CONNECT WITH US  

ಗುಳೇದಗುಡ್ಡದಲ್ಲಿ 78 ಪಿಒಪಿ ಗಣಪತಿ ವಶ 

ಗುಳೇದಗುಡ್ಡ : ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ಪಿಒಪಿ ಗಣೇಶ ಮೂರ್ತಿ ವಶಪಡಿಸಿಕೊಂಡರು.

ಗುಳೇದಗುಡ್ಡ: ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿ ನಿಷೇ ಧಿಸಲು ಜಿಲ್ಲಾ ಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಬುಧವಾರ ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರು ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ಗಣೇಶ ಮೂರ್ತಿ ತಯಾರಿಸುವ ಕಡೆಗಳಲ್ಲಿ ದಾಳಿ ನಡೆಸಿ ಸುಮಾರು 78 ಪಿಒಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಕ್ಕೆ ಪಡೆದ ಗಣೇಶ ಮೂರ್ತಿಗಳನ್ನು ಪುರಸಭೆ ಸಮುದಾಯ ಭವನದಲ್ಲಿ ಇರಿಸಲಾಗಿದೆ. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿ, ಕಳೆದ ವರ್ಷದಿಂದ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗಣೇಶ ಹಬ್ಬಕ್ಕೂ ಮೊದಲೇ ಎಚ್ಚೆತ್ತುಕೊಂಡು ಪಿಒಪಿ ಮೂರ್ತಿಗಳನ್ನು ಗುಳೇದಗುಡ್ಡದಲ್ಲಿ ಸಂಪೂರ್ಣವಾಗಿ ನಿಷೇಧಿಸಲು ಪುರಸಭೆ ಪಟ್ಟಣದ ಗಣೇಶ ಮೂರ್ತಿ ತಯಾರಿಕೆಯ ಅಂಗಡಿಗಳ ಮೇಲೆ ದಾಳಿ ನಡೆಸಿದರು.

ಪಟ್ಟಣದ ಮೂರ್ತಿ ತಯಾರಕರ ಅಂಗಡಿಗಳ ಮೇಲೆ ದಾಳಿ ಮಾಡಿ, ಪ್ಲಾಸ್ಟರ್‌ ಗಣೇಶ ಮೂರ್ತಿ ಸೀಜ್‌ ಮಾಡಲು ಮುಂದಾದಾಗ ಗಣೇಶ ಮೂರ್ತಿ ತೆಗೆದುಕೊಂಡು ಹೋಗಬೇಡಿ, ನಮ್ಮ ಜೀವನ ನಡೆಸಲು ತೊಂದರೆಯಾಗುತ್ತದೆ ಎಂದು ಮೂರ್ತಿ ತಯಾರಕರು ಮನವಿ ಮಾಡಿದರು. ಆದರೆ, ಪುರಸಭೆ ಅಧಿಕಾರಿಗಳು ನಿಮಗೆ ತಿಂಗಳುಗಳ ಮೊದಲೇ ತಿಳಿಸಿದ್ದೇವು, ಪಿಒಪಿ ಗಣೇಶ ಮಾಡಬಾರದು ಎಂದು ಮತ್ತೆ ಏಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಗಣೇಶ ಮೂರ್ತಿ ತಯಾರಿಸಿ ಜೀವನ ನಡೆಸುತ್ತಿದ್ದು, ಸದ್ಯ ತಯಾರಿಸಿರುವ ಗಣೇಶ ಮೂರ್ತಿಗಳನ್ನು ಸೀಜ್‌ ಮಾಡಿರುವುದರಿಂದ ನಮ್ಮ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ನಮಗೆ ಪರಿಹಾರ ನೀಡಬೇಕೆಂದು ಗಣೇಶ ಮೂರ್ತಿ ಕಲಾಕಾರರು ಮನವಿ ಮಾಡಿದರು.


Trending videos

Back to Top