ಈ ವರ್ಷ ರಾಶಿ ರಾಶಿ ಹಣೆಬರಹ ಹೇಗಿದೆ?


Team Udayavani, Mar 17, 2018, 10:43 AM IST

556.jpg

   ಭಾರತೀಯ ಪರಂಪರೆಯ ವೈದಿಕ ಗಣಿತದ ಲೆಕ್ಕಾಚಾರಗಳು ಮೇಲಿಂದಲೇ ಭೂಮ್ಯಾಕಾಶಗಳನ್ನು ಅಳೆದು ನೋಡಿದ ಅದ್ಭುತ ಶಕ್ತಿಯನ್ನು ಪಡೆದಿದೆ ಎನ್ನಲಾಗಿದೆ. ವರ್ತಮಾನ ಹಾಗೂ ಭೂತ ಕಾಲಗಳ ನೆರವಿನಿಂದ ಭವಿಷ್ಯ ಕಾಲವನ್ನೂ ಇಣುಕಿ ನೋಡುವ ರಸ ವಿದ್ಯೆಯನ್ನು ಸೂರ್ಯ ಚಂದ್ರಾದಿ ನವಗ್ರಹಗಳ ಮೂಲಕ, ಅಶ್ವಿ‌ನಿ ಭರಣಿ ಇತ್ಯಾದಿ 27 ನಕ್ಷತ್ರಗಳ ಮೂಲಕ ಕಂಡು ಹಿಡಿದ ಶ್ರೇಯಸ್ಸು ಭಾರತೀಯ ಜ್ಯೋತಿಷ್ಯ ಪರಂಪರೆಯದ್ದು. ಚಂದ್ರನ ಮೂಲಕ ಮಾನಸಿಕ ಕ್ಷೋಭೆ, ತಲ್ಲಣಗಳನ್ನೂ, ಬುಧ, ಸೂರ್ಯರಿಂದ ವಿದ್ಯೆಯನ್ನು, ಬುದ್ಧಿ, ಸೌಂದರ್ಯ ಹಾಗೂ  ಕೌಶಲ್ಯವನ್ನೂ, ರಾಹು ಕೇತುಗಳಿಂದ ತಾಂತ್ರಿಕ ವಿಚಾರಗಳನ್ನೂ, ಕುಜ, ಶನೈಶ್ಚರರಿಂದ ಆವೇಶ ಅಥವಾ ತಾಳ್ಮೆಯಿಂದ ಅನೇಕ ವಿಚಾರಗಳನ್ನು ಸಾಧಿಸಿ ತೋರಿಸಬಹುದೆಂಬುದನ್ನು ಪುರಾವೆಗಳೊಂದಿಗೆ ಸಾಬೀತು ಪಡಿಸಿದ್ದು ಭಾರತೀಯ ಜ್ಯೋತಿಷ್ಯ ವಿಜ್ಞಾನ. ಇದೀಗ ಆಗಮಿಸಿರುವ ವಿಳಂಬಿ ಸಂವತ್ಸರದ ಫ‌ಲಾವಳಿ ಈ ಕೆಳಗೆ ಕೊಡಲಾಗಿದೆ. 

  ಮೇಷ
 ಸಂಪನ್ನವಾದ ಗುರುಬಲ ಅಕ್ಟೋಬರ್‌ 11ರವರೆಗೆ ಇರುತ್ತದೆ. ಚೇತೋಹಾರಿಯಾದ ಅನೇಕ ಕೆಲಸಗಳನ್ನು ಗೆಳೆಯರ ಬೆಂಬಲದಿಂದಲೂ, ಗುರುಹಿರಿಯರ ಆಶೀರ್ವಾದಗಳಿಂದಲೂ ಪೂರೈಸಬಲ್ಲಿರಿ. ಧನ ಲಾಭಕ್ಕೆ ದಾರಿಯಾಗುವ ಶಕ್ತಿ, ಸಾಫ‌ಲ್ಯತೆಯನ್ನು ಒದಗಿಸುವಲ್ಲಿ ನಿಮ್ಮನ್ನು ಬಲಿಷ್ಠಗೊಳಿಸುತ್ತದೆ. ಗುರು ಬಲದ ವಿಚಾರ ದುರ್ಬಲವಾದಾಗ ಅವಸರ ಮಾಡದೇ ನಿಧಾನವಾಗಿ ಯಶಸ್ಸಿನ ಏಣಿ ಏರುವ ಕೆಲಸ ಮಾಡಿ. ಗಣೇಶನನ್ನು ಆರಾಧಿಸಿ. 

