ಭಗವಾನ್‌ ಉವಾಚ ಜಯಲಲಿತಾ ಟು ಜೀವನ ಚೈತ್ರ


Team Udayavani, Sep 12, 2017, 5:55 PM IST

S-K–Bhagwan-(27).jpg

ನೀವ್ಯಾಕೆ ಒಂದು ಪುಸ್ತಕ ಬರೀಬಾರ್ಧು? ಯಾರು ನಾನಾ? ಹೌದು ಸಾರ್‌. ನೀವು ಬರೀದೆ ಇನ್ನ್ಯಾರು ಬರೀಬೇಕು? ರಾಜಕುಮಾರ್‌ ಅವರ ಬಗ್ಗೆ ಯಾರ್ಯಾರೋ ಪುಸ್ತಕಗಳನ್ನ ಬರೆದಿದ್ದಾರೆ. ನೀವು ಬರೆದರೆ ಅದಕ್ಕೊಂದು ಅರ್ಥವಿರುತ್ತೆ. ಅಷ್ಟೊಂದು ವರ್ಷ ಅವರ ಜೊತೆ ಕಳೆದವರು ನೀವು. ಅನೇಕ ಸಿನಿಮಾಗಳನ್ನು ಅವರಿಗಾಗಿ ನಿರ್ದೇಶಿಸಿದವರು ನೀವು.ಅವರೊಂದಿಗಿನ ಒಡನಾಟದ ಬಗ್ಗೆ ನೀವು ಬರೆದರೆ ಚೆನ್ನಾಗಿರುತ್ತೆ. ಆರಂಭದಲ್ಲಿ ಬರೀಬೇಕು ಅಂತ ಇತ್ತು. ಕೆಲವರು ಅಪ್ರೋಚ್‌ ಮಾಡಿದ್ದರು. ಕೊನೆಗೆ ಎಲ್ಲರೂ ಬರೆದರು ನಾನು ಸುಮ್ಮನಾದೆ. ಕನ್ನಡದಲ್ಲಿ ಸುಮಾರು ಜನ ಬರೆದಿದ್ದಾರೆ. ಇಂಗ್ಲೀಷ್‌ನಲ್ಲಿ ಟ್ರೈ ಮಾಡಿ. ನಿಮ್ಮ ಇಂಗ್ಲೀಷ್‌ ಸಹ ಚೆನ್ನಾಗಿದೆ.

