CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

'ನೀರ್ ದೋಸೆ' ಆಯ್ತು, ಈಗ ನವರಸ ನಾಯಕ ಜಗ್ಗೇಶ್  'ಲೇಡೀಸ್ ಟೈಲರ್' 

'ಲೇಡೀಸ್ ಟೈಲರ್' ಯಾರಾಗ್ತಾರೆ ಎಂಬ ಬಗ್ಗೆ ಗೊಂದಲ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ನವರಸನಾಯಕನೇ 'ಲೇಡೀಸ್ ಟೈಲರ್'ಗೆ  ನಾಯಕ ಎಂಬ ವಿಷಯ  ನಿರ್ದೇಶಕ ವಿಜಯಪ್ರಸಾದ್ ಕಡೆಯಿಂದ ಫೈನಲ್ ಆಗಿದೆ. ಯೋಗರಾಜ್‌ ಭಟ್‌ ಮೂವೀಸ್‌ ಬ್ಯಾನರ್‌ನಲ್ಲಿ ತಯಾರಾಗುವ 'ಲೇಡೀಸ್ ಟೈಲರ್' ಸಿನಿಮಾದಲ್ಲಿ ರವಿಶಂಕರ್ ಗೌಡ ಅವರು ನಾಯಕನಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅನಂತರ ಬದಲಾವಣೆಯ ನಿರ್ಧಾರವನ್ನೂ ಕೈಗೊಳ್ಳಲಾಯಿತು, ರವಿಶಂಕರ್ ಬದಲಿಗೆ ನೀನಾಸಂ ಸತೀಶ್ ಅವರತ್ತ ಚಿತ್ತ ಹರಿಸಿದ ವಿಜಯಪ್ರಸಾದ್, ಇದೀಗ ಮತ್ತೆ ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿದ್ದಾರೆ. 

ಅಂದ ಹಾಗೆ ನವರಸ ನಾಯಕ ಜಗ್ಗೇಶ್ ಅವರೇ 'ನೀರ್ ದೋಸೆ' ರೀತಿ 'ಲೇಡೀಸ್ ಟೈಲರ್' ಸಿನಿಮಾವನ್ನು ಕಾಮಿಡಿ ಕ್ಲೈಮ್ಯಾಕ್ಸ್ ನತ್ತ ಕೊಂಡೊಯ್ಯುವರೆಂಬ ಭರವಸೆ ಹೊಂದಿದ್ದಾರಂತೆ ವಿಜಯಪ್ರಸಾದ್.

ಸನತ್‌ ಹಾಗೂ ಸುಧೀರ್‌ "ಲೇಡಿಸ್‌ ಟೈಲರ್‌'ಗೆ ಬಂಡವಾಳ ಹೂಡುತ್ತಿದ್ದು, ಈ ಪಕ್ಕ ಕಾಮಿಡಿ ಸಿನಿಮಾ ಜಗ್ಗೇಶ್ ಅಭಿನಯದಲ್ಲಿ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ ಎಂಬುದು ನಿರ್ದೇಶಕ ವಿಜಯಪ್ರಸಾದ್‌ ಅವರ ಲೆಕ್ಕಾಚಾರ. ಇದರಲ್ಲಿ ಮುಸ್ಲಿಂ ಹುಡುಗಿಯ ಪಾತ್ರ ಮಾಡಲು ಹೀರೋಯಿನ್ ಗಾಗಿಯೂ ಹುಡುಕಾಟ ಸಾಗಿದೆ. ಹೀರೊ ಆಯ್ಕೆ ನಡೆದಿದ್ದು ಇದೀಗ ನಟಿಗಾಗಿ ಹುಡುಕಾಟ ಆರಂಭವಾಗಿದೆ.

Back to Top