ಬದುಕಿನ ಬಾನಿಗೆ ಚಂದ್ರ ಬೆಳಕು ಇರಬೇಕು…!


Team Udayavani, Jun 2, 2018, 11:18 AM IST

2-b.jpg

ಐದನೇ ಮನೆ ಚಂದ್ರನಿದ್ದರೆ ಪೂರ್ವ ಪುಣ್ಯಸ್ಥಾನ ಭದ್ರವಾಗಿರುತ್ತದೆ. ಅಂದರೆ ಹಿಂದಿನ ಜನ್ಮದ ಪುಣ್ಯದ ಖಾತೆ ಬಲವಾಗಿದ್ದು ಈ ಜನ್ಮದಲ್ಲಿ ಅದು ನಮ್ಮನ್ನು ಆಪತ್ತುಗಳಿಂದ ರಕ್ಷಿಸುತ್ತದೆ. ಐದನೇ ಮನೆ ವಿದ್ಯಾಸ್ಥಾನವೂ ಆದ್ದರಿಂದ ಈ ಜಾತಕದವರು ವಿದ್ಯಾವಂತರೂ, ವಿದ್ವಾಂಸರೂ ಆಗಿರುತ್ತಾರೆ. 

ಎರಡನೇ ಮನೆ ವಾಕ್‌ ಸ್ಥಾನ, ಧನಸ್ಥಾನ ಹಾಗೂ ಕುಟುಂಬಸ್ಥಾನವನ್ನು ಸೂಚಿಸುತ್ತದೆ.  ಎರಡನೇ ಮನೆಯಲ್ಲಿ ಚಂದ್ರನಿದ್ದರೆ ಜೀವನ ಪ್ರಶಾಂತವಾಗಿ ಕಳೆದುಹೋಗುತ್ತದೆ. ಚಂದ್ರನು ಹೆಣ್ಣುಗ್ರಹ  ಅಂದರೆ ಮೃದು ಸ್ವಭಾವವನ್ನು ಸೂಚಿಸುತ್ತಾನೆ. ಜಾತಕದಿಂದ ಎರಡನೇ ಮನೆಯಲ್ಲಿ ಚಂದ್ರನಿದ್ದರೆ ನಾವಾಡುವ ಮಾತುಗಳು ಮೃದುವಾಗಿ ಇರುತ್ತವೆ. ಕೆಟ್ಟ ಮಾತುಗಳು ನಮ್ಮಿಂಂದ ಹೊರಬೀಳುವುದು ಕಡಿಮೆ. ಚಂದ್ರ ಎರಡನೇ ಮನೆಯಲ್ಲಿ ಇದ್ದರೆ ಆ ಜಾತಕದವರು ಮೃದು ಸ್ವಭಾವದವರು.  ಸ್ತ್ರೀಯರ ಕಡೆಯಿಂದ ಬದುಕಿನಲ್ಲಿ ಸಹಾಯವಾಗುತ್ತದೆ. ಅಂದರೆ ಸಹೋದರಿಯರು, ತಾಯಿ, ಹೆಂಡತಿ, ಸ್ನೇಹಿತೆ ಹೀಗೆ ಯಾರಾದರೂ ಅವರ ಬದುಕಿಗೆ ಬೆಳಕಾಗುತ್ತಾರೆ. ಚಂದ್ರ ತಾಯಿಯನ್ನು ಸೂಚಿಸುವುದರಿಂದ ಚಂದ್ರನು ಜಾತಕದಲ್ಲಿ ಬಲವಾಗಿದ್ದರೆ ತಾಯಿ ಸೌಖ್ಯ ನಿರಂತರವಾಗಿರುತ್ತದೆ. ತಾಯಿಯಿಂದ ಬೆಂಬಲ, ಹಣಕಾಸಿನ ಸಹಾಯ, ತಾಯಿ ಮನೆಕಡೆಯಿಂದ ಆಸ್ತಿ ದೊರೆಯುವುದು ಮುಂತಾದ ಅನುಕೂಲಗಳಿರುತ್ತವೆ. ಚಂದ್ರ ಎರಡನೇ ಮನೆಯಲ್ಲಿ ಇರುವ ಜಾತಕದವರ ಮನೆಯಲ್ಲಿ ಜಗಳ ಕಡಿಮೆ. ಗೃಹದಲ್ಲಿ ಶಾಂತಿ ಇರುತ್ತದೆ. ಹಣದ ಹರಿವು ಉತ್ತಮವಾಗಿರುತ್ತದೆ. 

