CONNECT WITH US  

ರಾಧಿಕಾಗೆ ಮರು ಮದುವೆ? ಫೋಟೋಗಳು ವೈರಲ್‌ : ನಟಿ ಸ್ಪಷ್ಟನೆ 

ಬೆಂಗಳೂರು: ನಟಿ ,ಮಾಜಿ ಮುಖ್ಯಮಂತ್ರಿ ಎಚ್‌.ಡಿ .ಕುಮಾರ ಸ್ವಾಮಿ ಅವರ ದ್ವಿತೀಯ ಪತ್ನಿ ರಾಧಿಕಾ ಅವರು ಮರುಮದುವೆಯಾಗಿರುವ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ. ಈ ವಿಚಾರ ರಾಧಿಕಾ ಅವರ ಗಮನಕ್ಕೆ ಬಂದ ಕೂಡಲೆ ಸ್ಪಷ್ಟನೆಯನ್ನೂ ನೀಡಿದ್ದು ಇದು ಸುಳ್ಳು ಎಂದಿದ್ದಾರೆ. 

ಕಳೆದೊಂದು ವರ್ಷದಿಂದ ಕುಮಾರಸ್ವಾಮಿ ಅವರಿಂದ ದೂರವಾಗಿರುವ ನಟಿ ರಾಧಿಕಾ ಅವರು ಮಂಗಳೂರು ಮೂಲದ ಯುವ ಉದ್ಯಮಿ ವಿವೇಕ್‌ ರಾಜ್‌ ಅವರನ್ನು ಮರು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ,ಫೋಟೋಗಳ ಸಮೇತ ವೈರಲ್‌ ಆಗಿ ಹರಿದಾಡಿತ್ತು. 

ಮದುವೆ ವಿಚಾರದ ವದಂತಿಗಳ ಕುರಿತು ಮಾಧ್ಯಮವೊಂದಕ್ಕೆ ದೂರವಾಣಿ ಮೂಲಕ ಸ್ಪಷ್ಟನೆ ನೀಡಿದ ರಾಧಿಕಾ 'ಈ ಫೋಟೋಗಳನ್ನು  ಕಳೆದ ವರ್ಷ ನಾನು ಕೃಷಿ ಮಾಡುವ ಸಲುವಾಗಿ ಸಹೋದರನೊಂದಿಗೆ ಫ್ಯಾಮಿಲಿ ಫ್ರೆಂಡ್‌ ವಿವೇಕ್‌ ರಾಜ್‌ ಅವರ ಫಾರ್ಮ್ ವೀಕ್ಷಣೆಗೆ ತೆರಳಿದಾಗ ತೆಗೆಸಿಕೊಂಡಿದ್ದು ,ಯಾವ ಫೋಟೋವನ್ನು ಸೀಕ್ರೆಟ್‌ ಆಗಿ ತೆಗೆಸಿಕೊಂಡಿಲ್ಲ.ಈಗೇಕೆ ಹರಿಯಬಿಡಲಾಗಿದೆ ಎನ್ನುವುದು ನನಗೆ ತಿಳಿದಿಲ್ಲ. ನನಗೆ ಕುಟುಂಬ ಇದೆ. ಯಾಕೆ ಹೀಗೆ ಮಾಡಿದ್ದಾರೋ ಗೊತ್ತಿಲ್ಲ. ನಾನು ನನ್ನ ಮಗಳಿಗೆ ಉತ್ತರ ನೀಡಬೇಕಿದೆ,ಅಭಿಮಾನಿಗಳಿಗೆ ಉತ್ತರ ನೀಡಬೇಕಿದೆ.ವಿವೇಕ್‌ ನನಗೆ ಒಳ್ಳೆಯ ಸ್ನೇಹಿತ ಅವರನ್ನು ಮದುವೆ ಆಗಿಲ್ಲ, ಆಗುವುದು ಇಲ್ಲ ' ಎಂದು ಬೇಸರ ವ್ಯಕ್ತ ಪಡಿಸಿದರು. 

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top