ನೀವುಂಟು ನಿಮ್ಮ ನಕ್ಷತ್ರ ಉಂಟು…


Team Udayavani, May 26, 2018, 3:55 PM IST

544122.jpg

 ಜಾತಕದಲ್ಲಿ ಸ್ವಭಾವವನ್ನು ತೂಗಿ ನೋಡಲು ಚಂದ್ರ ತುಂಬಾ ಮುಖ್ಯನಾಗುತ್ತಾನೆ. ನಾವು ಹುಟ್ಟಿದ ಗಳಿಗೆಯನ್ನು ತೋರಿಸುವುದು ಲಗ್ನಭಾವ. ಯಾವ ರಾಶಿಯಲ್ಲಿ ಚಂದ್ರನಿರುತ್ತಾನೋ ಅದು ನಮ್ಮ ಜನ್ಮರಾಶಿಯಾಗುತ್ತದೆ.  ಲಗ್ನದಿಂದ ಎಷ್ಟನೇ ಮನೆಯಲ್ಲಿ  ಚಂದ್ರನಿರುತ್ತಾನೋ, ಅದರ ಮೇಲೆ ನಮ್ಮ ಗುಣಸ್ವಭಾವಗಳನ್ನು ನಿರ್ಣಯಿಸಬಹುದು. ಲಗ್ನದಿಂದ ಎರಡನೇ, ನಾಲ್ಕನೇ ಐದನೇ, ಏಳನೇ, ಒಂಭತ್ತನೇ, ಹತ್ತನೇ ಹಾಗೂ ಹನ್ನೊಂದನೇ ಮನೆಯಲ್ಲಿ ಚಂದ್ರನಿದ್ದರೆ ಶುಭ ಫ‌ಲಗಳು ಹೆಚ್ಚು.  

ಪುನರ್ವಸು, ಶಾಖ, ಪೂರ್ವಾಭಾದ್ರಾ ನಕ್ಷತ್ರಗಳಿಗೆ ಗುರು ಅಧಿಪತಿ. ಹೀಗಾಗಿ ಈ ನಕ್ಷತ್ರದಲ್ಲಿ ಜನಿಸಿದವರು ಶಾಂತ ಸ್ವಭಾವ ಹಾಗೂ ನಿಧಾನಸ್ಥರು. ಕೋಪ ಸಾಮಾನ್ಯವಾಗಿ ಬರಲ್ಲ. ಬಂದರೆ ಕಷ್ಟ. ಎಲ್ಲದಕ್ಕೂ ತುಂಬಾ ಯೋಚಿಸುತ್ತಾರೆ. ತೂಕದ ಆಲೋಚನೆಗಳು, ನಿರ್ಧಾರಗಳು ಇವರದಾಗಿರುತ್ತದೆ. ಎಲ್ಲರೂ ಗೌರವಿಸುವಂಥ ನಡೆನುಡಿಯವರಾಗಿರುತ್ತಾರೆ. ಎಲ್ಲರಿಗೂ ಪ್ರೀತಿಪಾತ್ರರಾಗಿರುತ್ತಾರೆ. ಕೊಂಚ ಸ್ಥೂಲಕಾಯದವರು. ಗೌರವಯುತವಾದ ಹುದ್ದೆಯಲ್ಲಿರುತ್ತಾರೆ. ಬರವಣಿಗೆಯಲ್ಲಿಯೂ ಆಸಕ್ತಿ ಇರುತ್ತದೆ. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಬದುಕಿನಲ್ಲಿ ಎಡವುವುದು ಕಡಿಮೆ. ನಿಧಾನವೇ ಪ್ರಧಾನ ಎಂಬಂಥ ಮನಸ್ಸು. ಯಾರಿಗೂ ಕೇಡಣಿಸದ ಮನಸ್ಸು ಇವರದ್ದಾಗಿರುತ್ತದೆ.   ಎಲ್ಲದರಲ್ಲಿಯೂ ಒಳ್ಳೆಯದನ್ನೇ ಕಾಣುವ ಪ್ರವೃತ್ತಿ. ಗಂಭೀರ ಸ್ವಭಾವ. ಚೆಲ್ಲು ಸ್ವಭಾವ ಇವರಿಗೆ ಹೇಳಿ ಮಾಡಿಸಿದ್ದಲ್ಲ. ಸಿಹಿತಿಂಡಿ ಪ್ರಿಯರು. ಒಳ್ಳೆಯ ಅಡುಗೆ ಮಾಡುವವರಾಗಿರುತ್ತಾರೆ. ಇದರಲ್ಲಿ ವಿಶಾಖ ನಕ್ಷತ್ರದವರು ಮಾತ್ರ ಮೂಡಿಯಾಗಿರುತ್ತಾರೆ. 