ನಾಲ್ಕನೆ ಮನೆ ದಿಕºಲ
ಚಂದ್ರನಿಗೆ ಲಗ್ನದಿಂದ ನಾಲ್ಕನೆ ಮನೆ ದಿಕºಲ. ಚಂದ್ರ ತನ್ನ ಉತ್ಛ ರಾಶಿಯಾದ ವೃಷಭದಲ್ಲಿ, ಸ್ವಂತ ಮನೆಯಾದ ಕಟಕದಲ್ಲಿ ಹೆಚ್ಚು ಶಕ್ತಿವಂತ. ಮೂಲತ್ರಿಕೋಣ ಸ್ಥಾನವೂ ವೃಷಭರಾಶಿಯೇ ಆದ್ದರಿಂದ ವೃಷಭ ರಾಶಿಯ ಜಾತಕದವರು ಚಂದ್ರನಿಂದ ಹೆಚ್ಚು ಅನುಕೂಲಗಳನ್ನು ಪಡೆಯುತ್ತಾರೆ. ಇವರು ರೂಪವಂತರೂ, ಸಮಾಧಾನಿಗಳೂ ಆಗಿರುತ್ತಾರೆ. ಚಂದ್ರನಂತೆಯೇ ತಂಪು ಸ್ವಭಾವ ಇವರದ್ದಾಗಿರುತ್ತದೆ. ಇದಲ್ಲದೆ ಲಗ್ನದಿಂದ ನಾಲ್ಕನೆ ಮನೆ ಚಂದ್ರನಿಗೆ ಮತ್ತೂಂದು ಬಲಾಡ್ಯ ಸ್ಥಾನವಾಗಿದೆ. ಇದು ಯಾವುದೇ ರಾಶಿ ಇರಬಹುದು ಇಲ್ಲಿ ಚಂದ್ರ ಶಕ್ತಿವಂತ. ನಾಲ್ಕನೇ ಮನೆ ಅಷ್ಟಸುಖ ಸೌಭಾಗ್ಯಗಳನ್ನು ಕೊಡುವ ಮನೆ. ಈ ಮನೆಯಲ್ಲಿ ಚಂದ್ರನಿದ್ದರೆ ಅದು ಯಾವುದೇ ರಾಶಿಯಾಗಿದ್ದರೂ ಪರವಾಗಿಲ್ಲ. ಚಂದ್ರನಿಗೆ ವಿಶೇಷ ಶಕ್ತಿ ಇರುತ್ತದೆ. ಜಾತಕದಿಂದ ನಾಲ್ಕನೇ ಮನೆಯಲ್ಲಿ ಚಂದ್ರನಿದ್ದರೆ  ಆ ಜಾತಕದವರ ಜೀವನ ಸುಗಮವಾಗಿ ಸಾಗುತ್ತದೆ. ಏರು ಪೇರುಗಳಿದ್ದರೂ ಯಶಸ್ವಿಯಾಗಿ ಮುನ್ನಡೆಯುತ್ತಾರೆ. ನಾಲ್ಕನೆ ಮನೆ ಚಂದ್ರ ಹತ್ತನೇ ಮನೆಯನ್ನೂ ನೋಡುವುದರಿಂದ, ಹತ್ತನೇ ಮನೆ ಕರ್ಮ ಸ್ಥಾನವಾಗಿರುವುದರಿಂದ ಈ ಜಾತಕದವರು ಒಳ್ಳೆಯ ಉದ್ಯೋಗದಲ್ಲಿಯೂ ಇರುತ್ತಾರೆ. ತುಲಾ ಲಗ್ನವಾಗಿ ನಾಲ್ಕನೇ ಮನೆ ಮಕರ ರಾಶಿಯಾದರೆ ಚಂದ್ರ ಹತ್ತನೇ ಮನೆಯಾದ ಕಟಕರಾಶಿಯನ್ನೂ ನೋಡುತ್ತಾನೆ. ಕಟಕ ರಾಶಿ ಚಂದ್ರನ  ಸ್ವಂತ ಮನೆಯಾದ್ದರಿಂದ ಹತ್ತನೇ ಮನೆಗೆ ಚಂದ್ರನ ಬಲವಾದ ದೃಷ್ಟಿಯೇ ಇರುತ್ತದೆ. ಹೀಗಾಗಿ ಈ ಜಾತಕದವರು ತಮ್ಮ ಕರ್ಮಕ್ಷೇತ್ರದಲ್ಲಿ ನಾಯಕರಾಗಿರುತ್ತಾರೆ. ಬಾಸ್‌ ಆಗಿರುತ್ತಾರೆ. ಇಂಥವರು ಯಾರಿಗೂ ಅಂಜುವುದಿಲ್ಲ. ಕಿರಿಕಿರಿಗಳನ್ನೂ ಸಹಿಸುವುದಿಲ್ಲ. ಪ್ರತಿಕೂಲ ಪರಿಸ್ಥಿತಿಗಳನ್ನು ಶಾಂತವಾಗಿ ಸ್ವೀಕರಿಸಿ ನಿರುದ್ವೇಗದಿಂದ ಇರುತ್ತಾರೆ. ತಮ್ಮ ಸುತ್ತಲಿನ ವಾತಾವರಣವನ್ನೂ ಶಾಂತವಾಗಿಡುತ್ತಾರೆ. ಯಾರ ವಶೀಲಿಗೂ ಮಣಿಯುವುದಿಲ್ಲ. ಸಿಂಹ ಲಗ್ನವಾಗಿ ನಾಲ್ಕನೇ ಮನೆ ವೃಶ್ಚಿಕವಾದರೆ ಹತ್ತನೇ ಮನೆ ಚಂದ್ರನಿಗೆ ಉತ್ಛಸ್ಥಾನವಾದರೂ ಈ ಶಕ್ತಿ ಇರುವುದಿಲ್ಲ. ಏಕೆಂದರೆ ಸಿಂಹ ಲಗ್ನಕ್ಕೆ ವೃಶ್ಚಿಕರಾಶಿ ನಾಲ್ಕನೇ ಮನೆಯಾದರೂ ಇದು ನೀಚರಾಶಿ. ಚಂದ್ರನಿಗೆ ಇಲ್ಲಿ ಬಲ ಕಡಿಮೆ. ಚಂದ್ರನಿಗೆ ಶಕ್ತಿ ಕೊಡಲು ಜೊತೆಯಲ್ಲಿ ಗುರು ಅಥವಾ ಕುಜನಿದ್ದರೆ ಶೇ.80ರಷ್ಟು  ಶುಭ ಫ‌ಲಗಳನ್ನು ನಿರೀಕ್ಷಿಸಬಹುದು. ಆದರೂ ಮಕರ ರಾಶಿಯವರಿಗೆ ಸಿಗುವ ಪರಿಪೂರ್ಣತೆ ಇವರಿಗೆ ಸಿಗುವುದಿಲ್ಲ. 