ಓಕೆ ಹಾಗಾದರೆ, ಏಪ್ರಿಲ್‌ 24ರೊಳಗೆ ಏನಾದರೂ ನಿರೀಕ್ಷೆ ಮಾಡಬಹುದಾ? ಅದು ಗೊತ್ತಿಲ್ಲ. ಆದರೆ, ಗಂಭೀರವಾಗಿ ತಗೋತೀನಿ. ನೋಡೋಣ. ಹೀಗೆ ಆಶ್ವಾಸನೆ ಕೊಟ್ಟರು ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್‌. ಅದ್ಯಾವುದೋ ಚಿತ್ರದ ಪತ್ರಿಕಾಗೋಷ್ಠಿಗೆ ಅವರು ಬಂದ ಸಂದರ್ಭದಲ್ಲಿ, ಈ ಮಾತುಕತೆ ಆಗಿದ್ದು. ಭಗವಾನ್‌, ಬರೀ ರಾಜಕುಮಾರ್‌ ಅವರನ್ನಷ್ಟೇ ಅಲ್ಲ, ಕನ್ನಡ ಚಿತ್ರರಂಗವನ್ನೂ ಅನೇಕ ವರ್ಷಗಳಿಂದ ನೋಡುತ್ತಾ ಬಂದವರು. ಹಲವು ಪಲ್ಲಟಗಳನ್ನು, ತಲೆಮಾರುಗಳನ್ನು, ಟ್ರೆಂಡ್‌ಗಳನ್ನು ನೋಡಿಕೊಂಡು ಬಂದವರು. ಅದರಲ್ಲೂ ಡಾ. ರಾಜಕುಮಾರ್‌ ಅವರನ್ನು ಬೇರೆಲ್ಲಾ ನಿರ್ದೇಶಕರಿಗಿಂಥ ಅತೀ ಹೆಚ್ಚು ಚಿತ್ರಗಳಲ್ಲಿ ನಿರ್ದೇಶಿಸಿದವರು. ಹಾಗಾಗಿ ಡಾ. ರಾಜಕುಮಾರ್‌ ಅವರ ಕುರಿತು ಒಂದು ಪುಸ್ತಕ ಬರೆದರೆ, ಅದು ಅರ್ಥಪೂರ್ಣವಾಗಿರುತ್ತದೆ ಎಂಬ ಸಲಹೆ ಸಹಜವಾಗಿಯೇ ಪತ್ರಕರ್ತರಿಂದ ಬಂತು. ಈ ಐಡಿಯಾವನ್ನು ಭಗವಾನ್‌ ಪುರಸ್ಕರಿಸಿದರು. ಈ ಕುರಿತು ಗಂಭೀರವಾಗಿ ಯೋಚಿಸುವುದಾಗಿ ಹೇಳಿದರು. ಸಲಹೆ ಬಂದಿದ್ದು, ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದು … ಎಲ್ಲವೂ ಕೊನೆಯಲ್ಲಿ. ಅದಕ್ಕೂ ಮುನ್ನ ಭಗವಾನ್‌ ಅವರು ತಾವು ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ನೋಡಿಕೊಂಡು ಬಂದ ಕನ್ನಡ ಚಿತ್ರರಂಗವನ್ನು, ಇಲ್ಲಿನ ಬದಲಾವಣೆಗಳನ್ನ , ತಮ್ಮ ಬೆಳವಣಿಗೆಯನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಡಾ. ರಾಜಕುಮಾರ್‌ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದರು. ಮೊದಲು ಮಾತು ಶುರುವಾಗಿದ್ದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರಿಂದ. ಅಲ್ಲಿಂದ ಮಾತು ಅದೆಷ್ಟು ದಿಕ್ಕು ಬದಲಿಸಿತೋ …

* ಜಯಲಲಿತಾ ಅವರನ್ನ ಸಣ್ಣ ಮಗುವಿದ್ದಾಗಿನಿಂದ ನೋಡಿದ್ದೆ. ಅವರ ತಾಯಿ ಸಂಧ್ಯಾ ಅವರು, ಶೂಟಿಂಗ್‌ಗೆ ಬರುವಾಗ ಜಯಲಲಿತಾನ ಸ್ಕೂಲಿಗೆ ಬಿಟ್ಟು ಬರೋರು. ನಾನು ಎಷ್ಟೋ ಸಾರಿ ಕಾರ್‌ನಲ್ಲಿ ಪಿಕಪ್‌ ಮಾಡ್ತಿದ್ದೆ. ಒಂದು ಚಿತ್ರದಲ್ಲಿ ರಾಜಕುಮಾರ್‌ ಅವರ ಜೊತೆಗೆ ಚೈಲ್ಡ್‌ ಆರ್ಟಿಸ್ಟ್‌ ಆಗಿ ಮಾಡಿದ್ದರು. ಆ ನಂತರ ಕಲ್ಯಾಣ್‌ ಕುಮಾರ್‌ ಜೊತೆಗೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು.

