CONNECT WITH US  
echo "sudina logo";

ಇನ್ನೂ ಹೆಸರಿಟ್ಟಿಲ್ಲ ಚಿತ್ರದಲ್ಲಿ ದಿಗಂತ್‌

ಕೋಡ್ಲು ಮತ್ತೂಂದು ಸಿನಿಮಾ ಹಿಂದೆ ಬಂದರು

ನಿರ್ದೇಶಕ ಕೋಡ್ಲು ರಾಮಕೃಷ್ಣ  ಇತ್ತೀಚೆಗಷ್ಟೇ "ಮಾರ್ಚ್‌ 22' ಎಂಬ ಚಿತ್ರ ಮಾಡಿ ಸುದ್ದಿಯಾಗಿದ್ದು ಗೊತ್ತೇ ಇದೆ. ಆ ಚಿತ್ರದ ಬಳಿಕ ಕೋಡ್ಲು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಕೋಡ್ಲು ರಾಮಕೃಷ್ಣ ಮತ್ತೂಂದು ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಅವರ ಚಿತ್ರಕ್ಕೆ "ಇನ್ನೂ ಹೆಸರಿಟ್ಟಿಲ್ಲ' ಎಂದು ನಾಮಕರಣ ಮಾಡಿದ್ದಾರೆ.

ಈ ಚಿತ್ರದಲ್ಲಿ ದಿಗಂತ್‌ ಹಾಗು ಅನಂತ್‌ನಾಗ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆ ಅಂದಮೇಲೆ, ಅದೊಂದು ಹಾಸ್ಯಪ್ರಧಾನ ಸಿನಿಮಾ ಅಂದುಕೊಳ್ಳಲು ಅಡ್ಡಿಯಿಲ್ಲ. ಈ ಹಿಂದೆ ಕೋಡ್ಲು ರಾಮಕೃಷ್ಣ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು.

"ಯಾರಿಗೂ ಹೇಳ್ಬೇಡಿ', "ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೊಳ್ಳಿ' ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದ ಕೋಡ್ಲು ರಾಮಕೃಷ್ಣ ಅವರು ಈಗ ಹೊಸ ಕಥೆ ಹಿಡಿದು ಬಂದಿದ್ದಾರೆ. ಇಲ್ಲಿ ದಿಗಂತ್‌ ಮತ್ತು ಅನಂತ್‌ನಾಗ್‌ ಇದ್ದಾರೆ ಅಂದಮೇಲೆ ಅದೊಂದು ಪಕ್ಕಾ ಹಾಸ್ಯಮಯ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಡಿಸೆಂಬರ್‌ನಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ.

ಚಿಕ್ಕಮಗಳೂರು, ತೀರ್ಥಹಳ್ಳಿ, ಆಗುಂಬೆ ಇತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನು, ಸ್ಪಂದನ ಫಿಲ್ಮ್ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ನೀಡುತ್ತಿದ್ದಾರೆ. ಮೋಹನ್‌ ಛಾಯಾಗ್ರಹಣವಿದೆ. ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ಸದ್ಯಕ್ಕೆ ದಿಗಂತ್‌, ಅನಂತ್‌ನಾಗ್‌ ಪಕ್ಕಾ ಆಗಿದ್ದು, ಇಷ್ಟರಲ್ಲೇ ಉಳಿದ ಕಲಾವಿದರು ಹಾಗು ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Trending videos

Back to Top