CONNECT WITH US  

ಸಲ್ಲುಗೆ ಸುದೀಪ್ ವಿಲನ್? ಟೈಗರ್ ಜಿಂದಾ ಹೈನಲ್ಲಿ ಕಿಚ್ಚ

ಸುದೀಪ್‌ ಈಗಾಗಲೇ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಮತ್ತೂಮ್ಮೆ ಹಿಂದಿ ಸಿನಿಮಾ ವಿಷಯಕ್ಕಾಗಿ ಸುದೀಪ್‌ ಸುದ್ದಿಯಲ್ಲಿದ್ದಾರೆ. ಅದು ಸಲ್ಮಾನ್‌ ಖಾನ್‌ ಅವರ "ಟೈಗರ್‌ ಜಿಂದಾ ಹೈ' ಸಿನಿಮಾದಿಂದ. 

ಸಲ್ಮಾನ್‌ ಖಾನ್‌ ನಾಯಕರಾಗಿರುವ ಈ ಸಿನಿಮಾದಲ್ಲಿ ಸುದೀಪ್‌ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆನ್ನಲಾಗಿದೆ. ಅದು ನೆಗೆಟಿವ್‌ ಶೇಡ್‌ನ‌ ಪಾತ್ರ. ಹೌದು, ಈ ಚಿತ್ರದಲ್ಲಿ ಸುದೀಪ್‌ ಜಾಹೀರ್‌ ಎನ್ನುವ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಂದಹಾಗೆ, ಇದು
2012ರಲ್ಲಿ ತೆರೆಕಂಡ "ಏಕ್ತಾ ಟೈಗರ್‌' ಚಿತ್ರದ ಮುಂದುವರಿದ ಭಾಗವಾಗಿದೆ.

ಈ ಚಿತ್ರವನ್ನು ಅಲಿ ಅಬ್ಟಾಸ್‌ ಜಾಫ‌ರ್‌ ನಿರ್ದೇಶನ ಮಾಡುತ್ತಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಲ್ಲುವಿಗೆ ಜೋಡಿಯಾಗಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಉಳಿದಂತೆ ಗಿರೀಶ್‌ ಕಾರ್ನಾಡ್‌, ಪರೇಶ್‌ ರಾವಲ್‌ ನಟಿಸುತ್ತಿದ್ದು, ತೆಲುಗಿನ ಸ್ಟಾರ್‌ ನಟ ಮಹೇಶ್‌ ಬಾಬು ಕೂಡಾ ಈ ಚಿತ್ರದಲ್ಲಿ ಗೆಸ್ಟ್‌ ಅಪಿಯರೆನ್ಸ್‌  ಮಾಡುತ್ತಿದ್ದಾರಂತೆ. ಹೀಗೆ ದೊಡ್ಡ ತಾರಾಗಣವಿರುವ,
ಬಹುನಿರೀಕ್ಷಿತ ಹಿಂದಿ ಚಿತ್ರದಲ್ಲಿ ಸುದೀಪ್‌ ಕೂಡಾ ಪ್ರಮುಖ ಪಾತ್ರ ಮಾಡುತ್ತಿರೋದು ಅವರ ಅಭಿಮಾನಿಗಳಿಗೆ ಖುಷಿ ನೀಡಿರುವುದಂತೂ ಸುಳ್ಳಲ್ಲ. 

ಸುದೀಪ್‌ಗೆ ವಿಲನ್‌ ಪಾತ್ರ ಹೊಸತಲ್ಲ. ಈ ಹಿಂದೆ ರಾಜ್‌ಮೌಳಿ ನಿರ್ದೇಶನದ "ಈಗ' ಚಿತ್ರದಲ್ಲಿ ಸುದೀಪ್‌ ವಿಲನ್‌ ಆಗಿ ನಟಿಸಿದ್ದು, ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಆ ಪಾತ್ರಕ್ಕಾಗಿ ಸುದೀಪ್‌ಗೆ ಪ್ರತಿಷ್ಠಿತ ನಂದಿ ಪ್ರಶಸ್ತಿ ಕೂಡಾ ಬಂದಿತ್ತು.
 
ಈಗ ಬಾಲಿವುಡ್‌ ಚಿತ್ರದಲ್ಲಿ ನೆಗೆಟಿವ್‌ ಶೇಡ್‌ ಪಾತ್ರದ ಮೂಲಕ ಸಿನಿ ಪ್ರೇಮಿಗಳ ಮನಕ್ಕೆ ಮತ್ತಷ್ಟು 
ಹತ್ತಿರವಾಗಲಿದ್ದಾರೆ. ಅಂದಹಾಗೆ, ಈ ಪಾತ್ರದಲ್ಲಿ ಸುದೀಪ್‌ ಅವರ ಗೆಟಪ್‌ ಹೇಗಿರುತ್ತದೆ ಎಂಬ 
ಕುತೂಹಲವಿದ್ದರೆ ನೀವು ಡಿಸೆಂಬರ್‌ವರೆಗೆ ಕಾಯಲೇಬೇಕು.

Trending videos

Back to Top