ಐದನೇ ಮನೆಯಲ್ಲಿದ್ದರೆ…
ಐದನೇ ಮನೆ ಚಂದ್ರನಿದ್ದರೆ ಪೂರ್ವ ಪುಣ್ಯಸ್ಥಾನ ಭದ್ರವಾಗಿರುತ್ತದೆ. ಅಂದರೆ ಹಿಂದಿನ ಜನ್ಮದ ಪುಣ್ಯದ ಖಾತೆ ಬಲವಾಗಿದ್ದು ಈ ಜನ್ಮದಲ್ಲಿ ಅದು ನಮ್ಮನ್ನು ಆಪತ್ತುಗಳಿಂದ ರಕ್ಷಿಸುತ್ತದೆ. ಐದನೇ ಮನೆ ವಿದ್ಯಾಸ್ಥಾನವೂ ಆದ್ದರಿಂದ ಈ ಜಾತಕದವರು ವಿದ್ಯಾವಂತರೂ, ವಿದ್ವಾಂಸರೂ ಆಗಿರುತ್ತಾರೆ. ಐದನೇ ಮನೆ ಸಂತಾನ ಕ್ಷೇತ್ರವೂ ಹೌದು. ಜಾತಕದಲ್ಲಿ ಐದನೇ ಮನೆಯಲ್ಲಿ ಚಂದ್ರನಿದ್ದರೆ ಅಂಥವರಿಗೆ ಹೆಣ್ಣುಮಕ್ಕಳೂ ಹೆಚ್ಚು. ಆದರೆ ಸಿಂಹ, ಧನುಸ್ಸು, ವೃಶ್ಚಿಕ. ಮೇಷ, ಮೀನ ಈ ರಾಶಿಗಳೂ ಐದನೇ ಮನೆಯಾಗಿದ್ದು ಇಲ್ಲಿ ಚಂದ್ರನಿದ್ದರೆ ಅವರಿಗೆ ಹೆಣ್ಣು ಗಂಡು ಎರಡೂ ಸಂತಾನ ಪ್ರಾಪ್ತಿ ಉಂಟು. 

