ಗಾಸಿಪ್ ಗೆ ತೆರೆ;ಭಾವಿ ಪತಿ ರಕ್ಷಿತ್ ಗೆ ರಶ್ಮಿಕಾ ವಿಶ್ ಹೀಗಿದೆ ನೋಡಿ!
Team Udayavani, Jun 6, 2017, 4:05 PM IST
ಬೆಂಗಳೂರು: ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬ ಭರ್ಜರಿಯಾಗಿ ನಡೆದಿತ್ತು. ಅದರ ಜೊತೆಗೆ ಇವತ್ತು ಭಾವಿ ಪತಿಗೆ ರಶ್ಮಿಕಾ ಮಂದಣ್ಣ ಟ್ವೀಟ್ ಮೂಲಕ ವಿಶ್ ಮಾಡಿ ಗುಟ್ಟನ್ನು ರಟ್ಟು ಮಾಡಿದ್ದಾರೆ!
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮದುವೆ ಆಗೋದು ಪಕ್ಕಾ ಆಗಿದೆ. ನಾನು ಕಂಡಂತಹ ಅತ್ಯಂತ ಸರಳ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ. ನೀವು ಪ್ರಯತ್ನ ಪಡದೆಯೇ ನಿಮ್ಮನ್ನು ಜನ ಇಷ್ಟ ಪಡುತ್ತಾರೆ. ಅದರಲ್ಲಿ ನಮ್ಮ ಪೋಷಕರು ಕೂಡ ಒಬ್ಬರು. ನಮ್ಮ ಚಿಕ್ಕ ಕುಟುಂಬಕ್ಕೆ ಸ್ವಾಗತ ಅಂತಾ ರಶ್ಮಿಕಾ ಅವರು ಫೇಸ್ಬುಕ್ನಲ್ಲಿ ರಕ್ಷಿತ್ ಶೆಟ್ಟಿಗೆ ವಿಶ್ ಮಾಡಿದ್ದಾರೆ.
ರಶ್ಮಿಕಾ ತಂದೆ ತಮ್ಮ ಭಾವಿ ಅಳಿಯನಿಗೆ ಪ್ರೀತಿಯ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲ ಕೈಗೆ ಬಂಗಾರದ ಖಡಗ ತೊಡಿಸುವ ಮೂಲಕ ನಮ್ಮ ಕುಟುಂಬಕ್ಕೆ ಸ್ವಾಗತ ಅಂತ ಹೇಳಿದ್ದಾರೆ.
ಜುಲೈ 3ರಂದು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ನಡೆಯಲಿದೆ. ಕುಶಾಲನಗರದಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಎರಡೂ ಕುಟುಂಬದದ ಸದಸ್ಯರು ಮತ್ತು ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