* ಅಷ್ಟರಲ್ಲಾಗಲೇ ಗ್ರೂಪಿಸಂ ಶುರುವಾಗಿಬಿಟ್ಟಿತ್ತು. ಡಾ. ರಾಜಕುಮಾರ್‌ ಅವರ ಜೊತೆಗೆ ಕೆಲಸ ಮಾಡಿದವರು ಕಲ್ಯಾಣ್‌ ಕುಮಾರ್‌ ಜೊತೆಗೆ ಮಾಡುತ್ತಿರಲಿಲ್ಲ. ಅಲ್ಲಿ ಮಾಡ್ತಿದ್ದವರು ಇಲ್ಲಿ ಮಾಡ್ತಿರಲಿಲ್ಲ.  ಎಲ್ಲರನ್ನೂ ಒಟ್ಟಿಗೆ ಸೇರಿಸೋದೇ ಬಹಳ ಕಷ್ಟ ಆಗಿತ್ತು. “ಭೂದಾನ’ ಚಿತ್ರಕ್ಕೆ ಕುಮಾರತ್ರಯರನ್ನ ಒಟ್ಟಿಗೆ ಸೇರಿಸೋಕೆ ಬಹಳ ಕಷ್ಟಪಟ್ಟಿದ್ವಿ. ಉದಯ್‌ ಕುಮಾರ್‌ ಅವರ ಮೊದಲ ಚಿತ್ರ “ಭಾಗ್ಯೋದಯ’ದಿಂದಲೂ ನನಗೆ ಗೊತ್ತು. ಇನ್ನು ರಾಜಕುಮಾರ್‌ ಸಹ ನಮ್ಮ ಜೊತೆಗಿದ್ದರು. ಆದರೆ, ಕಲ್ಯಾಣ್‌ ಕುಮಾರ್‌ ಅವರನ್ನ ಹಿಡಿಯೋದೇ ಕಷ್ಟ. ಹಾಗೆ ನೋಡಿದರೆ ಅವನು ನನ್ನ ಕಸಿನ್‌ ಆಗಬೇಕು. ಆದರೆ, ನಾನು ಅವನು ಒಟ್ಟಿಗೆ ಚಿತ್ರಾನೇ ಮಾಡಲಿಲ್ಲ. ಅಂತಹ ಪ್ರಯತ್ನ ಸಹ ಆಗಲೇ ಇಲ್ಲ. ಏಕೆಂದರೆ, ನಾವು ರಾಜಕುಮಾರ್‌ ಜೊತೆಗೆ ಗುರುತಿಸಿಕೊಂಡಿದ್ವಿ. ಆದರೆ, ಉದಯಕುಮಾರ್‌ ಮತ್ತು ರಾಜಕುಮಾರ್‌ ಅವರ ಜೊತೆಗೆ ಸಾಕಷ್ಟು ಚಿತ್ರ ಮಾಡಿದ್ವಿ. “ಜೇಡರ ಬಲೆ’ಯಲ್ಲಿ ಇಬ್ಬರೂ ನಟಿಸಿದ್ದರು. “ಮಂತ್ರಾಲಯ ಮಹಾತ್ಮೆ’, “ಚಂದವಳ್ಳಿಯ ತೋಟ’ ಹೀಗೆ ಸುಮಾರು ಸಿನಿಮಾಗಳಲ್ಲಿ ಇಬ್ಬರೂ ನಟಿಸಿದರು. ಇಟ್‌ ವಾಸ್‌ ವೆರಿ ಈಸಿ ಫಾರ್‌ ಮಿ ಟು ಬ್ರಿಂಗ್‌ ದೆಮ್‌ ಟುಗೆದರ್‌.

