CONNECT WITH US  

ಕೋಲಾರದತ್ತ  ಭೀಮಸೇನ

Bheema Sena Nala Maharaja

ಭೀಮಸೇನ ನಳಮಹಾರಾಜ ಎಂಬ ಚಿತ್ರ ಆರಂಭವಾಗಿರೋದು ನಿಮಗೆ ಗೊತ್ತೇ ಇದೆ. ಈಗ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ರೆಡಿಯಾಗಿದೆ.

ಮೊದಲ ಹಂತದ ಚಿತ್ರೀಕರಣ ಕಳಸದಲ್ಲಿ ನಡೆದಿದ್ದು, ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರತಂಡ ಇಲ್ಲಿ ಚಿತ್ರೀಕರಿಸಿಕೊಂಡಿದೆ. ಹಚ್ಚಹಸಿರಿನ ಹಿನ್ನೆಲೆ ಬೇಕಾಗಿದ್ದ ಕಾರಣ ಚಿತ್ರತಂಡ ಕಳಸದಲ್ಲಿ ಚಿತ್ರೀಕರಣ ನಡೆಸಿದೆ. ಚಿತ್ರದ ಎಲ್ಲಾ ಕಲಾವಿದರು ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು ಕೂಡಾ. ಈಗ ಎರಡನೇ ಹಂತದ ಚಿತ್ರೀಕರಣ ಸೆ.9 ರಿಂದ ಕೋಲಾರದಲ್ಲಿ ನಡೆಯಲಿದೆ. ಲೊಕೇಶನ್‌ ಕೋಲಾರಕ್ಕೆ ಶಿಫ್ಟ್ ಆಗಲು ಕಾರಣ ಕಥೆ ಎಂದಷ್ಟೇ ಹೇಳುತ್ತದೆ ಚಿತ್ರತಂಡ.

"ಭೀಮಸೇನ ನಳಮಹಾರಾಜ' ಚಿತ್ರವನ್ನು ಕಾರ್ತಿಕ್‌ ಸರಗೂರು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ "ಜೀರ್‌ಜಿಂಬೆ' ಎಂಬ ಸಿನಿಮಾ ಮಾಡಿದ್ದ ಕಾರ್ತಿಕ್‌ ಅವರು ಈಗ "ಭೀಮಸೇನ ನಳಮಹಾರಾಜ' ಮಾಡುತ್ತಿದ್ದಾರೆ. "ಕಿರಿಕ್‌ ಪಾರ್ಟಿ' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ಅರವಿಂದ್‌ಗೆ ಈಗ "ಭೀಮಸೇನ ನಳಮಹಾರಾಜ' ಮೂಲಕ ಹೀರೋ ಆಗಿದ್ದಾರೆ. ಆರೋಹಿ ನಾರಾಯಣ್‌ ಹಾಗೂ ಪ್ರಿಯಾಂಕಾ ನಟಿಸುತ್ತಿದ್ದಾರೆ.

"ಸರಿಗಮಪ' ಮೂಲಕ ಜನಪ್ರಿಯಳಾದ ಬೇಬಿ ಆದ್ಯ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದೊಂದು ಎಮೋಶನಲ್‌ ಡ್ರಾಮಾ ಆಗಿದ್ದು, ಅರ್ಥಪೂರ್ಣ ಫ್ಯಾಮಿಲಿ ಎಂಟರ್‌ಟೈನರ್‌ ಆಗಲಿದೆ ಎಂಬುದು ಚಿತ್ರತಂಡದ ಮಾತು. ಈ ಚಿತ್ರವನ್ನು ಪುಷ್ಕರ್‌ ಫಿಲಂಸ್‌ನ ಪುಷ್ಕರ್‌ ಮಲ್ಲಿಕಾರ್ಜುನಯ್ಯ, ಪರಂವಾ ಸ್ಟುಡಿಯೋಸ್‌ನ ರಕ್ಷಿತ್‌ ಶೆಟ್ಟಿ ಹಾಗೂ ಹೇಮಂತ್‌ ರಾವ್‌ ಸೇರಿ ನಿರ್ಮಿಸುತ್ತಿದ್ದಾರೆ. "ಬಾಹುಬಲಿ' ಚಿತ್ರದ ಛಾಯಾಗ್ರಾಹಕ ಸೆಂಥಿಲ್‌ ಅವರಿಗೆ ಫ‌ಸ್ಟ್‌ ಅಸಿಸ್ಟೆಂಟ್‌ ಕ್ಯಾಮರಾಮ್ಯಾನ್‌ ಆಗಿದ್ದ ರವೀಂದ್ರನಾಥ್‌ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್‌ ರಾಜ್‌ ಅವರ ಸಂಗೀತ ಚಿತ್ರಕ್ಕಿದೆ. 

Trending videos

Back to Top