CONNECT WITH US  

ಸಾಷ್ಟಾಂಗ ನಮಸ್ಕಾರ ಎಂದರೇನು?

ಸಾಷ್ಟಾಂಗ ನಮಸ್ಕಾರ ಎಂದರೆ ಕಾಯಾ, ವಾಚಾ ಮತ್ತು ಮನಸಾ ದೇವತೆಗಳಲ್ಲಿ ಶರಣಾಗಿ ಆತ್ಮಶಕ್ತಿಯನ್ನು ಜಾಗೃತಗೊಳಿಸಿ, ಸ್ಥೂಲದೇಹ ಮತ್ತು ಸೂಕ್ಷ ¾ದೇಹಗಳನ್ನು ಸಂಪೂರ್ಣವಾಗಿ ಶುದ್ಧ ಮಾಡುವುದು.
ಉರಸಾ ಶಿರಸಾದೃಷ್ಟಾ  ಮನಸಾ ವಚಸಾ ತಥಾ ||
ಪದ್‌ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಾಣಮೋಟಿಷ್ಟಾಂಗಮುಚ್ಯತೆ |
ಮೇಲಿನ ಶ್ಲೋಕೊಕ್ತಿಯಂತೆ,  ಎದೆ (1) , ತಲೆ (2), ದೃಷ್ಟಿ (ಕಣ್ಣುಗಳಿಂದ ನಮಸ್ಕಾರ ಮಾಡುವುದು) (3), ಮನಸ್ಸು (ಮನಸ್ಸಿನಿಂದ ನಮಸ್ಕಾರ ಮಾಡುವುದು) (4), ವಾಚಾ (ಬಾಯಿಂದ ನಮಸ್ಕಾರ ಎಂದು ಹೇಳುವುದು) (5), ಕಾಲು (6), ಕೈ (7) ಮತ್ತು ಮೊಣಕಾಲುಗಳನ್ನು (8) ಭೂಮಿಗೆ ತಗುಲಿಸಿ ನಮಸ್ಕಾರ ಮಾಡುವುದು ಎಂದರೆ ಸಾಷ್ಟಾಂಗ ನಮಸ್ಕಾರ ಮಾಡುವುದು.
ಈ ರೀತಿಯಲ್ಲಿ ಮಾಡುವ ನಮಸ್ಕಾರಕ್ಕೆ ಧಿವತ್‌ ನಮಸ್ಕಾರವೆಂದು ಹೇಳುತ್ತಾರೆ. ಈ ರೀತಿ ಮಾಡುವ ಸಾಷ್ಟಾಂಗ ನಮಸ್ಕಾರದಿಂದ ಆತ್ಮಶಕ್ತಿಯು ಜಾಗೃತವಾಗಿ ಸಂಪೂರ್ಣ ಸ್ಥೂಲದೇಹ ಮತ್ತು ಸೂಕ್ಷ ¾ದೇಹಗಳ ಶುದ್ಧೀಕರಣವಾಗುತ್ತದೆ. 
(ಆಧಾರ : ಸನಾತನದ ಗ್ರಂಥ - ನಮಸ್ಕಾರದ ಯೋಗ್ಯ ಪದ್ಧತಿ)

Trending videos

Back to Top