ಗ್ರಹಫ‌ಲ ನಕ್ಷತ್ರಫ‌ಲಗಳು ಎಷ್ಟರ ಮಟ್ಟಿಗೆ ಸರಿ? 

Team Udayavani, Jul 28, 2018, 11:51 AM IST

55.jpg

ಪತ್ರಿಕೆಗಳಲ್ಲಿ ಬರುವ ದಿನಭವಿಷ್ಯಗಳೂ ನೂರಕ್ಕೆ ನೂರರಷ್ಟು ಸರಿಯಾಗುವ ದಿನಗಳೂ ಇವೆ. ಅಲ್ಲಿಗೆ ಜ್ಯೋತಿಷ್ಯ ಸುಳ್ಳಲ್ಲ ಎಂದಾಯಿತು. ಅದನ್ನು ಪರಿಶೀಲಿಸುವ ವಿಧಾನದಲ್ಲಿ ತಪ್ಪಿರಬಹುದು. ಏಕೆಂದರೆ ಜಾತಕಫ‌ಲಗಳನ್ನು ನುಡಿಯುವುದು ಸುಲಭದ ಕೆಲಸವೇನೂ ಅಲ್ಲ. 

ಜೀವನದಲ್ಲಿ ಸೋಲುಂಟಾದಾಗ ಅಥವಾ ಮನಸ್ಸಿಗೆ  ನೆಮ್ಮದಿ ದೊರೆಯದಿ¨ªಾಗ ಹೆಚ್ಚಿನವರು ತಮ್ಮ ಜಾತಕಫ‌ಲವನ್ನು ತಿಳಿಯುವುದಕ್ಕಾಗಿ ಜ್ಯೋತಿಷಿಯ ಮೊರೆ ಹೋಗುತ್ತಾರೆ. ಅವರು ನಮ್ಮ ಜಾತಕ ಕುಂಡಲಿಗಳನ್ನು ಪರಿಶೀಲಿಸಿ ಅವರು ಕಲಿತ ಜ್ಯೋತಿರ್ವಿಜ್ಞಾನದ ನೆರವಿನಿಂದ ನಮ್ಮ ಜೀವನದಲ್ಲಿ ಈಗ ಇರುವ ಸಮಸ್ಯೆ ಮತ್ತು ಮುಂದೆ ಸಂಭವಿಸುವ ಸಂಗತಿಗಳ ಬಗ್ಗೆ ತಿಳಿಸುತ್ತಾರೆ. ಆದರೆ ಈ ಗ್ರಹಫ‌ಲ ಅಥವಾ ನಕ್ಷತ್ರಫ‌ಲಗಳು ಎಷ್ಟರ ಮಟ್ಟಿಗೆ ಸರಿ? ಎಂಬ ವಾದ ಹಲವರದು. ಅವನ್ನೆಲ್ಲ ನಂಬುವುದರಲ್ಲಿ ಅರ್ಥವೇ ಇಲ್ಲ ಎಂಬ ನಿರ್ಧಾರವನ್ನು ತಳೆದವರೂ ಇ¨ªಾರೆ. ಆಗ ಈ ಜಾತಕಫ‌ಲಗಳು, ಸತ್ಯವೇ ಸುಳ್ಳೇ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರನ್ನೂ ಕಾಡುತ್ತದೆ.

