CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗುರು ಹೊಸ ಚಿತ್ರ ಸಂಹಾರಕ್ಕೆ ಹರಿಪ್ರಿಯ, ಕಾವ್ಯ ನಾಯಕಿಯರು...

ಮೊನ್ನೆಯಷ್ಟೇ ಪ್ರಜ್ವಲ್‌ ಮತ್ತು ರವಿಚಂದ್ರನ್‌ ಅಭಿನಯದಲ್ಲಿ ರಾಜ ಮಾಣಿಕ್ಯ ಎಂಬ ಚಿತ್ರ ಮಾಡುವುದಾಗಿ ಘೋಷಿಸಿದ್ದರು ನಿರ್ದೇಶಕ ಗುರು ದೇಶಪಾಂಡೆ. ಆ ಚಿತ್ರ ಶುರುವಾಗುವ ಮುನ್ನ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರಕ್ಕೆ ಅವರು ಚಾಲನೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬುಧವಾರ ಬೆಳಿಗ್ಗೆ ರವಿ ಬಸ್ರೂರು ಸಂಗೀತ ಸಂಯೋಜನೆಯಲ್ಲಿ ಹಾಡುಗಳ ರೆಕಾರ್ಡಿಂಗ್‌ ಕೆಲಸ ಸಹ ಶುರುವಾಗಿದೆ.

ಅಂದಹಾಗೆ, ಈ ಚಿತ್ರದ ಹೆಸರು "ಸಂಹಾರ'. ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಇನ್ನು ಚಿಕ್ಕಣ್ಣ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಚಿರು ಮತ್ತು ಚಿಕ್ಕಣ್ಣ ಅಭಿನಯದಲ್ಲಿ "ರುದ್ರ ತಾಂಡವ' ಮಾಡಿದ್ದರು ಗುರು. ಈಗ ಅವರಿಬ್ಬರ ಜೊತೆಗೆ ಮತ್ತೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಚಿರು ಮತ್ತು ಚಿಕ್ಕಣ್ಣರಷ್ಟೇ ಅಲ್ಲ, "ರುದ್ರ ತಾಂಡವ' ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಜಗದೀಶ್‌ ವಾಲಿ, ಸಂಕಲನಕಾರ ಕೆ.ಎಂ. ಪ್ರಕಾಶ್‌ ಇಲ್ಲೂ ಮುಂದುವರೆಯುತ್ತಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತ್ರ ಹೊಸ ಸೇರ್ಪಡೆ.

ಅಂದಹಾಗೆ, ಈ ಚಿತ್ರದಲ್ಲಿ ಚಿರುಗೆ ನಾಯಕಿಯರಾಗಿ ಹರಿಪ್ರಿಯ ಮತ್ತು ಕಾವ್ಯ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ವೆಂಕಟೇಶ್‌ ಮತ್ತು ಸುಂದರ್‌ ಕಾಮರಾಜ್‌ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಏಪ್ರಿಲ್‌ 29ರಂದು ಸೆಟ್ಟೇರಲಿದೆ.

Back to Top