ಭರಣಿ, ಪೂರ್ವಾಫಾಲ್ಗುಣಿ
ಭರಣಿ, ಪೂರ್ವಾಫಾಲ್ಗುಣಿ, ಪೂರ್ವಾಷಾಢ ಈ ನಕ್ಷತ್ರಗಳಿಗೆ ಶುಕ್ರ ಅಧಿಪತಿ. ಶುಕ್ರನೆಂದರೆ ಸುಖ, ಸಮೃದ್ಧಿ, ಐಷಾರಾಮಿತನ. ಸೌಂದರ್ಯ ಹಾಗೂ ಕಲೆ. ಈ ನಕ್ಷತ್ರದಲ್ಲಿ ಜನಿಸಿದವರು ಜೊತೆ ಕೊಂಚ ಸ್ಥೂಲಕಾಯ ಹೊಂದಿರುತ್ತಾರೆ. ಮೋಜು ಮಸ್ತಿಯ ಸ್ವಭಾವದವರು. ಅಂದರೆ ಕೆಟ್ಟವರಲ್ಲ. ಬದುಕನ್ನು ಐಷಾಮಿಯಾಗಿ ಯಾವುದೇ ಕೊರತೆಗಳಿಲ್ಲದೆ ಸುಖವಾಗಿ ಕಳೆಯುತ್ತಾರೆ. ಸಂಗೀತ, ನಾಟ್ಯ, ನಟನೆ, ಬರವಣಿಗೆ, ಕಸೂತಿ, ಹೊಲಿಗೆ, ಹೆಣಿಗೆ ಹೀಗೆ ಯಾವುದಾದರೂ ಕಲೆಯಲ್ಲಿ ಪರಿಣಿತಿ ಹೊಂದಿರುತ್ತಾರೆ.  ಫ್ಯಾಷನ್‌ ಪ್ರಿಯರು. ಇವರು ಹಾಕುವ ಬಟ್ಟೆಗಳು, ಮಾಡುವ ಅಲಂಕಾರ ಕಣ್ಮನ ಸೆಳೆಯುವಂತಿರುತ್ತದೆ. ನೋಡಲೂ ಆಕರ್ಷಕರಾಗಿರುತ್ತಾರೆ. ಊಟತಿಂಡಿಯಲ್ಲೂ ವೈವಿಧ್ಯತೆಯನ್ನು ಬಯಸುತ್ತಾರೆ. ಕೆಲವು ಬಾರಿ ಈ ಮೋಜಿನ ಸ್ವಭಾವ ಅತಿರೇಕಕ್ಕೂ ಹೋಗಬಹುದು. (ಕುಡಿತ, ಧೂಮಪಾನ, ಜೂಜು ಇತ್ಯಾದಿ) ವಾತಾವರಣಕ್ಕೆ ತಕ್ಕಂತೆ ಬದಲಾಗುವ ಸ್ವಭಾವ. ತುಂಬಾ ನಂಬುವಂಥ ಸ್ವಭಾವವಲ್ಲ. ಏಕೆಂದರೆ ಅವರ ಅನುಕೂಲಕ್ಕೆ ತಕ್ಕಂತೆ ಯೋಚಿಸುವ ಮನಸ್ಸು. ಇವರು ಕಲೆಗಾರರಾಗಿರಬಹುದು, ಕಟ್ಟಡದ ವಿನ್ಯಾಸಕಾರರಾಗಿರಬಹುದು, ವಾಹನ/ಫ‌ರ್ನಿಚರ್‌ ಉದ್ದಿಮೆದಾರರಾಗಿರಬಹುದು, ಹೂವು, ಗಂಧ, ಬಳೆ ಮೊದಲಾದ ಅಲಂಕಾರಿಕ ವಸ್ತುಗಳ ವ್ಯಾಪಾರಸ್ಥರು ಆಗಿರಬಹುದು, ಕುಶಲಕರ್ಮಿಗಳಾಗಿರಬಹುದು. ಇಂಟೀರಿಯರ್‌ ಡಿಸೈನರ್‌ ಆಗಿರಬಹುದು. ವಿವಿಧ ವಿನ್ಯಾಸಗಳ ವಸ್ತ್ರಗಳಿಗೆ ಸಂಬಂಧಿಸಿದ ಉದ್ದಿಮೆದಾರರಾಗಿರಬಹುದು. ಇವರದ್ದು ನೂರು ಜನರಲ್ಲೂ ಎದ್ದು ಕಾಣುವ ವ್ಯಕ್ತಿತ್ವ. ಸ್ವಲ್ಪ ಹೆಚ್ಚೇ ಎನಿಸುವಷ್ಟು ರಸಿಕತೆ ಇವರಿಗಿರುತ್ತದೆ. 