ಲಗ್ನಭಾವದಿಂದ ಏಳನೇ ಮನೆ ಕಳತ್ರ ಸ್ಥಾನ, ಅಂದರೆ ಸಂಗಾತಿ ಸ್ಥಾನ. ಇಲ್ಲಿ ಚಂದ್ರನಿದ್ದರೆ ಅಂಥವರಿಗೆ ಸೌಮ್ಯ ಸ್ವಭಾವದ ಗುಣಶೀಲರಾದ, ಉತ್ತಮ ಸಂಸ್ಕಾರವಿರುವ ವಿದ್ಯಾವಂತರಾದ ಮತ್ತು ರೂಪವಂತರಾದ ಸಂಗಾತಿ ದೊರೆಯುತ್ತಾರೆ. ಆದರೆ ಚಂದ್ರನ ಜೊತೆ ರಾಹು ಅಥವಾ ಶನಿ ಇದ್ದರೆ ಕೋಪಿಷ್ಟ, ಪಾಪಿಷ್ಟ, ಜಗಳಗಂಟ, ಅಸೂಯಾಭರಿತ ಸಂಗಾತಿ ದೊರೆಯಬಹುದು. ವಿವಾಹ, ನಿಧಾನವೂ ಆಗಬಹುದು. ಸುರೂಪಿಯಲ್ಲದ ಸಂಗಾತಿ ದೊರೆಯಬಹುದು. 

