ಐದು ಭಾಷೆಗೆ ಅನ್ವೇಷಿ ಯಾತ್ರೆ!
Team Udayavani, Nov 15, 2017, 10:27 AM IST
ನಿರ್ದೇಶಕ ವೇಮಗಲ್ ಜಗನ್ನಾಥ್ ಪುನಃ ಒಂದು ಚಿತ್ರದ ಮೂಲಕ ಹಿಂದಿರುಗಿರುವ ವಿಷಯ ಗೊತ್ತೇ ಇದೆ. ಈಗಾಗಲೇ ಸೆನ್ಸಾರ್ ಆಗಿದ್ದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಲಕ್ಷ್ಮೀ ವೆಂಕಟೇಶ್ವರ ಎಂಟರ್ಟೈನರ್ ಬ್ಯಾನರ್ನಲ್ಲಿ ವಿ.ಜಯರಾಮ್ ನಿರ್ಮಾಣ ಮಾಡಿರುವ “ಅನ್ವೇಷಿ’ ಚಿತ್ರದಲ್ಲಿ ವಿಶೇಷತೆಗಳಿವೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಐದು ಭಾಷೆಗಳಲ್ಲಿ ಡಬ್ಬಿಂಗ್ ಆಗುತ್ತಿರುವುದು ವಿಶೇಷ.
ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಲಿ ಭಾಷೆಗೆ ಈಗಾಗಲೇ ಡಬ್ಬಿಂಗ್ ಹಕ್ಕು ಮಾರಾಟವಾಗಿದೆ. ನವೆಂಬರ್ ಕೊನೆಯ ವಾರದಲ್ಲಿ ರಾಜಾದ್ಯಾಂತ ಹಾಗೂ ಹೊರ ದೇಶಗಳಲ್ಲೂ ಬಿಡುಗಡೆಯಾಗಲಿದೆ. ಜೀ ಆಡಿಯೋ ಕಂಪನಿಯು ಈಗಾಗಲೇ ಚಿತ್ರದ ಅಡಿಯೋ ಹಕ್ಕು ಪಡೆದಿದೆ.
ಈಗಾಗಲೇ ಹಾಡುಗಳಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರದಲ್ಲಿ ತಿಲಕ್ ನಾಯಕರಾದರೆ, ರಘುಭಟ್ ಕೂಡ ಎರಡನೇ ನಾಯಕರಾಗಿ ನಟಿಸಿದ್ದಾರೆ. ಉಳಿಸಿದಂತೆ ಅವಿನಾಶ್, ರಮೇಶ್ಭಟ್, ಬ್ಯಾಂಕ್ಜನಾರ್ದನ್, ಅನು ಅಗರ್ವಾಲ್, ದಿಶಾ ಪೂವಯ್ಯ, ರಮ್ಯಾ ಬಾರ್ನ, ಶ್ರದ್ದಾ ಶರ್ಮ, ವಿಕ್ರಂ ಸೂರಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?