CONNECT WITH US  

 ನೋಡ ನೋಡುತ್ತಾ 2 ವರ್ಷದ ಮಗುವಿನೊಂದಿಗೆ ಕೃಷ್ಣಾ ನದಿ ಪಾಲಾದ ತಂದೆ! 

ಬಾಗಲಕೋಟೆ: ಬೀಳಗಿ ತಾಲೂಕಿನ ಕೃಷ್ಣಾ ನದಿಯ ಸೇತುವೆಯಲ್ಲಿ ಬಲವಾದ ಗಾಳಿ ಬೀಸಿದ ಪರಿಣಾಮವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ  ತಂದೆ, ಮಗಳು ನದಿಗೆ ಬಿದ್ದು  ದಾರುಣವಾಗಿ ನೀರುಪಾಲಾದ ಘಟನೆ  ಬುಧವಾರ ನಡೆದಿದೆ. 

ಗಲಗಲಿ -ಚಿಕ್ಕಗಲಗಲಿ ನಡುವೆ ಸಂಪರ್ಕಿಸುವ  ತಡೆ ಗೋಡೆ ಇಲ್ಲದ ಸೇತುವೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಆಯತಪ್ಪಿ ಬಿದ್ದ ಮಗಳನ್ನು ರಕ್ಷಿಸಲು ಯತ್ನಿಸಿದ ವೇಳೆ ತಂದೆಯೂ ನೀರು ಪಾಲಾಗಿದ್ದಾರೆ. 

ನೀರುಪಾಲಾದ 2 ವರ್ಷದ ಅನಮ್ಳ ಶವವನ್ನು ಸ್ಥಳೀಯ ಮೀನುಗಾರರು ಮೇಲಕ್ಕೆತ್ತಿದ್ದು, ತಂದೆ ದಶಗೀರಾ ಸಾಬ್‌ ಮೃತ ದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ. 


Trending videos

Back to Top