ಒಂಭತ್ತನೇ ಮನೆ ಭಾಗ್ಯ ಸ್ಥಾನ. ಇಲ್ಲಿ ಚಂದ್ರನಿದ್ದರೆ ತಾಯಿ ತಂದೆಯರ ಭಾಗ್ಯ ಚೆನ್ನಾಗಿರುವುದಲ್ಲದೆ ಬಾಳಿನಲ್ಲಿ ಭಾಗ್ಯವಂತ‌ರೂ ಆಗಿರುತ್ತಾರೆ. ವಿದೇಶ ಪ್ರವಾಸಯೋಗ, ಆಗಾಗ ವಿಹಾರ ಸ್ಥಳಗಳಿಗೆ ಪ್ರವಾಸ ಮಾಡುವ ಭಾಗ್ಯ ಇರುತ್ತದೆ. ಒಂಬತ್ತನೇ ಮನೆಯಲ್ಲಿ ಚಂದ್ರನಿದ್ದರೆ ಅಥವಾ ಯಾವುದೇ ಶುಭಗ್ರಹವು ಇದ್ದರೂ ಅವರು ನಿಷ್ಠಾವಂತರೂ, ಸತ್ಯವಂತರೂ, ಪ್ರಾಮಾಣಿಕರೂ ಆಗಿರುತ್ತಾರೆ. ಯಾರಿಗೂ ಕೆಡುಕನ್ನು ಉಂಟುಮಾಡರು. ಧರ್ಮ ಕರ್ಮದ ಬಗ್ಗೆ ಯೋಚಿಸುತ್ತಾರೆ. 

ಹತ್ತಮನೆಯಲ್ಲಿ 
ಹತ್ತನೇ ಮನೆಯಲ್ಲಿ ಚಂದ್ರನಿದ್ದರೆ ಬಹುದೊಡ್ಡ ಸಂಸ್ಥೆಯಲ್ಲಿ ಉದ್ಯೋಗದಲ್ಲಿ ಇರುತ್ತಾರೆ. ಉನ್ನತ ಹುದ್ದೆಯಲ್ಲಿ ಇರುತ್ತಾರೆ. ಹತ್ತನೇ ಮನೆ ವೃಷಭ ಅಥವಾ ಕಟಕ ರಾಶಿಯಾದರೆ ಸ್ವಂತ ಉದ್ಯೋಗಿಯಾಗುವ ಭಾಗ್ಯವೂ ಇವರದಾಗಿರುತ್ತದೆ. ಇವರೇ ಒಂದು ಸಂಸ್ಥೆಯನ್ನು ಆರಂಭಿಸಿ ಅನೇಕರಿಗೆ ಉದ್ಯೋಗ ನೀಡುವಂಥವರಾಗಿರುತ್ತಾರೆ. ಬಹುಸಂಸ್ಥೆಗಳ ಒಡೆಯರಾಗಿರುವ ಭಾಗ್ಯವೂ ಇರುತ್ತದೆ. ಉದ್ಯೋಗದಲ್ಲಿ ಬಹು ಬೇಗನೆ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾರೆ.  ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಶಾಂತ ಸ್ವಭಾವದವರಾಗಿ ತಮ್ಮ ಸಂಸ್ಥೆಯನ್ನು ತಮ್ಮ ಕೈಕೆಳಗೆ ಕೆಲಸ ಮಾಡುವವರನ್ನು ಯಶಸ್ವಿಯಾಗಿ ಮುನ್ನಡಿಸಿಕೊಂಡು ಹೋಗುತ್ತಾರೆ. ಹತ್ತನೇ ಮನೆಯಲ್ಲಿ ಚಂದ್ರನಿದ್ದರೆ ಇಂಥವರು ವೈದ್ಯರೂ ಆಗಿರುತ್ತಾರೆ, ಮತ್ತು ನೌಕಾದಳದಲ್ಲೂ (ನೇ) ಉದ್ಯೋಗ ಮಾಡುವ ಅವಕಾಶವಿರುತ್ತದೆ. 

