ಯುಗಾದಿಗೆ ರವಿಶಂಕರ್‌ ಮಗ ಅದ್ವೈತ ಸಿನಿಮಾ

Team Udayavani, Jul 17, 2017, 10:56 AM IST

RAVISHANKAR.jpg

ಖಳನಟ ರವಿಶಂಕರ್‌ ತುಂಬಾ ದಿನಗಳಿಂದ ತಮ್ಮ ಮಗ ಅದ್ವೈತ್‌ನನ್ನು ಹೀರೋ ಆಗಿ ಲಾಂಚ್‌ ಮಾಡುತ್ತೇನೆಂದು ಹೇಳುತ್ತಿದ್ದರು. ಆದರೆ, ಯಾವಾಗ ಎಂಬ ಪ್ರಶ್ನೆ ಮಾತ್ರ ಕಾಡುತ್ತಲೇ ಇತ್ತು. ಈಗ ಆ ಪ್ರಶ್ನೆಗೆ ಸ್ವತಃ ರವಿಶಂಕರ್‌ ಉತ್ತರಿಸಿದ್ದಾರೆ. ತಮ್ಮ ಮಗನನ್ನು ಯುಗಾದಿ ಹಬ್ಬದ ಸಮಯದಲ್ಲಿ ಹೀರೋ ಆಗಿ ಲಾಂಚ್‌ ಮಾಡಲಿದ್ದು, ಈಗ ಅದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ ಎಂದಿದ್ದಾರೆ.

ಸದ್ಯ ಅದ್ವೈತ್‌ ನ್ಯೂಯಾರ್ಕ್‌ನ ಆ್ಯಕ್ಟಿಂಗ್‌ ಸ್ಕೂಲ್‌ನಲ್ಲಿ ಕಲಿಯುತ್ತಿದ್ದು, ಜನವರಿಯಲ್ಲಿ ಅವರು ವಾಪಾಸ್ಸಾಗಲಿದ್ದಾರಂತೆ. ಆ ನಂತರ ಸಿನಿಮಾದ ಕೆಲಸ ಜೋರಾಗಿ ನಡೆಯಲಿದೆ. “ಮಗ ನ್ಯೂಯಾರ್ಕ್‌ನಿಂದ ಜನವರಿಗೆ ಬರ್ತಾನೆ. ಯುಗಾದಿಗೆ ಆತ ಹೀರೋ ಆಗಿ ನಟಿಸುವ ಸಿನಿಮಾ ಲಾಂಚ್‌ ಮಾಡುವ ಉದ್ದೇಶವಿದೆ. ಸದ್ಯಕ್ಕೆ ಕಥೆ, ಟೈಟಲ್‌ ಯಾವುದೂ ಫೈನಲ್‌ ಆಗಿಲ್ಲ. ನಾಲ್ಕೈದು ಕಥೆ ಮೈಂಡ್‌ನ‌ಲ್ಲಿದೆ.

ಅದರಲ್ಲಿ ಆತನಿಗೆ ಹೊಂದಿಕೆಯಾಗುವ ಒಂದು ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.ಈ ಸಿನಿಮಾದ ನಿರ್ದೇಶನ ಕೂಡಾ ನನ್ನದೇ. ಮೊದಲ ಸಿನಿಮಾವನ್ನು ಕನ್ನಡದಲ್ಲೇ ಮಾಡುತ್ತಿದ್ದೇನೆ’ ಎನ್ನುವುದು ರವಿಶಂಕರ್‌ ಮಾತು. ತನ್ನ ಮಗ ಒಳ್ಳೆಯ ಪರ್‌ಫಾರ್ಮರ್‌ ಎಂಬುದು ರವಿಶಂಕರ್‌ಗೆ ಗೊತ್ತಾಗಿದೆ. ಹಾಗಾಗಿ, ಅದ್ವೈತ್‌ ನಟನೆಗೆ ಸ್ಕೋಪ್‌ ಇರುವ ಸಿನಿಮಾ ಮಾಡಲು ರವಿಶಂಕರ್‌ ನಿರ್ಧರಿಸಿದ್ದಾರೆ. 

ಮನಂ ತರಹದ ಸಿನಿಮಾ ಮಾಡೋ ಆಸೆ: ರವಿಶಂಕರ್‌ ಅವರಿಗೆ ಒಂದು ಆಸೆ ಇದೆ. ಅದು ತೆಲುಗಿನಲ್ಲಿ ಬಂದ “ಮನಂ’ ತರಹದ ಸಿನಿಮಾ ಮಾಡಬೇಕೆಂಬುದು. ಆ ಸಿನಿಮಾದಲ್ಲಿ ಒಂದು ಕುಟುಂಬದ ಸದಸ್ಯರೆಲ್ಲರೂ ನಟಿಸಿದ್ದರು. ಅದರಂತೆ ರವಿಶಂಕರ್‌ ಅವರಿಗೂ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸಿನಿಮಾ ಮಾಡುವ ಆಸೆ ಇದೆ. “ನಮ್ಮ ಕುಟುಂಬದಲ್ಲೂ ತುಂಬಾ ಜನ ಕಲಾವಿದರಿದ್ದಾರೆ.

ಸಾಯಿ, ಅವರ ಮಗ ಆದಿ, ನಾನು, ನನ್ನ ಮಗ, ಅಯ್ಯಪ್ಪ … ಹೀಗೆ ನಮ್ಮ ಮನೆಯಲ್ಲೂ ಐದು ಮಂದಿ ಕಲಾವಿದರಿದ್ದೇವೆ. ಎಲ್ಲಾ ಸೇರಿ ಸಿನಿಮಾ ಮಾಡಬೇಕೆಂಬ ಆಸೆ ಇದೆ. ಅಪ್ಪ ಇದ್ದಾಗಲೇ ಆ ತರಹದ ಒಂದು ಆಸೆ ಇತ್ತು. ಆದರೆ ಆಗ ಆಗಲಿಲ್ಲ. ಮೊದಲು ಮಗನನ್ನು ಲಾಂಚ್‌ ಮಾಡಿ, ಆ ನಂತರ ಫ್ಯಾಮಿಲಿ ಸಿನಿಮಾ ಬಗ್ಗೆ ಯೋಚನೆ ಮಾಡುತ್ತೇನೆ’ ಎನ್ನುತ್ತಾರೆ ರವಿಶಂಕರ್‌. 

ಟಾಪ್ ನ್ಯೂಸ್

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.