CONNECT WITH US  

ತಾಯಿಗೆ ತಕ್ಕ ಮಗನಿಗೆ ಆಶಿಕಾ ನಾಯಕಿ

ನಿರ್ದೇಶಕ ಶಶಾಂಕ್‌ ಅವರಿಗೆ ಮಂಗಳವಾರ ಶುಭದಿನದಂತೆ ಕಾಣುತ್ತಿದೆ. ಆ ದಿನದಂದು ಅವರ ಸಿನಿಮಾದ ಒಂದೊಂದೇ ಸುದ್ದಿ ಹೊರಬರುತ್ತಲೇ ಇವೆ. ಕಳೆದ ಮಂಗಳವಾರ "ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಸುಮಲತಾ ಅಂಬರೀಶ್‌ ತಾಯಿಯಾಗಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಈ ಮಂಗಳವಾರ ಅದೇ ಸಿನಿಮಾದ ಮತ್ತೂಂದು ಸುದ್ದಿ ಬಂದಿದೆ. ಅದು ನಾಯಕಿ.

ಹೌದು, "ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಆಶಿಕಾ ರಂಗನಾಥ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಅಜೇಯ್‌ ರಾವ್‌ ಹಾಗೂ ಆಶಿಕಾ ಜೋಡಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಾಯಕಿಯಾಗಿ ಶಶಾಂಕ್‌  ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಶಶಾಂಕ್‌ ಆಡಿಷನ್‌ ಮಾಡಿದ್ದು, ಯಾರೂ ಆಯ್ಕೆಯಾಗಿರಲಿಲ್ಲ. ಹಾಗಾಗಿ, ಚಿತ್ರರಂಗದಲ್ಲಿ ಬಿಝಿಯಾಗಿರುವ ನಟಿಯನ್ನೇ ನಾಯಕಿಯನ್ನಾಗಿಸಲು ನಿರ್ಧರಿಸಿದ್ದರು.

ಅದರಂತೆ ಈಗ ಆಶಿಕಾ ರಂಗನಾಥ್‌ ನಾಯಕಿಯಾಗಿದ್ದಾರೆ. "ಕ್ರೇಜಿಬಾಯ್‌' ಚಿತ್ರದ ಮೂಲಕ ಎಂಟ್ರಿಕೊಟ್ಟ ಆಶಿಕಾ "ಮಾಸ್‌ ಲೀಡರ್‌', "ರಾಜು ಕನ್ನಡ ಮೀಡಿಯಂ', "ರ್‍ಯಾಂಬೋ-2' ಚಿತ್ರಗಳಲ್ಲಿ ನಟಿಸಿದ್ದಾರೆ. ಶಶಾಂಕ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ವೇದಗುರು ನಿರ್ದೇಶಿಸುತ್ತಿದ್ದಾರೆ. ಇದು ನಾಯಕ ಅಜೇಯ್‌ ರಾವ್‌ ಅವರ 25ನೇ ಸಿನಿಮಾ. ಡಿಸೆಂಬರ್‌ 8 ರಿಂದ ಚಿತ್ರೀಕರಣ ಆರಂಭವಾಗಲಿದೆ. 

Back to Top