ಪುಷ್ಯ, ಅನುರಾಧಾ
ಪುಷ್ಯ, ಅನೂರಾಧಾ, ಉತ್ತರಾಭಾದ್ರ ನಕ್ಷತ್ರಗಳಿಗೆ ಶನಿ ಅಧಿಪತಿ. ಹೀಗಾಗಿ ಈ ರಾಶಿಯವರೂ ಶನಿಯಂತೆಯೇ ಕೋಪಿಷ್ಠರೂ ಆಗಿರುತ್ತಾರೆ.  ಇದರಲ್ಲಿ ಅನೂರಾಧ ನಕ್ಷತ್ರದವರು ಕೊಂಚ ವಿಚಿತ್ರ ಸ್ವಭಾವದಿಂದ ಕೂಡಿರುತ್ತಾರೆ.  ಇವರು ಹೀಗೇ ಇರುತ್ತಾರೆ ಎನ್ನಲು ಆಗುವುದಿಲ್ಲ. ಅತಿ ಮಾತಿನವರಾಗಿರುತ್ತಾರೆ ಅಥವಾ ಮೌನವಾಗಿ ಚಿಪ್ಪಿನಲ್ಲಿ ಅಡಗಿಕೊಂಡಿರುವಂತಿರುತ್ತಾರೆ. ಆದರೆ ಮಾತು ಮಾತ್ರ ತೀಕ್ಷ್ಣ. ಬ್ಲೇಡಿನಂತೆ ಎರಡೂ ಬದಿ ಹರಿತ. ಎದುರಿನವರ ಮನ ನೋಯುವಂತೆ ಮಾತನಾಡಲೂ ಹಿಂಜರಿಯುವುದಿಲ್ಲ. ಆದರೆ ಕೆಲವರು ಮೌನಿಗಳಾಗಿಯೂ ಎದುರಿನವರಿಗೆ ಹಿಂಸೆ ಕೊಡುತ್ತಾರೆ. ಬುದ್ಧಿವಂತರಾಗಿದ್ದರೂ ಮಂದಸ್ವಭಾವದರೂ ಆಗಿರುತ್ತಾರೆ.  ಪುಷ್ಯ ಹಾಗೂ ಉತ್ತರಾಭಾದ್ರ ನಕ್ಷತ್ರದವರು ಕೊಂಚ ಭಿನ್ನವಾಗಿರುತ್ಥಾರೆ. ಸೃಜನಶೀಲರಾಗಿರುತ್ತಾರೆ.  ಅವರ ಸ್ವಭಾವವೂ ಕಠಿಣವೇ ಆದರೂ ಕೆಲವು ಸಮಯದಲ್ಲಿ ಮಾತ್ರ ಆ ಕಠಿಣತೆ, ಮಿಕ್ಕಸಮಯದಲ್ಲಿ ಮೃದುಧೋರಣೆ ಇರುತ್ತದೆ. ಉಡುಗೆ ತೊಡುಗೆ ಸಾಧಾರಣ. ಕಷ್ಟಜೀವಿಗಳು. ಯಾವುದೇ ಕೆಲಸ ಮಾಡಿದರೂ ಅತಿ ಒತ್ತಡದ ಕೆಲಸವೇ ಇವರಿಗೆ ಸಿಗುವುದು. ಶ್ರಮಿಕರು. ಒರಟುತನವೂ ಇರುತ್ತದೆ. ಕೊಂಚ ಅಹಂಕಾರಿಗಳ ಥರಾ ಕಾಣುತ್ತಾರಾದರೂ ಹಾಗಲ್ಲ. ಆದರೆ ಮೋಸ ವಂಚನೆ ಇಲ್ಲ. ಇನ್ನೊಬ್ಬರನ್ನು ನಂಬಿ ತಾವೇ ಮೋಸ ಹೋಗುತ್ತಾರೆ. 

