CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

"ಪ್ರೇಮಂ' ಚಿತ್ರದ ಹಿಂದೆ ಬಂದ ಹೊಸಬರು

ದಿನ ಕಳೆದಂತೆ ಕನ್ನಡಕ್ಕೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ "ಪ್ರೇಮಂ' ಚಿತ್ರತಂಡವೂ ಒಂದು. ಈ ಚಿತ್ರದ ಮೂಲಕ ಹರೀಶ್‌ ಮಾಂಡವ್ಯ ನಿರ್ದೇಶಕರಾದರೆ, ಧನುಗೌಡ ಮತ್ತು ಮೋಕ್ಷ ನಾಯಕ, ನಾಯಕಿಯಾಗುತ್ತಿದ್ದಾರೆ. ಇನ್ನು, ರತ್ನಭುವನೇಶ್‌ ಚಿತ್ರದ ನಿರ್ಮಾಪಕರು. ಇದು ಇವರ ಮೊದಲ ನಿರ್ಮಾಣದ ಸಿನಿಮಾ. ನವೆಂಬರ್‌ 20 ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಪ್ರೇಮಕಥೆ ಹೊಂದಿರುವ ಸಿನಿಮಾ. ಬೆಂಗಳೂರು, ಸಾತನೂರು, ಕನಕಪುರ, ಮೈಸೂರು ಸೇರಿದಂತೆ ಇತರೆ ಸ್ಥಳಗಳಲ್ಲಿ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ನಿರ್ದೇಶಕ ಹರೀಶ್‌ ಮಾಂಡವ್ಯ ಅವರಿಗೆ ಇದು ಮೊದಲ ಚಿತ್ರವಾದರೂ, ಅನುಭವ ಪಡೆದೇ ಆ್ಯಕ್ಷನ್‌-ಕಟ್‌ ಹೇಳ್ಳೋಕೆ ಬಂದಿದ್ದಾರೆ.

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ "ಪದ್ಮಾವತಿ', "ಗಾಂಧಾರಿ' ಧಾರಾವಾಹಿಗಳ ನಿರ್ದೇಶಕ ಅಶೋಕ್‌ ಕಶ್ಯಪ್‌ ಬಳಿ ಕೆಲಸ ಮಾಡಿದ್ದ ಹರೀಶ್‌ ಮಾಂಡವ್ಯ ಅವರೇ ಚಿತ್ರಕಥೆ ಬರೆದಿದ್ದಾರೆ. ಇನ್ನು, ನಾಯಕ ಧನುಗೌಡ ಈ ಹಿಂದೆ "ಹೊಂಬಣ್ಣ' ಚಿತ್ರದಲ್ಲಿ ನಟಿಸಿದ್ದರು. ಇನ್ನು, ಮಾಡೆಲಿಂಗ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಾಯಕಿ ಮೋಕ್ಷ ದಯಾನಂದ ಸಾಗರ್‌ ಕಾಲೇಜ್‌ನಲ್ಲಿ ಬಿಬಿಎ ಓದುತ್ತಿದ್ದಾರೆ.

ಚಿತ್ರದಲ್ಲಿ ತಾರಾ, ಪದ್ಮಜಾರಾವ್‌, ಮೈಸೂರು ಗೋಪಿ, ಜ್ಯೋತಿರಾಯ್‌, ಹನುಮತೇಗೌಡ, ಮಯೂರಿ ನಟರಾಜ್‌, ಮಂಜು ಪಾಟೀಲ್‌ ಇತರರು ನಟಿಸಿದ್ದಾರೆ. ವಾಸುಕಿ ವೈಭವ್‌ ಸಂಗೀತವಿದೆ. ಪುಷ್ಪರಾಜ್‌ ಛಾಯಾಗ್ರಹಣವಿದೆ. ಸತೀಶ್‌ ಚಂದ್ರ ಸಂಕಲನ ಮಾಡಿದ್ದಾರೆ. ಅನೀಶ್‌ ಕಥೆ ಬರೆದಿದ್ದಾರೆ. ಯೋಗರಾಜ್‌ಭಟ್‌, ಜಯಂತ್‌ ಕಾಯ್ಕಿಣಿ ಗೀತೆ ರಚಿಸಿದ್ದಾರೆ.

ಇಂದು ಹೆಚ್ಚು ಓದಿದ್ದು

ಹಿಂದೂ ಸಮಾಜೋತ್ಸವಕ್ಕೆ ಎಂಜಿಎಂ ಮೈದಾನದಲ್ಲಿ ಭರದ ಸಿದ್ಧತೆ ನಡೆದಿದೆ.

Nov 25, 2017 08:18am

ಧರ್ಮಸಂಸದ್‌ ಆರಂಭದಲ್ಲಿ ಭಾರತಮಾತೆ ಪ್ರತಿಮೆಗೆ ಪುಷ್ಪಾರ್ಚನೆ ನಡೆಸಲಾಯಿತು.

Nov 25, 2017 08:10am
Back to Top