CONNECT WITH US  

ಟ್ರಾಫಿಕ್ ಪೊಲೀಸ್ ಮೇಲೆ ಶಾಸಕ ಕಾರಜೋಳ ಪುತ್ರನ ಅವಾಜ್

ಬಾಗಲಕೋಟೆ: ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಶಾಸಕ ಗೋವಿಂದ ಕಾರಜೋಳ ಪುತ್ರ ಅರುಣ್ ಕಾರಜೋಳ ಪೊಲೀಸ್ ಪೇದೆ ಮೇಲೆ ಅವಾಜ್ ಹಾಕಿ ಬಾಯಿಗೆ ಬಂದಂತೆ ಬೈದ ಘಟನೆ ಮುಧೋಳ ಪಟ್ಟಣದಲ್ಲಿ ನಡೆದಿದೆ. ಅಲ್ಲದೇ ಮೊಬೈಲ್ ಕರೆ ಮಾಡಿ ಬೈದಿರುವ ಆಡಿಯೋ ಕೂಡಾ ವೈರಲ್ ಆಗಿದೆ.

ಭಾನುವಾರ ತಡರಾತ್ರಿ ಅರುಣ್ ಕಾರಜೋಳ ನಿಯಮ ಉಲ್ಲಂಘಿಸಿ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರನ್ನು ತೆಗೆಯುವಂತೆ ಟ್ರಾಫಿಕ್ ಪೊಲೀಸ್ ಮಲ್ಲೇಶ್ ಲಮಾಣಿ ಸೂಚಿಸಿದ್ದರು.ಈ ಸಂದರ್ಭದಲ್ಲಿ ಮಲ್ಲೇಶ್ ವಿರುದ್ಧ ಅರುಣ್ ಕಾರಜೋಳ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ವಾಗ್ವಾದ ನಡೆದಿತ್ತು. 

Trending videos

Back to Top