ಸ್ವಾತಿ, ಶತಭಿಷಾ
ಆರಿದ್ರಾ, ಸ್ವಾತಿ, ಶತಭಿಷಾ ನಕ್ಷತ್ರಕ್ಕೆ ಅಧಿಪತಿ ರಾಹು. ಹೀಗಾಗಿ ಇವರ ಸ್ವಭಾವ ಕಠಿಣವೂ ಒರಟಾಗಿಯೂ ಇರುತ್ತದೆ. ಹೇಳಿಕೇಳಿ ರಾಹು ಕ್ರೂರ ಗ್ರಹ. ಇವರ ಸ್ವಭಾವದಲ್ಲಿ ಕ್ರೂರತೆಯೂ ಇರುತ್ತದೆ. ಅದು ಅವರು ಹುಟ್ಟಿದ ಲಗ್ನ, ಜನ್ಮರಾಶಿಗೆ ತಕ್ಕಂತೆ ಬದಲಾಗುತ್ತದೆ. ಇದರಲ್ಲಿ ಶತಭಿಷಾ ನಕ್ಷತ್ರದವರು ಮಾತನಾಡಿದರೆ ಮುಳ್ಳಿನ ಚಾಟಿಯೇಟಿನಂತೆ ತೀಕ್ಷ್ಣವಾಗಿರುತ್ತದೆ ಅನ್ನೋದು ಗೊತ್ತಿರಲಿ.  ಇವರು ಎಲ್ಲರನ್ನೂ ಎಲ್ಲವನ್ನೂ ಸಂಶಯದಿಂದಲೇ ನೋಡುವ ಸ್ವಭಾವದವರು.  ಯಾರನ್ನೂ ಸುಲಭಕ್ಕೆ ನಂಬುವುದಿಲ್ಲ. ಸ್ವಾತಿ ನಕ್ಷತ್ರದವರೂ ಇದಕ್ಕೆ ಹೊರತಲ್ಲ. ಇವರೂ ಯಾರನ್ನೂ ನಂಬುವುದಿಲ್ಲ ಹಾಗೂ ಇದು ಹೀಗೇ ಅಥವಾ ಇವರು ಹೀಗೇ ಎಂದು ಗೇಜ್‌ ಮಾಡುವ ಬುದ್ದಿವಂತಿಕೆ ಕಡಿಮೆ. ಅದರಲ್ಲೂ ಶತಭಿಷ ನಕ್ಷತ್ರದವರು ದುಡುಕು ಸ್ವಭಾವದವರು. ಬೇಡದ್ದನ್ನು ಮಾತನಾಡುವುದು ಹೆಚ್ಚು  ಹಾಗೂ ವಾತಾವರಣವನ್ನು ತಮ್ಮ ಊಹೆಗೆ ತಕ್ಕಂತೆ ಅರ್ಥೈಸಿಕೊಳ್ಳುತ್ತಾರೆ.  ಈ ಸ್ವಭಾವದಿಂದಾಗಿಯೇ ಇವರಿಗೆ ಸಿಗುವ ಹಾಗೂ ಯೋಗ್ಯವಾದ ಅವಕಾಶಗಳು ತಪ್ಪಿಹೋಗುತ್ತವೆ. ಕೆಲವು ಸಲ ಸಮಾಜದ ಅವಗಣನೆಗೂ ತುತ್ತಾಗುವುದು ಉಂಟು. 