ಜ್ಯೋತಿಷ್ಯದಲ್ಲಿ ಇದ್ದಂತೆಯೇ ನಡೆಯುತ್ತದೆ ಎಂದು ವಾದಿಸುವವರು ಅದಕ್ಕೆ ಸಾಕ್ಷಿ ಎಂಬಂತೆ ಹೇಳುವ ಕಥೆಯೊಂದಿದೆ; ಒಮ್ಮೆ ಅರಸನೊಬ್ಬನ ಮಗನ ಜಾತಕವನ್ನು ಪರಿಶೀಲಿಸಿದ ಜ್ಯೋತಿಷಿ ಇನ್ನು ಎಂಟು ದಿನದಲ್ಲಿ ನಿನ್ನ ಮಗನಿಗೆ ಹಂದಿಯಿಂದ ಮರಣ ಎಂದು ನುಡಿಯುತ್ತಾನೆ. ರಾಜನಿಗೆ ಕೋಪ ತಡೆಯಲಾಗದೆ ಜ್ಯೋತಿಷ್ಯವನ್ನು ಸುಳ್ಳು ಮಾಡುತ್ತೇನೆಂದು 
ನಿರ್ಧರಿಸಿ ಮಗನಿಗೆ ಹೊರಗೆಲ್ಲೂ ಬಿಡದೆ, ಅರಮನೆಯ ಸುತ್ತ ಯಾವುದೇ ಪ್ರಾಣಿಯೂ ಬಾರದಂತೆ ವ್ಯವಸ್ಥೆ ಮಾಡಿಸುತ್ತಾನೆ. ಏಳನೆಯ ದಿನ, ಅರಸನ ಮಗ ಅರಮನೆಯ ಅಂಗಣದಲ್ಲಿ ಬಿದ್ದು ಸತ್ತನೆಂಬ ವಾರ್ತೆ ಅರಸನಿಗೆ ತಿಳಿಯುತ್ತದೆ. ಓಡಿ ಹೋಗಿ ನೋಡಿದರೆ, ಆಟ ಆಡುತ್ತಿದ್ದ ಮಗ ಸತ್ತು ಬಿದ್ದಿದ್ದ. ಅರಮನೆಯ ಮೇಲಿದ್ದ ಶಿಲೆಯಿಂದ ಕೆತ್ತಲಾಗಿದ್ದ ವರಾಹಮುದ್ರೆಯು ಮುರಿದು ಅವನ ಎದೆಯ ಮೇಲೆ ಬಿದ್ದಿತ್ತು. ಅಂದರೆ, ಹಂದಿಯಿಂದ ಮರಣ ಎಂಬುದು ಸುಳ್ಳಾಗಲಿಲ್ಲ. ಇದು ತುಂಬಾ ಹಳೆಯ ಕಥೆ. ಇಲ್ಲಿ ಜ್ಯೋತಿಷ್ಯ ಸುಳ್ಳಾಗಲಿಲ್ಲ.

ನೀವೂ ಗಮನಿಸಿ. ಪತ್ರಿಕೆಗಳಲ್ಲಿ ಬರುವ ದಿನಭವಿಷ್ಯಗಳೂ ನೂರಕ್ಕೆ ನೂರರಷ್ಟು ಸರಿಯಾಗುವ ದಿನಗಳೂ ಇವೆ. ಅಲ್ಲಿಗೆ ಜ್ಯೋತಿಷ್ಯ ಸುಳ್ಳಲ್ಲ ಎಂದಾಯಿತು. ಅದನ್ನು ಪರಿಶೀಲಿಸುವ ವಿಧಾನದಲ್ಲಿ ತಪ್ಪಿರಬಹುದು. ಏಕೆಂದರೆ ಜಾತಕಫ‌ಲಗಳನ್ನು ನುಡಿಯುವುದು ಸುಲಭದ ಕೆಲಸವೇನೂ ಅಲ್ಲ. ಅದಕ್ಕೆ ಸರಿಯಾದ ಅಧ್ಯಯನ ಬೇಕೇಬೇಕು. ಜ್ಞಾಪಕಶಕ್ತಿಯೂ ಸಾಕಷ್ಟಿರಬೇಕು. ಒಂದು ಗ್ರಹಗತಿಯ ಅನುಕೂಲ ಅಥವಾ ಅನಾನುಕೂಲಗಳು ಅದೇ ಸಂದರ್ಭದಲ್ಲಿ ಉಳಿದ ಗ್ರಹಗಳ ಗತಿಯನ್ನೂ ಅವಲಂಬಿಸಿರುವುದರಿಂದ ಅವನ್ನೆಲ್ಲ ತುಲನೆ ಮಾಡಿ ಜಾತಕಫ‌ಲವನ್ನು ಹೇಳಿದಾಗ ಅದು ಸತ್ಯವೇ ಆಗಿರುತ್ತದೆ.