ಹನ್ನೊಂದನೇ ಮನೆಯಲ್ಲಿ ಚಂದ್ರನಿದ್ದರೆ ಇವರು ಹಾಲು, ಮೊಸರು, ಹೂ, ಐಸ್‌ ಕ್ರೀಂ, ತಂಪು ಪಾನೀಯ ಮುಂತಾದ ವ್ಯಾಪಾರಗಳನ್ನು ಮಾಡಿ ಲಾಭಗಳಿಸುತ್ತಾರೆ. ದೇಶ ವ್ಯವಹಾರವೂ ಇವರಿಗೆ ಸಿದ್ಧಿಸುತ್ತದೆ. ಹನ್ನೊಂದನೆಯ ಮನೆಯ ಚಂದ್ರ  ಸಜ್ಜನರಾದ ಸ್ನೇಹಿತರನ್ನು ಕೊಡುತ್ತಾನೆ. ತಾಯಿ ಮಗನ ಸಂಬಂಧ ಅನ್ಯೋನ್ಯತೆಯಿಂದ ಕೂಡಿರುತ್ತದೆ. ಇಂಥವರಿಗೆ ತಾಯಿಯ ಬೆಂಬಲ ಹೆಚ್ಚು. ಲಗ್ನದಿಂದ ಹನ್ನೊಂದನೆಯ ಮನೆಯಾಗಿ ಚಂದ್ರ, ವೃಷಭ, ಕಟಕ, ಸಿಂಹ, ಧನುಸ್ಸು, ಮೀನ ಮೇಷ ಈ ರಾಶಿಗಳಲ್ಲಿ ಇದ್ದರೆ ಮತ್ತೂ ಅನುಕೂಲ.  

ರೋಣಿ, ಹಸ್ತಾ ಮತ್ತು ಶ್ರವಣ ಇವು ಚಂದ್ರನ ನಕ್ಷತ್ರಗಳಾಗಿವೆ. ಈ ನಕ್ಷತ್ರಗಳಲ್ಲಿ ಹುಟ್ಟಿದವರು ಸ್ವಭಾವತಃ ಶಾಂತಚಿತ್ತರೂ, ಸಹನೆಯುಳ್ಳವರೂ, ಒಳ್ಳೆಯ ದಿನಗಳಿಗಾಗಿ ನಿರೀಕ್ಷಿಸುವವರೂ, ಗುಣಾತ್ಮಕ ಮನೋಭಾವದವರೂ ಆಗಿರುತ್ತಾರೆ. ನೋವನ್ನು ಅನುಭಸಿದರೂ ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ಈ ನಕ್ಷತ್ರಗಳಲ್ಲಿ ಹುಟ್ಟಿ ಆ ರಾಶಿ ಲಗ್ನದಿಂದ ಒಳ್ಳೆಯ ಮನೆಯಲ್ಲಿದ್ದರೆ ಅಂಥವರು ಖಂಡಿತವಾಗಿಯೂ ದೊಡ್ಡ ಮನುಷ್ಯರಾಗಿ ಬಾಳುತ್ತಾರೆ. ಗೌರವಸ್ಥರಾಗಿರುತ್ತಾರೆ. 