ವೃಷಭ
 ಅಷ್ಟಮ ಶನಿಕಾಟ ವರ್ಷಾಂತ್ಯದವರೆಗೂ ಮುಂದುವರಿದು ಕೊಂಡೇ ಇರುತ್ತದೆ. ಅಕ್ಟೋಬರ್‌ ಮಧ್ಯ ಭಾಗದ ಹೊತ್ತಿಗೆ ಗುರುಬಲ ಏರುತ್ತಿರುವ ಬಿಸಿಲಿನ ದಾರಿಯಲ್ಲಿ ಕೊಂಚ ಹಿತಕರವಾದ ತಂಗಾಳಿ ಬೀಸಲಿದೆ. ಏದುಸಿರುಗಳ ನಡುವೆ ಮನಸ್ಸು ನಿರಾಳವಾಗಲು ಅವಕಾಶ ಲಭ್ಯವಿದೆ. ಮಕ್ಕಳಿಂದ ಹಲವು ರೀತಿಯ ಒತ್ತಡ ಕಳಕೊಳ್ಳುತ್ತೀರಿ. ಆದರೂ ಮನಸ್ಸು ಜೋಕಾಲಿಯಂತೆ ಹೊಯ್ದಾಡುತ್ತದೆ. ಹನುಮಾನ್‌ ಚಾಲೀಸಾ ಓದಿ. 

 ಮಿಥುನ
 ನೀಲ ಹೂಗಳಿಂದ ಚಂಡಿಕಾ ಆರಾಧನೆ ಮಾಡಿ. ಅಪರೂಪದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಚಂಡಿಕಾ, ಶಕ್ತಿ ಸಾಮರ್ಥಯ ಒದಗಿಸಬಲ್ಲಳು. ಬೌದ್ಧಿಕ ಶಕ್ತಿಯ ಕುಶಾಗ್ರತೆಯಿಂದ ನಿಮ್ಮ ಪಾಲಿಗೆ ಒದಗಬೇಕಾದ ಪದೋನ್ನತಿ, ಕೆಲಸದ ಸ್ಥಳದಲ್ಲಿ ಲಭ್ಯ. ರಾಜಕಾರಣಿಗಳಿಗೆ ಸ್ವಜನರಿಂದಲೇ ಪೀಡೆ ಒದಗುತ್ತದೆ. ಇರಬಹುದಾದ ರಾಹು ಅಥವಾ ಕುಜದೋಷ ಉಪಯೋಗಿಸಿಕೊಂಡು ನಿರ್ಣಾಯಕ ಹಂತದಲ್ಲಿ ನಿಷ್ಕ್ರಿಯತೆ ಆವರಿಸುವಂತೆ ತಂತ್ರ ಹೆಣೆಯುತ್ತಾರೆ. ಮಹಾಗೌರಿಯನ್ನು ಸ್ತುತಿಸಿ. ಒಳಿತಾಗುತ್ತದೆ. 

 ಕರ್ಕಾಟಕ
 ನಿಮ್ಮದೇ ಆದ ಸಾಮ್ರಾಜ್ಯ ಕಟ್ಟಲು ಉತ್ತಮವಾದ ಅವಕಾಶವಿದೆ.  ಅದಕ್ಕಾಗಿ ಅಕ್ಟೋಬರ್‌ ಮಧ್ಯಭಾಗದವರೆಗೂ ಕಾಯಲೇ ಬೇಕು. ಹೊಸ ಕೈಗಾರಿಕೆ ಆರಂಭಿಸುವ ಬಗೆಗೆ ಅಥವಾ ಇರುವ ಕೈಗಾರಿಕಾ ಘಟಕಗಳ ಪುನಶ್ಚೇತನ ಗೊಳಿಸಲು ಶ್ರೀ ಸ್ವರ್ಣಗೌರಿ ದೇವಿ ಕಾಂತ ಶಕ್ತಿ ನಿಮಗೆ ನೆರವಾಗಲಿದ್ದಾಳೆ. ಪರಮ ಸಜ್ಜನಿಕೆಗೆ ಮನಸೋಲುವ ಶ್ರೀ ಲಲಿತಾಳನ್ನು ಆರಾಧಿಸಿ. ವಿದೇಶದಲ್ಲಿ ಬಂಡವಾಳ ಹೂಡುವ ನಿಮ್ಮ ದಿಟ್ಟ ನಿರ್ಧಾರಗಳಿಗೂ ಈ ವರ್ಷ ನಿಮ್ಮ ಪಾಲಿಗೆ ವರದಾಯಕ. 

