ನೆಮ್ಮದಿಯಿಂದ ಬದುಕುವುದು ಅಂದರೆ ಏನು?


Team Udayavani, Nov 24, 2018, 3:25 AM IST

3-ddd.jpg

ಕೇವಲ ನಮ್ಮ ನೋವನ್ನಷ್ಟೇ ಅಲ್ಲದೆ ಎಲ್ಲರ ನೋವುಗಳನ್ನು ಅರಿತು, ಅದೂ ಕೂಡ ತನ್ನದೇ ನೋವು ಎಂಬ ಪ್ರಜ್ಞೆಯೊಂದಿಗೆ ಬಾಂಧವ್ಯವನ್ನು ಬೆಸೆದುಕೊಂಡು ಜೀವಿಸುವವನೇ ಪರಮಯೋಗಿ. ಎಲ್ಲೆಲ್ಲಿಯೂ ಏಕತೆಯನ್ನು ಕಾಣುವವನು ಅಂದರೆ ಎಲ್ಲರೂ ಒಂದೇ, ನಾನು ಎಂಬುದನ್ನು ಬಿಟ್ಟು ನಾವು ಎಂಬ ದೃಷ್ಟಿಯನ್ನು ಹೊಂದಿದವನು ಪರಮಯೋಗಿಯಾಗುತ್ತಾನೆ. 

ಮಾನವನಾದವನಿಗೆ ಬದುಕಿನಲ್ಲಿ ನೆಮ್ಮದಿಯೊಂದಿದ್ದರೆ ಏನಿದ್ದರೂ ಬದುಕಬಲ್ಲ; ಏನಿರದಿದ್ದರೂ ಬದುಕಬಲ್ಲ! ಈ ನೆಮ್ಮದಿ ಎಂಬುದಕ್ಕೆ ವಿಶಾಲ ಅರ್ಥವಿದೆ. ನೆಮ್ಮದಿಯೆಂದರೆ, ನಮ್ಮೆಲ್ಲ ವಾಂಛೆಗಳು ಈಡೇರುವುದು ಎಂದುಕೊಂಡಿದ್ದೇವೆ. ಆದರೆ, ಈ ನೆಮ್ಮದಿ ಎಂಬುದು ಕೇವಲ ಐಹಿಕ ಸಂತೃಪ್ತಿಯಲ್ಲ. ಅದು ನಾವು ಪರಮಯೋಗಿಯಾಗುವುದೇ ನಿಜವಾದ ನೆಮ್ಮದಿ. ರೂಢಿಯೊಲ್ಲೊಂದು ಮಾತಿದೆ:”ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬುದಾಗಿ. ಇದು ತೀರಾ ಸರಳವಾದ ನುಡಿ. ಆದರೆ ಇಲ್ಲಿ ಚಿಂತೆ ಎಂಬುದು ಕೇವಲ ತಮಗೆ ಮಾತ್ರ ಸಂಬಂಧಿಸಿದ್ದು, ಅದೇ ಸಂತೆ ಎಂಬುದು ಜಗತ್ತು, ಎಲ್ಲರಿಗೂ ಸಂಬಂಧಿಸಿದ್ದು. ಅಂಥ ಜಾಗದಲ್ಲೂ ವ್ಯಕ್ತಿಯೊಬ್ಬ ನಿದ್ರಿಸುತ್ತಾನೆ ಎಂದರೆ, ಒಂದೋ ಆತ ತನ್ನೊಳಗಿನ ಚಿಂತೆಯನ್ನು ಬಿಟ್ಟವನಾಗಿದ್ದಾನೆ ಅಥವಾ ಪ್ರಪಂಚದ ಎಲ್ಲರ ಚಿಂತೆಯನ್ನು ಅನುಭವಿಸಿದವನಾಗಿದ್ದಾ ನೆ ಎಂದರ್ಥ.ಅರ್ಥಾತ್‌ ಆತ ಪರಮಯೋಗಿಯೇ ಆಗಿದ್ದಾನೆ ಅನ್ನಬಹುದು. 

