‘ನೀರ್ ದೋಸೆ’ ಆಯ್ತು, ಈಗ ನವರಸ ನಾಯಕ ಜಗ್ಗೇಶ್ ‘ಲೇಡೀಸ್ ಟೈಲರ್’
Team Udayavani, Jul 17, 2017, 12:18 PM IST
‘ಲೇಡೀಸ್ ಟೈಲರ್’ ಯಾರಾಗ್ತಾರೆ ಎಂಬ ಬಗ್ಗೆ ಗೊಂದಲ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ನವರಸನಾಯಕನೇ ‘ಲೇಡೀಸ್ ಟೈಲರ್’ಗೆ ನಾಯಕ ಎಂಬ ವಿಷಯ ನಿರ್ದೇಶಕ ವಿಜಯಪ್ರಸಾದ್ ಕಡೆಯಿಂದ ಫೈನಲ್ ಆಗಿದೆ. ಯೋಗರಾಜ್ ಭಟ್ ಮೂವೀಸ್ ಬ್ಯಾನರ್‌ನಲ್ಲಿ ತಯಾರಾಗುವ ‘ಲೇಡೀಸ್ ಟೈಲರ್’ ಸಿನಿಮಾದಲ್ಲಿ ರವಿಶಂಕರ್ ಗೌಡ ಅವರು ನಾಯಕನಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅನಂತರ ಬದಲಾವಣೆಯ ನಿರ್ಧಾರವನ್ನೂ ಕೈಗೊಳ್ಳಲಾಯಿತು, ರವಿಶಂಕರ್ ಬದಲಿಗೆ ನೀನಾಸಂ ಸತೀಶ್ ಅವರತ್ತ ಚಿತ್ತ ಹರಿಸಿದ ವಿಜಯಪ್ರಸಾದ್, ಇದೀಗ ಮತ್ತೆ ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿದ್ದಾರೆ.
ಅಂದ ಹಾಗೆ ನವರಸ ನಾಯಕ ಜಗ್ಗೇಶ್ ಅವರೇ ‘ನೀರ್ ದೋಸೆ’ ರೀತಿ ‘ಲೇಡೀಸ್ ಟೈಲರ್’ ಸಿನಿಮಾವನ್ನು ಕಾಮಿಡಿ ಕ್ಲೈಮ್ಯಾಕ್ಸ್ ನತ್ತ ಕೊಂಡೊಯ್ಯುವರೆಂಬ ಭರವಸೆ ಹೊಂದಿದ್ದಾರಂತೆ ವಿಜಯಪ್ರಸಾದ್.
ಸನತ್ ಹಾಗೂ ಸುಧೀರ್ “ಲೇಡಿಸ್ ಟೈಲರ್’ಗೆ ಬಂಡವಾಳ ಹೂಡುತ್ತಿದ್ದು, ಈ ಪಕ್ಕ ಕಾಮಿಡಿ ಸಿನಿಮಾ ಜಗ್ಗೇಶ್ ಅಭಿನಯದಲ್ಲಿ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ ಎಂಬುದು ನಿರ್ದೇಶಕ ವಿಜಯಪ್ರಸಾದ್ ಅವರ ಲೆಕ್ಕಾಚಾರ. ಇದರಲ್ಲಿ ಮುಸ್ಲಿಂ ಹುಡುಗಿಯ ಪಾತ್ರ ಮಾಡಲು ಹೀರೋಯಿನ್ ಗಾಗಿಯೂ ಹುಡುಕಾಟ ಸಾಗಿದೆ. ಹೀರೊ ಆಯ್ಕೆ ನಡೆದಿದ್ದು ಇದೀಗ ನಟಿಗಾಗಿ ಹುಡುಕಾಟ ಆರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?