* “ಭೂದಾನ’ದ ಬಗ್ಗೆ ಆಗಲೇ ಮಾತಾಡ್ತಿದ್ದೆ. ಆ ಚಿತ್ರದ ಬಗ್ಗೆ ಹೇಳಲೇಬೇಕು. ಅದರು “ಚೋಮನ ದುಡಿ’ ಕಾದಂಬರಿಯಿಂದ ಸ್ಫೂರ್ತಿ ಪಡೆದ ಕಥೆ. ಶಿವರಾಮ ಕಾರಂತರ ಹತ್ತಿರ ರೈಟ್ಸ್‌ ತಗೊಳ್ಳೋಕೆ ಹೋದಾಗ ನಾನು ಇದ್ದೆ. ಸರಿ, ಶಿವರಾಮ ಕಾರಂತರನ್ನ ಕೇಳಿದಾಗ, ನೀವು ಕಮರ್ಷಿಯಲ್‌ ಸಿನಿಮಾದವರು, ಕೊಡೋಲ್ಲ ಎಂದುಬಿಟ್ಟರು. ನಮಗೆ ರೈಟ್ಸ್‌ ಬೇಕು ಅಂತ ನಾವು. ಕೊನೆಗೆ ಕಾರಂತರು, ಬೇಕಾದರೆ ಓರಲ್‌ ಪರ್ಮಿಷನ್‌ ಕೊಡ್ತೀನಿ, ರೈಟಿಂಗ್‌ನಲ್ಲಿ ಕೊಡೋದಿಲ್ಲ. ಇದನ್ನ ಬೇಸ್‌ ಮಾಡಿ ಸಿನಿಮಾ ಮಾಡಿ ಎಂದರು. ಸರಿ ನಾವು ಆ ಕಥೆಯನ್ನ ಇಟ್ಟುಕೊಂಡು ಸಿನಿಮಾ ಮಾಡಿದ್ವಿ. ಕಾರಂತರು ಎಂಥಾ ಗ್ರೇಟ್‌ ಮನುಷ್ಯರೆಂದರೆ, ಅವರು ಎಲ್ಲೂ ಅದು “ಜೋಮನ ದುಡಿ’ ಅಂತ ಹೇಳಲೇ ಇಲ್ಲ. ಮಾತು ಅಂದರೆ ಮಾತು. ಆಮೇಲೆ ಇನ್ನೊಂದು “ಜೋಮನ ದುಡಿ’ ಆಯ್ತು. ನೀವು ಬೇಕಾದರೆ ಎರಡನ್ನೂ ಕಂಪೇರ್‌ ಮಾಡಿ. ಕಮರ್ಷಿಯಲ್‌ ಏನು, ಆರ್ಟ್‌ ಸಿನಿಮಾ ಏನು ಗೊತ್ತಾಗತ್ತೆ. ನಾನು ಯಾಕೆ ಈ ಮಾತು ಹೇಳಿದೆ ಎಂದರೆ, ಯಾವ ತರಹ ಬೇಕಾದರೂ ಚಿತ್ರ ಯೋಚಿಸಬಹುದು. ಕಥೆ ಒಂದೇ ಇರಬಹುದು. ಆದರೆ, ಟ್ರೀಟ್‌ಮೆಂಟ್‌ ಬೇರೆ, ಬೇರೆ. ನಾವು ಅವಾರ್ಡ್‌ ಬಗ್ಗೆ ಯಾವತ್ತೂ ಯೋಚನೆ ಮಾಡ್ತಿರಲಿಲ್ಲ. ಜನ ನೋಡಿದ್ರೆ ಸಾಕು ಅಂತಿದ್ವಿ.

