CONNECT WITH US  

ಪ್ರೀತಿ ಪ್ರಾಪ್ತಿರಸ್ತು ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ಹರ್ಷ ಎಂಟರ್‌ಟೈನ್‌ಮೆಂಟ್‌ ಪ್ರೈ ಲಿ ಲಾಂಛನದಲ್ಲಿ ಸಂಜಿವ್‌ ಎಸ್‌ ಖಸನೀಸ ನಿರ್ಮಿಸುತ್ತಿರುವ ಹಾಗೂ ಶ್ರೀಕಾಂತ್‌ ಎಸ್‌ ಖಾಸನೀಸ ಅವರ ಸಹ ನಿರ್ಮಾಣವಿರುವ "ಪ್ರೀತಿ ಪ್ರಾಪ್ತಿರಸ್ತು' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ ಚಿತ್ರಕ್ಕೆ ಈವರೆಗೆ ಬೆಂಗಳೂರು, ಸಂಡೂರು, ಹುಬ್ಬಳ್ಳಿ,ಸವದತ್ತಿ ಮುಂತಾದ ಕಡೆ ಇಪ್ಪತ್ತೆ„ದು ದಿನಗಳ ಚಿತ್ರೀಕರಣ ನಡೆದಿದೆ.

ಎರಡು ಸಾಹಸ ಸನ್ನಿವೇಶಗಳ ಹಾಗೂ ಮಾತಿನ ಭಾಗದ ಸನ್ನಿವೇಶಗಳು ಈ ಹಂತದಲ್ಲಿ ಚಿತ್ರೀಕರಣಗೊಂಡಿದೆ. ಪ್ರಮೋದ್‌ ಪಂಜು, ಅದಿತಿ ಪ್ರಭುದೇವ, ಭಜರಂಗಿ ಲೋಕಿ, ವಿಶ್ವ, ಅಚ್ಯುತಕುಮಾರ್‌ ಮುಂತದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ವೀರೇಶ್‌ ಪಿ.ಎಂ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ನೀಡಿ¨ªಾರೆ. ರಾಜೇಶ್‌ ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನ, ಡಿಫ‚‌ರೆಂಟ್‌ ಡ್ಯಾನಿ, ವಿನೋದ್‌ ಸಾಹಸ ನಿರ್ದೇಶನ ಹಾಗೂ ಇಸ್ಮಾಯಿಲ್‌ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು
ಯೋಗರಾಜ್‌ ಭಟ್‌, ಜಯಂತ ಕಾಯ್ಕಿಣಿ ಬರೆದಿದ್ದಾರೆ.

 ಪ್ರಮೋದ್‌ಪಂಜು, ಅದಿತಿ ಪ್ರಭುದೇವ, ಅಚ್ಯುತಕುಮಾರ್‌, ಭಜರಂಗಿ ಲೋಕಿ,ತರಂಗ ವಿಶ್ವ, ಎಂ.ಎಸ್‌.ಉಮೇಶ್‌, ಸಂಗೀತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 


Trending videos

Back to Top