ಭಗವದ್ಗೀತೆಯಲ್ಲಿ ಕೃಷ್ಣ ನು ಪರಮಯೋಗಿ ಯಾರೆಂಬುದನ್ನು ಸರಳವಾಗಿ ಹೇಳಿದ್ದಾನೆ.
ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋರ್ಜುನ |
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ || (ಅಧ್ಯಾಯ 6 ಶ್ಲೋಕ 32)

ಸಕಲ ಜೀವಿಗಳ ಸುಖವನ್ನೂ ದುಃಖವನ್ನೂ ಯಾವನು ತನ್ನದೇ ಎಂದು ಭಾವಿಸುತ್ತಾನೋ, ಎಲ್ಲೆಲ್ಲಿಯೂ ಯಾರು ಏಕತೆಯನ್ನು ಕಾಣುತ್ತಾನೆಯೋ ಅವನೇ ಪರಮಯೋಗಿ ಎಂಬುದು ಇದರ ಅರ್ಥ.
ಪ್ರತಿಯೊಬ್ಬರ ಜೀವನವೂ ಸುಖದುಃಖಗಳಿಂದ ಕೂಡಿರುತ್ತದೆ. ಅಂದರೆ, ಪ್ರತಿಯೊಬ್ಬನಿಗೂ ನೋವುನಲಿವುಗಳ ಸಂಪೂರ್ಣ ಅರಿವಿದೆ. ಇಲ್ಲಿ ನಾವು ಉದಾತ್ತರಾಗಬೇಕು. ಕೇವಲ ನಮ್ಮ ನೋವನ್ನಷ್ಟೇ ಅಲ್ಲದೆ ಎಲ್ಲರ ನೋವುಗಳನ್ನು ಅರಿತು, ಅದೂ ಕೂಡ ತನ್ನದೇ ನೋವು ಎಂಬ ಪ್ರಜ್ಞೆಯೊಂದಿಗೆ ಬಾಂಧವ್ಯವನ್ನು ಬೆಸೆದುಕೊಂಡು ಜೀವಿಸುವವನೇ ಪರಮಯೋಗಿ. ಎÇÉೆಲ್ಲಿಯೂ ಏಕತೆಯನ್ನು ಕಾಣುವವನು ಅಂದರೆ ಎಲ್ಲರೂ ಒಂದೇ, ನಾನು ಎಂಬುದನ್ನು ಬಿಟ್ಟು ನಾವು ಎಂಬ ದೃಷ್ಟಿಯನ್ನು ಹೊಂದಿದವನು ಪರಮಯೋಗಿಯಾಗುತ್ತಾನೆ. ಈ ಏಕತಾಭಾವದಿಂದಾಗಿ ಎಲ್ಲರೂ ಪರಮಯೋಗಿಗಳಾಗಿ ಪರಿವರ್ತನೆ ಹೊಂದಿದ ಜಗತ್ತಿನಲ್ಲಿ ನೆಮ್ಮದಿಯು ಶಾಶ್ವತವಾಗಿ ನೆಲೆಸುತ್ತದೆ. ಯಾಕೆಂದರೆ ಪ್ರತಿಯೊಬ್ಬರ ಕಷ್ಟವನ್ನು ತನ್ನದೇ ಕಷ್ಟವೆಂದುಕೊಂಡು ವ್ಯವಹರಿಸುವಾಗ ಪರಸ್ಪರ ಸಹಾಯಕ್ಕೆ ನಿಲ್ಲುವ ಮನಸ್ಸು ಸರ್ವವ್ಯಾಪಿಯಾಗಿ ಎಲ್ಲರೂ ಆನಂದದ ಬದುಕನ್ನು ಹೊಂದಲು ಸಾಧ್ಯ.

