆ ವೇದಿಕೆ ಸಿದ್ಧ ಎಂಬುದಾಗಿ ನಮ್ಮ ಭಾರತೀಯ ಪರಂಪರೆ ನಂಬಿದೆ. ಶನೈಶ್ಚರನ ಕಾಟದಿಂದಲೋ, ಕೇಮದ್ರುಮ ಅನಿಷ್ಟಗಳ ವಿಚಾರ ಚಂದ್ರನ ಮೂಲಕ ತೆಲೆದೋರಿದಾಗ ಕೆಟ್ಟದ್ದನ್ನು ತರುವ ಕಾಳ ಸರ್ಪ ದೋಷವಿದ್ದಾಗ ಕುಜ ದೋಷ ಉತ್ಪತ್ತಿ ದುರ್ಭರತೆಗಳು ಸಂಭವಿಸಿದಾಗ ಈ ಸ್ತೋತ್ರ ಪಠಣವು ರತ್ನಗಳು ಹೊಳೆಯುವ ಹಾಗೆ ನಮ್ಮ ದೇಹದ ಕಾಂತಿಯನ್ನು ಸಂತೋಷ ಅಥವಾ ಚೈತನ್ಯಗಳ ಮೂಲಕ ಕಾಂತಿಯುತವನ್ನಾಗಿಸಿ ಸಂತಸದಲ್ಲಿಡುತ್ತದೆ.

ಹಾಗೆಯೇ, “ತ್ರಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿ ವರ್ಧನಂ ! ಊರ್ವಾರುಕಮಿವ ಬಂಧನಾತ್‌ ಮೃತ್ಯೋ ರ್ಮುಕ್ಷೀಯ ಮಮÌತಾತ್‌’ ಎಂಬ ಮಹಾ ಮೃತ್ಯುಂಜಯ ಮಂತ್ರಪಠಣದಿಂದ ಅವಮಾನ ಅವಘಢ ನೋವು ರೋಗಗಳು ದೂರವಾಗಿ ಹಿತವಾದ ಅನುಭವವು ಸತ್ಕರ್ಮಗಳ ಕುರಿತಾದ ಲವಲವಿಕೆಯೂ, ಧನ ಸಂಪಾದನೆಗಾಗಿನ ಕ್ರಿಯಾಶೀಲತೆಯೂ ಚಿಮ್ಮುತ್ತದೆ. ಸಾವನ್ನು ಗೆಲ್ಲುವ, ಅನಾಯಾಸವಾದ ಮರಣವನ್ನು ದೈನ್ಯವಿಲ್ಲದೆ ಸಾಗಿಸುವ ಜೀವನವನ್ನು ದಯಪಾಲಿಸುತ್ತದೆ. ಈ ಮಂತ್ರಭಾಗವು ಋಗ್ವೇದದಲ್ಲಿ ಉಲ್ಲೇಖವಾಗಿದೆ. ಈ ಮಂತ್ರದ ಪ್ರಾರಂಭದ ಉಕ್ತಿಗಳು ಇಂದ್ರ, ವರುಣ ಹಾಗೂ ಮಿತ್ರರನ್ನು ಸಂತುಷ್ಟ ಪಡಿಸುವ ಹಂತದಿಂದ ಮುಂದಕ್ಕೆ ತಂದು ತ್ರಯಂಬಕನನ್ನು ಆರಾಧಿಸುವ ಹಂತಕ್ಕೆ ತಂದು ನಿಲ್ಲಿಸುತ್ತದೆ. ಮೂರು ಕಣ್ಣುಗಳನ್ನು ಹೊಂದಿದ ಶಿವನು ಮಂಗಳಮಯನಾಗಿ ಚಂದ್ರ ಸೂರ್ಯರಿಂದ ಬೆಳಕುಣಿಸಿ ಸಹಜವಾದ ಜೀವನ ಸೌಭಾಗ್ಯವನ್ನು ಒದಗಿಸುತ್ತಾನೆ. ಮೂರನೆಯ ಕಣ್ಣನ್ನು ಬಳಸಿ ನಮ್ಮನ್ನು ಘಾಸಿಗೊಳಿಸುವ ಅರಿಷ್ಟಗಳನ್ನು ಬೂದಿ ಮಾಡುತ್ತಾನೆ. ಹೀಗಾಗಿ ಈತ ಮುಕ್ಕಣ್ಣ. 

