CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಡಿಕೇರಿ ಸುತ್ತಮುತ್ತ ಪುನಾರಂಭ

ಡಾ. ರೂಪ ಕುಮಾರ್‌ ನಿರ್ಮಿಸುತ್ತಿರುವ "ಪುನಾರಂಭ' ಚಿತ್ರೀಕರಣ 80% ರಷ್ಟು ಮುಕ್ತಾಯಗೊಂಡಿದೆ. ಚಿತ್ರಕ್ಕೆ ದಶಕದ ಹಿಂದೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಹಲವಾರು ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಡಾ| ವಿಜಯಕುಮಾರ್‌ ಈ ಚಿತ್ರದ ನಾಯಕ. ಜೊತೆಗೆ ನಿರ್ಮಾಣ ಕೂಡಾ ಇವರದೇ.

ಡಾ. ವಿಜಯಕುಮಾರ್‌ ಹಾಗೂ ಕೆ.ಗಣೇಶ್‌ರಾವ್‌ ಕೇಸರ್‌ ಕರ್‌ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಮಡಿಕೇರಿ, ಸೊಂಡೇಕೊಪ್ಪ, ಕುಶಾಲನಗರ, ಹಾರಂಗಿ ಜಲಾಶಯ ಸುತ್ತಮುತ್ತ ಈ ಚಿತ್ರದ ಮಾತಿನ ಭಾಗ ಹಾಗೂ ಎರಡು ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. "ಜಿಲ್‌ ಜಿಲ್‌ ಜಿಲ್‌ ಚಿಲ್ಲರೆ..' ಎಂಬ ಹಾಡಿನ ಜೊತೆಗೆ ಮತ್ತೂಂದು ಹಾಡನ್ನು ಕೂಡ ಇದೇ ಲೊಕೇಶನ್‌ಗಳಲ್ಲಿ ಶೂಟ್‌  ಮಾಡಿಕೊಳ್ಳಲಾಗಿದೆ.

ಸದ್ಯದಲ್ಲೇ ಉಳಿದ ಭಾಗದ ಚಿತ್ರೀಕರಣಬೆಂಗಳೂರು ಸುತ್ತಮುತ್ತ ಪ್ರಾರಂಭವಾಗಲಿದೆ. ಚಿತ್ರಕ್ಕೆ ಎಂ ಮುತ್ತುರಾಜ್‌ ಛಾಯಾಗ್ರಹಣ, ಜಯಂತ್‌ ಕಾಯ್ಕಿಣಿ ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ, ಡಾ. ವಿಜಯಕುಮಾರ್‌, ಕಥೆ, ಚಿತ್ರಕಥೆ, ಸಂಭಾಷಣೆ, ರಾಮನೃತ್ಯ ನಿರ್ದೇಶನ, ಸೂರ್ಯಪ್ರಕಾಸ್‌ ಸಾಹಸವಿದೆ. 

ಡಾ. ವಿಜಯಕುಮಾರ್‌, ಐಶ್ವರ್ಯ ದಿನೇಶ್‌, ಶೋಭ ರಾಜ್‌, ಶಂಕರ ಅಶ್ವಥ್‌, ಗಣೇಶ್‌ ರಾವ್‌ ಕೆಸರ್‌ಕರ್‌, ರಿಚರ್ಡ್‌ ಲೂಯೀಸ್‌ ಲಯೇಂದ್ರ, ವೈಷ್ಣವಿ, ಶ್ವೇತಗೌಡ, ಪ್ರೀತು ಪೂಜಾ, ಸುರೇಶ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.  

Back to Top