* ಆಗೆಲ್ಲಾ ವಿತರಕರು ಇದ್ರು. ವಿಜಯ ಪಿಕ್ಚರ್, ಶಾಂತಾ ಪಿಕ್ಚರ್, ಪ್ರಕಾಶ್‌ ಪಿಕ್ಚರ್, ವೀರಾಸ್ವಾಮಿ, ತಲ್ಲಂ, ಕೆ.ಸಿ.ಎನ್‌. ಗೌಡ ಎಲ್ಲಾ ಇದ್ದರು. ಅವರು ವಿತರಣೆ ಮಾಡ್ತಿದ್ದರು. ಆಗೆಲ್ಲಾ ಬಿಡುಗಡೆಯಾಗ್ತಿದ್ದಿದ್ದೇ 30-35 ಸಿನಿಮಾಗಳು. ಆಗ ಚಿತ್ರಮಂದಿರದವರು, ವಿತರಕರಿಗೆ ದುಡ್ಡು ಕೊಡುತ್ತಿದ್ದರು. ವಿತರಕರು ನಮಗೆ ಫೈನಾನ್ಸ್‌ ಮಾಡ್ತಿದ್ದರು. ಒಂದು ಪಕ್ಷ ಸೋತರೆ, ಮುಂದಿನ ಚಿತ್ರದಲ್ಲಿ ಮ್ಯಾನೇಜ್‌ ಮಾಡೋಣ ಅಂತಿದ್ರು. ಸಿನಿಮಾ ಚೆನ್ನಾಗಿ ಓಡಲಿಲ್ಲ ಅಂದರೆ ಹೆಲ್ಪ್ ಮಾಡೋರು. ಈಗ ಆ ಲಿಂಕ್‌ ಮಿಸ್‌ ಆಗಿದೆ. ವಿತರಕರೇ ಇಲ್ಲ. ಬರೀ ಜಯಣ್ಣ-ಭೋಗೇಂದ್ರ ಹೆಸರು ಮಾತ್ರ ಕೇಳ್ತಿದೆ. ಇನ್ನು ವಜ್ರೆàಶ್ವರಿ ಅವರು ಅವರ ಸಿನಿಮಾಗಳನ್ನ ಮಾತ್ರ ವಿತರಣೆ ಮಾಡ್ತಿದ್ದಾರೆ. ವಿತರಕರು ಮಿಸ್‌ ಆಗಿದ್ದು ನಮಗೆ ತುಂಬಾ ತೊಂದರೆ ಆಯ್ತು. ಜೊತೆಗೆ ಬೆಂಗಳೂರು-ಕೋಲಾರ-ತುಮಕೂರು, ಮಂಡ್ಯ-ಮೈಸೂರು-ಹಾಸನ-ಕೂರ್ಗ್‌ ಅಂತ ಏರಿಯಾವೈಸ್‌ ಬೇರೆಯಾಗಿದ್ದು ಸಮಸ್ಯೆ ಆಯ್ತು. ಆಗ ಸ್ಪರ್ಧೆ ಜಾಸ್ತಿ ಆಯಿತು. ಮುಂಚೆಲ್ಲಾ ಹೇಗಿತ್ತು ಎಂದರೆ ಚಿತ್ರಮಂದಿರದವರು ಆರಂಭದಲ್ಲೇ 150 ದಿನಗಳಿಗೆ ನಿಮ್ಮ ಚಿತ್ರ ಕೊಡಿ ಅಂತ ಕೇಳ್ಳೋರು. ಅಲ್ಲಿಗೆ ಅಷ್ಟು ದಿನ ನಮ್ಮ ಚಿತ್ರ ಸೇಫ್ ಆಗಿರುತಿತ್ತು. ಅದೇ ಕಾರಣಕ್ಕೆ ನಾವು ಸೋಲುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ನಾವು ಒಂದರಲ್ಲೂ ಸೋತಿಲ್ಲ. ಎಲ್ಲದರಲ್ಲೂ ದುಡ್ಡು ನೋಡಿದ್ದೀವಿ.

* “ಮಂತ್ರಾಲಯ ಮಹಾತ್ಮೆ’ ಚಿತ್ರಕ್ಕೆ ನಾವು ಖರ್ಚು ಮಾಡಿದ್ದು ಒಂದು ಲಕ್ಷ ಮೂವತ್ತು ಸಾವಿರ. 30-32 ದಿನಗಳ ಚಿತ್ರೀಕರಣ ಮಾಡಿದ್ವಿ. “ಜೀವನ ಚೈತ್ರ’ಕ್ಕೆ 50 ದಿನ ಚಿತ್ರೀಕರಣ ಮಾಡಿದ್ದು ಬಿಟ್ಟರೆ, ಮಿಕ್ಕೆಲ್ಲಾ ಚಿತ್ರಗಳ ಚಿತ್ರೀಕರಣ ನಾವು ಜಾಸ್ತಿ ಅಂದರೆ 32 ದಿನಗಳಲ್ಲಿ ಮುಗಿಸ್ತಿದ್ವಿ. ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೂ ಚಿತ್ರೀಕರಣ ಮಾಡ್ತಿದ್ವಿ. ನಾವು ದುಡ್ಡು ಖರ್ಚು ಮಾಡಿದ್ದಿಕ್ಕಿಂತ, ಬುದ್ಧಿ ಜಾಸ್ತಿ ಖರ್ಚು ಮಾಡ್ತಿದ್ವಿ. ಹಾಗಾಗಿಯೇ ಡಬ್ಬಿಂಗ್‌ ರೈಟ್ಸ್‌ನಿಂದಲೇ ನಾವು ಸಾಕಷ್ಟು ಲಾಭ ನೋಡ್ತಿದ್ವಿ. “ಕಸ್ತೂರಿ ನಿವಾಸ’ ಚಿತ್ರದ ಡಬ್ಬಿಂಗ್‌ ರೈಟ್ಸ್‌ನಿಂದಲೇ ಆರು ಲಕ್ಷ  ಬಂದಿತ್ತು. ಹಾಕಿದ ದುಡ್ಡು ಅದರಲ್ಲೇ ಬಂದುಬಿಡೋದು.