ಈ ಮಂತ್ರ ನಮ್ಮೊಳಗಿನ ಅವ್ಯಕ್ತ ಭಯವನ್ನು  ಅಪಸ್ಮಾರ ರೋಗಿಗಳ ದೌರ್ಬಲ್ಯಗಳನ್ನು ನೀಗಿಸಿ, ನರಮಂಡಲಕ್ಕೆ ಗಟ್ಟಿತನವನ್ನು ದಯಪಾಲಿಸುತ್ತಾನೆ. ಜಾತಕದಲ್ಲಿನ ಬಾಲಾರಿಷ್ಟವನ್ನು ನೀಗಿಸುವ ವಿಚಾರದಲ್ಲಿ ಅನೇಕ ರೀತಿಯ ಸಂಜೀವಿನಿ ಶಕ್ತಿಯನ್ನು ಕೊಡಿಸಿ ಅನುಗ್ರಹಿಸುತ್ತದೆ. ಮನುಷ್ಯನ ಶಕ್ತಿಪೂರ್ವಕ ಅತ್ಯಾವಶ್ಯಕ ಭಾಗವಾಗಿ ಪ್ರಾಣಕ್ಕೆ ಬೆಂಬಲವಾಗಿ ಸದಾ ನಿಲ್ಲುವ ಹೃದಯ, ಮೆದುಳು, ಲಿವರ್‌, ಮೂತ್ರಪಿಂಡ, ಕರುಳು ಜಠರಾದಿಗಳನ್ನು ಉದ್ದೀಪನಗೊಳಿಸುತ್ತದೆ. ಜಗದ ಬೆಳಕಾದ ಚಂದ್ರನೇ ಮಾವನಾದ ದಕ್ಷಬ್ರಹ್ಮನಿಂದ ಶಾಪಕ್ಕೆ ಗುರಿಯಾದಾಗ ಈ ಮಂತ್ರ ಪಠಿಸಿ ಶಿವನಿಂದ ಅನುಗ್ರಹಿತನೂ, ರಕ್ಷೆ ಪಡೆದವನೂ ಆಗಿ ಶಿವನ ಜಟೆಯ ತುದಿಯಲ್ಲಿ ಮಕುಟಭೂಷಣನೂ ಆಗಿದ್ದಾನೆ. ಇವೆಲ್ಲ ಕೇವಲ ಕಥೆಯಂತೆ ಕಂಡರೂ ಅರ್ಥಗಳಿವೆ.  ಇರುವ ಅರ್ಥಗಳಿಂದಾಗಿ ಮಾನವ ಜೀವನ ಯಾತ್ರೆಯ ಧರ್ಮಾರ್ಥ ಕಾಮ ಮೋಕ್ಷಗಳಿಗೆ ಸಮತೋಲನ ದಕ್ಕಿಸಿಕೊಡುವ ಕಾಮಧೇನುವಾಗುತ್ತಾನೆ. ಗಾಯತ್ರಿ ಮಂತ್ರ ಜಾnನ ಬಿಂದು ಕೊಶಗಳ ಸಂವೇದನೆ ಒದಗಿಸಿ ಆತ್ಮ ಸಾûಾತ್ಕಾರ ಒದಗಿಸಿದರೆ ಜಾnನವನ್ನು ಸಂವಹಿಸುವಲ್ಲಿ ಅಗತ್ಯವಾದ ಚೈತನ್ಯವನ್ನು ಮಹಾಮೃತ್ಯುಂಜಯ ಮಂತ್ರ ನೀಡುತ್ತದೆ.

ಯಾವುದೇ ಸಂಕಟಗಳ ಸಮಯವಿರಲಿ ಶಿವನನ್ನು ನೆನೆಯುವುದರಿಂದಲೂ, ನೆನೆದ ಸಂದರ್ಭದ ದಾರುಣತೆಗಳು ದೂರವಾಗುವುವು. ವೈದ್ಯರನ್ನು ಸಂಪರ್ಕಿಸುವ ವಿಚಾರದಲ್ಲಿ ಹಿಂದೆ ಬೀಳದಿರಿ. ವೈದ್ಯರನ್ನು ಕಂಡು ಲೌಕಿಕದ ಚಿಕಿತ್ಸೆಗೆ ಅಲೌಕಿಕ ಶಕ್ತಿ ಪೂರೈಸುವ ಶಿವನನ್ನು  ಓಂ ನಮಃ ಶಿವಾಯ 
ಎಂದಾಗಲಿ, ಕಟ್ಟ ಕಡೆಗೆ “ಓಂ’ ಸೇರಿಸಿ ಶಿವನ ಸಹಸ್ರನಾಮಾವಳಿ ಓದುವುದಾಗಲೀ ಸಾಧ್ಯ ಮಾಡಿಕೊಂಡು ಪ್ರಸನ್ನನಾಗಿ ಯಾವಾಗಲೂ ಒಳಿತಿಗೆ  ಬೀಜಗರ್ಭನಾಗಿರುವ ಶಿವನಿಂದ ಜಯವಿದೆ. ಜಾತಕದಲ್ಲಿ ಶನಿ ಮತ್ತು ಕುಜ ದೃಷ್ಟಿಯ ದೋಷ ನೀಗಿಸುವ ಕುಜಶುಕ್ರ ಯುತಿಯಿಂದ ನೈತಿಕತೆ ಕಳೆದುಕೊಳ್ಳುವ ಅಪಾಯವನ್ನು ತಪ್ಪಿಸುವ ಶುದ್ಧಾತ್ಮನಾಗಿ ಶುದ್ಧಾತ್ವವನ್ನು ನಮಗೂ ಒದಗಿಸುತ್ತಾನೆ. 

 ಅನಂತಶಾಸ್ತ್ರಿ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.