ಸ್ವಾತಿ ನಕ್ಷತ್ರದವರು ಕೊಂಚ ಸ್ಥೂಲದೇಹಿಗಳು ಹಾಗೂ ಸೋಮಾರಿಗಳು. ಅತೀ ಮಾತುಗಾರರು.  ಈ ಇಬ್ಬರಿಗೂ ಜೀವನ ನಿರ್ವಹಣೆಗೇನೂ ತೊಂದರೆ ಇರುವುದಿಲ್ಲ. ಶತಭಿಷಾ, ಸ್ವಾತಿಗಿಂತ ಆರಿದ್ರಾ ನಕ್ಷತ್ರದವರು ವಾಸಿ. ಸಿಕ್ಕ ಅವಕಾಶವನ್ನು ಉಪಯೋಗಿಒಸಿಕೊಂಡು ಬದುಕಲ್ಲಿ ಮುಂದೆ ಬರುವ ಗುಣ ಹೊಂದಿರುತ್ತಾರೆ. ತಮಗೆ ಒಳ್ಳೆಕಾಲ ಬರುವ ತನಕವೂ ತಾಳ್ಮೆಯಿಂದ ಕಾಯುತ್ತಾರೆ. ಅವರ ಕ್ಷೇತ್ರದಲ್ಲಿ ಒಂದು ಯೋಗ್ಯ ಮಟ್ಟದ ಸ್ಥಾನಮಾನವನ್ನು ಗಳಿಸಿಕೊಳ್ಳುತ್ತಾರೆ. ಉನ್ನತ ಮಟ್ಟದ ಅವಕಾಶಗಳು ಕಡಿಮೆ. ಈ ಮೂರೂ ನಕ್ಷತ್ರದವರಿಗೂ ರಸಿಕತೆ ಕಡಿಮೆ. ಒಂಥರಾ ಒಣ ಒಣ ಸ್ವಭಾವ ಇವರದು.  

