CONNECT WITH US  
echo "sudina logo";

ಐದು ಭಾಷೆಗೆ ಅನ್ವೇಷಿ ಯಾತ್ರೆ!

ನಿರ್ದೇಶಕ ವೇಮಗಲ್‌ ಜಗನ್ನಾಥ್‌ ಪುನಃ ಒಂದು ಚಿತ್ರದ ಮೂಲಕ ಹಿಂದಿರುಗಿರುವ ವಿಷಯ ಗೊತ್ತೇ ಇದೆ. ಈಗಾಗಲೇ ಸೆನ್ಸಾರ್‌ ಆಗಿದ್ದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಲಕ್ಷ್ಮೀ ವೆಂಕಟೇಶ್ವರ ಎಂಟರ್‌ಟೈನರ್‌ ಬ್ಯಾನರ್‌ನಲ್ಲಿ ವಿ.ಜಯರಾಮ್‌ ನಿರ್ಮಾಣ ಮಾಡಿರುವ "ಅನ್ವೇಷಿ' ಚಿತ್ರದಲ್ಲಿ ವಿಶೇಷತೆಗಳಿವೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದ್ದು, ಐದು ಭಾಷೆಗಳಲ್ಲಿ ಡಬ್ಬಿಂಗ್‌ ಆಗುತ್ತಿರುವುದು ವಿಶೇಷ.

ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಲಿ ಭಾಷೆಗೆ ಈಗಾಗಲೇ ಡಬ್ಬಿಂಗ್‌ ಹಕ್ಕು ಮಾರಾಟವಾಗಿದೆ. ನವೆಂಬರ್‌ ಕೊನೆಯ ವಾರದಲ್ಲಿ ರಾಜಾದ್ಯಾಂತ ಹಾಗೂ ಹೊರ ದೇಶಗಳಲ್ಲೂ ಬಿಡುಗಡೆಯಾಗಲಿದೆ. ಜೀ ಆಡಿಯೋ ಕಂಪನಿಯು ಈಗಾಗಲೇ ಚಿತ್ರದ ಅಡಿಯೋ ಹಕ್ಕು ಪಡೆದಿದೆ.

ಈಗಾಗಲೇ ಹಾಡುಗಳಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರದಲ್ಲಿ ತಿಲಕ್‌ ನಾಯಕರಾದರೆ, ರಘುಭಟ್‌ ಕೂಡ ಎರಡನೇ ನಾಯಕರಾಗಿ ನಟಿಸಿದ್ದಾರೆ. ಉಳಿಸಿದಂತೆ ಅವಿನಾಶ್‌, ರಮೇಶ್‌ಭಟ್‌, ಬ್ಯಾಂಕ್‌ಜನಾರ್ದನ್‌, ಅನು ಅಗರ್‌ವಾಲ್‌, ದಿಶಾ ಪೂವಯ್ಯ, ರಮ್ಯಾ ಬಾರ್ನ, ಶ್ರದ್ದಾ ಶರ್ಮ, ವಿಕ್ರಂ ಸೂರಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Trending videos

Back to Top