CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಂಚಾರಿ ವಿಜಯ್‌ಗೆ ಕಟೌಟ್‌ ಭಾಗ್ಯ

ನನ್‌ ಮಗಳೇ ಹೀರೋಯಿನ್‌ ಚಿತ್ರಕೃಪೆ

ಸಂಚಾರಿ ವಿಜಯ್‌ ಚಿತ್ರರಂಗಕ್ಕೆ ಬರುವಾಗ ಗಾಯಕರಾಗಬೇಕೆಂಬ ಆಸೆಯಿಂದ ಬಂದರಂತೆ. ಗಾಯಕರಾಗದೇ ಹೋದಾಗ ಕಾಮಿಡಿ ನಟನಾಗಬೇಕೆಂಬ ಆಸೆ ತುಂಬಾ ಇತ್ತಂತೆ. ಆದರೆ, ಅವರಿಗೆ ಸಿಕ್ಕಿದ ಸಿನಿಮಾಗಳೆಲ್ಲವೂ ಸೀರಿಯಸ್‌ ಆಗಿದ್ದವು. ಈಗ ಸಂಚಾರಿ ವಿಜಯ್‌ ಸಿನಿಮಾವೊಂದರ ಮೇಲೆ ತುಂಬಾ ನಿರೀಕ್ಷೆ ಇಟ್ಟಿದ್ದಾರೆ. ಅದು "ನನ್‌ ಮಗಳೇ ಹೀರೋಯಿನ್‌'.

ಹೌದು, "ನನ್‌ ಮಗಳೇ ಹೀರೋಯಿನ್‌' ಚಿತ್ರದಲ್ಲಿ ಸಂಚಾರಿ ವಿಜಯ್‌ ನಾಯಕರಾಗಿ ನಟಿಸಿದ್ದಾರೆ. ಇದು ಕಾಮಿಡಿ ಸಿನಿಮಾ. ಕೊನೆಗೂ ಸಂಚಾರಿ ವಿಜಯ್‌ ಆಸೆಯಂತೆ ಕಾಮಿಡಿ ಸಿನಿಮಾ ಸಿಕ್ಕಿದೆ. ಅಂದಹಾಗೆ, ಇಡೀ ಸಿನಿಮಾ ಕಾಮಿಡಿಯಾಗಿ ಸಾಗಿದರೂ ಅವರ ಪಾತ್ರ ತುಂಬಾ ಗಂಭೀರವಾಗಿದೆಯಂತೆ. ಈಗಾಗಲೇ ಚಿತ್ರದ ಟ್ರೇಲರ್‌, ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದಾಗಿ ವಿಜಯ್‌ ಕೂಡಾ ಖುಷಿಯಾಗಿದ್ದಾರೆ. 

ಸಂಚಾರಿ ವಿಜಯ್‌ಗೆ "ನನ್‌ ಮಗಳೇ ಹೀರೋಯಿನ್‌' ಚಿತ್ರ ತುಂಬಾ ಸ್ಪೆಷಲ್‌ ಎಂದರೆ ತಪ್ಪಲ್ಲ. ಮೊದಲನೇಯದಾಗಿ ಇದು ವಿಜಯ್‌ ಅವರ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಸಹಜವಾಗಿಯೇ ಒಬ್ಬ ನಟನಿಗೆ ಕಮರ್ಷಿಯಲ್‌ ಸಿನಿಮಾ ಎಂದಾಗ ಭಯ ಮತ್ತು ಖುಷಿ ಎರಡೂ ಇರುತ್ತದೆ. ಆ ಖುಷಿ ಸಂಚಾರಿ ವಿಜಯ್‌ಗೂ ಇದೆ. ಅದಕ್ಕಿಂತ ಹೆಚ್ಚಾಗಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಂಚಾರಿ ವಿಜಯ್‌ ಅವರ ಕಟೌಟ್‌ ಕೂಡಾ ಎದ್ದು ನಿಲ್ಲಲಿದೆ.

ಹೌದು, "ನನ್‌ ಮಗಳೇ ಹೀರೋಯಿನ್‌' ಚಿತ್ರದ ರಿಲೀಸ್‌ ದಿನ ಸಂಚಾರಿ ವಿಜಯ್‌ ಅವರ ಕಟೌಟ್‌ ಥಿಯೇಟರ್‌ ಮುಂದೆ ತಲೆ ಎತ್ತಲಿದೆ. ವಿತರಕ ಆಟೋ ರಾಜ ಅವರು ಸಂಚಾರಿ ವಿಜಯ್‌ ಅವರ 54 ಅಡಿಯ ಕಟೌಟ್‌ ನಿಲ್ಲಿಸಲಿದ್ದಾರೆ. ಹಾಗಾಗಿ, ಸಂಚಾರಿ ವಿಜಯ್‌ ಅವರ ಮೊದಲ ಕಮರ್ಷಿಯಲ್‌ ಸಿನಿಮಾ ಅದ್ಧೂರಿಯಾಗಿಯೇ ಬಿಡುಗಡೆಯಾಗಲಿದೆ ಎಂದರೆ ತಪ್ಪಲ್ಲ. 

ಇಂದು ಹೆಚ್ಚು ಓದಿದ್ದು

ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸುತ್ತಿರುವ ಗಣ್ಯರು.

Nov 25, 2017 08:52am
Nov 25, 2017 08:49am

ಸಮ್ಮೇಳನದ ಕಿಟ್‌ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ನೋಂದಾಯಿತ ಪ್ರತಿನಿಧಿಗಳು.

Nov 25, 2017 08:48am

ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಂಡ ಹಿರಿಯ ಪತ್ರಕರ್ತರಾದ ಎಚ್‌.ಆರ್‌. ರಂಗನಾಥ್‌, ತಿಮ್ಮಪ್ಪ ಭಟ್‌, ಎನ್‌.ಉದಯ್‌ಕುಮಾರ್‌, ಅಂಕಣಕಾರ ರವಿಶಂಕರ್‌, ಕಸಾಪ ಅಧ್ಯಕ್ಷ ಮನು ಬಳಿಗಾರ್‌.

Nov 25, 2017 08:40am
Back to Top