ಸಿಂಹ
 ಪಂಚಮ ಶನಿಕಾಟ ಮುಂದುವರಿಯುತ್ತಿದೆ. ಅಕ್ಟೋಬರ್‌ ತಿಂಗಳಿನಲ್ಲಿ ವಿವಾಹಾಪೇಕ್ಷಿಗಳಿಗೆ, ಮುಖ್ಯವಾಗಿ ಬುಧ ಶುಕ್ರರು ಮದುವೆಗಾಗಿನ ಅವಕಾಶ ಕೊಡಬಲ್ಲವರಾಗಿದ್ದಾರೆ. ಯಾವುದಕ್ಕೂ ಅವಸರ ಬೇಡ. ತಣ್ಣೀರನ್ನೂ ಆರಿಸಿ ಕುಡಿಯುವ ವ್ಯವಧಾನ ತೋರಿಸಿ ಇದರಿಂದ ವಿಳಂಬವಾಗಬಹುದಾದರೂ ನಿಮಗೆ ಬೇಕಾದ ಯಶಸ್ಸನ್ನು ಸಂಪಾದಿಸಬಹುದು. ಆಸ್ತಿಯ ವಿಚಾರದಲ್ಲೂ ಗಡಿಬಿಡಿ ಮಾಡದಿರಿ. ವ್ಯಾಜ್ಯವೂ ಬೇಡ. ರಾಮ ರûಾ ಸ್ತೋತ್ರ ಓದಿ. ಒಳಿತಾಗುತ್ತದೆ. 

 ಕನ್ಯಾ
 ರಾಹುವಿನ ಶಕ್ತಿ ಧಾತುಗಳು ಅನೇಕ ಲಾಭಾಂಶಗಳನ್ನು ಒದಗಿಸಲು ಅವಕಾಶ ಮಾಡಿಕೊಡಲಿವೆ. ಮಕ್ಕಳನ್ನು ಮೃದು ಮಾತುಗಳಿಂದ ನಿಭಾಯಿಸಿ. ಆದರೆ ಮಕ್ಕಳು ಮೇಲಿಂದ ಮೇಲೆ ಮನಸ್ಸಿಗೆ ಬಂದಂತೆ ಮಾತನಾಡಿ ನಿಮ್ಮ ಮನನೋಯಿಸಬಹುದು. ನಿಮ್ಮ ಮಕ್ಕಳೇ ಆದುದರಿಂದ ನಿಮ್ಮ ತಾಳ್ಮೆ ಸದ್ಯದ ಅವಶ್ಯಕತೆಯಾಗಿದೆ. ಶ್ರೀ ವಿಷ್ಣು ಹಾಗೂ ಶ್ರೀ ಲಕ್ಷಿ$¾àಯನ್ನು ಆರಾಧಿಸಿ. ಒಡವೆ, ವಾಹನಗಳನ್ನು ಖರೀದಿಸಲು ಕಾಲಘಟ್ಟ ಪರಿಣಾಮಕಾರಿಯಾಗಿದೆ. 

