ರಕ್ಷಿತ್ ಶೆಟ್ಟಿ, ರಶ್ಮಿಕಾ ಎಂಗೇಜ್ ಮೆಂಟ್; 2 ವರ್ಷದ ನಂತ್ರ ಮದುವೆ
Team Udayavani, Jul 3, 2017, 6:18 PM IST
ಮಡಿಕೇರಿ:ಸ್ಯಾಂಡಲ್ ವುಡ್ ನ ಕಿರಿಕ್ ಜೋಡಿಗಳಾದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ರಶ್ಮಿಕಾ ಮಂದಣ್ಣ ಹುಟ್ಟೂರಾದ ಕೊಡಗು ಜಿಲ್ಲೆಯ ವಿರಾಜಪೇಟೆಯ ಸೆರೆನಿಟಿ ಹಾಲ್ನಲ್ಲಿ ಸೋಮವಾರ ಸಂಜೆ ಉಂಗುರ ಬದಲಿಸಿಕೊಳ್ಳುವ ಶಾಸ್ತ್ರದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಬೆಳಗ್ಗೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ರಕ್ಷಿತ್ ಹಾಗೂ ರಶ್ಮಿಕಾ ಕುಟುಂಬಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದಲ್ಲಿ ಲಗ್ನ ಪತ್ರಿಕೆ ಶಾಸ್ತ್ರ ಪೂರ್ಣಗೊಳಿಸಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಶ್ಮಿಕಾ ತಾಯಿ ಸುಮನಾ, ಎಂಗೇಜ್ ಮೆಂಟ್ ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಕ್ಷಿತ್ ಮತ್ತು ರಶ್ಮಿಕಾ ಮದುವೆ 2 ವರ್ಷದ ನಂತರ ನಡೆಯಲಿದೆ ಎಂದು ಹೇಳಿದರು.
ಶ್ರದ್ಧಾ ಪೊನ್ನಪ್ಪ ವಿನ್ಯಾಸ ಮಾಡಿರುವ ಉಡುಗೆಯಲ್ಲಿ ರಶ್ಮಿಕಾ ಕಂಗೊಳಿಸಿದರೆ, ರಕ್ಷಿತ್ ತಾವೇ ವಿನ್ಯಾಸ ಮಾಡಿರುವ ವಿಶೇಷ ಸೂಟ್ ಧರಿಸಿದ್ದರು. ಸ್ಯಾಂಡಲ್ ವುಡ್ನ ಗಣ್ಯರು, ಆತ್ಮೀಯರು, ಹಿತೈಷಿಗಳು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಸಿರು ಬಿಳಿ ಬಣ್ಣದ ಹಾಲ್ನಲ್ಲಿ ಅದ್ದೂರಿ ಗೆಟ್ ಟುಗೆದರ್ ನಡೆಯಿತು. 2 ಅಡಿ ಉದ್ದದ ಕೇಕ್ ಅನ್ನು ರಕ್ಷಿತ್, ರಶ್ಮಿಕಾ ಕತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್