CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಎಂ.ಆರ್‌.ಪಿಕ್ಚರ್ನಡಿ ಮತ್ತೂಂದು ಸಿನಿಮಾ

"ಕೆಂಡಸಂಪಿಗೆ' ಚಿತ್ರದ ನಾಯಕ ವಿಕ್ಕಿ ಹೊಸ ಸಿನಿಮಾ ಮಾಡುತ್ತಿರುವ ಹಾಗೂ ಆ ಸಿನಿಮಾವನ್ನು "ಅಲೆಮಾರಿ' ಸಂತು ನಿರ್ದೇಶನ ಮಾಡುತ್ತಿರುವ ವಿಷಯ ನಿಮಗೆ ಗೊತ್ತಿರಬಹುದು. ಆದರೆ, ಆ ಚಿತ್ರವನ್ನು ಯಾರು ನಿರ್ಮಿಸುತ್ತಾರೆಂಬುದು ಪಕ್ಕಾ ಆಗಿರಲಿಲ್ಲ. ಈಗ ಚಿತ್ರಕ್ಕೆ ನಿರ್ಮಾಪಕರು ಸಿಕ್ಕಿದ್ದಾರೆ.

ಸಂತು ನಿರ್ದೇಶನದ ಈ ಸಿನಿಮಾವನ್ನು ಎಂ.ಆರ್‌.ಪಿಕ್ಚರ್ ನಿರ್ಮಿಸುತ್ತಿದೆ. ಈಗಾಗಲೇ ಎಂ.ಆರ್‌.ಪಿಕ್ಚರ್ ನಡಿ ಎಲ್‌.ಪದ್ಮನಾಭ್‌ ಹಾಗೂ ಸ್ನೇಹಿತರು ಸೇರಿ "ಜಾನ್‌ ಜಾನಿ ಜನಾರ್ಧನ್‌' ಸಿನಿಮಾ ಮಾಡಿದ್ದರು. ಆ ಚಿತ್ರ ಡಿಸೆಂಬರ್‌ನಲ್ಲಿ ತೆರೆಕಂಡಿತ್ತು. ಈಗ ಎಂ.ಆರ್‌.ಪಿಕ್ಚರ್ನಡಿ ಎರಡನೇ ಸಿನಿಮಾ ತಯಾರಾಗುತ್ತಿದೆ. ಸೋಮವಾರ ಬೆಳಗ್ಗೆ ಮುತ್ತಪ್ಪ ರೈಯವರ ಮನೆಯಲ್ಲಿ ನಿರ್ಮಾಪಕರಿಗೆ ಕಥೆ ಒಪ್ಪಿಸಿದ್ದಾರೆ ಸಂತು.

ಸಂತು ಮಾಡಿ ಕೊಂಡಿರುವ ಒನ್‌ಲೈನ್‌ ಕೇಳಿ ಇಷ್ಟಪಟ್ಟ ನಿರ್ಮಾಪಕರು ಸಿನಿಮಾ ಮಾಡಲು ಮುಂದಾಗಿದ್ದಾರೆ. ಅಂದಹಾಗೆ, ಸಂತು ಈ ಬಾರಿ ಇಂದಿನ ಟ್ರೆಂಡ್‌ಗೆ ಒಗ್ಗುವಂತಹ ಕತೆ ಮಾಡಿಕೊಂಡಿದ್ದು, ಬೇರೆ ಶೈಲಿಯ ಸಿನಿಮಾ ಇದಾಗಲಿದೆ ಎಂಬ ವಿಶ್ವಾಸವಿದೆಯಂತೆ.

ನಾಯಕ ವಿಕ್ಕಿಯವರ ಮ್ಯಾನರೀಸಂಗೆ ತಕ್ಕಂತೆ ಕಥೆ ನಾಯಕನ ಪಾತ್ರ ಇರುವುದರಿಂದ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಚಿತ್ರದ ಟೈಟಲ್‌ ಅಂತಿಮವಾಗಿಲ್ಲ. ಸಂತು ಅಂದುಕೊಂಡಿರುವ ಶೀರ್ಷಿಕೆಯೊಂದು ಬೇರೆ ಬ್ಯಾನರ್‌ನಲ್ಲಿರುವುದರಿಂದ ಸಂತು ಈಗಲೇ ಟೈಟಲ್‌ ಬಗ್ಗೆ ಏನೂ ಹೇಳುವುದಿಲ್ಲ. ಏಪ್ರಿಲ್‌ನಲ್ಲಿ ಸಿನಿಮಾ ಆರಂಭಿಸುವ ಆಲೋಚನೆ ಸಂತುವಿಗಿದೆ.

ಇಂದು ಹೆಚ್ಚು ಓದಿದ್ದು

Back to Top