CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಿಮಾಲಯನ್‌ ಟ್ರಿಪ್‌ ಹೊರಟ ಮಕ್ಕಳು

ಕನ್ನಡದಲ್ಲಿ ಮಕ್ಕಳ ಚಿತ್ರಗಳಿಗೆ ಬರವಿಲ್ಲ. ಹೊಸ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಆ ಸಾಲಿಗೆ ಈಗ "ದಿ ಗ್ರೇಟ್‌ ಹಿಮಾಲಯನ್‌ ಟ್ರಿಪ್‌' ಎಂಬ ಹೊಸ ಚಿತ್ರವೂ ಸೇರಿದೆ. ಇದು ಶಾಲೆಯೊಂದರ 40 ಮಕ್ಕಳ ಸಾಹಸದ ಕಥೆ ಹೊಂದಿರುವ ಚಿತ್ರ. ಈಗಾಗಲೇ ಚಿತ್ರಕ್ಕೆ ಮುಹೂರ್ತ ನಡೆದು, ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ.

ಇತ್ತೀಚೆಗೆ ನಡೆದ ಮುಹೂರ್ತದಲ್ಲಿ ಕುಮಾರಿ ನಿವೇದಿತಾ ಕ್ಲಾಪ್‌ ಮಾಡಿದರೆ, ಚಂದ್ರಕಲಾ ನಟರಾಜ್‌ ಅವರು ಚಿತ್ರಕ್ಕೆ ಚಾಲನೆ ನೀಡಿದರು. ಉದಿತ್‌ ಕ್ಯಾಮೆರಾಗೆ ಚಾಲನೆ ನೀಡಿದರು. ಈ ಚಿತ್ರಕ್ಕೆ "ಭಾರತ ದರ್ಶನ ಮಕ್ಕಳ ಶೈಕ್ಷಣಿಕ ಪ್ರವಾಸ' ಎಂಬ ಅಡಿಬರಹವಿದೆ. ಅಲ್ಲಿಗೆ ಇದು ಶೈಕ್ಷಣಿಕ ಪ್ರವಾಸದಲ್ಲಾಗುವ ಘಟನೆಗಳನ್ನು ಹೊಂದಿರುವ ಕಥೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವಂತಿಲ್ಲ. 

ಈ ಚಿತ್ರಕ್ಕೆ ಕೆ.ಈಶ್ವರ್‌ ಎಲೆಕೊಪ್ಪ ನಿರ್ದೇಶಕರು. ಕಥೆ, ಚಿತ್ರಕಥೆ ಅವರದೇ. ಸಿ.ನಾಗೇಶ್‌(ಸಿಂಗಸಂದ್ರ) ಮತ್ತು ಕೆ. ಈಶ್ವರ್‌ ಚಿತ್ರದ ನಿರ್ಮಾಪಕರು. ಈ ಚಿತ್ರದ ಬಗ್ಗೆ ಹೇಳುವುದಾದರೆ, ಶಾಲೆಯೊಂದರ 40 ಜನ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಮೂಲಕ ಭಾರತದ ಪ್ರಮುಖ ಪ್ರವಾಸಿ ತಾಣ ವೀಕ್ಷಿಸಲು ಹೊರಡುತ್ತಾರೆ. ಒಂದು ಬಸ್‌ ಮೂಲಕ ಪ್ರವಾಸ ಹೊರಡುವ ಮಕ್ಕಳು ಕೊನೆಗೆ ಹಿಮಾಲಯ ತಲುಪುತ್ತಾರೆ.

ಅಲ್ಲಿಂದ ಬರುವಾಗ ಮಕ್ಕಳಿದ್ದ ಬಸ್‌ ಅಪಾಯಕ್ಕೆ ಸಿಲುಕುತ್ತದೆ. ಅಲ್ಲಿ ಆರು ಜನ  ಮಕ್ಕಳು ತಮ್ಮ ಬುದ್ದಿ ಸಾಮರ್ಥ್ಯದಿಂದ ಆ ಬಸ್‌ನಲ್ಲಿದ್ದ  ಎಲ್ಲರನ್ನು ಹೇಗೆ ಕಾಪಾಡುತ್ತಾರೆ ಎಂಬುದು ಕಥೆ. ಮೈಸೂರು, ಗುರುವಾಯೂರು, ಮಧುರೈ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಸುಮಾರು 30 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ಮಾಡುವ ಯೋಜನೆ ನಿರ್ದೇಶಕರದ್ದು. ಚಿತ್ರಕ್ಕೆ ಸಂತೋಷ್‌ ಛಾಯಾಗ್ರಾಹಕರು.

ಇಂದು ಹೆಚ್ಚು ಓದಿದ್ದು

ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸುತ್ತಿರುವ ಗಣ್ಯರು.

Nov 25, 2017 08:52am
Nov 25, 2017 08:49am

ಸಮ್ಮೇಳನದ ಕಿಟ್‌ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ನೋಂದಾಯಿತ ಪ್ರತಿನಿಧಿಗಳು.

Nov 25, 2017 08:48am

ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಂಡ ಹಿರಿಯ ಪತ್ರಕರ್ತರಾದ ಎಚ್‌.ಆರ್‌. ರಂಗನಾಥ್‌, ತಿಮ್ಮಪ್ಪ ಭಟ್‌, ಎನ್‌.ಉದಯ್‌ಕುಮಾರ್‌, ಅಂಕಣಕಾರ ರವಿಶಂಕರ್‌, ಕಸಾಪ ಅಧ್ಯಕ್ಷ ಮನು ಬಳಿಗಾರ್‌.

Nov 25, 2017 08:40am
Back to Top