* “ಮಂತ್ರಾಲಯ ಮಹಾತ್ಮೆ’ ಚಿತ್ರದ ಇನ್ನೊಂದು ಇಂಟರೆಸ್ಟಿಂಗ್‌ ವಿಷಯವಿದೆ. ಆ ಚಿತ್ರ ಶುರುವಾಗೋಕೆ ಮುಂಚೆ, ರಾಯರ ಕುರಿತ ಚಿತ್ರದಲ್ಲಿ ಒಬ್ಬ ಅಬ್ರಾಹ್ಮಣ ನಟಿಸಬೇಕಾ ಎಂಬ ಮಾತು ಕೇಳಿ ಬಂದಿತ್ತು. ಅದೆಷ್ಟು ಸರಿ ಅಂತ ಸುಮಾರು ನೂರು ಪತ್ರಗಳು ಬಂದಿದುÌ. ಯಾರು ಬರೆದಿದ್ದು, ಯಾಕೆ ಬರೆದಿದ್ದು ಗೊತ್ತಿಲ್ಲ. ಇನ್‌ಲಾÂಂಡ್‌ ಲೆಟರ್‌ ಬಂದಿದ್ದವು. ಕೊನೆಗೆ ಒಂದು ತೀರ್ಮಾನ ಆಯ್ತು. ದೇವರ ಮುಂದೆ ಚೀಟಿ ಹಾಕಿ, ಯಾರ ಹೆಸರು ಬರುತ್ತೋ ಅವರನ್ನೇ ಹೀರೋ ಮಾಡೋಣ ಅಂತ ಡಿಸೈಡ್‌ ಆಯ್ತು. ಉದಯ್‌ ಕುಮಾರ್‌, ರಾಜಕುಮಾರ್‌ ಸೇರಿದಂತೆ ಒಂದಿಷ್ಟು ಹೆಸರುಗಳಿದ್ದವು. ಕೊನೆಗೆ ಡಾ. ರಾಜ್‌ ಹೆಸರು ಬಂತು. ಅವರಿಗೂ ತುಂಬಾನೇ ಖುಷಿ ಆಯ್ತು. ಎಲ್ಲಾ ಮುಗೀತು ಅನ್ನೋವಷ್ಟರಲ್ಲಿ ಅವರಿಗೆ ಒಂದು ಡೌಟ್‌ ಬಂತು. ಎಲ್ಲಾ ಚೀಟೀಲೂ ನನ್ನ ಹೆಸರೇ ಹಾಕಿದ್ದೀರಾ ಏನು ಅಂತ ಕೇಳಿದರು. ಕೊನೆಗೆ ಚೀಟಿ ತೆಗೆದು ತೋರಿಸಿದ್ವಿ.

