CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಯುಗಾದಿಗೆ ರವಿಶಂಕರ್‌ ಮಗ ಅದ್ವೈತ ಸಿನಿಮಾ

ಖಳನಟ ರವಿಶಂಕರ್‌ ತುಂಬಾ ದಿನಗಳಿಂದ ತಮ್ಮ ಮಗ ಅದ್ವೈತ್‌ನನ್ನು ಹೀರೋ ಆಗಿ ಲಾಂಚ್‌ ಮಾಡುತ್ತೇನೆಂದು ಹೇಳುತ್ತಿದ್ದರು. ಆದರೆ, ಯಾವಾಗ ಎಂಬ ಪ್ರಶ್ನೆ ಮಾತ್ರ ಕಾಡುತ್ತಲೇ ಇತ್ತು. ಈಗ ಆ ಪ್ರಶ್ನೆಗೆ ಸ್ವತಃ ರವಿಶಂಕರ್‌ ಉತ್ತರಿಸಿದ್ದಾರೆ. ತಮ್ಮ ಮಗನನ್ನು ಯುಗಾದಿ ಹಬ್ಬದ ಸಮಯದಲ್ಲಿ ಹೀರೋ ಆಗಿ ಲಾಂಚ್‌ ಮಾಡಲಿದ್ದು, ಈಗ ಅದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ ಎಂದಿದ್ದಾರೆ.

ಸದ್ಯ ಅದ್ವೈತ್‌ ನ್ಯೂಯಾರ್ಕ್‌ನ ಆ್ಯಕ್ಟಿಂಗ್‌ ಸ್ಕೂಲ್‌ನಲ್ಲಿ ಕಲಿಯುತ್ತಿದ್ದು, ಜನವರಿಯಲ್ಲಿ ಅವರು ವಾಪಾಸ್ಸಾಗಲಿದ್ದಾರಂತೆ. ಆ ನಂತರ ಸಿನಿಮಾದ ಕೆಲಸ ಜೋರಾಗಿ ನಡೆಯಲಿದೆ. "ಮಗ ನ್ಯೂಯಾರ್ಕ್‌ನಿಂದ ಜನವರಿಗೆ ಬರ್ತಾನೆ. ಯುಗಾದಿಗೆ ಆತ ಹೀರೋ ಆಗಿ ನಟಿಸುವ ಸಿನಿಮಾ ಲಾಂಚ್‌ ಮಾಡುವ ಉದ್ದೇಶವಿದೆ. ಸದ್ಯಕ್ಕೆ ಕಥೆ, ಟೈಟಲ್‌ ಯಾವುದೂ ಫೈನಲ್‌ ಆಗಿಲ್ಲ. ನಾಲ್ಕೈದು ಕಥೆ ಮೈಂಡ್‌ನ‌ಲ್ಲಿದೆ.

ಅದರಲ್ಲಿ ಆತನಿಗೆ ಹೊಂದಿಕೆಯಾಗುವ ಒಂದು ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.ಈ ಸಿನಿಮಾದ ನಿರ್ದೇಶನ ಕೂಡಾ ನನ್ನದೇ. ಮೊದಲ ಸಿನಿಮಾವನ್ನು ಕನ್ನಡದಲ್ಲೇ ಮಾಡುತ್ತಿದ್ದೇನೆ' ಎನ್ನುವುದು ರವಿಶಂಕರ್‌ ಮಾತು. ತನ್ನ ಮಗ ಒಳ್ಳೆಯ ಪರ್‌ಫಾರ್ಮರ್‌ ಎಂಬುದು ರವಿಶಂಕರ್‌ಗೆ ಗೊತ್ತಾಗಿದೆ. ಹಾಗಾಗಿ, ಅದ್ವೈತ್‌ ನಟನೆಗೆ ಸ್ಕೋಪ್‌ ಇರುವ ಸಿನಿಮಾ ಮಾಡಲು ರವಿಶಂಕರ್‌ ನಿರ್ಧರಿಸಿದ್ದಾರೆ. 

ಮನಂ ತರಹದ ಸಿನಿಮಾ ಮಾಡೋ ಆಸೆ: ರವಿಶಂಕರ್‌ ಅವರಿಗೆ ಒಂದು ಆಸೆ ಇದೆ. ಅದು ತೆಲುಗಿನಲ್ಲಿ ಬಂದ "ಮನಂ' ತರಹದ ಸಿನಿಮಾ ಮಾಡಬೇಕೆಂಬುದು. ಆ ಸಿನಿಮಾದಲ್ಲಿ ಒಂದು ಕುಟುಂಬದ ಸದಸ್ಯರೆಲ್ಲರೂ ನಟಿಸಿದ್ದರು. ಅದರಂತೆ ರವಿಶಂಕರ್‌ ಅವರಿಗೂ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸಿನಿಮಾ ಮಾಡುವ ಆಸೆ ಇದೆ. "ನಮ್ಮ ಕುಟುಂಬದಲ್ಲೂ ತುಂಬಾ ಜನ ಕಲಾವಿದರಿದ್ದಾರೆ.

ಸಾಯಿ, ಅವರ ಮಗ ಆದಿ, ನಾನು, ನನ್ನ ಮಗ, ಅಯ್ಯಪ್ಪ ... ಹೀಗೆ ನಮ್ಮ ಮನೆಯಲ್ಲೂ ಐದು ಮಂದಿ ಕಲಾವಿದರಿದ್ದೇವೆ. ಎಲ್ಲಾ ಸೇರಿ ಸಿನಿಮಾ ಮಾಡಬೇಕೆಂಬ ಆಸೆ ಇದೆ. ಅಪ್ಪ ಇದ್ದಾಗಲೇ ಆ ತರಹದ ಒಂದು ಆಸೆ ಇತ್ತು. ಆದರೆ ಆಗ ಆಗಲಿಲ್ಲ. ಮೊದಲು ಮಗನನ್ನು ಲಾಂಚ್‌ ಮಾಡಿ, ಆ ನಂತರ ಫ್ಯಾಮಿಲಿ ಸಿನಿಮಾ ಬಗ್ಗೆ ಯೋಚನೆ ಮಾಡುತ್ತೇನೆ' ಎನ್ನುತ್ತಾರೆ ರವಿಶಂಕರ್‌. 

Back to Top