CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸುಖಧರೆ ಚಿತ್ರದಲ್ಲಿ ವಿಜಯ್‌; ಕನಕ, ಜಾನಿ ನಂತರ ಚಿತ್ರ ಶುರು

ನಿರ್ದೆಶಕ ಮಹೇಶ್‌ ಸುಖಧರೆ ಅವರು ರಾಜಕಾರಣಿ ಚೆಲುವರಾಯಸ್ವಾಮಿ ಪುತ್ರ ಸಚಿನ್‌ ಗಾಗಿ ದೇಸಿ ಸೊಗಡಿನ ಕಥೆವುಳ್ಳ "ಹ್ಯಾಪಿ ಬರ್ತ್ ಡೇ' ಚಿತ್ರ ನಿರ್ದೇಶಿಸಿದ್ದು ಎಲ್ಲರಿಗೂ ಗೊತ್ತು. ಆ ಚಿತ್ರದ ನಂತರ ಸುಖಧರೆ ಮತ್ಯಾವ ಚಿತ್ರಕ್ಕೆ ಕೈ ಹಾಕುತ್ತಾರೆ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಎಲ್ಲೆಡೆ ಗಿರಕಿ ಹೊಡೆಯುತ್ತಿತ್ತು. "ಹ್ಯಾಪಿ ಬರ್ತ್‌ಡೆ' ಸಿನಿಮಾ ಬಳಿಕ ಮಹೇಶ್‌ ಸುಖಧರೆ ಎಲ್ಲೂ ಹೆಚ್ಚು ಸುದ್ದಿಯಾಗಲಿಲ್ಲ.

ಹಾಗಂತ ಅವರು ಸಿನಿಮಾ ಚಟುವಟಿಕೆಗಳಿಂದ ದೂರ ಇರಲಿಲ್ಲ. ಯಾಕೆಂದರೆ, ಅವರು ಇಷ್ಟು ದಿನಗಳ ಕಾಲ ಹೊಸ ಚಿತ್ರದ ಕಥೆಯ ಕೆತ್ತನೆಯಲ್ಲೇ ಬಿಜಿಯಾಗಿದ್ದರು. ಅವರೀಗ ಹೊಸತನ ಇರುವ ಚಿತ್ರಕ್ಕೊಂದು ಕಥೆ ಮಾಡಿಕೊಂಡಿದ್ದಾರೆ.

ಈಗ ಮತ್ತೂಂದು ಸಿನಿಮಾ ನಿರ್ದೇಶನಕ್ಕೆ ಅಣಿಯಾಗಿರುವ ಮಹೇಶ್‌ ಸುಖಧರೆ, ಪುನಃ ಯಾವು ದಾದರು ಹೊಸ ಪ್ರತಿಭೆಯನ್ನು ಕರೆದು ತರುತ್ತಾರೆಯೇ ಎಂಬ ಅನುಮಾನ ಬೇಡ. ಹಾಗಂತ ಯಾರೊಬ್ಬರೂ ಭಾವಿಸಬೇಕಿಲ್ಲ. ಯಾಕೆಂದರೆ, ಮಹೇಶ್‌ ಸುಖಧರೆ ಅವರು ಪಕ್ಕಾ
ಕಮರ್ಷಿಯಲ್‌ ಸಿನಿಮಾಗೆ ಕೈ ಹಾಕಿರುವುದರಿಂದ, ಅವರ ಮುಂದಿನ ಚಿತ್ರಕ್ಕೆ ಕಮರ್ಷಿಯಲ್‌ ಹೀರೋನೇ ಇರುತ್ತಾರೆ. ಅದು ಬೇರಾರೂ ಅಲ್ಲ,
"ದುನಿಯಾ' ವಿಜಯ್‌. ಹೌದು, ಮಹೇಶ್‌ ಸುಖಧರೆ ತಮ್ಮ ಮುಂದಿನ ಚಿತ್ರವನ್ನು "ದುನಿಯಾ' ವಿಜಯ್‌ ಅವರೊಂದಿಗೆ ಮಾಡುತ್ತಿದ್ದಾರೆ
ಎಂಬುದು ಈ ಹೊತ್ತಿನ ಹೊಸ ಸುದ್ದಿ.