* ಡಾ. ರಾಜಕುಮಾರ್‌ ಅವರ ಜೊತೆಗಿನ ಅಷ್ಟು ವರ್ಷಗಳಲ್ಲಿ ಅವರು ಯಾವತ್ತೂ ಕೋಪ ಮಾಡಿಕೊಂಡಿದ್ದು ನಾವು ನೋಡೇ ಇಲ್ಲ. ಆದರೆ, “ಮಂತ್ರಾಲಯ ಮಹಾತ್ಮೆ’ ಸಂದರ್ಭದಲ್ಲಿ ಅವರು ಕೋಪ ಮಾಡಿಕೊಂಡಿದ್ದು ನೋಡಿದ್ವಿ. ಆ ಚಿತ್ರದ ಸಂದರ್ಭದಲ್ಲಿ ಅವರು ಮಾಂಸ ತಿನ್ನೋದನ್ನೇ ಬಿಟ್ಟರು. ಕಾಲಿಗೆ ಚಪ್ಪಲಿ ಹಾಕ್ತಿರಲಿಲ್ಲ. ಆ ಚಿತ್ರದ ಸಂದರ್ಭದಲ್ಲಿ ಒಂದು ಸೀನ್‌ ತೆಗೀಬೇಕಿತ್ತು. ಅವರು ಪಲ್ಲಕ್ಕಿಯಲ್ಲಿ ಕೂತಿರ್ತಾರೆ. ಆ ಪಲ್ಲಕ್ಕೀನಾ ನಾಲ್ಕು ಜನ ಹೊತ್ತು ಬರಬೇಕು. ಆದರೆ, ಪಲ್ಲಕ್ಕಿ ಹೊರೋರು ಎಲ್ಲೋ ಮಾಯವಾಗಿದ್ದರು. ಹುಡುಕಿದರೆ, ಮರದ ಕೆಳಗೆ ನಿಂತು ಬೀಡಿ ಸೇದುತ್ತಿದ್ದರು. ಇದನ್ನು ನೋಡಿ ಅವರಿಗೆ ತುಂಬಾ ಕೋಪ ಬಂದುಬಿಟ್ಟಿತ್ತು. ಅದೇ ಮೊದಲ ಬಾರಿಗೆ ಅವರು ಕೋಪ ಮಾಡಿಕೊಂಡಿದ್ದನ್ನು ನಾವು ನೋಡಿದ್ದು.

* ನಾನು ಮೊದಲು ರಾಜ್‌ ಅವರನ್ನು ನೋಡಿದ್ದು, ಜಾನಪದ ಚಿತ್ರವೊಂದರ ಚಿತ್ರೀಕರಣ ಸಂದರ್ಭದಲ್ಲಿ. ಅದಕ್ಕೂ ಮುನ್ನ ಪೌರಾಣಿಕ ಸಿನಿಮಾ ಮಾಡ್ತಿದ್ದರು ರಾಜ್‌. ಈ ಸಿನಿಮಾದಲ್ಲಿ ಅವರಿಗೆ ಕತ್ತಿವರಸೆ ಇತ್ತು. ಸ್ಟಂಟ್‌ ಮಾಸ್ಟರ್‌ ಶಿವಯ್ಯ, ಅವರಿಗೆ ಕತ್ತಿವರಸೆ ಹೇಳಿಕೊಡೋರು. ಆ ಸಂದರ್ಭದಲ್ಲಿ ಒಡನಾಟ ಬೆಳೀತು. ಮಧ್ಯಾಹ್ನದ ಹೊತ್ತು ಮನೆಗೆ ಊಟಕ್ಕೆ ಕರೆದುಕೊಂಡು ಹೋಗ್ತಿದ್ರು. ಹೋಟೆಲ್‌ನಲ್ಲಿ ಯಾಕೆ ಊಟ ಮಾಡ್ತೀರಿ, ಮನೆಗೆ ಬನ್ನಿ ಅಂತ ಕರೆಯೋರು. ಆ ನಂತರ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ವಿ. “ರಣಧೀರ ಕಂಠೀರವ’, “ಕೈವಾರ ಮಹಾತ್ಮೆ’, “ಚಂದವಳ್ಳಿಯ ತೋಟ’, “ಕರುಣೆಯೇ ಕುಟುಂಬದ ಕಣ್ಣು’ ಹೀಗೆ ಕಂಟಿನ್ಯೂಸ್‌ ಆಗಿ ಕೆಲಸ ಮಾಡಿದ್ವಿ. ಯಾವತ್ತೂ ಜಗಳ ಮಾಡಿದ್ದಿಲ್ಲ. ಅವರ ಹತ್ತಿರ ಭಿನ್ನಾಭಿಪ್ರಾಯವೇ ಇರಲಿಲ್ಲ. ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯ ಅಂತ ತಿಳಿದುಕೊಳ್ಳುವ ಮನುಷ್ಯ ಆತ. ಭಿನ್ನ ಅನ್ನೋದೇ ಇಲ್ಲ.