 ಅಶ್ವಿ‌ನಿ, ಮುಖಾ, ಮೂಲನಕ್ಷತ್ರ
ಆಶ್ವಿ‌ನಿ, ಮಖಾ ಹಾಗೂ ಮೂಲ ನಕ್ಷತ್ರಗಳಿಗೆ ಕೇತುವೇ ಅಧಿಪತಿ.  ಹೀಗಾಗಿ ಈ ನಕ್ಷತ್ರದವರು ಏಕ್‌ ಮಾರ್‌ ದೋ ತುಕುಡಾ ಅನ್ನೋ ಸ್ವಭಾವದವರು. ಅನಿಸಿದ್ದನ್ನು ಯಾವ ಮುಲಾಜಿಲ್ಲದೆ ಹೇಳಿಬಿಡುತ್ತಾರೆ. ಬೇರೆಯವರ ಮನಸ್ಸಿಗೆ ನೋವುಂಟು ಮಾಡುವ ಉದ್ದೇಶವಿಲ್ಲದಿದ್ದರೂ ಅವರ ಮಾತಿನಿಂದ ಬೇರೆಯವರಿಗೆ ನೋವಾಗುತ್ತದೆ. ಶಿಸ್ತಿನವರು, ಶಿಸ್ತು ಎಂದರೆ ಮಿಲಿಟರಿಯವರ ಶಿಸ್ತು. ಬೇರೆಯವರಿಂದಲೂ ಅದೇ ಶಿಸ್ತು ನಿರೀಕ್ಷಿಸುತ್ತಾರೆ. ಹಠ ಜಾಸ್ತಿ. ಒಂಥರ ಮೊಂಡುತನ, ಭಂಡತನ. ನಿಷ್ಠುರ ಸ್ವಭಾವ. ಯಾರದ್ದಾದರೂ ಸ್ವಭಾವ ತಮಗೆ ಹಿಡಿಸದಿದ್ದರೆ ಅಂಥವರನ್ನು ಅಲಕ್ಷಿಸಿಬಿಡುತ್ತಾರೆ. ಯಾರನ್ನಾದರೂ ದೂರ ಮಾಡಬೇಕೆಂದರೂ ಅಷ್ಟೇ ಸುಲಭ ಇವರಿಗೆ. ಮುಲಾಜಿಲ್ಲದೆ ದೂರ ಮಾಡಿಬಿಡುತ್ತಾರೆ. ಯಾವುದೇ, ಯಾರದೇ ಹಂಗಿಗೂ ಸಿಲುಕುವುದಿಲ್ಲ. ಜೀವನದಲ್ಲಿ ಒಳ್ಳೆಯ ಸ್ಥಾನಮಾನ, ಹಣಕಾಸು, ಎಲ್ಲವೂ ಇವರಿಗೆ ದೊರೆಯುತ್ತದೆ. ಆದರೆ ಒಂದು ಮಟ್ಟದವರೆಗೂ ಬಹಳ ಕಷ್ಟ ಪಡುತ್ತಾರೆ. ಭಾವಜೀವಿಗಳಲ್ಲ. ತೀರಾ ವಾಸ್ತವವಾದಿಗಳು. ಅಭಿರುಚಿ ಇರಬಹುದು ಅಥವಾ ಅನಿವಾರ್ಯತೆ ಇರಬಹುದು. ತಿರುಗಾಟ ಹೆಚ್ಚು. ಊಟ ತಿಂಡಿ ಇಂಥದ್ದೇ ಇರಬೇಕೆಂದೇನೂ ಇಲ್ಲ. ಆದರೆ ರುಚಿ ಇರಬೇಕು. ಮಾಡುವ ಕೆಲಸ ಅಚ್ಚುಕಟ್ಟಾಗಿರಬೇಕು. ವೃತ್ತಿಯಲ್ಲಿ ನಿಷ್ಠಾವಂತರು. ಒಂದೇ ವೃತ್ತಿಯಲ್ಲಿ ಅಂಟಿಕೊಂಡಿರುತ್ತಾರೆ. 