ಶೀತಪ್ರಕೃತಿಯವರು 
ಚಂದ್ರ ಲಗ್ನದಲ್ಲಿ ಇದ್ದವರು ಶೀತ ಪ್ರಕೃತಿಯವರಾಗಿರುತ್ತಾರೆ. ಸ್ವಭಾವತಃ ಒಳ್ಳೆಯವರಾಗಿರುತ್ತಾರೆ. ಮೂರನೆ ಮನೆಯಲ್ಲಿ ಚಂದ್ರನಿದ್ದರೆ ಅವರಿಗೆ ಅಕ್ಕತಂಗಿಯರು ಹೆಚ್ಚಾಗಿರುತ್ತಾರೆ ಮತ್ತು ಧೈರ್ಯ ಕಡಿಮೆ ಅಂದರೆ ಮುನ್ನುಗ್ಗುವ ಸ್ವಭಾವದವರಲ್ಲ. ಗಾಳಿ ಎತ್ತ ಕಡೆ ಇದ್ದರೆ ಆ ದಿಕ್ಕಿಗೆ ತೂರಿಕೊಳ್ಳುವವರು.  ಚಂದ್ರ ಆರನೇ ಮನೆಯಲ್ಲಿದ್ದರೆ ಅವರಿಗೆ ಮನಸಿನ ಆರೋಗ್ಯ ಕಡಿಮೆ. ಸದಾ ಏನನ್ನೋ ಯೋಚಿಸುತ್ತಾ ತಾವೇ ಏನೋ ಲೆಕ್ಕಾಚಾರ ಹಾಕುತ್ತ ಮನಃಕ್ಲೇಶ ಮಾಡಿಕೊಳ್ಳುತ್ತಾರೆ. ಯಾವಾಗಲೂ ಮನಸ್ಸಿನಲ್ಲಿ ಏನೋ ಭಯ ಒಂದು ನಿಶ್ಚಿತ ಸ್ವಭಾವದ ಕೊರತೆ. ಇಂಥವರು ಯಾವುದೇ ತೀರ್ಮಾನ ತೆಗೆದುಕೊಳ್ಳಲೂ ಹಿಂಜರಿಯುತ್ತಾರೆ. ಎಂಟನೇ ಮನೆಯಲ್ಲಿ ಚಂದ್ರನಿರುವವರು ಕೆಟ್ಟ ಸ್ವಭಾವದವರಾಗಿರುತ್ಥಾರೆ. ಇನ್ನೊಬ್ಬರಿಗೆ ಕೇಡು ಬಗೆಯುವಂಥವರು, ಇನ್ನೊಬ್ಬರ ಏಳ್ಗೆಯನ್ನು ಸಸದಂಥವರು ಆಗಿರುತ್ತಾರೆ. ಸದಾ ಅತೃಪ್ತರೂ ಆಗಿರುತ್ತಾರೆ. 

ಚಂದ್ರನಿಗೆ ರಾಹು ದೃಷ್ಟಿ ಅಥವಾ ಶನಿ ದೃಷ್ಟಿ ಇದ್ದರೆ ಅಂತಹವರ ಮನಸ್ಸು ಕಲುಷಿತವಾಗಿತ್ತದೆ. ಕುತ್ಸಿತ, ಅನುಮಾನದ ಸ್ವಭಾವದವರಾಗಿರುತ್ತಾರೆ. ಇಂಥವರಿಗೆ ಮನೋಬಲ ಕಡಿಮೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸೋಲುತ್ತಾರೆ ಮತ್ತು ಶೀಘ್ರಕೋಪಿಗಳೂ, ತಾವು ಹೇಳಿದ್ದೇ ಸರಿಯೆಂಬ ಹಠದ ಸ್ವಭಾವವೂ ಇವರದಾಗಿರುತ್ತದೆ. ಕುಗ್ಗಿದ ಮನಸ್ಸುಳ್ಳವರೂ, ಯಾರಲ್ಲೂ ನಂಬಿಕೆ ಇಲ್ಲದವರೂ ಆಗಿರುತ್ತಾರೆ.  ಚಂದ್ರನಿಗೆ ಯಾವುದೇ ಕ್ರೂರ ಗ್ರಹದ ಸಂಪರ್ಕವಿಲ್ಲದೆ ಇದ್ದಲ್ಲಿ ಅಂಥವರು ಮನೋಬಲ ಹೊಂದಿದವರಾಗಿರುತ್ತಾರೆ. ಚಂದ್ರನಿಗೆ ಕ್ರೂರಗ್ರಹಗಳ ಕ್ರೂರ ದೃಷ್ಟಿ ಇದ್ದರೆ ಅಂಥವರು  ಮಾನಸಿಕವಾಗಿ ಬಲವಾಗಿರುವುದಿಲ್ಲ. ಇಂಥ ಸಂದರ್ಭಗಳಿದ್ದರೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ಸಾಧ್ಯತೆಗಳನ್ನೂ ತೆಗೆದುಹಾಕುವಂತಿಲ್ಲ. ಆತ್ಮಹತ್ಯೆ  ಮಾಡಿಕೊಂಡರೂ ಆಶ್ಚರ್ಯವಿಲ್ಲ.  

ವೀಣಾ ಚಿಂತಾಮಣಿ

ಟಾಪ್ ನ್ಯೂಸ್

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.