* “ಎರಡು ಕನಸು’ ಆದ ಮೇಲೆ ಮೂರು ವರ್ಷ ನಮಗೆ ಡಾ ರಾಜಕುಮಾರ್‌ ಅವರ ಕಾಲ್‌ಶೀಟ್‌ ಸಿಕ್ಕಿರಲಿಲ್ಲ. ಆಗ ಪಾರ್ವತಮ್ಮ ರಾಜಕುಮಾರ್‌ ಅವರಿಗೆ “ಬಯಲು ದಾರಿ’ ಕಾದಂಬರಿ ಕೊಟ್ವಿ. ಈ ಪಾತ್ರಕ್ಕೆ ರಾಜಕುಮಾರ್‌ ಸೂಟ್‌ ಆಗಲ್ಲ ಅಂದ್ರು ಪಾರ್ವತಮ್ಮ. ಕೂನೆಗೆ ರಾಜಕುಮಾರ್‌ ಅವರನ್ನೇ ಕೇಳಿದ್ವಿ. ಅವರು ಇಲ್ಲ ಎಂದರು. ಕೊನೆಗೆ ಬೇರೆಯವರನ್ನ ಹಾಕಿಕೊಂಡು ಆ ಸಿನಿಮಾ ಮಾಡಿ ಅಂತ ಪಾರ್ವತಮ್ಮ ಅವರೇ ಹೇಳಿದ್ರು. ನಾವು ರಾಜ್‌ ಇಲ್ಲದೆ ಸಿನಿಮಾ ಮಾಡಲ್ಲ ಅಂದ್ವಿ. ರಾಜಕುಮಾರ್‌ ಇಲ್ಲದಿದ್ರೆ, ನಷ್ಟ ಆಗತ್ತೆ ಅಂತ ತಾನೆ ನಿಮ್ಮ ಯೋಚನೆ, ನಾನು ಪೊ›ಡ್ನೂಸ್‌ ಮಾಡ್ತೀನಿ. ಟೆನ್ಶನ್‌ ಬೇಡ ಎಂದರು. ಅವರು ಹೇಳಿದ್ದು ಸ್ವಲ್ಪ ಇನ್‌ಸಲ್ಟ್ ಆಯ್ತು. ನಮಗೆ ಚಿತ್ರ ಮಾಡೋ ಶಕ್ತಿ ಇತ್ತು. ದುಡ್ಡಿನ ಕೊರತೆ ಇರಲಿಲ್ಲ. ದುಡ್ಡಿಗಾಗಿ ಹೆದರುತ್ತಿದ್ದೀವೇನೋ ಅಂತ ಅನಿಸ್ತೇನೋ. ಕೊನೆಗೆ ನಾವೇ ಮಾಡಿದ್ವಿ. ಆ ಚಿತ್ರ ಸಹ ಹಿಟ ಆಯ್ತು.

* “ಜೀವನ ಚೈತ್ರ’ ಶೂಟಿಂಗ್‌ ಹಿಮಾಲಯದಲ್ಲಿ ನಡೀತಿತ್ತು. ನಾವೆಲ್ಲಾ ಸ್ವೆಟರ್‌, ಮಫ್ಲರ್‌ ಎಲ್ಲಾ ಹಾಕಿಕೊಂಡು ಬೆಚ್ಚಗಿದ್ವಿ. ಆದರೆ, ರಾಜ್‌ ಮಾತ್ರ ಚಪ್ಪಲಿ ಸಹ ಹಾಕದೆ, ಆ ಸ್ನೋನಲ್ಲಿ ಬರೀಗಾಲಲ್ಲಿ ನಡೀತಿದ್ರು. ಅದು ಅವರ ಕಮಿಟ್‌ಮೆಂಟ್‌.

ಬರಹ: ಚೇತನ್‌ ನಾಡಿಗೇರ್‌; ಚಿತ್ರಗಳು: ಮನು

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.