CONNECT WITH US  

ಅಪೂರ್ವ ಚಿತ್ರದ ಮತ್ತೊಂದು ಆವೃತ್ತಿ ನಾಳೆ ರಿಲೀಸ್; ಕ್ರೇಜಿ@55

ಬೆಂಗಳೂರು: ಈ ವರ್ಷದ ನನ್ನ ಹುಟ್ಟು ಹಬ್ಬ ತುಂಬಾ ವಿಶೇಷವಾಗಿದೆ. ಯಾಕೆಂದರೆ ನನ್ನ ಕನಸಿನ ಚಿತ್ರ ಅಪೂರ್ವ ಬಿಡುಗಡೆ ಮಾಡಿದ್ದೇನೆ. ನಾಳೆ ಪ್ರೇಕ್ಷಕರಿಗಾಗಿಯೇ(ಇಂದು ಮಧ್ಯಾಹ್ನ ಬೆಂಗಳೂರಲ್ಲಿ ಮಾತ್ರ 2ನೇ ಆವೃತ್ತಿ ಬಿಡುಗಡೆ) ಮಾಡಿರುವ ಅಪೂರ್ವ ಚಿತ್ರದ ಮತ್ತೊಂದು ಆವೃತ್ತಿ ರಿಲೀಸ್ ಮಾಡುವುದಾಗಿ ನಟ, ನಿರ್ದೇಶಕ ವಿ.ರವಿಚಂದ್ರನ್ ತಮ್ಮ 55ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಘೋಷಿಸಿದ್ದಾರೆ.

ಸೋಮವಾರ ತಮ್ಮ ಅಭಿಮಾನಿಗಳ ಜೊತೆ 55ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಕನಸುಗಾರ ವಿ.ರವಿಚಂದ್ರನ್, ಅಪೂರ್ವ ಚಿತ್ರದ ಮತ್ತೊಂದು ಆವೃತ್ತಿ ನಾಳೆ ಬಿಡುಗಡೆ ಮಾಡುವುದಾಗಿ ಹೇಳಿದರು.

ಮೇ 27ರಂದು ಅಪೂರ್ವ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ಇದೀಗ ಪ್ರೇಕ್ಷಕರಿಗಾಗಿಯೇ ತಯಾರಿಸಿರುವ ಮತ್ತೊಂದು ಆವೃತ್ತಿ ಮಂಗಳವಾರ ಬಿಡುಗಡೆಯಾಗಲಿದೆ.

Trending videos

Back to Top