CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪೈರಸಿ ಕಾಟ; ದರ್ಶನ್ ನಟನೆಯ ತಾರಕ್ ಸಿನಿಮಾ Facebook ನಲ್ಲಿ ಲೈವ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ತಾರಕ್ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡ ಮೊದಲ ದಿನವೇ ಪೈರಸಿಗೆ ತುತ್ತಾಗಿದ್ದು, ಇದಕ್ಕೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ದರ್ಶನ್ ಅಭಿನಯದ ತಾರಕ್ ಸಿನಿಮಾ ಪ್ರದರ್ಶನವಾಗುತ್ತಿದ್ದ ವೇಳೆ ಫೇಸ್ ಬುಕ್ ಲೈವ್ ಮಾಡಿದ ಘಟನೆ ನಡೆದಿದೆ. ಅಷ್ಟೇ ಅಲ್ಲ ತಾರಕ್ ಸಿನಿಮಾದಲ್ಲಿ ದರ್ಶನ್ ರಗ್ಭಿ ಆಡುವ ಹಾಗೂ ಕೆಲವು ತುಣುಕಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಪೈರಸಿ ಕಾಟಕ್ಕೆ ದರ್ಶನ್ ಅಭಿಮಾನಿಗಳು ಹಾಗೂ ತಾರಕ್ ಸಿನಿಮಾದ ನಿರ್ದೇಶಕ ಮಿಲನ ಖ್ಯಾತಿಯ ಪ್ರಕಾಶ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ತಾರಕ್ ಸಿನಿಮಾದ ಕೆಲವು ತುಣುಕುಗಳು ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಯಾಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ, ನಮ್ಮ ಶ್ರಮಕ್ಕೆ ಬೆಲೆ ಕೊಡದೆ ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರಕಾಶ್ ಅವರು ಖಾಸಗಿ ಟಿವಿ ಚಾನೆಲ್ ಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಭರ್ಜರಿ ಸಿನಿಮಾದ ದೃಶ್ಯವನ್ನು ಲೈವ್ ಮಾಡಿರುವ ಘಟನೆ ನಡೆದಿತ್ತು. ಇದೀಗ ತಾರಕ್ ಸಿನಿಮಾ ಆ ಪಟ್ಟಿಗೆ ಸೇರಿಕೊಂಡಿದೆ.

Back to Top