ಸಣ್ಣ ಉದಾಹರಣೆಯೊಂದನ್ನು ಇಲ್ಲಿ ನೋಡೋಣ. ನೀವು ಬೆಳಗಿನ ಅಥವಾ ಇಳಿಸಂಜೆಯ ಹೊತ್ತಲ್ಲಿ ದೂರದಿಂದ ನಡೆದು ಬಂದಾಗ ಮಿತ್ರರು ನಿಮಗೆ ತಮಾಷೆ ಮಾಡಿದರೆ ನೀವೂ ಅದರಲ್ಲಿ ಭಾಗಿಯಾಗುತ್ತೀರಿ. ಆದರೆ ನೀವು ನಡು ಮಧ್ಯಾಹ್ನದ ಬಿರುಬಿಸಿಲಿನಲ್ಲಿ ನಡೆದು ಬಂದಾಗ ಮಿತ್ರರು ತಮಾಷೆ ಮಾಡಿದರೆ ನಿಮಗೆ ಕೋಪವುಕ್ಕಿಬರುತ್ತದೆ. “ನಾನು ಸುಡು ಬಿಸಿಲಿನಲ್ಲಿ ಬಂದಿದ್ದೇನೆ, ಇವರಿಗೆ ತಮಾಷೆ ಎಂದುಕೊಳ್ಳುತ್ತೀರಿ. ಅದಕ್ಕೆ ಕಾರಣ ಆ ಬಿಸಿಲು. ಬಿಸಿಲು ಅಂದರೆ ಸೂರ್ಯನ ಬೆಳಕು. ಇದೂ ಸಹ ಗ್ರಹದ ಫ‌ಲವೇ ಆಗಿದೆ. ಇಲ್ಲಿ ನಿಮಗೆ ಕೋಪ ಬರುವುದಕ್ಕೆ ಮೂಲಕಾರಣ ನಿಮ್ಮ ದೇಹವನ್ನು ಬಳಲಿಸಿದ ಆ ಸೂರ್ಯಗ್ರಹದ ಬೆಳಕು. ಅಂತೆಯೇ, ಎÇÉಾ ನಕ್ಷತ್ರ-ಗ್ರಹಗಳ ಬೆಳಕೂ ನಮ್ಮ ದೇಹದ ಮೇಲೆ ಪರಿಣಾಮ ಬೀರುವುದರಿಂದಾಗಿಯೇ ನಮ್ಮ ಜೀವನದಲ್ಲಿ ಏರುಪೇರುಗಳುಂಟಾಗುತ್ತವೆ. ಜಾತಕವು ಸರಿಯಾಗಿ ಮಾಡಲ್ಪಟ್ಟಿದ್ದರೆ, ಅಂದರೆ, ಜನನಸಮಯ, ಅûಾಂಶ-ರೇಖಾಂಶ, ವಾರ, ದಿನ ಎಲ್ಲ ಸಂಗತಿಗಳೂ ಸರಿಯಾಗಿದ್ದು ತಯಾರಿಸಿದ ಜಾತಕದ ಫ‌ಲವು ಸ್ಪಷ್ಟವಾಗಿಯೇ ಇರುತ್ತದೆ.

ಜಾತಕ ಎಂಬುದೂ ಸಂಸ್ಕಾರವೇ. ಅದರಲ್ಲಿ ಆಗುಹೋಗುಗಳನ್ನು ತಿಳಿದುಕೊಂಡು ನಮ್ಮಿಂದಾಗಬಹುದಾದ ತಪ್ಪನ್ನು ಸರಿ ಮಾಡಿಕೊಳ್ಳಬಹುದು. ಸತ್ಯವಿರದೇ ಹಿಂದಿನಿಂದ ಇವುಗಳು ನಡೆದು ಕೊಂಡುಬಂದಿಲ್ಲ. ಅವುಗಳಲ್ಲೂ ವೈಜ್ಞಾನಿಕ ಸತ್ಯಗಳು ಅಡಗಿವೆ.

ಕೊನೆಯ ಫ‌ಲ: ಜೀವನದಲ್ಲಿ ನಂಬಿಕೆಯೇ ನಮ್ಮ ಶಕ್ತಿ; ಅದು ವ್ಯಕ್ತಿ ಇರಲಿ, ವಸ್ತು ಇರಲಿ, ಭಕ್ತಿ ಇರಲಿ ಅಥವಾ ಜಾತಕವೇ ಇರಲಿ.

 ವಿಷ್ಣು ಭಟ್ಟ ಹೊಸ್ಮನೆ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.