ತುಲಾ
ತಟಸ್ಥವಾದಂತೆ ನಿಂತ ತಕ್ಕಡಿಯ ಪರಡಿಗಳಿಂದ ಎಲ್ಲವೂ ಮುಗಿದು ಹೋಯಿತೆ ಎಂಬ ನಿರಾಶಾವಾದ ಕವಿಯಬಹುದು. ಕೆಲಸದ ಸ್ಥಳದಲ್ಲಿ ವಿಷಯುಕ್ತ ಹಲ್ಲಿರುವ ಹಾವಿನಂಥ ವ್ಯಕ್ತಿಗಳು ಇದ್ದಾರೆ. ಅವರನ್ನು ಆಗಿಂದಾಗ್ಗೆ ಭುಸುಗುಡುತ್ತಾರೆ. ಆದರೆ ಎದೆಗಾರಿಕೆ, ಸಮಯಾವಧಾನಗಳಿಂದ ಎದುರಿಸಿ ಗೆಲ್ಲಿ. ಯೋಗಕಾರಕ ಶನೈಶ್ಚರನು ನಿಮ್ಮ ತಕ್ಕಡಿಯ ಪರಡಿಗಳಲ್ಲಿ ಚಿನ್ನ, ವಜ್ರ, ವೈಡೂರ್ಯವನ್ನೂ ತೂಗಿಸಿ ಕೊಡಬಲ್ಲ. ಶರಣಾಗತ ರಕ್ಷಕನಾದ ಮೃತ್ಯುಂಜಯ ಪರಮೇಶ್ವರ, ಚಂದ್ರಶೇಖರನಾದ ಶಿವನ ಸ್ತುತಿಯಿಂದ ಗೆಲ್ಲಬಲ್ಲಿರಿ. 

 ವೃಶ್ಚಿಕ
 ಸಂಪೂರ್ಣವಾದ, ಭ್ರಮಾಧೀನಗೊಳಿಸುವ ವಿಷಮ ಶಕ್ತಿಯ ಅಲೆ ಸುತ್ತುವರಿದು ದಣಿವು ಆವರಿಸಬಹುದು. ಆದರೆ ಸರ್ವೇಶ್ವರನಾದ ನಂಜುಂಡೇಶ್ವರನ ಧ್ಯಾನದಿಂದ ಬಿಕ್ಕಟ್ಟುಗಳಿಂದ ಸುಸೂತ್ರವಾಗಿ ಹೊರಬರಬಲ್ಲಿರಿ. ಶ್ರೀ ಲಲಿತಾ ತ್ರಿಶತಿಯನ್ನು ಓದಿ. ಬಳಿ ಕವಡೆಗಳಿಗೆ (ಸುಮಾರು 21 ಕವಡೆಗಳಿರಲಿ) ತುಳಸೀದಳ ಮಿಶ್ರಿತ ಶುದೊœàದಕದಿಂದ ನವಾವರಣ ಸಂಪ್ರೋಕ್ಷಣ ಮಾಡಿ. ಆವರಿಸಿದ ಅರಿಷ್ಟಗಳನ್ನು ಕೆಡವಿ, ಶ್ರೀ ವನಿತೆ ಮಾಹಾಲಕ್ಷಿ$¾ಯ ಕೃಪಾಶೀರ್ವಾದ ದಕ್ಕಲು ಸಹಾಯವಾಗುತ್ತದೆ. ನಯವಂಚಕರನ್ನು ದೂರ ಇಡಿ.

 ಧನು
 ಅಕ್ಟೋಬರ್‌ ಮಧ್ಯಭಾಗದಲ್ಲಿ ಗುರುಬಲವೂ ದೂರ. ಶನಿಕಾಟ ಮುಂದುವರಿಯುತ್ತದೆ. ರಾಮರûಾಸ್ತೋತ್ರವನ್ನು ಬಿಡದೇ ಓದಿ. ಧನ ನಾಶವನ್ನು ನಿಯಂತ್ರಿಸಲು ರಾಮ ಸುರûಾ ಕವಚ ನಿಮ್ಮ ಪಾಲಿಗೆ ಒದಗಲಿದೆ. ಸುತ್ತಮುತ್ತ ತುಂಬುವ ಕೃತ್ರಿಮ ಶಕ್ತಿಗಳನ್ನು ತುಂಡರಿಸಲು ಬೆಳ್ಳುಳ್ಳಿಯನ್ನು ಜಜ್ಜಿ ವಾಯುವ್ಯ ಮತ್ತು ಆಗ್ನೇಯ ದಿಕ್ಕುಗಳಲ್ಲಿ ಎಸೆಯಿರಿ.  ಬೆಲೆಬಾಳುವ ವಸ್ತುಗಳನ್ನು ನಿರ್ಲಕ್ಷ್ಯದಿಂದ ಎಲ್ಲೋ ಇಡಲು ಹೋಗದಿರಿ. ಹಾಗೇನಾದರೆ ಮಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ. 