ಆತ್ಮವೆನ್ನುವುದು ದೇವರ ಸ್ವರೂಪ. ಭಕ್ತ ಪ್ರಹ್ಲಾದ ಹೇಳಿದಂತೆ ದೇವರು ಎಲ್ಲೆಲ್ಲಿಯೂ ಇದ್ದಾನೆ. ನಮ್ಮಲ್ಲೂ ಇದ್ದಾನೆ; ನಿಮ್ಮಲ್ಲೂ ಇದ್ದಾನೆ. ಹಾಗಾಗಿ, ದೇಹದ ರೂಪಗಳು ಮಾತ್ರ ಭಿನ್ನವಾಗಿದೆ. ಈ ಭಿನ್ನತೆಯನ್ನು ಮರೆತು, ಏಕತೆಯನ್ನು ಸಾಧಿಸುವ ಮನಸ್ಸು ನಮ್ಮದಾಗಬೇಕು. ಮನಸ್ಸನ್ನು ಹಿಡಿದಿಡುವುದು ಮಾತ್ರ ಕಠಿಣ. ಚಾಂಚಲ್ಯವಾದ ಮನಸ್ಸು ನಮ್ಮ ದೇಹದಿಂದ ಘಟಿಸುವ ಎಲ್ಲಾ ಕ್ರಿಯೆ-ಪ್ರತಿಕ್ರಿಯೆಗಳನ್ನು ಸದಾ ನಿಯಂತ್ರಿಸುತ್ತಿರುತ್ತದೆ. ಇಂಥ ಮನಸ್ಸನ್ನು ಪ್ರತಿಯೊಬ್ಬನೂ ನಿಯಂತ್ರಣದಲ್ಲಿಟ್ಟುಕೊಂಡು ಯೋಗಿಯಾಗಬೇಕು. ಪ್ರಸ್ತುತ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಕಳೆದು ಹೋಗಿವೆ. ಸತ್ಯವೆಂಬುದು ಹತ್ತಿರದÇÉೆಲ್ಲೂ ಸುಳಿಯುತ್ತಿಲ್ಲ. ಆತ್ಮವೆಂಬುದು ಪೂಜನೀಯ. ಆದರೆ ಆತ್ಮಸಾಕ್ಷಿ$ ಎಂಬುದು ಯಾರಲ್ಲಿಯೂ ಇಲ್ಲ. ನಾವು ಮೊದಲು ಸುಳ್ಳು ಹೇಳುವುದನ್ನು ಬಿಡಬೇಕು. ಇದುರಿಗೆ ಇರುವ ವ್ಯಕ್ತಿಯಲ್ಲಿ ನಮ್ಮ ಇಷ್ಟ ದೇವರನ್ನು ಕಾಣಬೇಕು. ಆಗ ಮಾತ್ರ ನಾವು ಸತ್ಯನಿಷ್ಠರಾಗಿ ಬಾಳಲು  ಸಾಧ್ಯ. ನೆಮ್ಮದಿ ಎಂಬುದು ಬೆಳಕನ್ನು ತೋರಿಸುವ ನಂದಾದೀಪವಲ್ಲ. ಗೀತೆಯಲ್ಲಿ ಹೇಳಿದ ಈ ಏಕತಾಭಾವ ಮತ್ತು ಎಲ್ಲವೂ ನಮ್ಮದೆಂಬ ಜ್ಞಾನ ನಮ್ಮಲ್ಲಿ ಹುಟ್ಟಿಕೊಂಡರೆ ಆ ಕ್ಷಣದಿಂದಲೇ ನಾವು ಪರಮಯೋಗಿಯಾಗುತ್ತೇವೆ, ಅಂದಿನಿಂದ ನಮ್ಮ ಬಾಳಲ್ಲಿ ನೆಮ್ಮದಿ ನೆಲೆಯಾಗುತ್ತದೆ ಮತ್ತು ಬದುಕು ಪರಿಪೂರ್ಣವಾಗುತ್ತದೆ.

ವಿಷ್ಣು ಭಟ್‌ , ಹೊಸ್ಮನೆ (ಭಾಸ್ವ)

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.