CONNECT WITH US  

ತೆಲುಗಿನತ್ತ ರಾಂಕ್ ಹುಡುಗಿ ಅಪೂರ್ವ

ಫ‌ಸ್ಟ್‌ ರ್‍ಯಾಂಕ್‌ ರಾಜು' ಚಿತ್ರ ಹಿಟ್‌ ಆಗುವ ಮೂಲಕ ಒಂದಷ್ಟು ಮಂದಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಅದರಲ್ಲಿ ನಾಯಕಿ ಅಪೂರ್ವ ಕೂಡಾ ಸೇರುತ್ತಾರೆ. ಚಿತ್ರದ ಇಬ್ಬರು ನಾಯಕಿಯರಲ್ಲಿ ಅಪೂರ್ವ ಕೂಡಾ ಒಬ್ಬರು. ಚಿತ್ರ ಈಗ 50 ದಿನ ಪೂರೈಸಿದೆ. ಅಷ್ಟರಲ್ಲೇ ಅಪೂರ್ವ ತೆಲುಗು ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ಚಿತ್ರಕ್ಕೆ ಇನ್ನಷ್ಟೇ ಟೈಟಲ್‌ ಅಂತಿಮವಾಗಬೇಕಿದ್ದು, ಮಾರ್ಚ್‌ನಲ್ಲಿ ಚಿತ್ರ ಶುರುವಾಗಲಿದೆಯಂತೆ. ಒಳ್ಳೆಯ ಪಾತ್ರ ಸಿಕ್ಕಿದ್ದು, ಆ ಮೂಲಕ ತೆಲುಗಿನಲ್ಲೂ ಗುರುತಿಸಿಕೊಳ್ಳುವ ವಿಶ್ವಾಸ ಅಪೂರ್ವಗಿದೆ. 
"ಫ‌ಸ್ಟ್‌ ರ್‍ಯಾಂಕ್‌ ರಾಜು' ಚಿತ್ರ ಬಿಡುಗಡೆಯಾದ ನಂತರ ಅಪೂರ್ವಗೆ ಕನ್ನಡ ಸೇರಿದಂತೆ ತೆಲುಗಿನಿಂದಲೂ ಸಾಕಷ್ಟು ಆಫ‌ರ್‌ಗಳು ಬಂದುವಂತೆ. ಅದರಲ್ಲೊಂದು ಚಿತ್ರ ಇಷ್ಟವಾಗಿ ಈಗ ತೆಲುಗಿನತ್ತ ಪಯಣ ಬೆಳೆಸಲು ರೆಡಿಯಾಗಿದ್ದಾರೆ. 

"ಸಿನಿಮಾ ಬಿಡುಗಡೆಯಾದ 25ನೇ ದಿನಕ್ಕೆ ನನಗೆ ನಾಲ್ಕೈದು ಸಿನಿಮಾಗಳ ಆಫ‌ರ್‌ ಬಂದುವು.  ಪರ್‌ಫಾರ್ಮೆನ್ಸ್‌ಗೆ ಅವಕಾಶವಿರುವ ಪಾತ್ರದಲ್ಲಿ ನಟಿಸಬೇಕೆಂಬ ಕಾರಣಕ್ಕೆ ತುಂಬಾ ಚೂಸಿಯಾಗಿ ಸಿನಿಮಾವನ್ನು ಆಯ್ಕೆ ಮಾಡುತ್ತಿದ್ದೇನೆ. ನಿಧಾನವಾಗಿಯಾದರೂ ಒಳ್ಳೆಯ ಪಾತ್ರ ಸಿಕ್ಕರೆ ಸಾಕು ಎಂಬ ಆಸೆ ನನದು. ಈಗಾಗಲೇ ತೆಲುಗು ಸಿನಿಮಾವೊಂದನ್ನು ಒಪ್ಪಿಕೊಂಡಿದ್ದೇನೆ. ಮಾರ್ಚ್‌ನಲ್ಲಿ ಆ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ' ಎನ್ನುತ್ತಾರೆ ಅಪೂರ್ವ.

ಅಪೂರ್ವ ಡೆಂಟಲ್‌ ಸ್ಟೂಡೆಂಟ್‌. ದಾವಣಗೆರೆಯಲ್ಲಿ ಡೆಂಟಲ್‌ ಓದುತ್ತಿದ್ದ ಅಪೂರ್ವಗೆ, ತಾನು ಮೊದಲ ಆಡಿಷನ್‌ನಲ್ಲೇ ಆಯ್ಕೆಯಾಗುತ್ತೇನೆಂಬ ಒಂದು ಸಣ್ಣ ಕಲ್ಪನೆಯೂ ಇರಲಿಲ್ಲ. ಅಪೂರ್ವ ಬೆಂಗಳೂರು ಹುಡುಗಿ. ದಾವಣಗೆರೆಯಲ್ಲಿ ಕಾಲೇಜು ಓದುತ್ತಿದ್ದಾಗ "ಫ‌ಸ್ಟ್‌ ರ್‍ಯಾಂಕ್‌ ರಾಜು' ಎಂಬ ಸಿನಿಮಾ ಆರಂಭವಾಗುತ್ತಿರುವ ವಿಷಯ ಕೇಳಿ ಆಡಿಷನ್‌ಗೆ ಹೋದ ಅಪೂರ್ವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಕೆರಿಯರ್‌ ಆರಂಭಿಸಿದವರು. ಈಗ ಎರಡನೇ ಚಿತ್ರಕ್ಕೆ ತೆಲುಗಿನತ್ತ ಪಯಣ ಬೆಳೆಸುತ್ತಿದ್ದಾರೆ. 


Trending videos

Back to Top