ಮಕರ
 ವ್ಯಕ್ತಿತ್ವದ ತೂಕ ಏರಿಸಬೇಕಾದ ರಾಶಿಯ ಅಧಿಪತಿ ಶನೈಶ್ಚರನೇ ಈಗ ತೂಕ ಕಳಕೊಂಡಿದ್ದಾನೆ. ಪಂಚಮುಖೀ ಹನುಮಂತ ಕವಚ ಓದಿ. ಸ್ವಾಮಿಯ ವಿಶ್ವಾಸ ಪಡೆದುಕೊಳ್ಳಿ. ಅಕ್ಟೋಬರ್‌ ಮಧ್ಯಭಾಗದ ನಂತರ ಗುರುಬಲ. ಕೆಲವು ಹೊಸ ವಹಿವಾಟುಗಳನ್ನು ಮುಖ್ಯವಾಗಿ ಹೂವು, ಹಣ್ಣು, ತರಕಾರಿ ಬೆಳೆಗಳಿಂದ ಲಾಭಗಳಿಸಲು ಶಕ್ತರಾಗುವಿರಿ. ಆದರೆ ಒಂದು ಮಿತಿ ದಾಟದಿರಿ. ಕೈಗೆಟುಕುವ ದೂರವಷ್ಟೇ ವಾಸ್ತವ. ಮಕ್ಕಿದ್ದು ಮರೀಚಿಕೆ. ಈ ಸತ್ಯ ನೆನಪಿರಲಿ. 

 ಕುಂಭ
 ಉದ್ದೇಶಿತ ಕಾರ್ಯಕ್ರಮಗಳನ್ನು ಇಚ್ಛೆಯ ಪ್ರಕಾರವೇ ಮಾಡಿ ಮುಗಿಸಲು ಗ್ರಹಗಳ ಶುಭಾಶೀರ್ವಾದ ನಿಮ್ಮ ಪಾಲಿಗಿದೆ. ಮುಖ್ಯವಾದುದೊಂದು ಸರಿಯಾದ ವೇಳೆಗೆ ಕೈಗೆ ಸಿಗದೆ ಪರದಾಟವಾಗುವ ಸಂಗತಿ ಅಕ್ಟೋಬರ್‌ ಮಧ್ಯ ಭಾಗದ ನಂತರ ಸಂಭವನೀಯ. ಗುರುಬಲವನ್ನು ಈ ಸಮಯದ ಹೊತ್ತಿಗೆ ಕಳಕೊಳ್ಳಲಿದ್ದೀರಿ. ಕೃಷಿ ಜಮೀನು ಖರೀದಿಗೆ ಕಾಲ ಪಕ್ವವಾಗಿದೆ. ಭೂ ವರಾಹ ಸ್ವಾಮಿಯನ್ನು ಆರಾಧಿಸಿ. ಒಳಿತಾಗುತ್ತದೆ. 

 ಮೀನ
 ಗುರುಬಲ, ಅಕ್ಟೋಬರ್‌ ಮಧ್ಯದಲ್ಲಿ. ಅನೇಕ ಕೆಲಸಗಳನ್ನು ಮಾಡಿ ಮುಗಿಸಲು ಸಕಾಲವಿದು. ನಿಮ್ಮನ್ನು ಯಶಸ್ಸಿನ ಶಿಖರಕ್ಕೇರಿಸಲು ಬೇಕಾದ ಗ್ರಹಗಳ ಬಲ ಅಕ್ಟೋಬರ್‌ ನಂತರವೇ ಬರುವುದರಿಂದ ಮುಖ್ಯವಾದುದನ್ನು ಆ ನಂತರವೇ ನೆರವೇರಿಸಿಕೊಳ್ಳಲು ಮುಂದಾಗಿ. ಜಗನ್ಮಾತೆಯಾದ ಶ್ರೀ ಚಂಡಿಕಾ ದೇವಿಯನ್ನು ಆರಾಧಿಸಿ. ಗುರುಬಲದ ಕೊರತೆಯ ಮಧ್ಯೆಯೂ ಆಕೆ ವಿಶೇಷ ನಿಗೂಢ ಶಕ್ತಿಯನ್ನು ಒದಗಿಸಬಲ್ಲಳು. ವಿರೋಧಿಗಳನ್ನು ಎಚ್ಚರದಿಂದ ಎದುರಿಸಿ, ನಿಯಂತ್ರಿಸಿ. 

ಅನಂತಶಾಸ್ತ್ರಿ  ಮೊ: 8147824707

ಟಾಪ್ ನ್ಯೂಸ್

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.