  ಜಾತಕದಲ್ಲಿ ಸ್ವಭಾವವನ್ನು ತೂಗಿ ನೋಡಲು ಚಂದ್ರ ತುಂಬಾ ಮುಖ್ಯನಾಗುತ್ತಾನೆ. ನಾವು ಹುಟ್ಟಿದ ಗಳಿಗೆಯನ್ನು ತೋರಿಸುವುದು ಲಗ್ನಭಾವ. ಯಾವ ರಾಶಿಯಲ್ಲಿ ಚಂದ್ರನಿರುತ್ತಾನೋ ಅದು ನಮ್ಮ ಜನ್ಮರಾಶಿಯಾಗುತ್ತದೆ.  ಲಗ್ನದಿಂದ ಎಷ್ಟನೇ ಮನೆಯಲ್ಲಿ  ಚಂದ್ರನಿರುತ್ತಾನೋ, ಅದರ ಮೇಲೆ ನಮ್ಮ ಗುಣಸ್ವಭಾವಗಳನ್ನು ನಿರ್ಣಯಿಸಬಹುದು. ಲಗ್ನದಿಂದ ಎರಡನೇ, ನಾಲ್ಕನೇ ಐದನೇ, ಏಳನೇ, ಒಂಭತ್ತನೇ, ಹತ್ತನೇ ಹಾಗೂ ಹನ್ನೊಂದನೇ ಮನೆಯಲ್ಲಿ ಚಂದ್ರನಿದ್ದರೆ ಶುಭ ಫ‌ಲಗಳು ಹೆಚ್ಚು.  ಆದರೆ ಚಂದ್ರನಿಗೆ ಯಾವ ಕ್ರೂರ ಗ್ರಹದ ದೃಷ್ಟಿಯೂ ತಾಕಿರಬಾರದು.  ಅಂದರೆ ರಾಹು 
ಶನಿ ಇವರಿಂದ ಚಂದ್ರ ದೂರವಿರಬೇಕು. ಯಾವುದೇ ಮನೆಯಲ್ಲಾಗಲೀ, ಚಂದ್ರ ರಾಹುವಿನೊಟ್ಟಿಗೆ ಅಥವಾ ಶನಿಯ ಒಟ್ಟಿಗೆ ಇದ್ದರೆ ಆ ಮನೆಯ ಚಂದ್ರನ ಫ‌ಲಗಳಲ್ಲಿ ದೋಷವುಂಟಾಗುತ್ತದೆ. ಚಂದ್ರನು ಮನಸ್ಸನ್ನು ಪ್ರತಿನಿಧಿಸುತ್ತಾನೆ. ಚಂದ್ರಃ ಮನಸೋ ಜಾತಃ ಎನ್ನುತ್ತಾರೆ. ಶುದ್ಧ ಹಾಲಿಗೆ ಒಂದು ತೊಟ್ಟು ಹುಳಿ ಹಿಂಡಿದರೂ ಅದು ಹಾಲಾಹಲವಾಗುತ್ತದೆ.  ಹಾಗೆಯೇ ಚಂದ್ರನೂ ಹಾಲಿನಂತವನು. ಅವನ ಮೇಲೆ ಶನಿಯ ದೃಷ್ಟಿಯಾಗಲೂ ರಾಹುವಿನ ದೃಷ್ಟಿಯಾಗಲೀ ಬೀಳಬಾರದು. ಹಾಗೂ ಸೂರ್ಯನಿಗೆ ಅತಿ ಸಮೀಪನಾಗಿದ್ದರೂ, ಚಂದ್ರ ಸೂರ್ಯನ ಪ್ರಖರತೆಗೆ ಮಂಕಾಗಿ ಬಿಡುತ್ತಾನೆ. ಈ ಎಲ್ಲ ದೋಷಗಳಿಂದ ಮುಕ್ತನಾಗಿದ್ದರೆ ಮಾತ್ರ ಚಂದ್ರನು ಹೆಚ್ಚು ಶುಭಫ‌ಲಗಳನ್ನು ದಯಪಾಲಿಸುತ್ತಾನೆ. 
ಇದರ ಬಗ್ಗೆ ಇನ್ನಷ್ಟು ವಿಷಯಗಳನ್ನು ಮುಂದಿನವಾರ ತಿಳಿಯೋಣ. 

 ವೀಣಾ ಚಿಂತಾಮಣಿ

ಟಾಪ್ ನ್ಯೂಸ್

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.