ಸದ್ಯಕ್ಕೆ "ದುನಿಯಾ' ವಿಜಯ್‌ ಅವರ ಚಿತ್ರವನ್ನು ಮಹೇಶ್‌ ಸುಖಧರೆ ನಿರ್ದೇಶನ ಮಾಡುತ್ತಾರೆ ಮತ್ತು ಅದೊಂದು ಪಕ್ಕಾ ಸ್ವಮೇಕ್‌
ಚಿತ್ರ ಅನ್ನೋದಷ್ಟೇ ಲೇಟೆಸ್ಟ್‌ ನ್ಯೂಸು. ಅದನ್ನು ಹೊರತುಪಡಿಸಿದರೆ, ಕಥೆ ಏನು, ಸಿನಿಮಾದಲ್ಲಿ ಯಾರ್ಯಾರಿರುತ್ತಾರೆ, ತಂತ್ರಜ್ಞರು ಯಾರು,
ಯಾವಾಗ ಚಿತ್ರೀಕರಣ ಶುರುವಾಗಲಿದೆ, ಎಲ್ಲೆಲ್ಲಿ ಶೂಟಿಂಗ್‌ ನಡೆಯುತ್ತೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲ.

ಯಾಕೆಂದರೆ, ಈಗಷ್ಟೇ ಒಂದು ರೌಂಡ್‌ ಸ್ಕ್ರಿಪ್ಟ್ನಲ್ಲಿ ಕುಳಿತಿರುವ ಮಹೇಶ್‌ ಸುಖಧರೆ, ಅದನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಡ್‌ನ‌ಲ್ಲಿದ್ದಾರೆ. ಇನ್ನು, ದುನಿಯಾ ವಿಜಯ್‌ ಕೂಡ "ಕನಕ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರ ಮುಗಿದ ಬಳಿಕ ಪ್ರೀತಂ ಗುಬ್ಬಿ ನಿರ್ದೇಶನದ "ಜಾನಿ
ಜಾನಿ ಯೆಸ್‌ ಪಪ್ಪಾ' ಚಿತ್ರದಲ್ಲಿ ನಟಿಸಲಿದ್ದಾರೆ.

ಈ ಎರಡು ಸಿನಿಮಾ ನಂತರವಷ್ಟೇ ಮಹೇಶ್‌ ಸುಖಧರೆ ಅವರ ಚಿತ್ರದಲ್ಲಿ ದುನಿಯಾ ವಿಜಯ್‌ ನಟಿಸುವ ಸಾಧ್ಯತೆ ಇದೆ. ಅಂದಹಾಗೆ, ದುನಿಯಾ ವಿಜಯ್‌ ಚಿತ್ರಕ್ಕೆ ಮಹೇಶ್‌ ಸುಖಧರೆ ನಿರ್ದೇಶನ ಮಾತ್ರವಲ್ಲ, ನಿರ್ಮಾಣವನ್ನೂ ಮಾಡುತ್ತಿದ್ದಾರೆ. ದಸರಾ ಹಬ್ಬದ ಹೊತ್ತಿಗೆ ಸುಖಧರೆ, ತಮ್ಮ ಹೊಸಚಿತ್ರದ ಸಂಪೂರ್ಣ ಚಿತ್ರಣವನ್ನು ಕೊಡಲಿದ್ದಾರೆ. ಅಲ್ಲಿಯವರೆಗೆ, ಕಥೆಯತ್ತ ತಮ್ಮ ಚಿತ್ತ ಎಂದಷ್ಟೇ
ಹೇಳುತ್ತಾರೆ ಅವರು.

Back to Top