CONNECT WITH US  

ಸರಳ ಜೀವನ ಎಂಬ ಹೊಸ ಚಾನಲ್ಲು

ಹೆಸರು ಕೇಳಿದರೆ ಇದ್ಯಾವುದೋ ಲೈಫ್ ಇನ್ಶೂರೆನ್ಸಿನ ಹೆಸರಿರಬಹುದು ಎಂದನಿಸಬಹುದು. ಆದರೆ, ಅದು ಹೊಸ ಚಾನಲ್‌ವೊಂದರ ಹೆಸರು. ಕನ್ನಡದಲ್ಲಿ ಹಲವು ಚಾನಲ್‌ಗ‌ಳು ಜನರಿಗೆ ಮನರಂಜನೆ ಒದಗಿಸಿದ ನಂತರ, ಈಗ ಸರಳ ಜೀವನ ಎಂಬ ಇನ್ನೊಂದು ಹೊಸ ಚಾನಲ್‌ ಶುರುವಾಗಲಿಕ್ಕಿದೆ. ಈ ಚಾನಲ್‌ ಫೆಬ್ರವರಿ 19ರಂದು ಪ್ರಾರಂಭವಾಗಲಿದ್ದು, ಹಲವು ಚಾನಲ್‌ಗ‌ಳಲ್ಲಿ ವಾಸ್ತು ಕುರಿತ ಕಾರ್ಯಕ್ರಮಗಳನ್ನು ನಡೆಸಿಕೊಡುವ ಡಾ ಚಂದ್ರಶೇಖರ್‌ ಗುರೂಜಿ ಈ ಚಾನಲ್‌ ಪ್ರಾರಂಭಿಸಿದ್ದಾರೆ.

ಈಗಾಗಲೇ ಹಲವು ಚಾನಲ್‌ಗ‌ಳು ಪ್ರತಿ ನಿತ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಹೀಗಿರುವಾಗ ಸರಳ ಜೀವನದ ವಿಶೇಷತೆಯೇನು ಎಂದರೆ, ಇದೊಂದು ಇನ್ಫೋಟೈನ್‌ಮೆಂಟ್‌ ಚಾನಲ್‌ ಎಂಬ ಉತ್ತರ ಬರುತ್ತದೆ. ಅಂದರೆ ಇಲ್ಲಿ ಮನರಂಜನೆಯ ಜೊತೆಗೆ ಮಾಹಿತಿ ಸಹ ಕೊಡಲಾಗುತ್ತದೆ. ಅದರಲ್ಲೂ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಸಾರುವ ಮತ್ತು ಪುರಾಣ ಹಾಗೂ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಕಾರ್ಯಕ್ರಮಗಳನ್ನು ಈ ಚಾನಲ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಜಗತ್ತಿಗೆ ಭಾರೀಯರ ಕೊಡುಗೆಗಳಾದ ಆಯುರ್ವೇದ, ವಾಸ್ತು, ಯೋಗ ಮುಂತಾದ ವಿಷಯಗಳ ವೈಜ್ಞಾನಿಕ ಹಿನ್ನೆಲೆ ಮತ್ತು ಮಹತ್ವವನ್ನು ಕಾರ್ಯಕ್ರಮಗಳ ಮೂಲಕ ಇಂದಿನ ಪೀಳಿಗಿಗೆ ಮಾಹಿತಿಯನ್ನು ಮನರಂಜನೆಯ ಮೂಲಕ ನೀಡುವುದು ಈ ಚಾನಲ್‌ನ ಉದ್ದೇಶವಂತೆ.

ಅದಕ್ಕೆ ಸರಿಯಾಗಿ ಅಯೋಧ್ಯೆಯಿಂದ ಶ್ರೀಲಂಕದವರೆಗೆ ರಾಮನ ಹೆಜ್ಜೆಯ ಜಾಡನ್ನು ಹುಡುಕುವ ಕಾರ್ಯಕ್ರಮ "ಮಹಾಪಯಣ', ಜಾನಪದ ಜ್ಞಾನವನ್ನು ಮುಂದಿನ ತಲೆಮಾರುಗಳಿಗೂ ದೊರಕುವಂತಾಗುವ ನಿಟ್ಟಿನಲ್ಲಿ  ಆ ಜಾನಪದ ಹಾಡುಗಳನ್ನು ಉಣಬಡಿಸುವ "ಜ್ಞಾನಪದ', ವೀರರ ಚರಿತ್ರೆಯನ್ನು ದೃಶ್ಯ ಮತ್ತು ಗ್ರಾಫಿಕ್ಸ್‌ಗಳ ಮೂಲಕ ತಿಳಿಸುವ "ಇತಿಹಾಸ', ಪರಿಣಾಮಕಾರಿ ಬೇಸಾಯಕ್ಕೆ ಅನುಕೂಲವಾಗುವ ಮಾರ್ಗದಶಿಯಾದ "ಮಣ್ಣಿನ ಮಗ', ನೀತಿ ಕಥೆಗಳನ್ನು ಅನಿಮೇಷನ್‌ ಮತ್ತು ಗ್ರಾಫಿಕ್ಸ್‌ ಸಹಾಯದಿಂದ ನಿರೂಪಣೆ ಮಾಡುವ "ಅಜ್ಜಿ ಹೇಳಿದ ಕಥೆ', ಪುಣ್ಯಕ್ಷೇತ್ರಗಳ ವಿವರಣೆ ಜೊತೆಗೆ ಅಲ್ಲಿಗೆ ತಲುಪುವ ಮಾಹಿತಿ ನೀಡುವ ಪುಣ್ಯಕ್ಷೇತ್ರ, ವಿಭಿನ್ನ ಆಚರಣೆಗಳು ಹಾಗೂ ನಿಗೂಢ ರಹಸ್ಯಗಳ ಅನಾವರಣ ಮಾಡುವ "ಸಾಧು ಪರಂಪರೆ' ಮತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುವ "ಮನುಕುಲದ ಒಳತಿಗಾಗಿ' ಮುಂತಾದ ಅನೇಕ ಕಾರ್ಯಕ್ರಮಗಳು ಈ ಚಾನಲ್‌ನಲ್ಲಿ ಪ್ರಸಾರವಾಗಲಿದೆ.

ಈ ಚಾನಲ್‌ನ ಸಂಪಾದಕರಾಗಿ ಎಂ.ಎಸ್‌. ರಾಘವೇಂದ್ರ ಕಾರ್ಯ ನಿರ್ವಹಿಸದರೆ, ರಘುನಾಥ್‌ ರೆಡ್ಡಿ ಬಿಝಿನೆಸ್‌ ಹೆಡ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

Trending videos

Back to Top